Akshaya Tritiya 2025: ಅದೃಷ್ಟ ಆಹ್ವಾನಿಸಲು ಅಕ್ಷಯ ತೃತೀಯ ದಿನ ಖರೀದಿಸಬೇಕಾದ 6 ವಸ್ತುಗಳು
ಹಿಂದೂಗಳಿಗೆ ಅತ್ಯಂತ ಪವಿತ್ರ ದಿನಗಳಲ್ಲಿ ಅಕ್ಷಯ ತೃತೀಯ ಒಂದಾಗಿದೆ. ಇದನ್ನು ಅದೃಷ್ಟ, ಸಮೃದ್ಧಿ, ಸಂಪತ್ತು, ಯಶಸ್ಸು ತರುವ ದಿನವೆಂದು ಪರಿಗಣಿಸಲಾಗುತ್ತದೆ. ಇಲ್ಲಿ 'ಅಕ್ಷಯ' ಎಂಬ ಪದದ ಅರ್ಥ ಎಂದಿಗೂ ಕಡಿಮೆಯಾಗದ್ದು. ಹೀಗಾಗಿ ಈ ದಿನದಂದು ಯಾವುದೇ ಒಳ್ಳೆಯ ಕೆಲಸ, ಚಿನ್ನ ಅಥವಾ ದುಬಾರಿ ವಸ್ತು ಖರೀದಿ ಮಾಡಿದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಜೊತೆಗೆ ಅದರ ಮೌಲ್ಯ ಕಾಲಾನಂತರದಲ್ಲಿ ಕಡಿಮೆಯಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಆದ್ದರಿಂದ ಈ ಶುಭ ದಿನದಂದು ಜನರು ಚಿನ್ನ ಮತ್ತು ಇತರ ಅಮೂಲ್ಯ ವಸ್ತುಗಳನ್ನು ಖರೀದಿಸುವುದನ್ನು ನೀವು ನೋಡುತ್ತೀರಿ. ಹಾಗಾದರೆ ಈ ದಿನ ಯಾವ ವಸ್ತುಗಳು ಖರೀದಿ ಮಾಡಿದರೆ ಒಳ್ಳೆಯದು ಎಂದು ತಿಳಿಯೋಣ.
ಅಕ್ಷಯ ತೃತೀಯವನ್ನು ಈ ವರ್ಷ ಏಪ್ರಿಲ್ 30 ಬುಧವಾರದಂದು ಆಚರಿಸಲಾಗುತ್ತದೆ. ಪೂಜಾ ಮುಹೂರ್ತ ಬೆಳಿಗ್ಗೆ 05:41 ರಿಂದ ಮಧ್ಯಾಹ್ನ 12:18 ರವರೆಗೆ ಇರುತ್ತದೆ. ಅಕ್ಷಯ ತೃತೀಯ ಏಪ್ರಿಲ್ 29 ಮಧ್ಯಾಹ್ನ 05:31ಕ್ಕೆ ಪ್ರಾರಂಭವಾಗಿ ಏಪ್ರಿಲ್ 30ರಂದು ಮಧ್ಯಾಹ್ನ 02:12ಕ್ಕೆ ಕೊನೆಗೊಳ್ಳುತ್ತದೆ. ಏಪ್ರಿಲ್ 29 ರಂದು ಮಧ್ಯಾಹ್ನ 12 ಗಂಟೆಯ ನಂತರ ಅಕ್ಷಯ ತೃತೀಯ ಪ್ರಾರಂಭವಾಗುವುದರಿಂದ ಆಚರಣೆ ಮರುದಿನ ಅಂದರೆ ಏಪ್ರಿಲ್ 30ರಂದು ಇರುತ್ತದೆ. ಅದೃಷ್ಟವನ್ನು ಆಹ್ವಾನಿಸಲು ಈ ದಿನದಂದು ಖರೀದಿಸಬೇಕಾದ 6 ವಸ್ತುಗಳು ಹೀಗಿವೆ..

ಖರೀದಿಸಬೇಕಾದ ವಸ್ತುಗಳು :-
ಚಿನ್ನ
ಅಕ್ಷಯ ತೃತೀಯಾದಂದು ಹೆಚ್ಚು ಖರೀದಿಸುವ ವಸ್ತುಗಳಲ್ಲಿ ಚಿನ್ನ ಒಂದು. ಜನರು ಅದೇ ದಿನ ಚಿನ್ನವನ್ನು ಖರೀದಿಸಲು ಆಭರಣ ಅಂಗಡಿಗಳಿಗೆ ಹೋಗುತ್ತಾರೆ. ಈ ದಿನ ಯಾವುದೇ ವಸ್ತು ಖರೀದಿ ಮಾಡಿದರೂ ಕೂಡ ಅದು ಹೆಚ್ಚಾಗಲಿದೆ ಎನ್ನುವ ನಂಬಿಕೆಯಿದೆ. ಅದು ಚಿನ್ನದ ನಾಣ್ಯವಾಗಲಿ, ಸಣ್ಣ ಆಭರಣವಾಗಲಿ, ಸರಪಳಿಯಾಗಲಿ ಅಥವಾ ಉಂಗುರವಾಗಲಿ ಈ ದಿನದಂದು ಚಿನ್ನವನ್ನು ಮನೆಗೆ ತರುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

ಬೆಳ್ಳಿ
ಚಿನ್ನದಂತೆಯೇ ಜನರು ಈ ದಿನದಂದು ಬೆಳ್ಳಿಯನ್ನು ಸಹ ಖರೀದಿಸುತ್ತಾರೆ. ಕೆಲವರು ಚಿನ್ನಕ್ಕೆ ಬದಲಾಗಿ ಬೆಳ್ಳಿಯನ್ನು ಖರೀದಿಸಲಾಗುತ್ತದೆ. ಏಕೆಂದರೆ ಬೆಳ್ಳಿ ಲಕ್ಷ್ಮಿ ಮತ್ತು ಆಕೆಯ ಶಕ್ತಿಗಳಿಗೆ ಹತ್ತಿರವಾಗಿದೆ. ಅಕ್ಷಯ ತೃತೀಯದಂದು ಬೆಳ್ಳಿಯನ್ನು ಖರೀದಿಸುವುದು ಜೀವನದಲ್ಲಿ ಸಮತೋಲನವನ್ನು ತರುತ್ತದೆ ಮತ್ತು ಜನರು ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಕೆಲವರು ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳಿರುವ ಬೆಳ್ಳಿ ನಾಣ್ಯವನ್ನು ಮನೆಗೆ ತರುವುದು ಪರಮ ಆಶೀರ್ವಾದಗಳನ್ನು ನೀಡುತ್ತದೆ ಎಂದು ನಂಬುತ್ತಾರೆ.

ಮಣ್ಣಿನ ಮಡಿಕೆಗಳು
ಮಣ್ಣಿನ ಮಡಿಕೆಜನರು ಅಕ್ಷಯ ತೃತೀಯದಂದು ಖರೀದಿಸುವ ಮತ್ತೊಂದು ವಸ್ತುವಾಗಿದೆ. ಈ ದಿನದಂದು ಚಿನ್ನ ಅಥವಾ ಬೆಳ್ಳಿ ಅಥವಾ ದುಬಾರಿ ವಸ್ತು ಖರೀದಿಸಲು ಸಾಧ್ಯವಾಗದ ಜನರು ಉತ್ತಮ ಮಣ್ಣಿನ ಮಡಿಕೆಯನ್ನು ಖರೀದಿ ಮಾಡಬಹುದು. ಮಣ್ಣಿನ ಮಡಿಕೆಯನ್ನು ಶುದ್ಧ ಮಣ್ಣಿನಿಂದ ತಯಾರಿಸಲಾಗುತ್ತದೆ. ಇದು ಭೂಮಿ ತಾಯಿಯ ಒಂದು ರೂಪವಾಗಿದ್ದು, ಆಕೆಯ ಆಶೀರ್ವಾದಕ್ಕೆ ಸಮನಾಗಿರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಅಕ್ಷಯ ತೃತೀಯ ದಿನ ಮಣ್ಣಿನ ಮಡಿಕೆಯನ್ನು ಖರೀದಿ ತರಲಾಗುತ್ತದೆ.

ತುಳಸಿ ಸಸ್ಯ
ಪ್ರಪಂಚದಾದ್ಯಂತ ಹಿಂದೂಗಳಿಗೆ ತುಳಸಿ ಸಸ್ಯವು ಶುದ್ಧತೆ ಮತ್ತು ಭಕ್ತಿಯ ಸಾರಾಂಶವಾಗಿದೆ. ಇದು ಲಕ್ಷ್ಮಿಯ ಒಂದು ರೂಪ ಎಂದು ಹೇಳಲಾಗುತ್ತದೆ ಮತ್ತು ಮನೆಯಲ್ಲಿ ಆರೋಗ್ಯಕರ ತುಳಸಿ ಗಿಡವಿದ್ದರೆ ಕುಟುಂಬದ ಸದಸ್ಯರು ರೋಗಗಳಿಂದ ಮುಕ್ತರಾಗುತ್ತಾರೆ. ಜೊತೆಗೆ ಆರ್ಥಿಕವಾಗಿ ಯಶಸ್ವಿಯಾಗುತ್ತಾರೆ, ಸಮೃದ್ಧರಾಗುತ್ತಾರೆ. ಅಲ್ಲದೆ ಉತ್ತಮ ಜೀವನವನ್ನು ನಡೆಸುತ್ತಾರೆ ಎನ್ನುವ ನಂಬಿಕೆ ಇದೆ. ಹೀಗಾಗಿ ಅನೇಕ ಜನರು ಅಕ್ಷಯ ತೃತೀಯದ ದಿನದಂದು ತಮ್ಮ ಮನೆಗೆ ತುಳಸಿ ಗಿಡವನ್ನು ತರುತ್ತಾರೆ.

ಹತ್ತಿ
ಅಕ್ಷಯ ತೃತೀಯದಂದು ಜನರು ಖರೀದಿಸುವ ಮತ್ತೊಂದು ಉತ್ಪನ್ನವೆಂದರೆ ಹತ್ತಿ. ಇದು ತರ್ಕಬದ್ಧವಲ್ಲದಂತೆ ತೋರುತ್ತದೆಯಾದರೂ ಈ ದಿನದಂದು ಹತ್ತಿಯನ್ನು ಖರೀದಿಸಲು ಕೆಲವು ಕಾರಣಗಳಿವೆ. ದೈನಂದಿನ ಪ್ರಾರ್ಥನೆಯ ಸಮಯದಲ್ಲಿ ದೀಪಗಳಿಗೆ ಬತ್ತಿಗಳನ್ನು ತಯಾರಿಸಲು ಹತ್ತಿಯನ್ನು ಬಳಸಲಾಗುತ್ತದೆ. ಇದು ಪೂಜೆಯ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಅಲ್ಲದೆ ಇದು ಅತ್ಯಂತ ಪವಿತ್ರವಾದದ್ದು. ಇದರಿಂದ ದೀಪಗಳನ್ನು ಬೆಳಗಿಸಿ ಕತ್ತಲೆಯನ್ನು ಹೋಗಲಾಡಿಸುವುದರಿಂದ ಹತ್ತಿಯು ಶುದ್ಧ, ಜ್ಞಾನೋದಯ ಮತ್ತು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಹೀಗಾಗಿ ಈ ದಿನ ಹತ್ತಿಯನ್ನು ಕೆಲವರು ಕೊಂಡು ಮನೆಗೆ ತರುತ್ತಾರೆ.

ಕಲ್ಲು ಉಪ್ಪು
ಅಕ್ಷಯ ತೃತೀಯದಂದು ಕಲ್ಲು ಉಪ್ಪು ಖರೀದಿ ಮಾಡಲಾಗುತ್ತದೆ. ಕಲ್ಲು ಉಪ್ಪನ್ನು ಯಾವಾಗಲೂ ಶುದ್ಧೀಕರಣ ಏಜೆಂಟ್ ಆಗಿ ಬಳಸಲಾಗುತ್ತಿರುವುದರಿಂದ ಇದು ಶುದ್ಧವಾಗಿದೆ. ನಕರಾತ್ಮಕತೆಯನ್ನು ತೆಗೆದುಹಾಕುತ್ತದೆ. ವಾಸ್ತು ಮತ್ತು ಆಯುರ್ವೇದದಲ್ಲಿ ಕಲ್ಲು ಉಪ್ಪನ್ನು ಒಂದು ಸ್ಥಳದಿಂದ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಸ್ನಾನ ಅಥವಾ ಅಡುಗೆಯಲ್ಲಿ ಬಳಸಿದಾಗ ದೇಹದ ಶಕ್ತಿಯನ್ನು ಸಮತೋಲನಗೊಳಿಸುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯದಂದು ಜನರು ತಮ್ಮ ಜೀವನದಿಂದ ಅಡೆತಡೆಗಳನ್ನು ತೆಗೆದುಹಾಕಲು ಕಲ್ಲು ಉಪ್ಪನ್ನು ಖರೀದಿಸುತ್ತಾರೆ.












Click it and Unblock the Notifications