• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈಎಸ್ಸಾರ್ ಪಕ್ಷದ ಪ್ರಣಾಳಿಕೆಯಲ್ಲಿ 20 ಲಕ್ಷ ವೆಚ್ಚದಲ್ಲಿ ಮನೆ ಭರವಸೆ

|

ಅಮರಾವತಿ, ಏಪ್ರಿಲ್ 07: 2019ರ ಚುನಾವಣೆಗಾಗಿ ವೈಎಸ್ ಅರ್ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಪ್ರಣಾಳಿಕೆಯಲ್ಲಿ 20 ಲಕ್ಷ ರು ವೆಚ್ಚದಲ್ಲಿ ಬಡವರಿಗಾಗಿ ಮನೆ ನಿರ್ಮಿಸಲಾಗುವುದು ಎಂದು ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ಭರವಸೆ ನೀಡಿದ್ದಾರೆ.

ಮುಂದಿನ ಐದು ವರ್ಷಕ್ಕೆ ಅನುಗುಣವಾಗಿ ಪ್ರಣಾಳಿಕೆ ತಯಾರಿಸಲಾಗಿದೆ ಎಂದ ಜಗನ್, ತೆಲುಗುದೇಶಂ ಪಾರ್ಟಿ(ಟಿಡಿಪಿ) ಪ್ರಣಾಳಿಕೆಯು ಜನರನ್ನು ಮರಳು ಮಾಡುವಂತೆ ಇದೆ ಎಂದು ಟೀಕಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರೈತರ ಭರವಸೆಗಾಗಿ ವಾರ್ಷಿಕವಾಗಿ 12,500 ರು ಮೀಸಲಿಡಲಾಗಿದೆ, ಉಚಿತ ಬೆಳೆ ವಿಮೆ, ಬಡ್ಡಿ ರಹಿತ ಸಾಲ, ವೇರ್ ಹೌಸ್ ಸ್ಥಾಪನೆ, ಕೋಲ್ಡ್ ಸ್ಟೋರೆಜ್ ನಿರ್ಮಾಣ ಹಾಗೂ ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆ ಪ್ರಣಾಳಿಕೆಯಲ್ಲಿದೆ.

* ಮಹಿಳೆಯರು, ಮಕ್ಕಳಿಗಗಿ ಅಮ್ಮ ವೋಡಿ ಯೋಜನೆಯಡಿ 15,000 ರು ವಾರ್ಷಿಕ ಮೀಸಲಿಡಲಾಗಿದೆ.

* ವೈಎಸ್ ಅರ್ ಆಸರಾ: ಗ್ರಾಮೀಣ ಭಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಯಡಿಯಲ್ಲಿ 50,000ರು ವಾರ್ಷಿಕ ಅನುದಾನ.

* ಸ್ವಸಹಾಯ ಗುಂಪುಗಳಿಗೂ ಡಬ್ಲ್ಯೂಸಿಅರ್ ಎ ಯೋಜನೆ ವಿಸ್ತರಣೆ.

ನಾಯ್ಡು ಪದಚ್ಯುತಿಗೆ 'ಆಪರೇಷನ್ ಗರುಡ' ನಟ ಶಿವಾಜಿಗೆ ಕಂಟಕ

* ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮಹಿಳೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 75,000 ರು(45 ವರ್ಷ ಮೇಲ್ಪಟ್ಟವರಿಗೆ)

* ಬಡ ಹಾಗೂ ಮಧ್ಯಮ ವರ್ಗಕ್ಕಾಗಿ ಆರೋಗ್ಯಶ್ರೀ ಯೋಜನೆ(ವೈಎಸ್ ರಾಜಶೇಖರ ರೆಡ್ಡಿ ಪರಿಚಯಿಸಿದ ಯೋಜನೆ)

* ವಾರ್ಷಿಕ 5 ಲಕ್ಷ ರು ಆದಾಯಯುಳ್ಳವರು ಆರೋಗ್ಯ ಶ್ರೀ ಯೋಜನೆಯನ್ನು ಉಚಿತವಾಗಿ ಪಡೆಯಬಹುದು.

English summary
With less than a week to the first phase of voting for the forthcoming Lok Sabha elections, YSR Congress Party (YSRCP) chief Jagan Mohan Reddy on Saturday released its manifesto for 2019 polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X