ನಾಯ್ಡು ಪದಚ್ಯುತಿಗೆ 'ಆಪರೇಷನ್ ಗರುಡ' ನಟ ಶಿವಾಜಿಗೆ ಕಂಟಕ
ಅಮರಾವತಿ, ಅಕ್ಟೋಬರ್ 30 : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪದಚ್ಯುತಿಗಾಗಿ ನಡೆದಿರುವ ಕಾರ್ಯತಂತ್ರಗಳ ಕುರಿತಂತೆ ಕೇಳಿ ಬಂದಿರುವ 'ಆಪರೇಷನ್ ಗರುಡ' ಬಗ್ಗೆ ವಿವರಿಸಿದ ನಟ ಕಮ್ ರಾಜಕೀಯ ಕಾರ್ಯಕರ್ತ ಶಿವಾಜಿ ಮೇಲೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ.
ಎನ್ಡಿಎ ಮಿತ್ರ ಪಕ್ಷವಾಗಿದ್ದ ತೆಲುಗು ದೇಶಂ ಪಾರ್ಟಿ ಈಗ ಮೈತ್ರಿ ಕಡಿದುಕೊಂಡಿದೆ. ಹೀಗಾಗಿರುವಾಗ, ನಾಯ್ಡು ಅವರನ್ನು ಕೆಳಗಿಳಿಸಲು ಹೂಡಿದ ರಣ ತಂತ್ರದ ಬಗ್ಗೆ ಕೇಂದ್ರ ಸರ್ಕಾರ ಏಕೆ ಆಸಕ್ತಿ ವಹಿಸಿದೆ ಎಂಬುದು ಕುತೂಹಲಕಾರಿ.
ಆದರೆ, ಆಂಧ್ರಪ್ರದೇಶ ಪ್ರಮುಖ ಮಾಧ್ಯಮಗಳ ವರದಿ ಪ್ರಕಾರ, ಆಂಧ್ರದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ 'ಆಪರೇಷನ್ ಗರುಡ' ಅಂದರೇನು? ಈ ಬಗ್ಗೆ ನಟಿ ಶಿವಾಜಿ ನೀಡಿರುವ ವಿವರಣೆ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಿದೆ.

ಸದ್ಯ ಹೈದರಾಬಾದ್ ತೊರೆದು ಅಮೆರಿಕಕ್ಕೆ ತೆರಳಿರುವ ನಟ ಶಿವಾಜಿ, ಚಂದ್ರಬಾಬು ನಾಯ್ಡು ಅವರನ್ನು ಪಟ್ಟದಿಂದ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಸಂಚು ರೂಪಿಸಿದ್ದು ಎಂದು ತಮ್ಮ ವಿಡಿಯೋ ಪ್ರಾತ್ಯಕ್ಷಿಕೆಯಲ್ಲಿ ಆರೋಪಿಸಿದ್ದರು.
ಇದು ರಾಜಕೀಯ ಉದ್ದೇಶದಿಂದ ಮಾಡಿರುವ ವಿಡಿಯೋವೇ? ಅಥವಾ ಇಂಥ ಸಂಚು ರೂಪಿಸಲಾಗಿತ್ತೆ? ಈ ಬಗ್ಗೆ ಸುಳಿವು ತಿಳಿದು ನಾಯ್ಡು ಅವರು ಮೈತ್ರಿಯಿಂದ ಹೊರಗೆ ಬಂದರೇ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಸದ್ಯ ಅಮೆರಿಕದಲ್ಲಿ ನೆಲೆಸಿರುವ ಶಿವಾಜಿ ಅವರು ಭಾರತದಲ್ಲಿ ಚುನಾವಣೆ ಗಲಾಟೆ ಮುಗಿಯುವ ತನಕ ಹಿಂತಿರುಗುವ ಸಾಧ್ಯತೆಯಿಲ್ಲ ಎಂಬ ಸುದ್ದಿ ಬಂದಿದೆ. ಕೇಂದ್ರದ ತನಿಖಾ ದಳ ಹಾಗೂ ತೆಲಂಗಾಣ ಪೊಲೀಸರು, ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಿದ್ದಾರೆ.
ಈ ನಡುವೆ ಜಗನ್ ಮೇಲೆ ಹಲ್ಲೆ ಮಾಡಿದ್ದು ಪೂರ್ವನಿಯೋಜಿತ ಕೃತ್ಯ, ಜಗನ್ ಮೋಹನ್ ರೆಡ್ಡಿ ಅವರನ್ನು ಗಾಯಗೊಳಿಸುವುದು ಆತನ ಉದ್ದೇಶವಾಗಿರಲಿಲ್ಲ. ಆತ ಜಗನ್ ಅಭಿಮಾನಿ, ಪಕ್ಷದ ಪರ ಅನುಕಂಪದ ಸೃಷ್ಟಿ ಉದ್ದೇಶವಾಗಿತ್ತು ಎಂದು ವಿಪಕ್ಷಗಳು ಆರೋಪಿಸಿವೆ. ತಿರುಪತಿ ಸಮೀಪ ಈ ಹಿಂದೆ ನಾಯ್ಡು ಮೇಲೆ ನಡೆದ ನೆಲ ಬಾಂಬ್ ದಾಳಿ ಬಗ್ಗೆ ಕೂಡಾ ಪ್ರಸ್ತಾಪಿಸಲಾಗಿದೆ.












Click it and Unblock the Notifications