Akshaya Tritiya 2023 Horoscope : ಈ ವರ್ಷ ಅಕ್ಷಯ ತೃತೀಯದಂದು ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ
ಅಕ್ಷಯ ತೃತೀಯವನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯವನ್ನು 22 ಏಪ್ರಿಲ್ 2023, ಶನಿವಾರದಂದು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಹಬ್ಬ ಶುಭ ಕಾರ್ಯಗಳಿಗೆ ಮತ್ತು ಶಾಪಿಂಗ್ ಮಾಡಲು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಚಿನ್ನವನ್ನು ಖರೀದಿಸುವುದು ತುಂಬಾ ಶುಭ. ಈ ದಿನದಂದು ಶಾಪಿಂಗ್ ಜೊತೆಗೆ ದಾನ ಕಾರ್ಯಗಳನ್ನು ಮಾಡುವುದು ಬಹಳ ಮುಖ್ಯ.
ದೀಪಾವಳಿಯಂತೆ, ಅಕ್ಷಯ ತೃತೀಯದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ವರ್ಷದ ಅಕ್ಷಯ ತೃತೀಯ ಬಹಳ ವಿಶೇಷವಾಗಿದೆ. ಇದು ದ್ವಾದಶಿ ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾದರೆ ಅಕ್ಷಯ ತೃತಿಯ ರಾಶಿ ಫಲ ಹೇಗಿದೆ ಎಂದು ತಿಳಿಯೋಣ.
ಅಕ್ಷಯ ತೃತೀಯ 2023 ಶುಭ ಸಮಯ
ಪಂಚಾಂಗದ ಪ್ರಕಾರ, ಈ ವರ್ಷ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯು ಏಪ್ರಿಲ್ 22 ರಂದು ಬೆಳಿಗ್ಗೆ 07.49 ರಿಂದ ಪ್ರಾರಂಭವಾಗುತ್ತದೆ. ಈ ದಿನಾಂಕವು ಏಪ್ರಿಲ್ 23 ರಂದು ಬೆಳಿಗ್ಗೆ 07:47 ರವರೆಗೆ ಇರುತ್ತದೆ.

ಮೇಷ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಅಕ್ಷಯ ತೃತೀಯದಂದು ಮೇಷ ರಾಶಿಯವರಿಗೆ ಹಣಕಾಸಿನ ಸುಸ್ಥಿತಿ ಒದಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಸಾಲಗಾರರ ಕಾಟ ಕಡಿಮೆಯಾಗುತ್ತದೆ. ಉದ್ಯೋಗ ಯೋಗ ಇರುತ್ತದೆ. ಹೂಡಿಕೆ ಮಾಡಿದಲ್ಲಿ ಶುಭವಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಆಕಸ್ಮಿಕ ಧನಲಾಭವಾಗಲಿದೆ. ಶೇರು ಮಾರುಕಟ್ಟೆಯಲ್ಲಿ ಲಾಭವಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ಫಲವನ್ನು ನೀವು ಪಡೆಯುತ್ತೀರಿ.
ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. 'ಓಂ ಕುಬೇರಾಯ ನಮ:' ಈ ಮಂತ್ರವನ್ನು ಜಪ ಮಾಡುವುದರಿಂದ ಸಾಕಷ್ಟು ಶುಭಫಲ ಸಿಗಲಿದೆ. ಈ ದಿನ ಅಕ್ಕಿಯನ್ನು ಯಾರು ದಾನ ಮಾಡುವಿರೋ ಅವರಿಗೆ ಸಾಕಷ್ಟು ಶುಭವಾಗಲಿದೆ. ಪೂರ್ವ ದಿಕ್ಕಿನ ಪ್ರಯಾಣ ಶುಭವಾಗಿದೆ.

ವೃಷಭ ರಾಶಿಯ ಅಕ್ಷಯ ತೃತೀಯ ಭವಿಷ್ಯ
ವೃಷಭ ರಾಶಿಯವರಿಗೆ ಅಕ್ಷಯ ತೃತೀಯ ಶುಭ ಫಲವನ್ನು ನೀಡುತ್ತದೆ. ವೃಷಭ ರಾಶಿಯವರಿಗೆ ಲಕ್ಷ್ಮಿಯ ಅನುಗ್ರಹ ದೊರೆಯಲಿದೆ. ಹಣದ ಯೋಗ ಉತ್ತಮವಾಗಿದೆ. ಎಲ್ಲೋ ಸಿಕ್ಕಕೊಂಡ ಹಣ ನಿಮ್ಮ ಕೈ ಸೇರಲಿದೆ. ಉದ್ಯೋಗದಲ್ಲಿ ಬಡ್ತಿ, ವ್ಯವಹಾರಗಳು ಉತ್ತಮವಾಗಿರುತ್ತವೆ. ಕನಸುಗಳು ಈಡೇರುತ್ತವೆ. ಬಾಂಧವ್ಯಗಳು ಚೆನ್ನಾಗಿರುತ್ತವೆ. ಪ್ರಯಾಣ ಯೋಗವೂ ನಿಮಗಿದೆ.
ಸಹೋದರ ಸಹೋದರಿಯಿಂದಲೂ ನಿಮಗೆ ಸಹಕಾರ ಸಿಗಲಿದೆ. ರೈತರಿಗೆ, ಉದ್ಯೋಗಿಗಳಿಗೆ, ಸರ್ಕಾರಿ ನೌಕರರಿಗೆ ಇದು ಉತ್ತಮ ಸಮಯವಾಗಿದೆ. ರಾಜಕಾರಣಿಗಳಿಗೆ ಹಣಕಾಸಿನ ವಿಚಾರದಲ್ಲಿ ತೃಪ್ತಿದಾಯ ಯೋಗವಿದೆ. ವಿವಾಹ ಇನ್ನಿತರ ಶುಭಕಾರ್ಯಗಳಿಗೆ ಶುಭ ಸಮಯ ಇದಾಗಿದೆ. 'ಓ ಯಕ್ಷೇಶಾಯ ನಮ:' ಈ ಮಂತ್ರವನ್ನು ಜಪ ಮಾಡಿ.

ಮಿಥುನ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಮಿಥುನ ರಾಶಿಯವರಿಗೆ ಅಕ್ಷಯ ತೃತೀಯ ಉತ್ತಮ ಫಲವನ್ನು ನೀಡುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ, ಹಣಕಾಸಿನಲ್ಲಿ ತೃಪ್ತಿ ಸಿಗಲಿದೆ. ಹಣಕಾಸಿನ ತೊಂದರೆ ಇರುವವರಿಗೆ ಯಾರೋ ಸಹಾಯ ಮಾಡಲು ಮುಂದೆ ಬರಬಹುದು. ಆರೋಗ್ಯ, ಕುಟುಂಬ, ಬ್ಯಾಂಕ್ ಬ್ಯಾಲೆನ್ಸ್ ಉತ್ತಮವಾಗಿರಲಿದೆ. ಕುಟುಂಬಸ್ಥರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುವ ಯೋಗವಿದೆ. ವಾಹನ ಯೋಗ ಕೂಡ ಮಿಥುನ ರಾಶಿಯವರಿಗೆ ಇದೆ.
ವಿದ್ಯಾಭ್ಯಾಸ ಮಾಡುವವರಿಗೆ ಗುರು ದರ್ಶನ ಮಾಡಿಸಿ. ಆತ್ಮಸ್ಥೈರ್ಯ ಅಧಿಕವಾಗಲಿದೆ. ಸಾಲ ಪಾವತಿ ಮಾಡುವಿರಿ. ವ್ಯಾಪಾರಸ್ಥರಿಗೆ, ರೈತಾಪಿ ವರ್ಗದವರಿಗೆ ಒಳ್ಳೆದಾಗಲಿದೆ, ಸರ್ಕಾರಿ ನೌಕರರಿಗೆ ಶುಭ, ರಾಜಕಾರಣಿಗಳಿಗೆ ಅದೃಷ್ಟ ಕೈಹಿಡಿಯಲಿದೆ. ಒಟ್ಟಾರೆಯಾಗಿ ಈ ಅಕ್ಷಯ ತೃತಿಯ ಮಿಥುನ ರಾಶಿಯವರಿಗೆ ಉತ್ತಮ ಫಲವನ್ನು ನೀಡುತ್ತದೆ. 'ಓಂ ದನದಾಯ ನಮ:' ಮಂತ್ರವನ್ನು ಜಪ ಮಾಡಿ.

ಕಟಕ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಕಟಕ ರಾಶಿಯರಿಗೆ ಅಕ್ಷಯ ತೃತಿಯ ಅದೃಷ್ಟ ಕೂಡಿ ಬರುತ್ತಿರುವ ಕಾಲ. ತೀರ್ಮಾನಗಳು ಚೆನ್ನಾಗಿರುತ್ತವೆ. ವಿದ್ಯೆಯಲ್ಲಿ ಪ್ರಗತಿ ಇರುತ್ತದೆ. ಉದ್ಯೋಗದಲ್ಲಿ ಶುಭವಿದೆ. ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ಹಣ ಹೂಡಿಕೆಯಲ್ಲಿ ಲಾಭವಿದೆ. ಆಸ್ತಿ, ಮನೆ, ಸೈಟ್ ಯೋಗವಿದೆ.
ಸರ್ಕಾರಿ ನೌಕಕರಿಗೆ ಇಂದು ವಿಶೇಷ ದಿನವಾಗಿರುತ್ತದೆ. ಬಹಳ ಅದೃಷ್ಟ ಕಾಲ ಅಕ್ಷಯ ತೃತಿಯವಾಗಿದೆ. 'ಓಂ ಭದ್ರಗುಣಾಯ ನಮ:' ಮಂತ್ರವನ್ನು ಜಪ ಮಾಡಿ. ಇದರಿಂದ ಒಳ್ಳೆದಾಗಲಿದೆ. ಸಾಧ್ಯವಾದರೆ ಪುಸ್ತಕ ದಾನವನ್ನು ಮಾಡಿ. ಅಕ್ಷಯ ತೃತಿಯ ದಿನ ಇದನ್ನು ಮಾಡುವುದರಿಂದ ಉತ್ತಮ ಫಲವನ್ನು ಕಟಕ ರಾಶಿಯವರು ಪಡೆಯುತ್ತಾರೆ.

ಸಿಂಹ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಸಿಂಹ ರಾಶಿಯವರಿಗೆ ಇದು ಅದೃಷ್ಟದ ಕಾಲವಾಗಿದೆ. ದೊಡ್ಡ ಪ್ರಾಜೆಕ್ಟ್‌ಗಳಿಗೆ ಕೈ ಹಾಕಿದವರಿಗೆ ಶುಭವಾಗಲಿದೆ. ಆಕಸ್ಮಿಕ ದನ ಲಾಭ. ವ್ಯವಹಾರಗಳು ಚೆನ್ನಾಗಿರುತ್ತವೆ. ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುತ್ತದೆ. ರಿಯಲ್ ಎಸ್ಟೆಟ್ ನಲ್ಲಿರುವವರಿಗೆ ಶುಭವಾಗಲಿದೆ. ಇದರೊಂದಿಗೆ ವಾಹನ ಯೋಗ, ವಿದ್ಯಾಯೋಗ, ಮನೆ ಬದಲಾವಣೆ ಯೋಗವಿದೆ.
ಆರೋಗ್ಯ ಕೂಡ ಈ ಸಮಯದಲ್ಲಿ ಉತ್ತಮವಾಗಿರಲಿದೆ. ಹಣಕಾಸಿನ ಹೂಡಿಕೆಯಿಂದ ಸಾಕಷ್ಟು ಪ್ರಯೋಜನ ಸಿಗಲಿದೆ. ರಾಜಕಾರಣಿಗಳಿಗೆ ಒಳ್ಳೆಯದಾಗಲಿದೆ. 'ಓಂ ಪದ್ಮ ನಿಧೀಶ್ವರಾಯ ನಮ:' ಮಂತ್ರವನ್ನು ಜಪಿಸುವುದು ಒಳ್ಳೆಯದು. ಬೆಲ್ಲ ದಾನ ಮಾಡಿ. ಇದರಿಂದ ಒಳ್ಳೆದಾಗಲಿದೆ.

ಕನ್ಯಾ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಕನ್ಯಾ ರಾಶಿಯವರಿಗೆ ವಿವಾಹ ಯೋಗ ಕೂಡಿ ಬರುತ್ತಿದೆ. ಉದ್ಯೋಗದಲ್ಲಿ ಉತ್ತಮವಿರಲಿದೆ. ಸಂಸ್ಥೆಯಲ್ಲಿ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುತ್ತದೆ. ಪಾಲುದಾರಿಕೆಯಲ್ಲಿ ಸ್ಪಲ್ಪ ಕಿರಿಕಿರಿಗಳು ಹೆಚ್ಚಾಗಬಹುದು. ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ಪ್ರಯಾಣ, ವಾಹನ ಖರೀದಿ ವಿಚಾರದಲ್ಲಿ ಸಣ್ಣಪುಟ್ಟ ಕಂಟಕಗಳು ಇರುತ್ತವೆ. ವಿವಿಧ ಮೂಲಗಳಿಂದ ಆದಾಯ ಹೆಚ್ಚಾಗಲಿದೆ.
ಸಾಮಾಜಿಕ ಪ್ರಜ್ಞೆ ಮೂಡುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಉದ್ಯೋಗ ಅಥವಾ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ಸರ್ಕಾರ ಉದ್ಯೋಗಸ್ಥರಿಗೆ ಶುಭವಾಗಲಿದೆ. 'ಓಂ ನಿಧಿಶಾಯ ನಮ:' ಮಂತ್ರವನ್ನು ಜಪಿಸುವುದರಿಂದ ಒಳ್ಳೆದಾಗಲಿದೆ. ಸಾಧ್ಯವಾದರೆ ಶಿವನ ದೇವಸ್ಥಾನದಲ್ಲಿ ಎಣ್ಣೆಯ ದೀಪವನ್ನು ಹಚ್ಚಿ.

ತುಲಾ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ. ಶುತ್ರುಗಳು ಮಿತ್ರರಾಗುತ್ತಾರೆ. ಸ್ಪರ್ಧೆಗಳಲ್ಲಿ ಶುಭವಾಗಲಿದೆ. ಕ್ರೀಡಾಪಟುಗಳಿಗೆ ಶುಭವಾಗಲಿದೆ. ವೃತ್ತಿಯಲ್ಲಿ ಬದಲಾವಣೆಯಾಗಲಿದೆ. ಉದ್ಯೋಗದಲ್ಲಿ ಶುಭ, ವ್ಯಾಪಾರದಲ್ಲಿ ಮತ್ತೊಂದು ವ್ಯಾಪಾರ ಮಾಡಲು ಅವಕಾಶ ಸಿಗಲಿದೆ. ತಂದೆ, ಸ್ನೇಹಿತರಿಂದ ಕೆಲಸದಲ್ಲಿ ಬೆಂಬಲ ಸಿಗಲಿದೆ.
ವಾಹನ ಯೋಗ ಕೂಡ ಇರಲಿದೆ. ಮನೆ ಖರೀದಿಗೆ ಇದು ಅದ್ಬುತವಾದ ಕಾಲ ಕೂಡ ಇದಾಗಿರುತ್ತದೆ. 'ಓಂ ದೇವಾಯ ನಮ:' ಅಥವಾ ' ಓಂ ಅಶ್ವರೂಢಾಯ ನಮ:' ಮಂತ್ರವನ್ನು ಜಪಿಸಿ. ಇದರಿಂದ ಕಷ್ಟಗಳು ದೂರವಾಗಿ ಉತ್ತಮ ಫಲವನ್ನು ನೀವು ಪಡೆಯಲಿದ್ದೀರಿ.

ವೃಶ್ಚಿಕ ರಾಶಿಯ ಅಕ್ಷಯ ತೃತೀಯ ಭವಿಷ್ಯ
ವೃಶ್ಚಿಕ ರಾಶಿಯವರಿಗೆ ಮನೆಯವರಿಂದ ತುಂಬಾ ಬೆಂಬಲ ಸಿಗಲಿದೆ. ಕೈ ತಪ್ಪಿ ಹೋದ ಆಸ್ತಿ ವಾಪಸ್ ಪಡೆಯುವ ಸಾಧ್ಯತೆ ಕೂಡ ಇದೆ. ವಿದೇಶಕ್ಕೆ ಹೋಗುವ ಯೋಗವಿದೆ. ವೃತ್ತಿಯಲ್ಲಿ ಬದಲಾವಣೆಯಾಗಲಿದೆ. ವ್ಯಾಪಾರದಲ್ಲಿ ಶುಭವಾಗಲಿದೆ. ವಿದ್ಯಾರ್ಥಿಗಳಿಗೆ ಇಚ್ಚೆಯಂತೆ ಕಾರ್ಯಗಳು ಸಿದ್ದಿಯಾಗುತ್ತವೆ. ಹಣದ ಯೋಗ ಕೂಡಿ ಬರುತ್ತಿದೆ.
ಸರ್ಕಾರಿ ಉದ್ಯೋಗಿಗಳಿಗೆ ಕೀರ್ತಿ ಪ್ರತಿಷ್ಠೆ ಹೆಚ್ಚಾಗಲಿದೆ. ರಾಜಕಾರಣಿಗಳಿಗೆ ಅದ್ಬುತ್ವಾದ ಕಾಲ ಇದಾಗಿದೆ. ಕೋಪತಾಪಗಳಿಂದ ಮುಕ್ತರಾಗುವಿರಿ. ಮಹಿಳೆಯರಿಗೆ ಸಾಕಷ್ಟು ಶುಭದ ಕಾಲವೂ ಇದಾಗಿರುತ್ತದೆ. 'ಓಂ ವರಿಷ್ಟಾಯ ನಮ:' ಮಂತ್ರವನ್ನು ಜಪಿಸಿ. ಇದರಿಂದ ಒಳ್ಳೆದಾಗಲಿದೆ.

ಧನು ರಾಶಿಯ ಅಕ್ಷಯ ತೃತೀಯ ಭವಿಷ್ಯ
ಧನು ರಾಶಿಯವರಿಗೆ ಆಕಸ್ಮಿಕವಾಗಿ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ. ವಾಹನ ಖರೀದಿ ಮಾಡುವ ಯೋಗವಿದೆ. ಚರ್ಚೆಗಳಿಂದ ಲಾಭ ಸಿಗುವ ಸಾಧ್ಯತೆಗಳು ಇವೆ. ನಿಮ್ಮಲ್ಲಿರುವ ಪ್ರಜ್ಞೆಯಿಂದ ಸಾಕಷ್ಟು ಕೀರ್ತಿಗಳು ಸಿಗಲಿವೆ. ಬ್ಯಾಂಕ ಉದ್ಯೋಗಿಗಳಿಗೆ ಸಾಕಷ್ಟು ಶುಭವಾಗಲಿದೆ. ಮನೆ ಕಟ್ಟಿಕೊಳ್ಳಲು ಸಾಧ್ಯವಾಗಲಿದೆ.
ವಿದೇಶಕ್ಕೆ ಹೋಗುವ ಅವಕಾಶವಿದೆ. ಬಿಸಿನೆಸ್‌ನಲ್ಲಿ ಶುಭವಾಗಲಿದೆ. ಮಾನಸಿಕ ಆರೋಗ್ಯಕ್ಕಾಗಿ ಯೋಗ ಮಾಡಿ. ಮಹಿಳೆಯರಿಗೂ ಈ ಅಕ್ಷಯ ತೃತಿಯ ಶುಭ ಯೋಗ ತಂದು ಕೊಡಲಿದೆ. 'ಓಂ ದನಲಕ್ಷ್ಮಿ ನಿವಾಸಾಯ' ಮಂತ್ರವನ್ನು ಜಪಿಸುವುದರಿಂದ ಒಳ್ಳೆಯದಾಗಲಿದೆ.

ಮಕರ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಮಕರ ರಾಶಿಯವರಿಗೆ ಅಕ್ಷಯ ತೃತಿಯ ಉತ್ತಮ ಫಲವನ್ನು ನೀಡಲಿದೆ. ನಿಮ್ಮ ಜ್ಞಾನದಿಂದ ಸಮಾಜದಲ್ಲಿ ಕೀರ್ತಿ ಪಡೆಯುವಿರಿ. ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಪ್ರವಾಸದಲ್ಲಿ ಒಳ್ಳೆಯದಾಗಲಿದೆ. ಸಹೋದರರಿಂದ ಒಳ್ಳೆದಾಗಲಿದೆ. ಅದರೊಂದಿಗೆ ರಿಯಲ್ ಎಸ್ಟೇಟ್ ಅವರಿಗೆ ಶುಭವಾಗಲಿದೆ. ಅಷ್ಟ ಜೀವನದಿಂದ ಸುಖ ಕೂಡ ಸಿಗಲಿದೆ.
ಅವಿವಾಹಿತರಿಗೆ ವಿವಾಹ ಯೋಗ ಸಿಗಲಿದೆ. ಅದರೊಂದಿಗೆ ವ್ಯಾಪಾರ ಬಿಸಿನೆಸ್ ಯೋಗವೂ ಪ್ರಾಪ್ತಿಯಾಗಲಿದೆ. ತುಂಬಾ ದಿನಗಳಿಂದ ಕಾಯುತ್ತಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ರೈತರಿಗೆ, ಸರ್ಕಾರಿ ನೌಕರರಿಗೆ ಒಳ್ಳೆದಾಗಲಿದೆ. ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಮಹಿಳಾ ಅಧಿಕಾರಿಗಳಿಗೆ ಸಾಕಷ್ಟು ಬಡ್ತಿ ಸಿಗುವ ಸಾಧ್ಯತೆ ಇದೆ. 'ಓಂ ಸುಕೃತಿನೇ ನಮ:' ಮಂತ್ರವನ್ನು ಜಪಿಸುವುದರಿಂದ ಶುಭವಾಗಲಿದೆ.

ಕುಂಭ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಕುಂಭ ರಾಶಿಯವರ ವಾಕ್ ಶಕ್ತಿ ಉತ್ತಮವಾಗಿರುತ್ತದೆ. ಹಣದ ಯೋಗ ಬಲವಾಗಿದೆ. ಕೆಲಸಕಾರ್ಯಗಳಲ್ಲಿ, ಆಸ್ತಿ ವಿಷಯದಲ್ಲಿ ಒಳ್ಳೆಯದಾಗಲಿದೆ. ಸಭೆ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಗೌರವ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ನಿಮ್ಮ ನಡುವಳಿಕೆ ನಿಮಗೆ ಸದಾ ಒಳ್ಳೆಯದನ್ನೇ ಮಾಡುತ್ತದೆ. ರೋಗದಿಂದ ಮುಕ್ತರಾಗುವಿರಿ.
ಆಕಸ್ಮಿಕ ಧನಲಾಭವಾಗಲಿದೆ. ಹೂಡಿಕೆಯಿಂದ ಶುಭವಾಗಲಿದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ. ಜೊತೆಗೆ ಸಂಬಳ ಅಧಿಕವಾಗುವ ಯೋಗ ಕೂಡ ಇರುತ್ತದೆ. 'ಓಂ ನತ್ಯತೃಪ್ತಾಯ ನಮ:' ಮಂತ್ರವನ್ನು ಜಪಿಸಿ. ಇದರಿಂದ ದೋಷ ನಿವಾರಣೆಯಾಗಿ ಒಳ್ಳೆಯದಾಗಲಿದೆ.

ಮೀನ ರಾಶಿಯ ಅಕ್ಷಯ ತೃತೀಯ ಭವಿಷ್ಯ
ಮನೆ ಖರೀದಿ ಮಾಡುವ ಯೋಗವಿದೆ. ಜೊತೆಗೆ ಆಸ್ತಿ, ವಾಹನ ಯೋಗವಿದೆ. ಗುರಿ ತಲುಪಲು ಅನುಕೂಲಕರ ಸಮಯ ಇದಾಗಿದೆ. ಅದೃಷ್ಟ ಕೂಡಿ ಬರುತ್ತಿದೆ. ನಿಮ್ಮ ನಿರ್ಧಾರಗಳು ಉತ್ತಮವಾಗಿರುತ್ತದೆ. ಹಣ ಗಳಿಕೆಯ ಯೋಗವಿದೆ. ಅಗೋಚರ ವ್ಯಕ್ತಿಗಳು ಮೀನ ರಾಶಿಯವರಿಗೆ ಸಹಕಾರ ಮಾಡುತ್ತಾರೆ.
ಅಪರಿಚಿತರಿಂದ ಸಹಾಯವಾಗುತ್ತದೆ. ಬಂಧು, ಪಾಲುದಾರರಿಂದ ಒಂದು ಬಾಂಧವ್ಯವವನ್ನು ಬೆಳಸಿಕೊಳ್ಳುವಿರಿ. ಮೀನ ರಾಶಿಯವರಿಗೆ ಭಾಗ್ಯೋದಯದ ಕಾಲ ಇದಾಗಿರುತ್ತದೆ. ಮದುವೆ ವಿಯಗಳಲ್ಲಿ ಶುಭವಾಗಲಿದೆ. ರಾಜಕಾರಣಿಗಳಿ ಸಾಕಷ್ಟು ಶುಭದ ಫಲ ಸಿಗಲಿದೆ. 'ಓಂ ಅಂಗೀರಸಾಯ ನಮ:' ಮಂತ್ರವನ್ನು ಜಪಿಸುವುದರಿಂದ ನಿಮಗೆ ಶುಭವಾಗಲಿದೆ.












Click it and Unblock the Notifications