ದುಬಾರಿ ವೈನ್ ನಂ.1 : ಡಾಮ್ ರೊಮೆನ್ ಕಾಂಟಿ 1997

ಇದರ ಬೆಲೆ ಹೆಚ್ಚಿಗೆ ಏನಿಲ್ಲ. ಒಂದು ಬಾಟಲಿಗೆ 1,540 ಡಾಲರ್. ಅಂದಾಜು 80 ಸಾವಿರ ರು. ಅಷ್ಟೆ. ಹಳೆ ಮದ್ಯಕ್ಕೆ ಹೆಚ್ಚು ಬೆಲೆ. ಆದರೆ, ಡಾಮ್ ರೊಮೆನ್ ಕಾಂಟಿ 1997 ಹಳೆಯದಿರಲಿ ಹೊಸದಿರಲಿ ಬೆಲೆಯಲ್ಲಿ ಚೌಕಾಸಿ ಮಾಡುವ ಹಾಗೇ ಇಲ್ಲ. ಇದೇ ಇದರ ಸ್ಪೆಷಾಲಿಟಿ.
ಫ್ರಾನ್ಸ್‌ನ ಬರ್ಗಂಡಿ ಪ್ರದೇಶದಲ್ಲಿ ತಯಾರಿಸಲಾಗುವ ಈ ರೆಡ್ ವೈನ್‌ನಲ್ಲಿ ಬೆರೀಸ್ ವಾಸನೆ, ಸೋಯಾ ಸಾಸ್ ಸ್ವಾದ, ಲಿಕೊರಿಸ್ ಎಂಬ ಗಿಡಮೂಲಿಕೆಯ ಘಮಲು, ವಿಶಿಷ್ಟ ಬಗೆಯ ಹೂಗಳ ಪರಿಮಳ ವೈನನ್ನು ಹೀರುವ ಮೊದಲೇ ಚಿತ್ ಮಾಡಿಬಿಡುತ್ತದೆ. ಇನ್ನು ಈ 'ಪರಮಾತ್ಮ' ಗಂಟಲಿಗಿಳಿದರಂತೂ ನಾವು ಈ ಜಗತ್ತಿನಲ್ಲಿಯೇ ಇರುವುದಿಲ್ಲ.
ಕ್ರಿಸ್ಮಸ್ ಹಬ್ಬದಲ್ಲಿ ವೈನ್ ಸೇವನೆಗೆ ವಿಶೇಷ ಸ್ಥಾನ. ದ್ರಾಕ್ಷಾರಸ ಗುಟುಕಿನಷ್ಟು ಸೇವಿಸಿದರೂ ಕ್ರಿಸ್ತ ಪರಮಾತ್ಮವನ್ನೇ ದೇಹದೊಳಗೆ ಆವಾಹಿಸಿದಂತೆ. ಕೇಕ್, ಬ್ರೆಡ್, ವಿಶಿಷ್ಟ ಬಗೆಯ ಭಕ್ಷ್ಯಗಳ ಜೊತೆ ಇಷ್ಟೇ ಇಷ್ಟು ವೈನ್. ಹೌ ಅಬೌಟ್ ಡಾಮ್ ರೊಮೆನ್ ಕಾಂಟಿ 1997? ಕ್ಷಮಿಸಿ, ಇದು ಜೇಬಲ್ಲಿ, ಬ್ಯಾಂಕಲ್ಲಿ ಹಣ ತುಂಬಿಕೊಂಡವರ ಬಾಬತ್ತು. ಚಿಯರ್ಸ್, ಹ್ಯಾಪಿ ಕ್ರಿಸ್ಮಸ್.











Click it and Unblock the Notifications