• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸ್ಯ ಪ್ರಸಂಗ : ಬೈಬಲ್ ಮಾರಾಟಗಾರರು

|

ಚರ್ಚು, ಕ್ರಿಸ್ತ ಧರ್ಮದಲ್ಲೂ ನಕ್ಕುನಗಿಸುವ ಹಾಸ್ಯಪ್ರಸಂಗಗಳು ಇವೆ. ನೆಟ್ ಲೋಕದಲ್ಲಿ ಹುಡುಕಿ ನಿಮಗೊಂದು ಪುಟ್ಟ ಬರಹವನ್ನು ಕನ್ನಡದಲ್ಲಿ ನೀಡಲಾಗಿದೆ. ನಗು ಬಂದರೆ ನಕ್ಕು ಬಿಡಿ. ಇಲ್ಲದಿದ್ದರೆ ಇದರಲ್ಲಿ ಯಾವುದಾದರೂ ನೀತಿಯಿದೆಯೇ ಹುಡುಕುತ್ತ ಇರಿ.

ಅದೊಂದು ಚರ್ಚು. ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಒಳಗಾಯಿತು. ಅನಿವಾರ್ಯವಾಗಿ ಆ ಚರ್ಚಿನಲ್ಲಿದ್ದ ಹತ್ತು ಸಾವಿರ ಬೈಬಲುಗಳನ್ನು ಮಾರಾಟ ಮಾಡಲು ಪಾದ್ರಿ ನಿರ್ಧರಿಸಿದರು. ಇದಕ್ಕೆ ಮೂರು ಸ್ವಯಂಸೇವಕರನ್ನು ನಿಯೋಜಿಸಲಾಯಿತು. ಅವರ ಹೆಸರು ಜಾಕ್, ಪೌಲ್ ಮತ್ತು ಲೂಯಿ.

ಪಾದ್ರಿಗೆ ಜಾಕ್ ಮತ್ತು ಪೌಲ್ ಮೇಲೆ ದೃಢ ನಂಬಿಕೆಯಿತ್ತು. ಇವರಿಬ್ಬರು ವೃತ್ತಿಪರ ಮಾರಾಟಗಾರರು. ಆದರೆ ಲೂಯಿ ಪಾಪದ ಹುಡುಗ. ಆತ ರೈತನ ಮಗ. ಆದರೂ ಆತನನ್ನೂ ಬೈಬಲ್ ಮಾರಾಟಕ್ಕೆ ಕಳುಹಿಸಿದರು. ಒಂದು ವಾರ ಕಳೆದ ಬಳಿಕ ಮೂವರು ಪಾದ್ರಿ ಬಳಿಗೆ ಬಂದರು.

ಜಾಕ್ 200 ಡಾಲರನ್ನು ಪಾದ್ರಿಗೆ ಕೈಗಿಟ್ಟು 20 ಬೈಬಲ್ ಮಾರಿದಾಗಿ ತಿಳಿಸಿದ. ಪಾದ್ರಿಗೆ ಖುಷಿಯಾಯಿತು. "ನೀನು ನಿಜಕ್ಕೂ ಉತ್ತಮ ಮಾರಾಟಗಾರ. ನಮ್ಮ ಚರ್ಚಿಗೆ ನಿನ್ನ ಅಗತ್ಯವಿದೆ" ಎಂದರು.

ನಂತರ ಪೌಲ್ ದುಡ್ಡಿದ್ದ ಕವರನ್ನು ಪಾದ್ರಿಗೆ ನೀಡಿದ. ನಾನು 28 ಬೈಬಲ್ ಮಾರಾಟ ಮಾಡಿದೆ. ಇದರಲ್ಲಿ 280 ಡಾಲರ್ ಹಣ ಸಂಗ್ರಹಿಸಿದೆ. ಪಾದ್ರಿಗೆ ಮತ್ತೂ ಖುಷಿಯಾಯಿತು. "ನಿಜಕ್ಕೂ ನೀನು ವೃತ್ತಿಪರ ಮಾರಾಟಗಾರ. ನಿನ್ನ ಮೇಲೆ ಭಗವಂತನ ಆಶೀರ್ವಾದ ಯಾವತ್ತೂ ಇರಲಿ" ಎಂದರು.

ಸರಿ ಇವರಿಬ್ಬರ ಮಾರಾಟ ಉತ್ತಮವಾಗಿದೆ. ಪಾಪದ ಹುಡುಗ ಒಂದೆರಡಾದರೂ ಮಾರಾಟ ಮಾಡಿರಬಹುದೇ ಎಂದು ಪಾದ್ರಿಗೆ ಕುತೂಹಲವಿತ್ತು. "ಲೂಯಿ ನೀನು ಎಷ್ಟು ಬೈಬಲ್ ಮಾರಾಟ ಮಾಡಿದ್ದೀ" ಪಾದ್ರಿ ಪ್ರಶ್ನಿಸಿದರು.

ಲೂಯಿ ಮೌನವಾಗಿ ದೊಡ್ಡ ಕವರೊಂದನ್ನು ಪಾದ್ರಿಗೆ ನೀಡಿದ. ಪಾದ್ರಿ ಕವರ್ ತೆರೆದು ನೋಡಿದಾಗ ಅಲ್ಲಿ ದುಡ್ಡಿನ ರಾಶಿಯೇ ಇತ್ತು. ಲೆಕ್ಕ ಮಾಡಿ ನೋಡಿದಾಗ 3 ಸಾವಿರಕ್ಕಿಂತ ಹೆಚ್ಚು ಡಾಲರ್ ಸಂಗ್ರಹವಾಗಿತ್ತು.

"ಲೂಯಿ ಏನಿದು. ಒಂದು ವಾರದಲ್ಲಿ ಅಷ್ಟು ಪುಸ್ತಕ ಮನೆ ಮನೆಗೆ ಮಾರಿ ಇಷ್ಟು ದುಡ್ಡು ಸಂಗ್ರಹಿಸಿದೆಯಾ?" ಎಂದು ಪಾದ್ರಿ ದೊಡ್ಡ ಸ್ವರದಲ್ಲಿ ಆಶ್ಚರ್ಯಸೂಚಕವಾಗಿ ಕೇಳಿದಾಗ ಲೂಯಿ ಮೌನವಾಗಿ ಹೌದೆಂದು ತಲೆಯಲ್ಲಾಡಿಸಿದ.

"ಇದು ಸಾಧ್ಯನೇ ಇಲ್ಲ" ಜಾಕ್ ಮತ್ತು ಪೌಲ್ ಕಿರುಚಿದರು. ನಮ್ಮಂತ ವೃತ್ತಿಪರರಿಗೆ ಇಷ್ಟು ಕಷ್ಟವಾಗಿರುವಾಗ ನಮಗಿಂತ ಹತ್ತು ಪಟ್ಟು ಹೆಚ್ಚು ಮಾರಾಟ ಮಾಡಲು ಈ ಮುಗ್ಧ ರೈತನ ಮಗನಿಗೆ ಸಾಧ್ಯನೇ ಇಲ್ಲ ಎಂದು ವಾದಿಸಿದರು. ಇವರ ಮಾತಿಗೆ ಪಾದ್ರಿ ಕೂಡ "ಹೌದು ಇಷ್ಟು ಮಾರಾಟ ಮಾಡಲು ಇವನಿಗೆ ಕಷ್ಟ" ಎಂದರು.

ಸರಿ ನೀನು ಹೇಗೆ ಮಾರಾಟ ಮಾಡಿದ್ದು? ಮನೆ ಮನೆ ಬಾಗಿಲಿಗೆ ಹೋಗಿ ಏನು ಹೇಳಿದೆ? ಎಂದು ಪಾದ್ರಿ ಕೇಳಿದರು. ಅದಕ್ಕೆ ಲೂಯಿ ಹೀಗೆಂದ.

"ನಾ.... ನಾ..... ನು ಎಲ್ಲರ ಮ...ಮ...ನೆಯ ಬಾಗಿಲು ತಟ್ಟಿ ಅವರಲ್ಲಿ ಹೇಳುತ್ತಿ..ದ್ದೆ.... ಹತ್ತು.... ಡಾಲ...ರ್ ನೀಡಿ..... ಈ ಬೈಬಲ್.... ಖರೀ...ದಿಸುವಿರಾ.... ಅದು ನಿಮಗೆ ಸಾಧ್ಯ....ವಾಗದಿದ್ದರೆ... ಈ... ಬೈಬಲ...ನ್ನು ಇಲ್ಲೇ...... ನಿ..ಮಗಾ...ಗಿ... ಇಲ್ಲೇ ..... ಓದಿ... ಹೇಳು..ತ್ತೇನೆ.. ದಯಾ...ಮಯಿ..ಯಾದ.. ತಂ..ದೆ ಏಸುಕ್ರಿಸ್ತ....

ನಾನು ಹೀಗೆ ಶುರು ಮಾಡಿದಾಗ ಅವರೆಲ್ಲ ದೂಸರಾ ಮಾತನಾಡದೇ ಬೈಬಲ್ ಖರೀದಿಸುತ್ತಿದ್ದರು ಎಂದು ರೈತನ ಮಗ ಹೇಳಿದ. ಜಾಕ್, ಪೌಲ್ ಮತ್ತು ಪಾದ್ರಿ ಬೆಕ್ಕಸಬೆರಗಾಗಿ ಲೂಯಿಯನ್ನೇ ನೋಡುತ್ತಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Christian Humor about church and church activities. Here is one story about three bible salesmen. One church getting serious financial trouble.. Read More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more