Chandra Grahan 2022 : ಚಂದ್ರಗ್ರಹಣದ ಸಮಯದಲ್ಲಿ ಚಂದ್ರ ಏಕೆ ಕೆಂಪು ಬಣ್ಣಕ್ಕೆ ತಿರುಗುತ್ತದೆ?
ಈ ವರ್ಷದ ಕೊನೆಯ ಸಂಪೂರ್ಣ ಚಂದ್ರಗ್ರಹಣ ನವೆಂಬರ್ 8 ರಂದು ಸಂಭವಿಸುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರ ನೇರ ರೇಖೆಯಲ್ಲಿದ್ದಾಗ ಮತ್ತು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ NASA ಪ್ರಕಾರ, ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳ ನಂತರ ಅಂದರೆ ಮಾರ್ಚ್ 14, 2025 ರಂದು ಸಂಭವಿಸುತ್ತದೆ. ಈ ವೇಳೆ ಪ್ರಪಂಚದ ಅನೇಕ ಭಾಗಗಳಲ್ಲಿ ಚಂದ್ರಗ್ರಹಣವನ್ನು ವೀಕ್ಷಿಸುತ್ತದೆ.
ಸಂಪೂರ್ಣ ಗ್ರಹಣದ ಸಮಯದಲ್ಲಿ ಪೂರ್ಣ ಚಂದ್ರನು ಭೂಮಿಯ ನೆರಳಲ್ಲಿರುತ್ತಾನೆ. ಇದನ್ನು ಅಂಬ್ರಾ ಎಂದು ಕರೆಯಲಾಗುತ್ತದೆ ಎಂದು ನಾಸಾ ಸಂಸ್ಥೆ ಹೇಳಿದೆ. ಛತ್ರಿಯನ್ನು ಹಿಡಿದಾಗ ಹೇಗೆ ಸೂರ್ಯನ ಬೆಳಕಿನಿಂದ ಛತ್ರಿಯನ್ನು ಹಿಡಿದ ಮನುಷ್ಯನ ಮೇಲೆ ನೆರಳು ಬೀಳುತ್ತೋ ಹಾಗೆ ಚಂದ್ರನು ಭೂಮಿ ಎಂಬ ಛತ್ರಿಯೊಳಗೆ ಇದ್ದಾಗ ಅದರ ಮೇಲೆ ನೆರಳು ಬೀಳುತ್ತದೆ. ಈ ವೇಳೆ ಚಂದ್ರ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ವಿದ್ಯಮಾನದಿಂದಾಗಿ ಚಂದ್ರ ಗ್ರಹಣಗಳನ್ನು ಕೆಲವೊಮ್ಮೆ "ಬ್ಲಡ್ ಮೂನ್ಸ್" ಎಂದು ಕರೆಯಲಾಗುತ್ತದೆ.
ರೇಲೀ ಸ್ಕ್ಯಾಟರಿಂಗ್ ಎನ್ನುವುದು ಚಂದ್ರನು ಕೆಂಪು ಬಣ್ಣಕ್ಕೆ ತಿರುಗಲು ಕಾರಣವಾಗುವ ಒಂದು ವಿದ್ಯಮಾನವಾಗಿದೆ. NASA ಪ್ರಕಾರ, "ಸೂರ್ಯಾಸ್ತದ ವೇಳೆ ಸೂರ್ಯ ಹೇಗೆ ಕೆಂಪಾಗುತ್ತಾನೋ ಅದೇ ವಿದ್ಯಮಾನ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ರೇಲೀ ಸ್ಕ್ಯಾಟರಿಂಗ್ ಎಂದು ಕರೆಯಲಾಗುತ್ತದೆ. ಚಂದ್ರ ಬೆಳಕು ಅಲೆಗಳಲ್ಲಿ ಚಲಿಸುತ್ತದೆ. ಬೆಳಕಿನ ವಿವಿಧ ಬಣ್ಣಗಳು ವಿಭಿನ್ನ ಭೌತಿಕ ಗುಣಲಕ್ಷಣಗಳನ್ನು ಹೊಂದಿವೆ'' ಎಂದು ನಾಸಾ ಹೇಳಿದೆ.

"ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಏಕೆಂದರೆ ಚಂದ್ರನನ್ನು ತಲುಪುವ ಏಕೈಕ ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುತ್ತದೆ. ಗ್ರಹಣದ ಸಮಯದಲ್ಲಿ ಭೂಮಿಯ ವಾತಾವರಣದಲ್ಲಿ ಹೆಚ್ಚು ಧೂಳು ಅಥವಾ ಮೋಡಗಳಿಂದ ಚಂದ್ರನು ಕೆಂಪಾಗುತ್ತಾನೆ. ಇದು ಪ್ರಪಂಚದ ಎಲ್ಲಾ ಸೂರ್ಯೋದಯ ಮತ್ತು ಸೂರ್ಯಾಸ್ತಗಳಂತೆಯೇ ಇರುತ್ತದೆ" ಎಂದು ನಾಸಾ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ವರ್ಷದ ಕೊನೆಯ ಚಂದ್ರಗ್ರಹಣವು ನವೆಂಬರ್ 8 ರಂದು ಮಂಗಳವಾರ ಸಂಭವಿಸಲಿದೆ. ಚಂದ್ರಗ್ರಹಣದ ಸಮಯದಲ್ಲಿ ಸೂತಕ ಅವಧಿಯು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಸಮಯದಲ್ಲಿ ಮಲಗುವುದು, ತಿನ್ನುವುದು ಮತ್ತು ಇತರ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಭೂಮಿ, ಚಂದ್ರ ಮತ್ತು ಸೂರ್ಯನ ನಡುವಿನ ಈ ಕಣ್ಣಾಮುಚ್ಚಾಲೆಯು ಖಗೋಳ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರಿಗೆ ಯಾವಾಗಲೂ ಅಧ್ಯಯನದ ವಿಷಯವಾಗಿದೆ.












Click it and Unblock the Notifications