ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Year end 2022; ಮೋದಿ ಸರ್ಕಾರದ ಟಾಪ್ 5 ಘೋಷಣೆಗಳು

|
Google Oneindia Kannada News

2022ನೇ ವರ್ಷ ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಈ ವರ್ಷ ಹಲವಾರು ಘಟನೆಗಳು ನಡೆದಿವೆ. ವಿವಿಧ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ. ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ದೇಶವಾಗಿದೆ. ಸರ್ಕಾರದ ನೀತಿಗಳು ಯುವಕರಿಗೆ ಉದ್ಯೋಗ, ಕೌಶಲ್ಯ ತರಬೇತಿಯನ್ನು ನೀಡುವಂತಿರಬೇಕಿದೆ.

ಭಾರತದಲ್ಲಿ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. 2023ರಲ್ಲಿ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2022ರಲ್ಲಿ ದೇಶದ ಆರ್ಥಿಕತೆ ಬಲಪಡಿಸಲು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.

Year Ender 2022 : ಜೆಡಿಎಸ್‌ಗೆ ಸಿ. ಎಂ. ಇಬ್ರಾಹಿಂ ಸಾರಥ್ಯ Year Ender 2022 : ಜೆಡಿಎಸ್‌ಗೆ ಸಿ. ಎಂ. ಇಬ್ರಾಹಿಂ ಸಾರಥ್ಯ

ಕೋವಿಡ್ ಸಾಂಕ್ರಾಮಿಕದಿಂದ ಹೊರ ಬಂದಿರುವ ಭಾರತದಲ್ಲಿ ನಿಧಾನವಾಗಿ ಆರ್ಥಿಕತೆ ಚೇತರಿಕೆಯತ್ತ ಸಾಗುತ್ತಿದೆ. ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸರ್ಕಾರ ಈ ವರ್ಷ ಅಗ್ನಿಪಥ್ ಯೋಜನೆ, ವಂದೇ ಭಾರತ್ ರೈಲು ಸಂಚಾರ, 5 ಜಿ ಸೇವೆ ಆರಂಭ ಸೇರಿದಂತೆ ಹಲವಾರು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದೆ.

Year end 2022; ಸ್ವಿಗ್ಗಿ ವರ್ಷದ ವ್ಯಕ್ತಿ ಕಿರೀಟ ಬೆಂಗಳೂರಿಗನಿಗೆ! Year end 2022; ಸ್ವಿಗ್ಗಿ ವರ್ಷದ ವ್ಯಕ್ತಿ ಕಿರೀಟ ಬೆಂಗಳೂರಿಗನಿಗೆ!

ದೇಶದಲ್ಲಿ ಲೋಕಸಭೆ ಚುನಾವಣೆಗೆ ಒಂದೂವರೆ ವರ್ಷಗಳು ಬಾಕಿ ಇದೆ. ಆದ್ದರಿಂದ 2023-24ನೇ ಸಾಲಿನ ಬಜೆಟ್‌ನಲ್ಲಿಯೂ ಜನಪರವಾದ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡುವ ನಿರೀಕ್ಷೆಯೂ ಇದೆ. 2022ರಲ್ಲಿ ಘೋಷಣೆ ಮಾಡಿದ ಪ್ರಮುಖ 5 ಯೋಜನೆಗಳು ಹೀಗಿವೆ...

Year Ender 2022 : ಭಾರತದ ಪ್ರಮುಖ 5 ದುರಂತಗಳುYear Ender 2022 : ಭಾರತದ ಪ್ರಮುಖ 5 ದುರಂತಗಳು

ಅಗ್ನಿಪಥ್ ಯೋಜನೆ

ಅಗ್ನಿಪಥ್ ಯೋಜನೆ

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ 2022ರ ಜೂನ್ 14ರಂದು ಅಗ್ನಿಪಥ್ ಯೋಜನೆ ಘೋಷಣೆ ಮಾಡಿದರು. ಮೂರು ಸೇನಾಪಡೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಘೋಷಣೆ ಇದಾಗಿತ್ತು. ಈ ಯೋಜನೆ ಅನ್ವಯ ಎಲ್ಲರನ್ನೂ 4 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಅಗ್ನಿಪಥ್ ಯೋಜನೆಯಡಿ ನೇಮಕವಾಗುವವರನ್ನು 'ಅಗ್ನಿ ವೀರರು' ಎಂದು ಕರೆಯಲಾಗುತ್ತದೆ. ಅಗ್ನಿಪಥ್ ಯೋಜನೆ ಘೋಷಣೆ ಮಾಡುತ್ತಿದ್ದಂತೆ ಹಲವಾರು ಟೀಕೆಗಳು ಕೇಳಿ ಬಂದವು. ಸಾರ್ವಜನಿಕ ಚರ್ಚೆಗಳು ನಡೆದವು. 2022ರ ಸೆಪ್ಟೆಂಬರ್‌ನಲ್ಲಿ ಈ ಯೋಜನೆ ಜಾರಿಗೆ ಬಂದಿತು.

ವಂದೇ ಭಾರತ್ ರೈಲುಗಳ ಸಂಚಾರ

ವಂದೇ ಭಾರತ್ ರೈಲುಗಳ ಸಂಚಾರ

2022-23ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ರೈಲ್ವೆ ಬಜೆಟ್‌ನಲ್ಲಿ 400 ಹೊಸ ಮಾದರಿಯ ವಂದೇ ಭಾರತ್ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದರು. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ 2023ರಲ್ಲಿ 75 ಮತ್ತು ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ದೇಶದಲ್ಲಿ ಓಡಿಸಲಾಗುತ್ತದೆ. ಸದ್ಯ ದೇಶದಲ್ಲಿ 6 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ದಕ್ಷಿಣ ಭಾರತದಲ್ಲಿ ಮೈಸೂರು-ಬೆಂಗಳೂರು ಮತ್ತು ಚೆನ್ನೈ ನಡುವೆ ಒಂದೇ ಒಂದು ರೈಲು ಸಂಚಾರ ನಡೆಸುತ್ತಿದೆ.

ದೇಶದಲ್ಲಿ 5ಜಿ ಸೇವೆ ಆರಂಭ

ದೇಶದಲ್ಲಿ 5ಜಿ ಸೇವೆ ಆರಂಭ

ಪ್ರಧಾನಿ ನರೇಂದ್ರ ಮೋದಿ 1 ಅಕ್ಟೋಬರ್ 2022ರಂದು ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದರು. ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಲು, ಮೊಬೈಲ್‌ಗಳಿಗೆ ಅತಿ ವೇಗದ ಇಂಟರ್‌ನೆಟ್ ಸೌಲಭ್ಯ ಒದಿಗಿಸುವ ಉದ್ದೇಶದಿಂದ 5ಜಿ ಸೇವೆ ಆರಂಭಿಸಲಾಯಿತು. ಮೊದಲ ಹಂತದಲ್ಲಿ ದೇಶದ ಆಯ್ದ ಕೆಲವು ನಗರದಲ್ಲಿ ಮಾತ್ರ ಸೇವೆ ಲಭ್ಯವಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ದೇಶಾದ್ಯಂತ ಈ ಸೇವೆ ಲಭ್ಯವಾಗಲಿದೆ.

5ಜಿ ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, "ಇಂದು ದೇಶದ ಟೆಲಿಕಾಂ ಉದ್ಯಮದಿಂದ 130 ಕೋಟಿ ಭಾರತೀಯರಿಗೆ 5ಜಿ ರೂಪದಲ್ಲಿ ಅದ್ಭುತ ಕೊಡುಗೆ ಸಿಗುತ್ತಿದೆ. 5ಜಿಯು ದೇಶದ ಹೊಸ ಯುಗದ ಆರಂಭಕ್ಕೆ ಕೊಡಗೆ ನೀಡಲಿದೆ. ಇದಕ್ಕಾಗಿ ನಾನು ಪ್ರತಿಯೊಬ್ಬ ಭಾರತೀಯನನ್ನು ಅಭಿನಂದಿಸುತ್ತೇನೆ" ಎಂದರು.

ರಾಷ್ಟ್ರೀಯ ಲಾಜಿಸ್ಟಿಕ್ ಪಾಲಿಸಿ

ರಾಷ್ಟ್ರೀಯ ಲಾಜಿಸ್ಟಿಕ್ ಪಾಲಿಸಿ

ಪ್ರಧಾನಿ ನರೇಂದ್ರ ಮೋದಿ 17 ಸೆಪ್ಟೆಂಬರ್ 2022ರಂದು ರಾಷ್ಟ್ರೀಯ ಲಾಜಿಸ್ಟಿಕ್ ನೀತಿಗೆ ಚಾಲನೆ ನೀಡಿದರು. ದೇಶಾದ್ಯಂತ ಸರಕುಗಳ ತಡೆರಹಿತ ಚಾಲನೆಗೆ ಉತ್ತೇಜನ ನೀಡುವುದು ಈ ನೀತಿಯ ಪ್ರಮುಖ ಗುರಿಯಾಗಿದೆ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಸಹಕಾರ ನೀಡಲಿದೆ. ಸಾರಿಗೆ ಸಂಬಂಧಿತ ಸವಾಲುಗಳನ್ನು ಕೊನೆಗೊಳಿಸಲು, ಉತ್ಪಾದಕರ ಸಮಯ ಮತ್ತು ಹಣವನ್ನು ಉಳಿಸಲು, ಕೃಷಿ ಉತ್ಪನ್ನಗಳು ವ್ಯರ್ಥವಾಗುವುದನ್ನು ತಡೆಗಟ್ಟಲು ಈ ನೀತಿ ಸಹಕಾರಿಯಾಗಿದೆ. ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಹೆಚ್ಚಾಗಿತ್ತು. ದೇಶೀಯ ಮತ್ತು ರಫ್ತು ಮಾರುಕಟ್ಟೆಗಳೆರಡರಲ್ಲೂ ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿತ್ತು.

ಪಿಎಂ ಗತಿಶಕ್ತಿ ಎನ್‌ಎಂಪಿ ಯೋಜನೆ

ಪಿಎಂ ಗತಿಶಕ್ತಿ ಎನ್‌ಎಂಪಿ ಯೋಜನೆ

ಪ್ರಧಾನಮಂತ್ರಿ ನರೇಂದ್ರ ಮೋದಿ 2021ರ ಅಕ್ಟೋಬರ್‌ 13ರಂದು ಬಹು-ಮಾದರಿ ಸಂಪರ್ಕಕ್ಕಾಗಿ ಪಿಎಂ-ಗತಿ ಶಕ್ತಿ -ರಾಷ್ಟ್ರೀಯ ಬೃಹದ್ಯೋಜನೆ (ಎನ್‌ಎಂಪಿ) ಯನ್ನು ಪ್ರಾರಂಭಿಸಿದರು. ಬಳಿಕ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಬಹು-ಮಾದರಿ ಸಂಪರ್ಕವನ್ನು ಒದಗಿಸುವುದಕ್ಕಾಗಿ ರೋಲಿಂಗ್‌, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಬೆಂಬಲ ಕಾರ್ಯವಿಧಾನಕ್ಕಾಗಿ ಸಾಂಸ್ಥಿಕ ಚೌಕಟ್ಟನ್ನು ಒಳಗೊಂಡಂತೆ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಬೃಹದ್ಯೋಜನೆಯನ್ನು ಅನುಮೋದಿಸಿತು. ಕೇಂದ್ರ ಸರ್ಕಾರ ತನ್ನ ಯಾವೆಲ್ಲ ಮೂಲ ಸೌಕರ್ಯ ಆಸ್ತಿಗಳನ್ನು ಮುಂದಿನ 4 ವರ್ಷಗಳಲ್ಲಿ ಮಾರಾಟ ಮಾಡಲಿದೆ ಎಂಬುದನ್ನು ಎಂಎನ್‌ಪಿ ತಿಳಿಸಲಿದೆ. ನಗದೀಕರಣಕ್ಕೆ ಪರಿಗಣಿಸಲು ಸರ್ಕಾರ 6 ಲಕ್ಷ ಕೋಟಿ ಮೌಲ್ಯದ ಮೂಲ ಸೌಕರ್ಯಗಳ ಪಟ್ಟಿಯನ್ನು ಅಂತಿಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ, ವಿದ್ಯುತ್ ಗ್ರಿಡ್‌ಗಳು ಸಹ ಇದರಲ್ಲಿ ಸೇರಿವೆ.

English summary
Year end 2022; Let's look back some key decisions taken by prime minister Narendra Modi lead government of India in the year 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X