ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NIA ಹೆಸರು ಕೇಳಿದರೆ ಅಪರಾಧಿಗಳು ಪತರಗುಟ್ಟುವುದೇಕೆ? ಇದುವರೆ ಜಡಿದ ಕೇಸುಗಳೆಷ್ಟು?

|
Google Oneindia Kannada News

ನವದೆಹಲಿ, ಆಗಸ್ಟ್‌ 19: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೇಶದ ಮುಂಚೂಣಿ ತನಿಖಾ ಸಂಸ್ಥೆಯಾಗಿದ್ದು, ಅಪರಾಧಿಗಳ ಪಾಲಿನ ಯಮನಾಗಿ ಪರಿಣಮಿಸಿದೆ. ಎನ್‌ಐಎ ಹೆಸರು ಕೇಳಿದ ತಕ್ಷಣ ಎಂತಹ ಪ್ರಭಾವಿ ಅಪರಾಧಿಯಾದರೂ ತರಗುಟ್ಟಿ ಹೋಗುತ್ತಾರೆ. ಇದಕ್ಕೆ ಕಾರಣ ಅದರ ಕಾರ್ಯಕ್ಷಮತೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ತಿಳಿಯೋಣ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಡಿಸೆಂಬರ್‌ 31 2008ರಲ್ಲಿ ಪ್ರಾರಂಭವಾದಾಗಿನಿಂದ ಕಾಶ್ಮೀರಿ ಪ್ರತ್ಯೇಕತಾವಾದಿ ಗುಂಪುಗಳು, ಇಸ್ಲಾಮಿಕ್ ಜಿಹಾದಿಗಳು ಮತ್ತು ದೇಶದ ಒಳನಾಡಿನಲ್ಲಿ ಮಾವೋವಾದಿ ಜಾಲವನ್ನು ಹತ್ತಿಕ್ಕುವ ಭಯೋತ್ಪಾದನೆಯ ವಿರುದ್ಧದ ಭಾರತದ ಯುದ್ಧದಲ್ಲಿ ಮುಂಚೂಣಿಯಲ್ಲಿದೆ. ಅಂಕಿ ಅಂಶಗಳ ಪ್ರಕಾರ ಎನ್ಐಎ ಇಲ್ಲಿಯವರೆಗೆ 473 ಪ್ರಕರಣಗಳನ್ನು ಕೈಗೆತ್ತಿಕೊಂಡಿದೆ. ಎನ್ಐಎ (ತಿದ್ದುಪಡಿ) ಕಾಯಿದೆಯು ಹೆಚ್ಚಿನ ಬಲವನ್ನು ನೀಡಿದಾಗ 2019ರಲ್ಲಿ ಅತಿ ಹೆಚ್ಚು ಅಂದರೆ 62 ಪ್ರಕರಣಗಳನ್ನು ದಾಖಲಿಸಿದೆ. ಪ್ರಸ್ತುತ ದಿನಕರ್‌ ಗುಪ್ತಾ ಐಪಿಎಸ್‌ ಅವರು ಎನ್‌ಐಎಯ ಮುಖ್ಯಸ್ಥರಾಗಿದ್ದಾರೆ. ಇದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಜಮ್ಮು ಮತ್ತು ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಅನೇಕ ದಾಳಿಗಳನ್ನು ನಡೆಸಿದೆ. ಜಮ್ಮು, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ದಾಳಿಗಳು ಈ ಪ್ರದೇಶಗಳಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ತಂಡಗಳಿಗೆ ಸಂಬಂಧಿಸಿದಂತೆ ನಡೆದಿವೆ. ಎನ್‌ಐಎ ಏಕಕಾಲದಲ್ಲಿ ಹರಿಯಾಣದ ಕರ್ನಾಲ್ ಜಿಲ್ಲೆಯ ಬಟ್ರಾರಾ ಟೋಲ್ ಪ್ಲಾಜಾದಿಂದ ಇತ್ತೀಚೆಗೆ ಐಇಡಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಎರಡು ಸ್ಥಳಗಳಲ್ಲಿ ಶೋಧಗಳನ್ನು ನಡೆಸಿದೆ.

ಎನ್ಐಎ (ತಿದ್ದುಪಡಿ) ಕಾಯಿದೆ ಕಾಯಿದೆಯು ತನಿಖಾ ದಳದ ವ್ಯಾಪ್ತಿಯನ್ನು ವಿಸ್ತರಿಸಿತು. ಭಾರತೀಯರು ಮತ್ತು ವಿದೇಶದಲ್ಲಿ ಭಾರತೀಯ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳು, ಮಾನವ ಕಳ್ಳಸಾಗಣೆ, ಹವಾಲಾ ವಹಿವಾಟುಗಳು, ನಕಲಿ ಕರೆನ್ಸಿ ಚಲಾವಣೆ, ನಿಷೇಧಿತ ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಮಾರಾಟ ಮತ್ತು ಸೈಬರ್ ಭಯೋತ್ಪಾದನೆಯನ್ನು ತನಿಖೆ ಮಾಡಲು ಅದಕ್ಕೆ ಅಧಿಕಾರ ನೀಡಿತು. ಇದು ಅಕ್ಷರಶಃ ರಾಷ್ಟ್ರದ ಭದ್ರತೆಗೆ ಸಂಪರ್ಕವಿರುವ ಯಾವುದಾದರೂ ಪ್ರಕರಣ ಈಗ ಎನ್‌ಐಎ ವ್ಯಾಪ್ತಿಗೆ ಬರುತ್ತದೆ. ವಾಸ್ತವವಾಗಿ ಏಜೆನ್ಸಿ ತೆಗೆದುಕೊಂಡ ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟು 231 ಪ್ರಕರಣಗಳು 2019ರಲ್ಲೇ ದಾಖಲಾಗಿವೆ.

ದೇಶ ವಿರೋಧಿ ಚಟುವಟಿಕೆ: ಎನ್‌ಐಎಗೆ ಮಹತ್ವದ ಮಾಹಿತಿ ಕೊಟ್ಟ ರಾಜ್ಯ ಪೊಲೀಸರು!ದೇಶ ವಿರೋಧಿ ಚಟುವಟಿಕೆ: ಎನ್‌ಐಎಗೆ ಮಹತ್ವದ ಮಾಹಿತಿ ಕೊಟ್ಟ ರಾಜ್ಯ ಪೊಲೀಸರು!

ತನ್ನ 13 ವರ್ಷಗಳ ಅಧಿಕಾರಾವಧಿಯಲ್ಲಿ ಎನ್ಐಎ 2,494 ಜನರನ್ನು ಬಂಧಿಸಿದೆ. ಸಂಸ್ಥೆಯು 93.25 ಶೇಕಡಾ ಯಶಸ್ಸಿನ ಪ್ರಮಾಣದೊಂದಿಗೆ 391 ಜನರಿಗೆ ಶಿಕ್ಷೆಯನ್ನು ವಿಧಿಸಲು ಸಾಧ್ಯವಾಗಿದೆ. ಇದು ಭಾರತದ ಇತರೆ ಕೇಂದ್ರೀಯ ತನಿಖಾ ಸಂಸ್ಥೆಗಳಿಗಿಂತ ಅತ್ಯಧಿಕವಾಗಿದೆ. ಇದು ಭಯೋತ್ಪಾದನೆಗೆ ಹಣಕಾಸು ಒದಗಿಸಿದ 105 ಪ್ರಕರಣಗಳನ್ನು ದಾಖಲಿಸಿದೆ. ಅಲ್ಲದೆ 796 ಜನರನ್ನು ಬಂಧಿಸಿದೆ ಹಾಗೂ ಅಂತಹ 20 ಪ್ರಕರಣಗಳಲ್ಲಿ 100 ಜನರಿಗೆ ಶಿಕ್ಷೆ ವಿಧಿಸಿದೆ.

 ಪ್ರಸ್ತುತ 50 ಎನ್‌ಐಎ ನ್ಯಾಯಾಲಯಗಳಿವೆ

ಪ್ರಸ್ತುತ 50 ಎನ್‌ಐಎ ನ್ಯಾಯಾಲಯಗಳಿವೆ

2008ರ ಮುಂಬೈ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಎನ್‌ಐಎ ರಚಿಸಲಾಗಿತ್ತು. ಕಾಲಾನಂತರದಲ್ಲಿ ಕಾನೂನು ತಜ್ಞರು ತ್ವರಿತ ಕಾರ್ಯನಿರ್ವಹಣೆಗಾಗಿ ಇತರ ಏಜೆನ್ಸಿಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವುದು ಅಗತ್ಯವೆಂದು ಭಾವಿಸಿದರು. ಪ್ರಸ್ತುತ ದೇಶದಲ್ಲಿ ಸುಮಾರು 50 ಎನ್‌ಐಎ ನ್ಯಾಯಾಲಯಗಳಿವೆ. ಅವುಗಳ ಮೂಲಕ ದೇಶಾದ್ಯಂತ ಕಾರ್ಯಜಾಲ ವಿಸ್ತರಿಸಿಕೊಂಡು ಪ್ರಕರಣಗಳನ್ನು ಇತ್ಯರ್ಥ ಮಾಡುತ್ತಾ ಬರುತ್ತಿದೆ.

 ಭಯೋತ್ಪಾದಕರಿಗೆ ಧನಸಹಾಯದ ಮಾರ್ಗಕ್ಕೆ ತಡೆ

ಭಯೋತ್ಪಾದಕರಿಗೆ ಧನಸಹಾಯದ ಮಾರ್ಗಕ್ಕೆ ತಡೆ

2012 ಮತ್ತು 2013 ರ ನಡುವೆ ಎನ್‌ಐಎ ಇಂಡಿಯನ್ ಮುಜಾಹಿದ್ದೀನ್‌ನ ಬಹುತೇಕ ಸಂಪೂರ್ಣ ನಾಯಕತ್ವವನ್ನು ಮಟ್ಟಹಾಕಿ ಸ್ವದೇಶಿ ಭಯೋತ್ಪಾದಕ ಗುಂಪನ್ನು ವಾಸ್ತವಿಕವಾಗಿ ಕಿತ್ತುಹಾಕಿತು. ನಂತರ ಇದು ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳಿಗೆ ಹೋಗುತ್ತಿದ್ದ ಧನಸಹಾಯದ ಮಾರ್ಗಗಳನ್ನು ಸೆರೆಹಿಡಿಯಲು ಪ್ರಾರಂಭಿಸಿತು. ಪ್ರತ್ಯೇಕತಾವಾದಿಗಳ ಭೂಗತ ಕೆಲಸಗಾರರು ಮತ್ತು ಸ್ಲೀಪರ್ ಸೆಲ್‌ಗಳ ಮೇಲೆ ಹಿಡಿತ ಸಾಧಿಸಿತು. ಹೀಗಾಗಿ ಈ ಪ್ರದೇಶದಲ್ಲಿ ಭಯೋತ್ಪಾದನೆ ಸಂಬಂಧಿತ ಘಟನೆಗಳನ್ನು ಕಡಿಮೆ ಮಾಡಲು ಸಹಾಯವಾಯಿತು.

 21,000 ಕೋಟಿ ಮೌಲ್ಯದ ಹೆರಾಯಿನ್‌ ವಶ

21,000 ಕೋಟಿ ಮೌಲ್ಯದ ಹೆರಾಯಿನ್‌ ವಶ

ತೀರಾ ಇತ್ತೀಚೆಗೆ, ಮುಂದ್ರಾ ಪೋರ್ಟ್ ಡ್ರಗ್ ಸಾಗಣೆ ಪ್ರಕರಣವನ್ನು ಅದು ವಹಿಸಿಕೊಂಡಿದೆ. ಇದರಲ್ಲಿ 21,000 ಕೋಟಿ ಮೌಲ್ಯದ 3,000 ಕೆಜಿ ಹೆರಾಯಿನ್ ಅನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದಲ್ಲಿ ಕನ್ಹಯ್ಯಾ ಲಾಲ್ ಮತ್ತು ಮಹಾರಾಷ್ಟ್ರದಲ್ಲಿ ಉಮೇಶ್ ಕೋಲ್ಹೆ ಅವರ ‘ಸರ್ ತಾನ್ ಸೆ ಜುದಾ' ಹತ್ಯೆಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ ಎಂದು ಹೇಳಲಾಗಿದೆ.

 ಹತ್ಯೆಗಳ ಸರಣಿಯು ರಾಷ್ಟ್ರಕ್ಕೆ ಅಪಾಯ

ಹತ್ಯೆಗಳ ಸರಣಿಯು ರಾಷ್ಟ್ರಕ್ಕೆ ಅಪಾಯ

ಹಿಂದೂಗಳ ಹತ್ಯೆಗಳ ಸರಣಿಯು ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ ಮತ್ತು ಈ ಕೊಲೆಗಳು ರಾಷ್ಟ್ರವನ್ನು ಅಸ್ಥಿರಗೊಳಿಸುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಅಮಾನತ್ತಾಗಿರುವ ಬಿಜೆಪಿಯ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿದವರ ಕೊಲೆಗಳನ್ನು ಎನ್ಐಎ ವಹಿಸಿಕೊಂಡಿದೆ. ಹೀಗಾಗಿಯೇ ಕೇಂದ್ರ ಸರ್ಕಾರದಿಂದ ಹೆಚ್ಚೆಚ್ಚು ಪ್ರೋತ್ಸಾಹ ಎನ್ಐಎಗೆ ಸಿಗುತ್ತಿದೆ.

Recommended Video

KL Rahul ಮಾಡಿದ ತ್ಯಾಗದಿಂದ ಟೀಂ‌ ಇಂಡಿಯಾ ಗೆದ್ದಿದ್ದು ಹೇಗೆ ಗೊತ್ತಾ? | *Cricket | OneIndia Kannada

English summary
Since its inception in 2009, NIA has been at the forefront of India’s war against terror. The agency has taken up 473 cases so far the highest (62) being in 2019. Know why NIA is the most feared central agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X