World Milk Day: ನೀವು ತಿಳಿದಿರಲೇಬೇಕಾದ ಹಾಲಿನ 5 ಪ್ರಯೋಜನಗಳು
ಹಾಲು ಅಂದ್ರೆ ಬಹುತೇಕ ಜನರು ಇಷ್ಟಪಡುವ ಕ್ಷೀರ. ಅದ್ರಲ್ಲೂ ಹಸುವಿನ ಹಾಲು ಅಂದರೆ ಅಮೃತಕ್ಕೆ ಸಮಾನ ಎಂದು ಹೇಳಲಾಗುತ್ತದೆ. ಹೀಗಾಗಿನೇ ನಮ್ಮ ಹಿರಿಯರು ಬಾಲ್ಯದಿಂದಲೇ ಮಕ್ಕಳಿಗೆ ಹಸುವಿನ ಹಾಲು ಕುಡಿಸುವುದನ್ನು ರೂಢಿಸಿದ್ದಾರೆ. ಮಾತ್ರವಲ್ಲದೆ ಹಾಲು ವೈದ್ಯಕೀಯವಾಗಿ ಕ್ಯಾಲ್ಸಿಯಂ, ಪ್ರೋಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಂತೆ ಪ್ರಮುಖ ಪೋಷಕಾಂಶಗಳಿಂದ ತುಂಬಿದೆ ಎಂದು ದೃಢಪಟ್ಟಿದೆ. ಹೀಗಾಗಿ ಪೌಷ್ಟಿಕತಜ್ಞರು ಹಾಲನ್ನು ತ್ಯಜಿಸಲು ಶಿಫಾರಸು ಮಾಡುವುದಿಲ್ಲ. ಹಾಲಿನಲ್ಲಿ ಸೋಯಾ ಹಾಲು, ಕೆನೆರಹಿತ ಹಾಲು, ಬಾದಾಮಿ ಹಾಲು, ಓಟ್ ಹಾಲು ಮುಂತಾದ ಬಗೆಗಳಿವೆ.
ಜಾಗತಿಕ ಆಹಾರವಾಗಿ ಹಾಲಿನ ಪ್ರಾಮುಖ್ಯತೆಯನ್ನು ಗುರುತಿಸಲು ಜೂನ್ 1 ಅನ್ನು ವಿಶ್ವ ಹಾಲು ದಿನವನ್ನಾಗಿ ಆಚರಿಸಲಾಗುತ್ತದೆ. ಹಾಲನ್ನು ಸಂಪೂರ್ಣವಾಗಿ ತ್ಯಜಿಸುವುದು ನಿಮ್ಮ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನೀವು ತಿಳಿದಿರಲೇಬೇಕಾದ ಹಾಲಿನ 5 ಆಶ್ಚರ್ಯಕರ ಪ್ರಯೋಜನಗಳು ಪಟ್ಟಿ ಇಲ್ಲಿದೆ.

ಹಾಲಿನಿಂದ ಚರ್ಮದ ಸೌಂದರ್ಯ ವೃದ್ಧಿ
ಕಾಸ್ಮೋಪಾಲಿಟನ್‌ನಲ್ಲಿನ ವರದಿಯ ಪ್ರಕಾರ, ಹಾಲು ಕುಡಿಯುವುದರಿಂದ ವ್ಯಕ್ತಿಯ ಚರ್ಮದ ಕಾಂತಿ ಸುಧಾರಿಸುತ್ತದೆ. ಹಸುವಿನ ಹಾಲು ಹಾರ್ಮೋನುಗಳನ್ನು ಹೊಂದಿರುವುದರಿಂದ, ಇದು ಕೆಲವೊಮ್ಮೆ ದೇಹದಲ್ಲಿ ಇರುವ ಹಾರ್ಮೋನ್‌ಗಳಿಗೆ ಪ್ರತಿಕ್ರಿಯಿಸುತ್ತದೆ. ಜೊತೆಗೆ ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವದ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.

ಜೀರ್ಣಕಾರಿ ಸಮಸ್ಯೆಯಿಂದ ಮುಕ್ತಿ
ಹಾಲಿನಲ್ಲಿ ಹಲವಾರು ಪೌಷ್ಠಿಕಾಂಶಗಳಿದ್ದು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಿತ್ಯ ಒಂದು ಲೋಟ ಹಾಲು ಕುಡಿಯುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆಹಾರದೊಂದಿಗೆ ಹಾಲನ್ನು ರೂಢಿಸಿಕೊಳ್ಳುವುದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ದೂರವಾಗಿ ಕರುಳಿನ ಆರೋಗ್ಯವನ್ನು ಸುಧಾರಿಸಬಹುದು. ಜೊತೆಗೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

ತೂಕ ನಷ್ಟಕ್ಕೆ ಸಹಕಾರಿ
ಒಂದು ಲೋಟ ಹಾಲಿನಲ್ಲಿ 60ಕ್ಕೂ ಅಧಿಕ ಹಾರ್ಮೋನ್‌ಗಳನ್ನು ಹೊಂದಿದೆ. ಹಸುವಿನ ಹಾಲಿನಲ್ಲಿರುವ ಹಾರ್ಮೋನ್‌ಗಳ ಕಾರಣದಿಂದಾಗಿ ಇದನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿ ಈಗಾಗಲೇ ನೈಸರ್ಗಿಕ ಹಾರ್ಮೋನ್‌ಗಳು ಹೆಚ್ಚಿಸಬಹುದು. ಜೊತೆಗೆ ಇದು ಮನಸ್ಥಿತಿ ಬದಲಾವಣೆಗಳಿಗೆ ಕಾರಣವಾಗಬಹುದು.
ಜೊತೆಗೆ ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಲು ಕುಡಿಯುವುದರಿಂದ ತೂಕದಲ್ಲಿ ಸೂಕ್ತವಾದ ಬದಲಾವಣೆಯನ್ನು ಕಾಣಬಹುದು. Health.com ವರದಿಯು ಹೇಳುವಂತೆ, " ಹಾಲನ್ನು ಹೇಗೆ, ಎಷ್ಟು ಮತ್ತು ಯಾವ ರೂಪದಲ್ಲಿ ಸೇವಿಸಿದ್ದಾರೆ ಎಂಬುವುದು ತೂಕ ಕಡಿಮೆ ಮಾಡಲು ಮುಖ್ಯವಾಗಿದೆ.

ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆ
ಕ್ಯಾನ್ಸರ್, ಮಧುಮೇಹವನ್ನು ತಡೆಗಟ್ಟಲು ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಆಹಾರದೊಂದಿಗೆ ಹಾಲನ್ನು ಕುಡಿಯುವುದರಿಂದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು. ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆ ಇದ್ದು ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ, ಇದು ಮಧುಮೇಹದ ಅಪಾಯವನ್ನುಂಟು ಮಾಡುತ್ತದೆ.












Click it and Unblock the Notifications