ನನ್ನ ಬದುಕಿನ ಕರಾಳ ದಿನ ಇದು, ಕಲೈನಾರ್ ಸಾವಿಗೆ ರಜನಿ ಸಂತಾಪ
ಡಿಎಂಕೆ ಅಧ್ಯಕ್ಷರಾಗಿದ್ದ ಹಾಗೂ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿಯಾಗಿ ಒಟ್ಟಾರೆ ಐದು ಬಾರಿ ಸೇವೆ ಸಲ್ಲಿಸಿದ್ದ ಎಂ.ಕರುಣಾನಿಧಿ (94) ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳ ರಾಜಕಾರಣಕ್ಕೆ ಇಟ್ಟ ಹೆಸರಂತಿದ್ದ ತಮಿಳುನಾಡಿನ ಹಿರಿಯ ಹಾಗೂ ಪ್ರಮುಖ ಕೊಂಡಿಯೊಂದು ಕಳಚಿಕೊಂಡಂತೆ ಆಗಿದೆ.
ಒಂದು ವರ್ಷದ ಅವಧಿಯಲ್ಲಿ ಎಐಎಡಿಎಂಕೆ ಜಯಲಲಿತಾ ಹಾಗೂ ಡಿಎಂಕೆ ಕರುಣಾನಿಧಿ ಇಬ್ಬರನ್ನೂ ಕಳೆದುಕೊಂಡ ತಮಿಳುನಾಡು ರಾಜಕಾರಣದಲ್ಲಿ ಶೂನ್ಯ ಸೃಷ್ಟಿ ಆಗಿರುವುದಂತೂ ಸುಳ್ಳಲ್ಲ. ಇಂಥ ಸನ್ನಿವೇಶದಲ್ಲಿ ಸಹಜವಾಗಿ ಮುಂದೇನು ಎಂಬ ಪ್ರಶ್ನೆ ಮೂಡುತ್ತದೆ. ಇನ್ನು ತಮಿಳುನಾಡು ರಾಜ್ಯ ಸರಕಾರವು ಕರುಣಾನಿಧಿ ಅವರ ಸಾವಿಗೆ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ.
ಇದರ ಜತೆಗೆ ಬುಧವಾರದಂದು ಅಲ್ಲಿನ ಶಾಲೆ- ಕಾಲೇಜುಗಳಿಗೆ ರಜಾ ಘೋಷಿಸಿದೆ. ದೇಶದಾದ್ಯಂತ ವಿವಿಧ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು, ಪ್ರಮುಖರು ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಯಾರು- ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ಕೊಡಲಾಗಿದೆ. ಇಲ್ಲಿ ದೇವೇಗೌಡರಿಂದ ಹಿಡಿದ ವಿವಿಧ ಮುಖಂಡರ ಪ್ರತಿಕ್ರಿಯೆ ಇದೆ.

ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಪ್ರಾದೇಶಿಕ ಪಕ್ಷಗಳಿಗೆ ಮಾರ್ಗ ತೋರಿದವರು ಕರುಣಾನಿಧಿ. ಅವರನ್ನು ಪ್ರೀತಿಸುವವರಿಗೆ ಮತ್ತು ಅವರ ಪಕ್ಷದ ಕಾರ್ಯಕರ್ತರಿಗೆ ಇದು ದುಃಖದ ಸನ್ನಿವೇಶ. ಅವರೊಬ್ಬರು ಮಾಗಿದ ನಾಯಕರು ಹಾಗೂ ಮುತ್ಸದ್ದಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಕೇಳಿಕೊಳ್ತೀನಿ.

ಸುಮಿತ್ರಾ ಮಹಾಜನ್, ಲೋಕಸಭಾ ಸ್ಪೀಕರ್
ಅವರೊಬ್ಬ ಮಹಾನ್ ನಾಯಕರಾಗಿದ್ದರು. ತಳಮಟ್ಟದ ಜನರ ಪರವಾಗಿ ಕೆಲಸ ಮಾಡಿದ್ದರು. ಅವರ ಸಾವು ಇಡೀ ದೇಶಕ್ಕೆ ಆದ ದೊಡ್ಡ ನಷ್ಟ.

ಪೊಣ್ ರಾಧಾಕೃಷ್ಣನ್, ಕೇಂದ್ರ ಸಚಿವ
ಅವರ ಸಾವಿನಿಂದಾಗಿ ತಮಿಳುನಾಡು ಮತ್ತು ಇಡೀ ಭಾರತಕ್ಕೆ ದೊಡ್ಡ ನಷ್ಟವಾಗಿದೆ. ಬಿಜೆಪಿ ಪರವಾಗಿ ಹಾಗೂ ವೈಯಕ್ತಿಕವಾಗಿ ಕರುಣಾನಿಧಿ ಅವರಿಗೆ ಗೌರವ ಸಲ್ಲಿಸುತ್ತೇನೆ.

ರಜನೀಕಾಂತ್, ನಟ
ಇಂದು ನನ್ನ ಜೀವನದಲ್ಲೇ ಕರಾಳ ದಿನ. ಕರುಣಾನಿಧಿ ಅವರನ್ನು ಕಳೆದುಕೊಂಡ ಈ ದಿನ ಮರೆಯುವುದಿಕ್ಕೆ ಸಾಧ್ಯವಿಲ್ಲ. ಅವರ ಆತ್ಮ ಶಾಂತಿಗಾಗಿ ನಾನು ಪ್ರಾರ್ಥನೆ ಮಾಡ್ತೀನಿ.

ಕೆ.ಚಂದ್ರಶೇಖರ್ ರಾವ್, ತೆಲಂಗಾಣ
ಭಾರತವು ರಾಜಕಾರಣದ ಸ್ಟಾರ್ ವೊಬ್ಬರನ್ನು ಕಳೆದುಕೊಂಡಿದೆ. ಅವರ ಸಾವಿನಿಂದ ಸೃಷ್ಟಿಯಾಗಿರುವ ಖಾಲಿತನವನ್ನು ತುಂಬುವುದು ಕಷ್ಟ.

ಎಡಪ್ಪಡಿ ಕೆ.ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ
ಡಿಎಂಕೆ ಮುಖ್ಯಸ್ಥರೂ ಆಗಿದ್ದ ಎಂ.ಕರುಣಾನಿಧಿ ಅವರ ಸಾವು ತೀವ್ರ ದುಃಖ ತರುವಂಥದ್ದು. ರಾಜಕಾರಣ, ಸಿನಿಮಾ ಹಾಗೂ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದದ್ದು.

ರಣ್ ದೀಪ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ
ದೇಶವು ಮಹಾನ್ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಡಿಎಂಕೆ ಕುಟುಂಬಕ್ಕೆ ನಮ್ಮ ಸಂತಾಪ ಸೂಚಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವು ತನ್ನ ಮುಖ್ಯ ಸ್ನೇಹಿತರೊಬ್ಬರನ್ನು ಕಳೆದುಕೊಂಡಿದೆ. ಈ ನಷ್ಟದಿಂದ ಹೊರಬರುವುದು ಕಷ್ಟ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications