ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಜನಸಂಖ್ಯಾ ದಿನ 2022: ಇತಿಹಾಸ, ಮಹತ್ವ, ವಾರ್ಷಿಕ ಕಾರ್ಯಕ್ರಮದ ಥೀಮ್ ತಿಳಿಯಿರಿ

|
Google Oneindia Kannada News

ವರ್ಷದಿಂದ ವರ್ಷಕ್ಕೆ ಭಾರತ ದೇಶದ ಜನಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಇದನ್ನು ನಿಯಂತ್ರಿಸುವುದು ಬಹುದೊಡ್ಡ ಸವಾಲಾಗಿದೆ. ವಿಶ್ವದಲ್ಲಿ ಚೀನಾ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದರೆ ಭಾರತ ಎರಡನೇ ಸ್ಥಾನದಲ್ಲಿದೆ. ಪ್ರಪಂಚದಾದ್ಯಂತ ಜನಸಂಖ್ಯೆಯ ಸಮಸ್ಯೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಬಾಲ್ಯವಿವಾಹ, ಲಿಂಗ ಸಮಾನತೆ, ಮಾನವ ಹಕ್ಕುಗಳು ಮತ್ತು ಇತರ ವಿಷಯಗಳ ನಡುವೆ ಕುಟುಂಬ ಯೋಜನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಪ್ರಮುಖವಾಗಿದೆ. ಅಂಕಿಅಂಶಗಳ ಪ್ರಕಾರ, ಪ್ರಸ್ತುತ 7.96 ಬಿಲಿಯನ್‌ನಷ್ಟು ವಿಶ್ವದ ಜನಸಂಖ್ಯೆ ಇದೆ. ಇದು 2030 ರಲ್ಲಿ ಸುಮಾರು 8.5 ಬಿಲಿಯನ್ ಬೆಳೆಯುವ ನಿರೀಕ್ಷೆಯಿದೆ.

ಜಗತ್ತಿನ ಜನಸಂಖ್ಯೆ 2019ರಲ್ಲಿ 772 ಕೋಟಿಗೆ ಬಂದು ತಲುಪಿದೆ. ಚೀನಾ 142 ಕೋಟಿ ಜನಸಂಖ್ಯೆ ಮೂಲಕ ಮೊದಲ ಸ್ಥಾನದಲ್ಲಿದ್ದರೆ ಭಾರತ 136.8 ಕೋಟಿ ಜನಸಂಖ್ಯೆ ಹೊಂದುವ ಮೂಲಕ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಇದು ವಿಶ್ವಕ್ಕೆ ಹೋಲಿಸಿದರೆ ಶೇ. 19 ಮತ್ತು ಶೇ. 18ರಷ್ಟು. ಅದರ ನಂತರದ ಸ್ಥಾನದಲ್ಲಿ ಅಮೆರಿಕ ಇದ್ದು 32 ಕೋಟಿ ಮತ್ತು ಇಂಡೋನೇಷ್ಯಾ 27 ಕೋಟಿ ಜನಸಂಖ್ಯೆ ಹೊಂದಿವೆ.

ಮೂಲಭೂತ ಸೌಕರ್ಯಗಳಿಂದ ವಂಚನೆ

ಮೂಲಭೂತ ಸೌಕರ್ಯಗಳಿಂದ ವಂಚನೆ

2022 ರ ವಿಶ್ವ ಜನಸಂಖ್ಯಾ ದಿನದ ವಿಷಯ '8 ಶತಕೋಟಿ ಪ್ರಪಂಚ: ಭವಿಷ್ಯವನ್ನು ಯೋಚಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಬೇಕಾದ ಅಗತ್ಯ ಆಯ್ಕೆಗಳನ್ನು ಖಾತರಿಪಡಿಸುವುದು".

ಥೀಮ್ ಪ್ರಕಾರ, ಇಂದು ಭೂಮಿಯ ಮೇಲೆ ಸುಮಾರು 8 ಶತಕೋಟಿ ಜನರು ವಾಸಿಸುತ್ತಿದ್ದಾರೆ ಆದರೆ ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳಿಲ್ಲ. ಅನೇಕ ಜನರು ಇನ್ನೂ ಸಹಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ದೃಷ್ಟಿಕೋನ, ಲಿಂಗ, ಜನಾಂಗೀಯತೆ, ವರ್ಗ, ಧರ್ಮ, ಅಂಗವೈಕಲ್ಯ ಮತ್ತು ದೇಶದ ಮೂಲದ ಆಧಾರದ ಮೇಲೆ ಕಿರುಕುಳ, ತಾರತಮ್ಯ ಮತ್ತು ಹಿಂಸೆ ಹೀಗೆ ಹಲವಾರು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ.

ನಾವು ಜನಸಂಖ್ಯೆಯನ್ನು ಗುಣಿಸುವುದನ್ನು ಮುಂದುವರಿಸಿದಂತೆ, ಅಧಿಕ ಜನಸಂಖ್ಯೆಯ ಸಮಸ್ಯೆ ಎಂದಿಗಿಂತಲೂ ಹೆಚ್ಚು ಗಂಭೀರವಾಗಿರುತ್ತದೆ. ಉದಯೋನ್ಮುಖ ರಾಷ್ಟ್ರಗಳು ಈಗ ಲಿಂಗ ಅಸಮಾನತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಸಮಸ್ಯೆಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ.

ಜನಸಂಖ್ಯಾ ಹೆಚ್ಚಳದ ಅಪಾಯದ ಕುರಿತು ಜಾಗೃತಿ

ಜನಸಂಖ್ಯಾ ಹೆಚ್ಚಳದ ಅಪಾಯದ ಕುರಿತು ಜಾಗೃತಿ

ಜನಸಂಖ್ಯೆಯ ಕ್ಷಿಪ್ರ ಹೆಚ್ಚಳ ಮತ್ತು ಅದರಿಂದುಂಟಾಗುವ ಅಪಾಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 1989ರಲ್ಲಿ ಮೊದಲ ಬಾರಿಗೆ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಯ್ತು. ಜುಲೈ 11, 1987 ರಂದು ವಿಶ್ವದ ಜನಸಂಖ್ಯೆಯ ಅಂಕಿಅಂಶಗಳು 5 ಶತಕೋಟಿ ದಾಟಿತು. ನಂತರ ಹೆಚ್ಚುತ್ತಿರುವ ಜನಸಂಖ್ಯೆಯ ಸುತ್ತ ಹೆಚ್ಚಿನ ಜಾಗೃತಿ ಮೂಡಿಸಲು ಜಾಗತಿಕ ಮಟ್ಟದಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.


ವಿಶ್ವ ಜನಸಂಖ್ಯಾ ದಿನವನ್ನು ನಂತರ 1990 ರಲ್ಲಿ UN ಜನರಲ್ ಅಸೆಂಬ್ಲಿ 45/26 ನಿರ್ಣಯದೊಂದಿಗೆ ಸ್ಮರಿಸಲಾಯಿತು.

ಲಾಕ್‌ಡೌನ್‌ ಎಫೆಕ್ಟ್

ಲಾಕ್‌ಡೌನ್‌ ಎಫೆಕ್ಟ್

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಹಲವಾರು ಯೋಜನೆಗಳಿದ್ದರೂ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೇಯದು- ಕುಟುಂಬ ಯೋಜನೆ ಇಲ್ಲದೆ ಇರೋದು, ಲಿಂಗ ಅಸಮಾನತೆ, ಬಾಲ್ಯವಿವಾಹ, ಮಾನವ ಹಕ್ಕುಗಳು, ಆರೋಗ್ಯದ ಹಕ್ಕು, ಮಗುವಿನ ಆರೋಗ್ಯ ಇತ್ಯಾದಿ. ಜನರಲ್ಲಿ ಲೈಂಗಿಕತೆ, ಸಂತಾನೋತ್ಪತ್ತಿ ಹಾಗೂ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದುದು ಇಂದಿನ ಅನಿವಾರ್ಯವಾಗಿದೆ.

ಮಾತ್ರವಲ್ಲದೇ ಕೊರೊನಾ ಕೂಡ ಒಂದು ಕಾರಣವೆಂದರೆ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಲಾಕ್‌ಡೌನ್‌ ಸಮಯದಲ್ಲಿ ಅಧಿಕ ಬಾಲ್ಯವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿವೆ. ಲಾಕ್​ಡೌನ್​ ಹಿನ್ನೆಲೆ ಗರ್ಭನಿರೋಧಗಳ ಅಲಭ್ಯತೆ ಹಿನ್ನೆಲೆ, ಗರ್ಭಧಾರಣೆ ಹೆಚ್ಚಾಗಿದ್ದು, ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಯುಎನ್‌ಎಫ್‌ಪಿಎಯ ಇತ್ತೀಚಿನ ಸಂಶೋಧನೆಯ ಪ್ರಕಾರ ಲಾಕ್​ಡೌನ್​ ಸಮಯದಲ್ಲಿ ಕೌಟುಂಬಿಕ ಹಿಂಸೆಗಳು ಹೆಚ್ಚಾಗಿವೆ. ಅಲ್ಲದೆ, ಲಿಂಗ ಆಧಾರಿತ (ಗಂಡು ಅಥವಾ ಹೆಣ್ಣು ಮಕ್ಕಳು ಬೇಕೆಂದು) 31 ಮಿಲಿಯನ್ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಲಾಕ್​ಡೌನ್ ಅವಧಿಯಲ್ಲಿ ಅಂದಾಜು 2 ಲಕ್ಷ ಬಾಲ್ಯವಿವಾಹಗಳು ನಡೆದಿವೆ.

2027ರ ಭಾರತ ನಂಬರ್ ಒನ್

2027ರ ಭಾರತ ನಂಬರ್ ಒನ್

ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ಮುಖ್ಯ ಕಾರಣವೆಂದರೆ ಹೆಚ್ಚುತ್ತಿರುವ ಜನಸಂಖ್ಯೆಯ ಜೊತೆಗೆ ಹೆಚ್ಚಾಗಬಹುದಾದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಮಿತಿಮೀರಿದ ಜನಸಂಖ್ಯೆಯು ಪರಿಸರ ವ್ಯವಸ್ಥೆಗೆ ಹೇಗೆ ಹಾನಿ ಮಾಡುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ಭಾರತವು 2027ರ ವೇಳೆಗೆ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ನಂಬರ್ ಒನ್‌ ಸ್ಥಾನಕ್ಕೆ ಏರಲಿದೆ. ಇದರ ಜೊತೆಗೆ 2050ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ 27 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ. ಪ್ರಸಕ್ತ ಶತಮಾನದ ಅಂತ್ಯಕ್ಕೆ ಅಂದರೆ 2100ನೇ ಇಸವಿಗೆ ವಿಶ್ವದ ಜನಸಂಖ್ಯೆ 1100 ಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ಹೇಳಿದೆ.

Recommended Video

ಟ್ವಿಟರ್ ಡೀಲ್ ನಿಂದ ಹಿಂದೆ ಸರಿದಿದ್ಯಾಕೆ ಎಲಾನ್‌ ಮಸ್ಕ್ | * World | OneIndia Kannada

English summary
World Population Day is celebrated on July 11 every year. Know the World Population history, significance, theme of the annual program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X