ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಏಡ್ಸ್ ದಿನ: ಜಾಗೃತಿ ಮೂಡಿಸಲು ಬದ್ಧರಾಗೋಣವೆಂದ ರಾಜಕೀಯ ನಾಯಕರು

|
Google Oneindia Kannada News

ಏಡ್ಸ್/ಎಚ್‌ಐವಿ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮತ್ತು ಅದರ ಬಗ್ಗೆ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಡಿಸೆಂಬರ್ 1, 1988ರಿಂದ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗಿದೆ.

ಪ್ರತಿ ವರ್ಷ ಡಿಸೆಂಬರ್ 1ರಂದು ಆಚರಿಸಲಾಗುವ ವಿಶ್ವ ಏಡ್ಸ್ ದಿನ (ಮೊದಲ ಜಾಗತಿಕ ಆರೋಗ್ಯ ದಿನ) 33ನೇ ವರ್ಷಕ್ಕೆ ಕಾಲಿಡುತ್ತಿದೆ. ಇದು ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಹೀಗಾಗಿ ಸೋಂಕಿಗೊಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ನಾವೆಲ್ಲ ನಿಮ್ಮೊಟ್ಟಿಗಿದ್ದೇವೆ ಎಂಬ ಸಂಕಲ್ಪವನ್ನು ಮಾಡುವಂತಹ ಮಹತ್ವದ ದಿನ ಇದಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಕೂ ಸಂದೇಶ
ಈ #WorldAIDSday (ವಿಶ್ವ ಏಡ್ಸ್ ದಿನ)ಯಂದು ನಾವು ಒಗ್ಗೂಡೋಣ, ಅಸಮಾನತೆಗಳನ್ನು ಕೊನೆಗಾಣಿಸಲು, ಏಡ್ಸ್ ಅನ್ನು ಕೊನೆಗಾಣಿಸಲು ಮತ್ತೊಮ್ಮೆ ಬದ್ಧರಾಗೋಣ. ಈ ಗುರಿಗಳನ್ನು ಸಾಧಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕೂ ಮೂಲಕ ಮನವಿ ಮಾಡಿದ್ದಾರೆ.

World AIDS Day 2021: CM And Other Political Leaders Message To People On Aids Day

ಗೃಹ ಸಚಿವ ಆರಗ ಜ್ಞಾನೇಂದ್ರ ಸಂದೇಶ
ಮಾನವ ಜನಾಂಗವನ್ನು ಕಾಡುತ್ತಿರುವ ಎಚ್‍ಐವಿ/ಏಡ್ಸ್ ಬಗ್ಗೆ ಸಮಾಜದಲ್ಲಿ ಹೆಚ್ಚು ಜಾಗೃತಿ ಅಗತ್ಯ. ಈ #WorldAIDSDay ಸಂದರ್ಭದಲ್ಲಿ ಹೊಸ ಪ್ರಕರಣಗಳನ್ನು ಕಡಿಮೆ ಮಾಡಲು ಅರಿವು ಮೂಡಿಸುವ ಪಣ ತೊಡೋಣ. ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಬಗ್ಗೆ ಅರಿಯೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಏಡ್ಸ್ ತಡೆ ಸಂಸ್ಥೆ ಸಂದೇಶ

ವಿಶ್ವ ಏಡ್ಸ್ ದಿನ 2021 ಎಚ್.ಐ.ವಿ ಸೋಂಕಿತ ಜನರಿಗೆ ಭರವಸೆ ಮತ್ತು ಬೆಂಬಲ ತೋರಿಸಲು ಹಾಗೂ ಏಡ್ಸ್ ಬಗ್ಗೆ ಅರಿವು ಮೂಡಿಸಲು ಈ ದಿನ ಆಚರಿಸಲಾಗುತ್ತದೆ. ಘೋಷವಾಕ್ಯ "ಅಸಮಾನತೆಗಳನ್ನು ಕೊನೆಗೊಳಿಸಿ, ಏಡ್ಸ್‌ನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ" ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆ ಸಂಸ್ಥೆ (Karnataka State AIDS Prevention Society) ಹೇಳಿದೆ.

World AIDS Day 2021: CM And Other Political Leaders Message To People On Aids Day

ಈ ಎಚ್‌ಐವಿ ಸೋಂಕನ್ನು 1984ರಲ್ಲಿ ಗುರುತಿಸಲಾಗಿದ್ದರೂ, 35 ಮಿಲಿಯನ್‌ಗಿಂತಲೂ ಹೆಚ್ಚು ಜನರು ಎಚ್‌ಐವಿ ಅಥವಾ ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಡಿಸೆಂಬರ್ 1, 1988ರಲ್ಲಿ ಪ್ರಥಮ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ಯು.ಎನ್. ಏಡ್ಸ್ ಸಂಯುಕ್ತ ನೇತೃತ್ವದಲ್ಲಿ ಈ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲು ಮುಂದಾಯಿತು.

World AIDS Day 2021: CM And Other Political Leaders Message To People On Aids Day

ಎಚ್‌ಐವಿ/ಏಡ್ಸ್ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕೂಡಿಸುವುದಿಂದೇ ಅಲ್ಲದೆ ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಈ ಸೋಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಎಚ್‌ಐವಿ ಸೋಂಕಿತರಾಗಿರುವವರಿಗೆ ಬೆಂಬಲ ನೀಡುವುದು ಮತ್ತು ಅವರು ಅನುಭವಿಸುತ್ತಿರುವ ಕಳಂಕ ತಾರತಮ್ಯವನ್ನು ಕಡಿಮೆ ಮಾಡುವುದು ವಿಶ್ವದಲ್ಲಿನ ಎಚ್‌ಐವಿ ಏಡ್ಸ್ ಬೆಳವಣಿಗೆಯತ್ತ ದೃಷ್ಟಿ ಬೀರಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬರ ಗಮನ ಸೆಳೆಯುವುದೇ ಧ್ಯೇಯವಾಗಿದೆ.

English summary
World AIDS Day 2021: CM Basavaraj Bommai and other political leaders message to people on aids day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X