Year End Special 2024: ಈ ವರ್ಷ ವೈರಲ್ ಆದ ಭಾರತದ ಕೆಲವು ಫೋಟೋಗಳು
2024ನೇ ವರ್ಷ ಮುಗಿಯಲು ಕೆಲವು ದಿನ ಬಾಕಿ ಇದೆ. ಈ ವರ್ಷ ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಅನೇಕ ಘಟನೆಗಳು ದೇಶದಲ್ಲಿ ನಡೆದಿದ್ದು, ಅದರ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆದವು. ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಿತು. ಕ್ರೀಡೆ, ಸಾಂಸ್ಕೃತಿಕ ವಲಯದಲ್ಲಿ ನಡೆದ ಹಲವು ಘಟನೆಗಳ ಚಿತ್ರಗಳು ವಿಶ್ವದಾದ್ಯಂತ ಜನರ ಗಮನ ಸೆಳೆಯಿತು. ವರ್ಷಾಂತ್ಯ ಬರುತ್ತಿರುವುದರಿಂದ ಅವುಗಳ ಮಾಹಿತಿ ಇಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮನು ಭಾಕರ್ ಅವರಿಂದ ಹಿಡಿದು ರಾಷ್ಟ್ರಪತಿಗಳ ತನಕ ಭಾರತದ ಅನೇಕ ಫೋಟೋಗಳು ಈ ವರ್ಷ ಇಂಟರ್‌ನೆಟ್‌ನಲ್ಲಿ ಸಂಚಲನ ಉಂಟು ಮಾಡಿದವು. ಜನರು ಅದನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡರು, ರಿ-ಟ್ವೀಟ್, ಕಮೆಂಟ್ ಮಾಡಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು: ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಜುಲೈ 10ರಂದು ಬ್ಯಾಡ್ಮಿಂಟನ್ ಆಟವಾಡಿದರು. ಈ ಚಿತ್ರಗಳನ್ನು ರಾಷ್ಟ್ರಪತಿ ಭವನದ ಅಧಿಕೃತ ಖಾತೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಯಿತು. ಈ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಸಂಚಲನ ಉಂಟು ಮಾಡಿದವು. ರಾಷ್ಟ್ರಪತಿಗಳಿಗೆ ಕ್ರೀಡೆಯ ಬಗ್ಗೆ ಇರುವ ಪ್ರೀತಿಯನ್ನು ತಿಳಿಸಿದವು. 521ಕೆ ಜನರು ಈ ಚಿತ್ರಗಳನ್ನು ಇದುವರೆಗೂ ವೀಕ್ಷಣೆ ಮಾಡಿದ್ದಾರೆ. 21ಕೆ ಜನರು ಲೈಕ್ ಮಾಡಿದ್ದಾರೆ. 2.1ಕೆಗೂ ಅಧಿಕ ರಿ-ಟ್ವೀಟ್‌ಗಳಾಗಿವೆ.
ಮನು ಭಾಕರ್ ಚಿತ್ರಗಳು ವೈರಲ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕವನ್ನು ಪಡೆದರು. ಈ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಸಂಚಲನ ಉಂಟು ಮಾಡಿತು. ಈ ಚಿತ್ರಗಳನ್ನು ಭಾರತೀಯರು ಹೆಮ್ಮೆಯಿಂದ ಹಂಚಿಕೊಂಡರು. ವಿವಿಧ ಜಾಲತಾಣದಲ್ಲಿ ಈ ಚಿತ್ರಗಳು ವೈರಲ್ ಆದವು. ಮನು ಭಾಕರ್ ಯಾರು?, ಯಾವ ರಾಜ್ಯ?, ಹಿನ್ನಲೆ ಏನು? ಎಂದು ಸಹ ಸಾವಿರಾರು ಜನರು ಹುಡುಕಾಡಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಎರಡು ಪದಕಗಳನ್ನು ಗೆಲ್ಲುವ ಮೂಲಕ ಕೋಟ್ಯಾಂತರ ಭಾರತೀಯರ ಮನಸ್ಸನ್ನು ಸಹ ಗೆದ್ದರು.
ಮಣಿಪುರ ಗಲಭೆ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಗಲಭೆಗೆ ಸಂಬಂಧಿಸಿದಂತೆ ಹಲವು ಚಿತ್ರಗಳು ಇಂಟರ್‌ನೆಟ್‌ನಲ್ಲಿ ಇಂದಿಗೂ ಸಹ ಸಂಚಲನಕ್ಕೆ ಕಾರಣವಾಗಿದೆ. ಗಲಭೆ ಹತೋಟಿಗೆ ತರಲು ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ, ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಮಾತನಾಡುತ್ತಿಲ್ಲ ಎಂಬ ಟೀಕೆಗಳು ಸಹ ಕೇಳಿ ಬರುತ್ತಿವೆ. ಗಲಭೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಗಾರಿಕೆ ಮತ್ತು ಸರ್ಕಾರದ ನಿಲುವಿನ ಬಗ್ಗೆಯೂ ಇಂಟರ್‌ನೆಟ್‌ನಲ್ಲಿ ಹಲವು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.
ಅನನ್ಯಾ ಪಾಂಟೆ ಪಾರ್ಟಿ: ಬಾಲಿವುಡ್ ನಟಿ ಅನನ್ಯಾ ಪಾಂಡೆ ಆಯೋಜಿಸಿದ್ದ ಈ ವರ್ಷದ ಪಾರ್ಟಿಯೊಂದರ ಚಿತ್ರ ಇಂಟರ್‌ನೆಟ್‌ನಲ್ಲಿ ಸಂಚಲನಕ್ಕೆ ಕಾರಣವಾಯಿತು. ಈ ಪಾರ್ಟಿಯಲ್ಲಿ ಚಿಕಾಗೋ ಮೂಲದ ಮಾಜಿ ಮಾಡೆಲ್ ವಾಕರ್ ಬ್ಲಾಂಕೊ ಪಾಲ್ಗೊಂಡಿದ್ದರು. ಅನನ್ಯಾ ಪಾಂಟೆ ಅವರೊಂದಿಗೆ ಬ್ಲಾಂಕೋ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಚರ್ಚೆಗಳು ನಡೆದವು. ಕೆಲವು ನೆಟ್ಟಿಗರು ಇದೊಂದು ಬಾಲಿವುಡ್ ಗಾಸಿಪ್ ಎಂದು ಸುಮ್ಮನಾದರು.
ರಾಧಿಕಾ ಮರ್ಚೆಂಟ್ ವಿವಾಹ: ಭಾರತದಲ್ಲಿ ಈ ವರ್ಷ ನಡೆದ ಘಟನೆಗಳಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹವೂ ಸೇರಿದೆ. ಈ ವಿವಾಹ ದೇಶ, ವಿದೇಶದಲ್ಲಿ ಸುದ್ದಿ ಮಾಡಿತು. ಹಲವು ದೇಶಗಳಿಂದ ಗಣ್ಯರು ಸಹ ವಿವಾಹಕ್ಕಾಗಿ ಭಾರತಕ್ಕೆ ಆಗಮಿಸಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ನಡುವೆ ವಿವಾಹ ಜುಲೈನಲ್ಲಿ ನಡೆಯಿತು. ಈ ಕುರಿತು ಭಾರೀ ಚರ್ಚೆಗಳು ನಡೆದವು.












Click it and Unblock the Notifications