ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2017 ವರ್ಷದ ಹಿನ್ನೋಟ: ವಿಶ್ವವನ್ನು ತಲ್ಲಣಿಸಿದ 5 ನೈಸರ್ಗಿಕ ವಿಕೋಪ

|
Google Oneindia Kannada News

ನಿಸರ್ಗದ ಅಗಾಧ ಶಕ್ತಿಯೆದುರು ಮನುಷ್ಯ ತೃಣಸಮಾನ ಎಂಬುದನ್ನು ಸಾಬೀತುಪಡಿಸುವಂಥ ಹಲವು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. 2017 ರಲ್ಲೂ ಅಂಥ ಹಲವು ಘತನೆಗಳು ನಡೆದು ನಿಸರ್ಗದ ಮೇಲೆ ದೌರ್ಜನ್ಯ ಎಸಗುವ ಮನುಷ್ಯನಿಗೆ ಪಾಠ ಕಲಿಸಿದೆ.

ಆದರೆ ನಿಸರ್ಗದ ಕೋಪಕ್ಕೆ ಬಲಿಯಾದ ಅಮಾಯಕರ ಕುಟುಂಬಗಳು ಮಾತ್ರ ಇಂದಿಗೂ ಅವರೆಲ್ಲರ ಅಗಲಿಕೆ ನೋವನ್ನು ನೆನಪಿಸಿಕೊಳ್ಳುತ್ತ, 2017 ಕ್ಕೆ ಶಾಪ ಹಾಕುತ್ತಲೇ ಇದ್ದಾರೆ.

2017 ವರ್ಷದ ಹಿನ್ನೋಟ: ರಾಜ್ಯದಲ್ಲಿ ಸುದ್ದಿಯಾದ 5 ಮಾನಿನಿಯರು2017 ವರ್ಷದ ಹಿನ್ನೋಟ: ರಾಜ್ಯದಲ್ಲಿ ಸುದ್ದಿಯಾದ 5 ಮಾನಿನಿಯರು

ಮೆಕ್ಸಿಕೋದಲ್ಲಿ ನಡೆದ ಭೂಕಂಪ, ಈಶಾನ್ಯ ಭಾರತದಲ್ಲಿ ಪ್ರವಾಹ, ಎಡಬಿಡದೆ ಸುರಿದ ಮಳೆ, ಕೋಲಂಬಿಯಾದಲ್ಲಿ ಭೂಕುಸಿತ, ಕ್ಯಾಲಿಫೊರ್ನಿಯದ ಕಾಳ್ಗಿಚ್ಚು, ಭಾರತದ ಕರಾವಳಿಯಲ್ಲಿ ಓಖಿ ಚಂಡಮಾರುತ ಸೇರಿದಂತೆ ಹಲವು ಘಟನೆಗಳು ಭಾರತ, ಸೇರಿದಂತೆ ವಿಶ್ವದ ನಾನಾ ದೇಶಗಳನ್ನು ತಲ್ಲಣಿಸಿವೆ.

ಡಿ.31 ರೊಳಗೆ ಸುನಾಮಿ! ಅತೀಂದ್ರಿಯ ಶಕ್ತಿಯ ಬಾಬು ಕಳಾಯಿಲ್ ಎಚ್ಚರಿಕೆ!ಡಿ.31 ರೊಳಗೆ ಸುನಾಮಿ! ಅತೀಂದ್ರಿಯ ಶಕ್ತಿಯ ಬಾಬು ಕಳಾಯಿಲ್ ಎಚ್ಚರಿಕೆ!

ಅಂಥ ದುರಂತಗಳು 2018 ರಲ್ಲಿ ಮರುಕಳಿಸದಿರಲಿ, 2018 ಅತ್ಯಂತ ಶಾಂತಿಯುತ ವರ್ಷವಾಗಲಿ ಎಂಬ ಹಾರೈಕೆಯೊಂದಿಗೆ 2017 ರ ನೈಸರ್ಗಿಕ ವಿಕೋಪಗಳ ಹಿನ್ನೋಟ ಇಲ್ಲಿದೆ...

ಮೆಕ್ಸಿಕೋ ಭಿಕರ ಭೂಕಂಪದ ಕಹಿನೆನಪು

ಮೆಕ್ಸಿಕೋ ಭಿಕರ ಭೂಕಂಪದ ಕಹಿನೆನಪು

ಸೆಪ್ಟೆಂಬರ್ 19 ರಂದು ಮೆಕ್ಸಿಕೋದಲ್ಲಿ ಸಂಭವಿಸಿದ 7.1 ತೀವ್ರತೆಯ ಭೂಕಂಪ ಈ ವರ್ಷದ ಅತ್ಯಂತ ಭೀಕರ ನೈಸರ್ಗಿಕ ದುರಂತಗಳಲ್ಲೊಂದು. ಕೇವಲ 20 ಸೆಕೆಂಡುಗಳ ಕಾಲ, 55 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ್ದಕ್ಕಾಗಿ ಇಡೀ ಮೆಕ್ಸಿಕೋ ನಗರ ಸ್ಮಶಾನಸದೃಶವಾಗಿತ್ತು. ಈ ದುರಂತದಲ್ಲಿ 370 ಕ್ಕೂ ಹೆಚ್ಚು ಜನ ಅಸುನೀಗಿದ್ದರು. 6,000 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. 1985 ರಲ್ಲಿ ಮೆಕ್ಸಿಕೋದಲ್ಲಿ 10,000 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಅತ್ಯಂತ ಭೀಕರ ದುರಂತದ ನಂತರ ಸಂಭವಿಸಿದ ಅಪಾಯಕಾರಿ ಭೂಕಂಪ ಇದಾಗಿತ್ತು. ಇನ್ನೂ ಅಚ್ಚರಿಯ ವಿಷಯವೆಂದರೆ 1985 ರಲ್ಲೂ ಈ ಭೂಕಂಪ ಸೆಪ್ಟೆಂಬರ್ 19 ರಂದೇ ನಡೆದಿತ್ತು! ಈ ಭೂಕಂಪದ ಕಹಿ ನೆನಪಿನಿಂದ ಹೊರಬರಲು ಈಗಲೂ ಮೆಕ್ಸಿಕೋ ಕಷ್ಟಪಡುತ್ತಿದೆ.

ಮೆಕ್ಸಿಕೋದಲ್ಲಿ ಶತಮಾನದ ಭೀಕರ ಭೂಕಂಪ: 61 ಕ್ಕೇರಿದ ಸಾವಿನ ಸಂಖ್ಯೆಮೆಕ್ಸಿಕೋದಲ್ಲಿ ಶತಮಾನದ ಭೀಕರ ಭೂಕಂಪ: 61 ಕ್ಕೇರಿದ ಸಾವಿನ ಸಂಖ್ಯೆ

ಈಶಾನ್ಯ ಭಾರತವನ್ನು ಮುಳುಗಿಸಿದ ಪ್ರವಾಹ

ಈಶಾನ್ಯ ಭಾರತವನ್ನು ಮುಳುಗಿಸಿದ ಪ್ರವಾಹ

2017 ಜುಲೈ ನಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 85 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರಗಳು ಅಕ್ಷರಶಃ ಮುಳುಗಿಹೋಗಿದ್ದವು. 5 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾದರು. ಈ ಸಂದರ್ಭದಲ್ಲಿ ಇಡೀ ದೇಶವೂ ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ನೀಡಿದ್ದು ವಿಶೇಷ. ಪ್ರವಾಹದಿಂದಾಗಿ ಅಸ್ಸಾಮಿನ ಜಗತ್ಪ್ರಸಿದ್ಧ ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ ಸಂಪೂರ್ಣ ಜಲಾವೃತವಾದ ಕಾರಣ ಇಲ್ಲಿನ ಹಲವು ಅಪರೂಪದ ಜೀವಸಂತತಿಗಳು ನಾಶವಾದವು.

ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು

ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು

ಅಮರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಭಯಂಕರ ಕಾಳ್ಗಿಚ್ಚು ದೊಡ್ಡಣ್ಣನನ್ನು ನಡುಗಿಸಿದ್ದಲ್ಲದೆ, ಜಾಗತಿಕ ತಾಪಮಾನದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಸೂಚಿಸಿತ್ತು. ಈ ಕಾಳ್ಗಿಚ್ಚಿನಲ್ಲಿ ಇಬ್ಬರು ಮೃತರಾಗಿದ್ದರು. ಹೆಚ್ಚು ಪ್ರಾಣ ಹಾನಿ ಸಂಭವಿಸಿಲ್ಲವಾದರೂ 1.40 ಲಕ್ಷ ಎಕರೆ ಜಾಗವನ್ನು ಈ ಕಾಳ್ಗಿಚ್ಚು ಕರಕಲಾಗಿಸಿತ್ತು. ಈ ಕಾಳ್ಗಿಚ್ಚನ್ನು ಆರಿಸಲು ಇಡೀ ಕ್ಯಾಲಿಫೋರ್ನಿಯಾದ ಬಹುಪಾಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು. ನಾಸಾದ ಉಪಗ್ರಹವೂ ಈ ಕಾಳ್ಗಿಚ್ಚಿನ ಬೆಂಕಿ ಇನ್ನೂ ಆರದಿರುವುದನ್ನು ಸೆರೆ ಹಿಡದು ಈ ಕಾಳ್ಗಿಚ್ಚಿನ ತೀವ್ರತೆಯನ್ನು ಅರ್ಥ ಮಾಡಿಸಿತ್ತು.

ಎದೆನಡಿಸುವ ಕೋಲಂಬಿಯಾದ ಭೂಕುಸಿತ

ಎದೆನಡಿಸುವ ಕೋಲಂಬಿಯಾದ ಭೂಕುಸಿತ

ಮೊಕೊಯ್ ಭೂಕುಸಿತ ಎಂದೇ ಹೆಸರಾದ ಅಪಾಯಕಾರಿ ಭೂಕುಸಿತ 2017 ರ ಕಹಿ ಘಟನೆಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ಕೋಲಂಬಿಯಾ, ಪುಟುಮಾಯೋ ಮತ್ತು ಮೊಕೊಯ್ ಎಂಬಲ್ಲಿ ಏಪ್ರಿಲ್ 1 ರಂದು ಸಂಭವಿಸಿದ ಭೂಕುಸಿತಕ್ಕೆ 254 ಜನ ಮೃತರಾಗಿದ್ದರು. 332 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಮಣ್ಣಿನಾಳದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವುದೇ ಒಂದು ಹರಸಾಹಸವೆನ್ನಿಸಿತ್ತು. ಇದು ಕೋಲಂಬಿಯಾದ ಇತಿಹಾಸದಲ್ಲೇ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಎನ್ನಿಸಿಕೊಂಡಿತ್ತು.

ಸಿರ್ರಾ ಲಿಯಾನ್ ನಲ್ಲಿ ಮಣ್ಣಿನ ಕುಸಿತ

ಸಿರ್ರಾ ಲಿಯಾನ್ ನಲ್ಲಿ ಮಣ್ಣಿನ ಕುಸಿತ

ಪೂರ್ವ ಆಫ್ರಿಕಾ ದೇಶದಲ್ಲೊಂದಾದ ಸಿರ್ರಾ ಲಿಯೋನ್ ರಿಪಬ್ಲಿಕ್ ನಲ್ಲಿ ಅತಿಯಾದ ಮಳೆಯಿಂದಾಗಿ ಸಂಭವಿಸಿದ ಮಣ್ಣಿನ ಕುಸಿತಕ್ಕೆ ಬಲಿಯಾದವರು ಬರೋಬ್ಬರಿ 499 ಜನ. ಇದು ಲೆಕ್ಕಕ್ಕೆ ಸಿಕ್ಕಿದ್ದು, ಆದರೆ ಮಣ್ಣಿನಲ್ಲಿ ಕುಸಿದು ಹೋದವರನ್ನೆಲ್ಲ ಲೆಕ್ಕ ಹಾಕಿದರೆ ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ ಎಂಬುದು ಅಂದಾಜು. ಕಳೆದ ಆಗಸ್ಟ್ 14 ರಂದು ಸಂಬವಿಸಿದ ಈ ಮಣ್ಣಿನ ಕುಸಿತ 3000 ಕ್ಕೂ ಹೆಚ್ಚು ಜನರನ್ನು ನಿರಾಶ್ರಿತರನ್ನಾಗಿ ಮಾಡಿತ್ತು.

English summary
Mexico earthquake, North East india flood, Colombia mudslide, California Wildfire, Flooding and land slides in sierra leone are the 5 deadliest natural disasters of the year 2017. Thousands of people lost their life in these disasters. Their dear ones are still remembering them, and wish 2018 to not become a witness for such disasters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X