ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ

ಯೇಸುಕ್ರಿಸ್ತನ ಶುಭಸಂದೇಶವನ್ನು ಜಗದೆಲ್ಲೆಡೆ ಸಾರುವ ಮಹದಾಸೆಯಿಂದ ಭಾರತಕ್ಕೆ ಕಾಲಿರಿಸಿದ ಕ್ರೈಸ್ತ ಧರ್ಮಪ್ರಚಾರಕರು ಕರ್ನಾಟಕದಲ್ಲೂ ಹದಿನೈದನೇ ಶತಮಾನ ಸುಮಾರಿಗೆ ಕಾಲಿರಿಸಿದ್ದರು. ಆದರೆ, ಇಲ್ಲಿನ ಜನರನ್ನು ಕ್ರೈಸ್ತ ಮತಕ್ಕೆ ಸೇರಿಸಿಕೊಳ್ಳುವ ಆಸೆ ಈಡೇರಿದರೂ, ಸ್ಥಳೀಯತೆಗೆ ಆದ್ಯತೆ ತಕ್ಷಣಕ್ಕೆ ಸಿಕ್ಕಿರಲಿಲ್ಲ. ಈಗ ಎಲ್ಲಡೆ ಹೇಳುವ 'ಪಿತನ, ಸುತನ, ಪವಿತ್ರಾತ್ಮರ ಹೃದಯದಲಿ ಅಮೆನ್' ಎಂಬ ಸರಳವಾಣಿ ಕೂಡಾ ಆಗ ಇಂಗ್ಲೀಷ್ ಹಾಗೂ ಇತರೆ ವಿದೇಶಿ ಭಾಷೆಯಲ್ಲಿರುತ್ತಿತ್ತು.
ಗೋವೆ ಮುಖ್ಯ ಕಚೇರಿ ಮಾಡಿಕೊಂಡಿದ್ದ ಇಟಲಿ ಮೂಲದ ಧರ್ಮಪ್ರಚಾರಕರು, ನಂತರ ಕನ್ನಡ ನಾಡಿನ ಕರಾವಳಿಯ ಮಂಗಳೂರು, ಹೊನ್ನಾವರ ಪ್ರವೇಶಿಸಿದರು. ಕ್ರೈಸ್ತ ಮತ ಮೈಸೂರು ರಾಜ್ಯ ಸೇರಿದ ಮೇಲೆ ಶ್ರೀರಂಗಪಟ್ಟಣ, ದೇವನಹಳ್ಳಿಯಲ್ಲಿ ಹೆಚ್ಚು ಪ್ರಚಾರ ಪಡೆಯಿತು. ಇಟಲಿ, ಪೋರ್ಚುಗೀಸ್, ಫ್ರೆಂಚ್ ಪಾದ್ರಿಗಳ ನಂತರ ಇಂಗ್ಲೀಷ್ ಪಾದ್ರಿಗಳ ಪ್ರವಚನ ಕೇಳುತ್ತಿದ್ದ ಕನ್ನಡ ಕ್ರೈಸ್ತರಿಗೆ ಭಾಷಾ ಸಮಸ್ಯೆ ಎದುರಾಗಿತ್ತು.
ತಮಿಳರ ಪ್ರಾಬಲ್ಯ: ಬೆಂಗಳೂರಿನಲ್ಲಿ ಅದಾಗಲೇ ಇಂಗ್ಲಿಷರ ಸೇವಕರಾಗಿ ಮನೆಮಾಡಿದ್ದ ತಮಿಳರು ಚರ್ಚ್ ಗಳಲ್ಲಿ ತಮ್ಮ ಆಧಿಪತ್ಯ ನಡೆಸಿದ್ದರು. ಈ ಸ್ಥಳದಲ್ಲಿ ಬಹುಸಂಖ್ಯೆಯಲ್ಲಿದ್ದ ತಿಗುಳ ( ತಿಗಳ) ಜನಾಂಗಕ್ಕೆ ಸೇರಿದ ಕ್ರೈಸ್ತರು ಕನ್ನಡದಲ್ಲಿ ಧರ್ಮದೀಕ್ಷೆ ಪಡೆದು ಕನ್ನಡದಲ್ಲೇ ವ್ಯವಹರಿಸುವವರಾಗಿದ್ದರೂ ಸಹ ಅವರನ್ನು ತಮಿಳರೆಂದೇ ತಪ್ಪಾಗಿ ಭಾವಿಸಲಾಗಿತ್ತು.
ಈ ಎಲ್ಲ ಕಾರಣಗಳಿಂದಾಗಿ ಮೈಸೂರು ಸೀಮೆಯಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಮೂಲನಿವಾಸಿಗಳಾಗಿದ್ದ ಕನ್ನಡಿಗ ಕ್ರೈಸ್ತರಿಗೆ ಹೆಚ್ಚಿನ ಆತ್ಮಿಕ ಪೋಷಣೆ ಸಿಗಲಿಲ್ಲ. ಆದರೆ ಗೃಹಸ್ಥ ಉಪದೇಶಿಗಳ ನಿರಂತರ ಕಾರ್ಯತತ್ಪರತೆಯ ಕಾರಣದಿಂದ ಹಳ್ಳಿಗಳಲ್ಲಿನ ಕ್ರೈಸ್ತರಲ್ಲಿ ಕನ್ನಡತನ ಉಳಿದಿತ್ತೆಂಬುದೇ ಸಮಾಧಾನದ ಅಂಶ.
ಶರ್ಬಾನೋ ಎಂಬ ಫಾದರ್ ಮೈಸೂರು ಮಿಷನ್ನಿನ ಬಿಷಪರಾಗಿ ಬಂದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ನಂತರ ನೇಮಕಗೊಂಡ ತೋಮಾಸ್ ಪೋತ್ತಕಮರಿ ಎಂಬ ಸ್ಥಳೀಯ ಬಿಷಪರು ಮಂಗಳೂರು ಕ್ರೈಸ್ತಪೀಠದಿಂದ ಹಲವಾರು ಫಾದರ್ ಗಳನ್ನು ಎರವಲಾಗಿ ಪಡೆದುಕೊಂಡು ಕನ್ನಡತನವನ್ನು ಮೆರೆದರು.
ಮತ್ತೆ ಆಗಲಿ ಕ್ರಾಂತಿ: ಪಾದ್ರಿ ಲೂರ್ದುಸ್ವಾಮಿ ಅವರ ತಮಿಳು ಭಾಷಾಪ್ರೇಮವನ್ನು ದಿಕ್ಕರಿಸಿದ ಕನ್ನಡ ಕ್ರೈಸ್ತರು ಹೋರಾಟ ನಡೆಸಿದ್ದಂತೆ ಈಗಲೂ ಹೋರಾಟದ ಅಗತ್ಯವಿದೆ. ಕರ್ನಾಟಕದ ಚರ್ಚುಗಳಲ್ಲಿ ಕನ್ನಡಕ್ಕೆ ಮೊದಲ ಮರ್ಯಾದೆ ಸಿಕ್ಕಬೇಕು, ಚರ್ಚುಗಳ ಸವಲತ್ತುಗಳು ಸ್ಥಳೀಯ ಕನ್ನಡ ಕ್ರೈಸ್ತರಿಗೂ ದಕ್ಕಬೇಕು ಎಂಬ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು 1977 ರಲ್ಲಿ "ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ" ಎಂಬ ನಾಮಫಲಕದಡಿ ಹೊಸ ಕ್ರಾಂತಿ ನಡೆಸಲಾಗಿತ್ತು.
ಕ್ರೈಸ್ತ ಕನ್ನಡಿಗರ ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸುವುದರ ಬದಲಿಗೆ ಧರ್ಮಸಭೆಯು ತಮಿಳು ಕ್ರೈಸ್ತರನ್ನು ಎತ್ತಿಕಟ್ಟಿ ವಿರೋಧ ಹುಟ್ಟಿಸುವಲ್ಲಿ ಯಶಸ್ವಿಯಾಯಿತಲ್ಲದೆ ಚಳವಳಿಗಾರರನ್ನು ಜೈಲಿಗೆ ಕಳಿಸುವ ಸಾಹಸಕ್ಕೂ ಕೈ ಹಾಕಿತು. ಅನಂತರ ಚಳವಳಿಯ ಬಿಸಿ ರೋಮ್ ಚರ್ಚ್ ಗೂ ತಟ್ಟಿತ್ತು.
ಬಿಷಪ್ ಅಲ್ಫೊನ್ಸ್ ಮಥಾಯಿಸರು ಬೆಂಗಳೂರಿನ ಭಾಷಾ ಸಮಸ್ಯೆಗೆ ಬೇರೊಂದು ಬಣ್ಣ ಕೊಟ್ಟರು. ಬೆಂಗಳೂರು ಕಾಸ್ಮೋಪಾಲಿಟನ್ ನಗರವಾದ್ದರಿಂದ ಕನ್ನಡಕ್ಕೆ ಹೆಚ್ಚು ಮನ್ನಣೆ ನೀಡಬೇಕಿಲ್ಲ ಎಂದರು. ಕ್ರೈಸ್ತ ಕನ್ನಡಿಗರ ಭಾಷಾ ಚಳವಳಿ ಅಧಿಕಾರದಾಹಕ್ಕಾಗಿ ನಡೆದಿದೆ ಎಂದು ತುತ್ತೂರಿ ಊದತೊಡಗಿದರು. ಇದು ಎಂದಿಗೂ ಒಮ್ಮತವೂ ಅಲ್ಲ, ಸಮ್ಮತವೂ ಅಲ್ಲ ಎಂದ ಕನ್ನಡ ಕ್ರೈಸ್ತರು ಕೂಗುತ್ತಲೇ ಇದ್ದಾರೆ.
--
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications