5 ದಶಕದಲ್ಲಿಯೇ ಶೇ 68ರಷ್ಟು ವನ್ಯಜೀವಿ ನಾಶ: ಆಘಾತ ಮೂಡಿಸುವ ವರದಿ
ವಾಷಿಂಗ್ಟನ್, ಸೆಪ್ಟೆಂಬರ್ 10: ಕಳೆದ ಕೇವಲ ನಾಲ್ಕು ದಶಕಗಳಲ್ಲಿಯೇ ಜಗತ್ತಿನ ವನ್ಯಜೀವಿ ಸಂಖ್ಯೆ ಶೇ 68ರಷ್ಟು ತಗ್ಗಿದೆ ಎಂಬ ಕಳವಳಕಾರಿ ಸಂಗತಿ ಬಹಿರಂಗವಾಗಿದೆ. ಈ ಆಘಾತಕಾರಿ ಇಳಿಕೆಗೆ ಮಾನವ ಅನುಭೋಗವೇ ಕಾರಣ ಎಂದು ವಿಶ್ವ ವಿನ್ಯಜೀವಿ ನಿಧಿ (ಡಬ್ಲ್ಯೂಡಬ್ಲ್ಯೂಎಫ್) ಬುಧವಾರ ಬಿಡುಗಡೆ ಮಾಡಿರುವ ವರದಿ ಹೇಳಿದೆ.
1970ರಿಂದ 2016ರ ಅವಧಿಯಲ್ಲಿ ನಿಗಾದಲ್ಲಿ ಇರಿಸಲಾಗಿದ್ದ 4,392ಕ್ಕೂ ಅಧಿಕ ಸಸ್ತನಿಗಳು, ಪಕ್ಷಿಗಳು, ಮೀನು, ಸರೀಸೃಪ ಹಾಗೂ ಉಭಯವಾಸಿ ತಳಿಗಳ ಸಂಖ್ಯೆ ತೀವ್ರ ಇಳಿಕೆಯಾಗಿದೆ ಎಂದು ಲಿವಿಂಗ್ ಪ್ಲಾನೆಟ್ ರಿಪೋರ್ಟ್ 2020 ತಿಳಿಸಿದೆ.
ಕಡಿಮೆ ಸಂಖ್ಯೆಯಲ್ಲಿದ್ದ 4,392 ಜಾತಿಯ ಪ್ರಾಣಿ, ಪಕ್ಷಿಗಳ 20,811 ಸಂಖ್ಯೆಯ ಮಾಹಿತಿಗಳನ್ನು ಬಳಸಿಕೊಂಡಿರುವ ವಿಶ್ವ ವನ್ಯಜೀವಿ ನಿಧಿಯ ಸೂಚ್ಯಂಕವು 1970-2016ರ ಅವಧಿಯಲ್ಲಿ ನಿಗಾದಲ್ಲಿ ಇರಿಸಲಾಗಿದ್ದ ವನ್ಯಜೀವಿಗಳ ಸಂಖ್ಯೆ ಸರಾಸರಿ ಶೇ 68ರಷ್ಟು ಕುಸಿತ ಉಂಟಾಗಿದೆ ಎಂಬುದನ್ನು ತೋರಿಸಿದೆ. ಮುಂದೆ ಓದಿ.

ವಿವಿಧ ಕಾರಣಗಳು
ಇತ್ತೀಚಿನ ದಶಕಗಳಲ್ಲಿ ಉಂಟಾದ ವನ್ಯಜೀವಿ ಸಂಖ್ಯೆಯಲ್ಲಿನ ಕುಸಿತದ ಮಟ್ಟವು ಹಲವು ಮಿಲಿಯನ್ ವರ್ಷಗಳವರೆಗೆ ಕಂಡಿರಲಿಲ್ಲ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ಗಳಲ್ಲಿನ ವನ್ಯಜೀವಿಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹೊಡೆತ ಕಂಡಿವೆ. ಇಲ್ಲಿ ಸರಾಸರಿ ಶೇ 94ರಷ್ಟು ವನ್ಯಜೀವಿಗಳ ಸಂಖ್ಯೆ ಕುಸಿತ ಕಂಡಿವೆ. ಹುಲ್ಲುಗಾವಲು, ನಿತ್ಯಹರಿದ್ವರ್ಣದ ಅರಣ್ಯ, ಒಣಭೂಮಿ ಸೇರಿದಂತೆ ವನ್ಯಜೀವಿ ಭೂಮಿಗಳನ್ನು ಬದಲಿಸಿರುವುದು, ವನ್ಯಜೀವಿಗಳ ಅತಿಯಾದ ಬಳಕೆ, ಸ್ಥಳೀಯವಲ್ಲದ ತಳಿಗಳನ್ನು ಪರಿಚಯಿಸಿರುವುದು ಮತ್ತು ಹವಾಮಾನ ಬದಲಾವಣೆಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

1 ಮಿಲಿಯನ್ ಪ್ರಾಣಿಗಳಿಗೆ ಕಂಟಕ
ಭೂಗ್ರಹದ ಶೇ 75ರಷ್ಟು ಹಿಮರಹಿತ ಭೂ ಪ್ರದೇಶದ ಸ್ವರೂಪವನ್ನೇ ಮನುಷ್ಯರು ಬದಲಿಸಿಬಿಟ್ಟಿದ್ದಾರೆ. ಪರಿಸರ ವ್ಯವಸ್ಥೆಯ ನಾಶವು ಈಗ 5 ಲಕ್ಷ ಪ್ರಾಣಿಗಳು, ಗಿಡಗಳು ಮತ್ತು 5 ಲಕ್ಷ ಕೀಟಗಳನ್ನು ಒಳಗೊಂಡಂತೆ 1 ಮಿಲಿಯನ್ ಜಾತಿಯ ಪ್ರಾಣಿಗಳಿಗೆ ಅಪಾಯ ತಂದೊಡ್ಡಿವೆ. ಮುಂಬರುವ ದಶಕಗಳು ಹಾಗೂ ಶತಮಾನಗಳಲ್ಲಿ ಭಾರಿ ಪ್ರಮಾಣದಲ್ಲಿ ವನ್ಯಜೀವಿ ನಾಶವಾಗಲಿದೆ ಎಂದು ವರದಿ ತಿಳಿಸಿದೆ.

ಜಲಚರಗಳ ಅಳಿವು
ತಾಜಾ ನೀರಿನ ಜೀವವೈವಿಧ್ಯ ವೇಗವಾಗಿ ತಗ್ಗುತ್ತಿದೆ. ಕೈಗಾರಿಕಾ ಕ್ರಾಂತಿಯ ಬಳಿಕ ಜಗತ್ತಿನ ಶೇ 85ರಷ್ಟು ನೀರಾವರಿ ಭೂಮಿಗಳು ನಾಶವಾಗಿವೆ. ಜಲ ಸಸ್ತನಿಗಳು, ಪಕ್ಷಿಗಳು, ಉಭಯವಾಸಿಗಳು, ಸರೀಸೃಪಗಳು ಮತ್ತು ಮೀನುಗಳ ಸಂಖ್ಯೆ 1970ರಿಂದ ಪ್ರತಿವರ್ಷ ಶೇ 4ರಷ್ಟು ಕುಸಿತ ಕಾಣುತ್ತಿವೆ. ತಾಜಾ ನೀರಿನ ಜೀವಿಗಳಲ್ಲಿ ಅತ್ಯಂತ ಹೆಚ್ಚು ನಾಟಕೀಯ ಕುಸಿತ ಉಂಟಾಗಿದೆ.

ಜಲಪರಿಸರ ವ್ಯವಸ್ಥೆಯ ನಾಶ
'ನೀವು ನಿಸರ್ಗದ ಗೋಜಲಿನ ಚಿತ್ರಣಗಳನ್ನು ನೋಡಲು ಆರಂಭಿಸಿದ್ದೀರಿ. ಇದು ಎಚ್ಚರಿಕೆಯ ಗಂಟೆ. ವನ್ಯಜೀವಿಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತದೆ ಎಂದೇ ಭಾವಿಸಿದ್ದೆವು. ಆದರೆ ತಾಜಾ ಜಲ ಪರಿಸರ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ನಾವು ನದಿಗಳಿಗೆ ಅಣೆಕಟ್ಟು ಕಟ್ಟುವ ಬಗೆ ಹಾಗೂ ತಾಜಾ ಜಲ ಮೂಲಗಳನ್ನು ವಿಶ್ವವ್ಯಾಪಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅಗತ್ಯವಾದ ಆಹಾರ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ' ಎಂದು ಡಬ್ಲ್ಯೂಡಬ್ಲ್ಯೂಎಫ್ ಮುಖ್ಯ ವಿಜ್ಞಾನಿ ರೆಬೆಕ್ಕಾ ಶಾ ತಿಳಿಸಿದ್ದಾರೆ.

ಮಿತಿ ಮೀರಿದ ಸಾಮರ್ಥ್ಯ ಬಳಕೆ
'ನಮ್ಮ 21ನೇ ಶತಮಾನದ ಜೀವನಶೈಲಿಗೆ ಬೇಕಾದ ಆಹಾರ ಹಾಗೂ ಅವಶ್ಯಕತೆಗಳನ್ನು ಪೂರೈಸಲು ಭೂಮಿಯ ಜೈವಿಕ ಸಾಮರ್ಥ್ಯವನ್ನು ಮಿತಿಮೀರಿ ಬಳಸುತ್ತಿದ್ದೇವೆ. ಇದರ ಪ್ರಮಾಣ ಕನಿಷ್ಠ 56%ರಷ್ಟಿದೆ. ಅತ್ಯಂತ ಅಪಾಯದಲ್ಲಿರುವ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮೇಲೆ ನಾವು ಹೆಚ್ಚು ಗಮನ ಹರಿಸುತ್ತೇವೆ. ಆದರೆ ಈಗಿರುವ ತಳಿಗಳು ತಮ್ಮ ಜೈವಿಕ ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ' ಎಂದು ಶಾ ಹೇಳಿದ್ದಾರೆ.
Recommended Video

ಹವಾಮಾನ ವೈಪರೀತ್ಯ ಕಾರಣವಲ್ಲ
ವನ್ಯಜೀವಿಗಳ ನಾಶಕ್ಕೆ ಪ್ರಮುಖ ಮೂಲ ಕೃಷಿ. ಆಹಾರ ಉತ್ಪಾದನೆಗಾಗಿ ಕೃಷಿ ಭೂಮಿಯನ್ನು ವಿಸ್ತರಿಸುತ್ತಿರುವುದು. ಆದರೆ ಈ ಜೀವ ವೈವಿಧ್ಯದ ನಾಶವು ಜಗತ್ತಿನ ಆಹಾರ ಭದ್ರತೆಗೆ ಬೆದರಿಕೆ ಒಡ್ಡುತ್ತಿದೆ. ಜೀವವೈವಿಧ್ಯದ ನಷ್ಟಕ್ಕೆ ಹವಾಮಾನ ವೈಪರೀತ್ಯ ಅತಿ ದೊಡ್ಡ ಕಾರಣವೇನೂ ಆಗಿಲ್ಲ. ಜಾಗತಿಕ ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಹವಾಮಾನ ವೈಪರೀತ್ಯವೂ ಪ್ರಮುಖ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications