Year End Special 2024: 100 ಹೊಸ ಮಾರ್ಗದಲ್ಲಿ ಈ ವರ್ಷ ವಿಮಾನ ಸಂಚಾರ

2024ನೇ ವರ್ಷ ಅಂತ್ಯವಾಗುತ್ತಾ ಬಂದಿದೆ. ಈ ವರ್ಷದಲ್ಲಿ ಭಾರತೀಯ ವಿಮಾನಯಾನ ಕ್ಷೇತ್ರ ಹಲವು ಬೆಳವಣಿಗೆಗಳನ್ನು ಕಂಡಿದೆ. ಹೊಸದಾಗಿ ಈ ವರ್ಷ 100 ಮಾರ್ಗದಲ್ಲಿ ವಿಮಾನ ಸಂಚಾರ ಆರಂಭವಾಗಿದೆ. ಇಂಡಿಗೋ, ಏರ್ ಇಂಡಿಯಾ, ಸ್ಪೈಸ್‌ ಜೆಟ್ ದೇಶಾದ್ಯಂತ ಹೊಸ ಹೊಸ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಿದ್ದು, ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿದೆ.

ಈ ವರ್ಷ 2ನೇ ಮತ್ತು 3ನೇ ಹಂತದ ನಗರಗಳಿಗೆ ಹೆಚ್ಚು ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಉಡಾನ್ ಯೋಜನೆ ಅನ್ವಯ ಹೆಚ್ಚು ಹೆಚ್ಚು ನಗರಗಳು ವಿಮಾನ ಸಂಪರ್ಕವನ್ನು ಪಡೆಯುತ್ತಿವೆ. ಇದರಿಂದಾಗಿ ಸ್ಥಳೀಯ ವ್ಯಾಪರ ವಹಿವಾಟು ಉತ್ತಮವಾಗಿದ್ದು, ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ.

Yearender 2024 Indian Airlines Added Over 100 New Routes

ಇಂಡಿಗೋ ಈ ವರ್ಷ ಎರಡನೇ ಹಂತದ ನಗರಗಳಿಗೆ ಪ್ರತಿದಿನದ ವಿಮಾನ ಸೇವೆಯನ್ನು ಪರಿಚಯಿಸಿದೆ. ಇದರಲ್ಲಿ ದೆಹಲಿ-ರಾಜಮಂಡ್ರಿ, ದೆಹಲಿ-ದರ್ಬಾಂಗಾ ಮುಂತಾದ ಮಾರ್ಗ ಸೇರಿದೆ. ಅಲ್ಲದೇ ಅಂತರಾಷ್ಟ್ರೀಯ ಮಾರ್ಗದಲ್ಲಿ ಬೆಂಗಳೂರು-ಲಂಕಾವಿಗೆ ನೇರ ವಿಮಾನ ಸೇವೆಯನ್ನು ಆರಂಭಿಸಿದೆ.

ಇಂಡಿಗೋ ವಿಮಾನಯಾನ ಸಂಸ್ಥೆ ಈ ವರ್ಷ ಹಲವಾರು ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಅಯೋಧ್ಯೆಯ ನೂತನ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಸೇವೆ ಆರಂಭಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಇದು ಪಡೆದಿದೆ. ಬೆಂಗಳೂರು-ಪುದುಚೇರಿ, ಅಗರ್ತಾಲ, ದರ್ಬಾಂಗಾ ಅಲ್ಲದೇ ಅಮೆರಿಕಕ್ಕೂ ಸೇವೆಯನ್ನು ಡಿಸೆಂಬರ್‌ನಲ್ಲಿ ಆರಂಭಿಸಿದೆ.

ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಹ ಹಲವು ಹೊಸ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಿವೆ. ಏರ್‌ ಇಂಡಿಯಾ ಬೆಂಗಳೂರು-ಪೋರ್ಟ್ ಬ್ಲೇರ್ ನಡುವೆ ವಿಮಾನ ಸೇವೆ ಆರಂಭಿಸಿದೆ. ಇದರಿಂದಾಗಿ ಪ್ರವಾಸಿಗರಿಗೆ ಅನುಕೂಲವಾಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಜಯವಾಡ-ಬೆಂಗಳೂರು ನಡುವೆ ಇರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿದಿನದ ವಿಮಾನ ಸೇವೆ ಆರಂಭಿಸಿದೆ. ಇದರಿಂದಾಗಿ ಬೆಂಗಳೂರು ನಗರ ಮತ್ತೊಂದು ನಗರದೊಂದಿಗೆ ಪ್ರತಿದಿನದ ವಿಮಾನ ಸೇವೆಯನ್ನು ಪಡೆದಿದೆ.

ಸ್ಪೈಸ್‌ ಜೆಟ್‌ ಈ ವರ್ಷ 38 ಹೊಸ ದೇಶಿಯ ಮಾರ್ಗದಲ್ಲಿ ವಿಮಾನ ಸೇವೆಯನ್ನು ಆರಂಭಿಸಿದೆ. ಅದರಲ್ಲೂ ಮಹಾಕುಂಭ ಮೇಳಕ್ಕೆ ಬರುವ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಪ್ರಯಾಗ್‌ರಾಜ್‌ಗೆ ವಿವಿಧ ನಗರದಿಂದ ವಿಶೇಷ ವಿಮಾನ ಸೇವೆ ಆರಂಭಿಸಿದೆ.

ಹೊಸ ಹೊಸ ಮಾರ್ಗದ ವಿಮಾನ ಸೇವೆಗಳು ಉದ್ಯೋಗ, ಆರ್ಥಿಕ ಅಭಿವೃದ್ಧಿ, ಸಮಯ ಉಳಿತಾಯಕ್ಕೆ ಸಹಕಾರಿಯಾಗಿವೆ. ಅಲ್ಲದೇ ವಿವಿಧ ನಗರದ ಪ್ರವಾಸೋದ್ಯಮದ ಉತ್ತೇಜನಕ್ಕೆ ಇದು ಬಹಳ ದೊಡ್ಡ ಕೊಡುಗೆಯನ್ನು ನೀಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿದೆ, ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯಲಿದೆ. ಇಲ್ಲಿಗೆ ತೆರಳುವ ಭಕ್ತರಿಗೆ ವಿಮಾನ ಸೇವೆ ಉತ್ತಮ ಸಾರಿಗೆ ಸೌಕರ್ಯವನ್ನು ಒದಗಿಸಿದೆ.

ವಿಮಾನಯಾನ ಕ್ಷೇತ್ರ ವಿಮಾನ ನಿಲ್ದಾಣದಲ್ಲಿ ಮಾತ್ರವಲ್ಲ ವಿಮಾನ ನಿಲ್ದಾಣದ ಜೊತೆ ಸಂಪರ್ಕ ಹೊಂದಿರುವ ವಿವಿಧ ಕ್ಷೇತ್ರದಲ್ಲಿ ಹೊಸ ಹೊಸ ಉದ್ಯೋಗವನ್ನು ಸೃಷ್ಟಿಮಾಡಿದೆ. ಉಡಾನ್ ಯೋಜನೆಯಡಿ ಕಡಿಮೆ ದರದಲ್ಲಿ ವಿಮಾನ ಸೇವೆ ಲಭ್ಯವಿರುವ ಕಾರಣ ಹೆಚ್ಚಿನ ಜನರು ಸಹ ವಿಮಾನ ಪ್ರಯಾಣ ಮಾಡಲು ಬಯಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+