Year End Special 2024: ಪ್ರಮುಖ ಚುನಾವಣೆಗಳು ಭಾರತದಿಂದ ಅಮೆರಿಕ ತನಕ

2024ನೇ ವರ್ಷ ವಿಶ್ವದಾದ್ಯಂತ ಅನೇಕ ಚುನಾವಣೆಗಳು ನಡೆದವು. ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯಿತು. ಅಮೆರಿಕದ ಚುನಾವಣೆ ಪ್ರಪಂಚದ ಗಮನ ಸೆಳೆಯಿತು. ಭಾರತದ ಅಕ್ಕಪಕ್ಕದ ದೇಶಗಳಲ್ಲಿಯೂ ಚುನಾವಣೆ ನಡೆದು, ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿತು. ಈ ಚುನಾವಣೆಗಳು ವಿಶ್ವಮಟ್ಟದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ಈ ವರ್ಷ ನಡೆದ ಪ್ರಮುಖ ಚುನಾವಣೆಗಳ ಮಾಹಿತಿ ಇಲ್ಲಿದೆ.

2024ರಲ್ಲಿ ಸುಮಾರು 60 ರಾಷ್ಟ್ರಗಳಲ್ಲಿ ಚುನಾವಣೆಗಳು ನಡೆದಿವೆ. ಅದರಲ್ಲಿ ಭಾರತ ಮತ್ತು ಅಮೆರಿಕ ಚುನಾವಣೆಗಳು ಹೆಚ್ಚು ಗಮನ ಸೆಳೆದವು. ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಪುನಃ ಅಧಿಕಾರಕ್ಕೆ ಬಂದಿತು. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಜನವರಿಯಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Year Ender 2024 Key Elections From India To America

3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತು ಎನ್‌ಡಿಎ ಮೈತ್ರಿಕೂಟ 400 ಸೀಟುಗಳಲ್ಲಿ ಜಯಗಳಿಸುವ ಗುರಿ ಹೊಂದಿತ್ತು. ಆದರೆ 292 ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಬಿಜೆಪಿ 240 ಸೀಟುಗಳಲ್ಲಿ ಜಯಗಳಿಸಿತು. ಚುನಾವಣೆ ಫಲಿತಾಂಶದ ಬಳಿಕ ನರೇಂದ್ರ ಮೋದಿ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸಮ್ಮಿಶ್ರ ಸರ್ಕಾರ ಆರು ತಿಂಗಳಿನಿಂದ ಉತ್ತಮವಾಗಿಯೇ ಸಾಗುತ್ತಿದೆ.

ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ: 2024ರಲ್ಲಿ ಅಮೆರಿಕದ ಅಧ್ಯಕೀಯ ಚುನಾವಣೆ ನಡೆಯಿತು. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಜಯಗಳಿಸುವ ಮೂಲಕ 2ನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರು. ರಿಪಬ್ಲಿಕನ್ ಪಕ್ಷದ ಟ್ರಂಪ್ ಜನವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಧ್ಯಕೀಯ ಚುನಾವಣೆಯಲ್ಲಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರನ್ನು ಮಣಿಸಿ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗುತ್ತಿದ್ದಾರೆ.

ಬ್ರಿಟನ್ ಚುನಾವಣೆ: 2024ರ ಜುಲೈನಲ್ಲಿ ಬ್ರಿಟನ್‌ ಸಂಸತ್‌ ಚುನಾವಣೆ ನಡೆಯಿತು. ಲೇಬರ್‌ ಪಕ್ಷವು ಭಾರೀ ಬಹುಮತ ಗಳಿಸಿತು. ಕೀರ್‌ ಸ್ಟಾರ್ಮರ್‌ ನೂತನ ಪ್ರಧಾನಿಯಾಗಿ ಆಯ್ಕೆಯಾದರು. ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿಯ 14 ವರ್ಷಗಳ ಆಡಳಿತ ಕೊನೆಗೊಂಡಿತು. ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್ ಪಕ್ಷದ ಸೋಲು ಭಾರತದಲ್ಲಿ ನಿರಾಸೆಗೆ ಕಾರಣವಾಯಿತು. ರಿಷಿ ಸುನಕ್‌ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ.

ಪಾಕಿಸ್ತಾನ ಚುನಾವಣೆ: 2024ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ನಡೆಯಿತು. ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ತಿಂಗಳ ಬಳಿಕ ಪಾಕಿಸ್ತಾನ್​​ ಮುಸ್ಲಿಂ ಲೀಗ್​ ಪಕ್ಷ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡಿತು. ಮಿಯಾನ್ ಮುಹಮ್ಮದ್ ಶೆಹಬಾಜ್ ಷರೀಫ್ 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾದರು. ಭಾರತದ ಪ್ರಧಾನಿ ನರೇಂದ್ರ ಮೋದಿ ನೂತನ ಪ್ರಧಾನಿಯನ್ನು ಅಭಿನಂದಿಸಿದರು. 'ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಬಯಸುತ್ತದೆ. ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬಹುದು. ಜತೆಗೆ, ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿ ಖಚಿತಪಡಿಸಿಕೊಳ್ಳಬಹುದು' ಎಂದು ಹೇಳಿದ್ದರು.

ಶ್ರೀಲಂಕಾದಲ್ಲಿ ಚುನಾವಣೆ: ಭಾರತದ ಪಕ್ಕದ ಶ್ರೀಲಂಕಾದಲ್ಲಿಯೂ ಚುನಾವಣೆ ನಡೆಯಿತು. ಅಧ್ಯಕ್ಷ ಅನುರ ಕುಮಾರ ಡಿಸಾನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ ಸಂಸತ್ತಿನಲ್ಲಿ ಐತಿಹಾಸಿಕ ಬಹುಮತವನ್ನು ಪಡೆದುಕೊಂಡಿತು. 2022ರ ಜನತಾ ದಂಗೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ವಿಶ್ವದಲ್ಲಿಯೇ ಕುತೂಹಲಕ್ಕೆ ಕಾರಣವಾಗಿತ್ತು.

ರಷ್ಯಾ ಚುನಾವಣೆ: ರಷ್ಯಾದಲ್ಲಿ ಮಾರ್ಚ್ ತಿಂಗಳಿನಲ್ಲಿ ಚುನಾವಣೆ ನಡೆಯಿತು. ಭಾರಿ ಬಹುಮತದೊಂದಿಗೆ ಹಾಲಿ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಮತ್ತೆ ವಿಜಯ ಸಾಧಿಸಿದರು. ಇದರೊಂದಿಗೆ ಪುಟಿನ್ ಮತ್ತೆ 6 ವರ್ಷ ರಷ್ಯಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ರಷ್ಯಾದ 8ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ 87.34ರಷ್ಟು ಮತಗಳನ್ನು ಪಡೆದು ಪುಟಿನ್ ಮರು ಆಯ್ಕೆಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+