• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲಾಲ ಯೂಸುಫ್‌ಜಾಯ್ ಅವರ ಪತಿ ಅಸರ್ ಮಲಿಕ್ ಯಾರು?

|
Google Oneindia Kannada News

ಲಂಡನ್, ನವೆಂಬರ್ 11: ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜೈ ಅವರು ನವೆಂಬರ್ 9 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ತಮ್ಮ ವಿವಾಹವನ್ನು ಘೋಷಿಸಿದರು. ಮಲಾಲಾ ತಮ್ಮ ನಿಕಾಹ್ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದು ದಂಪತಿಗಳ ನಿಕಟ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದ ಖಾಸಗಿ ಕಾರ್ಯಕ್ರಮವಾಗಿತ್ತು. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮದುವೆ ಸಮಾರಂಭದ ಮೊದಲ ಚಿತ್ರಗಳನ್ನು ಮಲಾಲ ಹಂಚಿಕೊಂಡಿದ್ದರು.

ಮಲಾಲಾ ತಮ್ಮ ಪತಿ ಅಸ್ಸರ್ ಮಲಿಕ್‌ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ನವೆಂಬರ್ 9 ರಂದು ಮಲಾಲಾ ಯೂಸುಫ್‌ಜಾಯ್ ಮತ್ತು ಅಸರ್ ಮಲಿಕ್ ವಿವಾಹವಾದ ನಂತರ ಮಲಾಲ ಅವರ ಪತಿ ಅಸರ್ ಮಲಿಕ್ ಯಾರೆಂಬುದರ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಉತ್ಸುಕರಾಗಿದ್ದಾರೆ.

ಆಸರ್ ಮಲಿಕ್ ಯಾರು?: ಅಸ್ಸರ್ ಮಲಿಕ್ ಒಬ್ಬ ವಾಣಿಜ್ಯೋದ್ಯಮಿ. ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಜನರಲ್ ಮ್ಯಾನೇಜರ್. ಮಾತ್ರವದಲ್ಲಿ ಅಸ್ಸರ್ ಕ್ರೀಡಾ ಉದ್ಯಮದಲ್ಲಿ ವಿಶೇಷವಾಗಿ ಕ್ರಿಕೆಟ್‌ನಲ್ಲಿ ಕೆಲಸ ಮಾಡಿದ ಪ್ರದರ್ಶಿತ ಇತಿಹಾಸವನ್ನು ಹೊಂದಿದ್ದಾರೆ. ಅವರು ಪಾಕಿಸ್ತಾನಿ ವೃತ್ತಿಪರ ಟ್ವೆಂಟಿ20 ಫ್ರಾಂಚೈಸಿ ಕ್ರಿಕೆಟ್ ತಂಡವಾದ ಮುಲ್ತಾನ್ ಸುಲ್ತಾನ್ಸ್‌ಗಾಗಿ ಆಟಗಾರರ ಅಭಿವೃದ್ಧಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ. ಅಸ್ಸರ್ 2020 ರಲ್ಲಿ ಪಿಸಿಬಿಗೆ ಸೇರಿದರು. ಮಲಾಲಾ ಯೂಸುಫ್‌ಜಾಯ್ ಅವರ ಪತಿ ಅಸ್ಸರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಅಸ್ಸರ್ ಮಲಿಕ್ ಅವರ ಶಿಕ್ಷಣ

ಅಸ್ಸರ್ ಮಲಿಕ್ ಅವರ ಶಿಕ್ಷಣ

ಅಸ್ಸರ್ ಮಲಿಕ್ ತನ್ನ ಶಾಲಾ ಶಿಕ್ಷಣವನ್ನು ಪಾಕಿಸ್ತಾನದ ಲಾಹೋರ್‌ನಲ್ಲಿರುವ ಅಚಿನ್ಸನ್ ಕಾಲೇಜಿನಲ್ಲಿ ಮಾಡಿದರು. ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್‌ನಿಂದ ಪದವಿ ಪಡೆದಿದ್ದಾರೆ. ಮಲಾಲಾ ಯೂಸುಫ್‌ಜಾಯ್ ಮತ್ತು ಅಸರ್ ಮಲಿಕ್ ಇಬ್ಬರೂ ತಮ್ಮ ನಿಕಾಹ್‌ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. "ಇಂದು ನನ್ನ ಜೀವನದಲ್ಲಿ ಒಂದು ಅಮೂಲ್ಯ ದಿನ. ಅಸ್ಸರ್ ಮತ್ತು ನಾನು ದಾಂಪತ್ಯ ಜೀವನದಲ್ಲಿ ಪಾಲುದಾರರಾಗಿದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್ಹ್ಯಾಮ್‌ನಲ್ಲಿ ಮನೆಯಲ್ಲಿ ಒಂದು ಸಣ್ಣ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ನಾವು ಮುಂದಿನ ಪಯಣದಲ್ಲಿ ಒಟ್ಟಾಗಿ ನಡೆಯಲು ಉತ್ಸುಕರಾಗಿದ್ದೇವೆ" ಎಂದು ಮಲಾಲಾ ಯೂಸುಫ್‌ಜೈ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

 ಪೋಷಕರ ಜೊತೆ ಗ್ರೂಪ್ ಫೋಟೋ

ಪೋಷಕರ ಜೊತೆ ಗ್ರೂಪ್ ಫೋಟೋ

ಪೋಸ್ಟ್‌ನ ಹೊರತಾಗಿ, ಮಲಾಲಾ ಅವರು ನಿಕ್ಕಾ ಸಮಾರಂಭದ ನಾಲ್ಕು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ತಮ್ಮ ಪತಿ ಅಸ್ಸರ್ ಮತ್ತು ಅವರ ಪೋಷಕರು ಜಿಯಾವುದ್ದೀನ್ ಯೂಸುಫ್‌ಜಾಯ್ ಮತ್ತು ತೂರ್ ಪೆಕೈ ಯೂಸುಫ್‌ಜಾಯ್ ಅವರೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು. ವೆಡ್ಡಿಂಗ್ ಡೇಗೆ ಮಲಾಲಾ ಚಿನ್ನದ ಕಸೂತಿಯಿಂದ ಅಲಂಕರಿಸಲ್ಪಟ್ಟ ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದರು. ನಿಕ್ಕಾ ಚಿತ್ರಗಳನ್ನು ಆಕೆಯ ಸ್ನೇಹಿತ, ಛಾಯಾಗ್ರಾಹಕ ಮತ್ತು ದೃಶ್ಯ ಪತ್ರಕರ್ತರಾದ ಮಲಿನ್ ಫೆಜೆಹೈ ಅವರು ಸೆರೆಹಿಡಿದಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕರ್ತೆ, 24 ವರ್ಷದ ಮಲಾಲ ಯೂಸುಫ್ ಝಾಯಿ ಅವರು ಇತಿಹಾಸದಲ್ಲಿ ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿದ್ದಾರೆ.

ಮಲಾಲ ಯೂಸುಫ್‌ಜಾಯ್ ಯಾರು?

ಮಲಾಲ ಯೂಸುಫ್‌ಜಾಯ್ ಯಾರು?

'ಮಲಾಲ ಯೂಸಫ್ ಝಾಯಿ' ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ 'ಸ್ವಾತ್ ಜಿಲ್ಲೆ'ಯ ಮಿಂಗೋರಗ್ರಾಮದ ಒಂದು ಶಾಲೆಯ ವಿದ್ಯಾರ್ಥಿನಿ ಮತ್ತು ಶಿಕ್ಷಣ ಕಾರ್ಯಕರ್ತೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ 'ಸ್ವಾತ್ ಕಣಿವೆ'ಯಲ್ಲಿನ ಹುಡುಗಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳಪರ ತನ್ನ ಕ್ರಿಯಾತ್ಮಕ ಹೋರಾಟಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ.

ಮಲಾಲ ಮೇಲೆ ದಾಳಿ

ಮಲಾಲ ಮೇಲೆ ದಾಳಿ

9 ಅಕ್ಟೋಬರ್ 2012 ರಂದು ಅವಳು ಒಂದು ಶಾಲಾ ಬಸ್ ನಲ್ಲಿ ಮನೆಗೆ ಹಿಂದಿರುಗುತ್ತಿರುವಾಗ ,ತಾಲಿಬಾನ್ ಬಂದೂಕುಧಾರಿಗಳು ಅವಳನ್ನು ಕೊಲ್ಲುವ ಪ್ರಯತ್ನದಲ್ಲಿ ತಲೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಿದರು.ನಂತರದ ದಿನಗಳಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮತ್ತು ತುಂಬಾ ವಿಷಮಸ್ಥಿತಿಯಲ್ಲಿ ಅವರು ಇದ್ದರು. ಯುನೈಟೆ ಡ್ ಕಿಂಗ್ಡಮ್ ನ ಒಂದು ಆಸ್ಪತ್ರೆಗೆ ಸಾಗಿಸಲು ಅನುವಾಗುವಷ್ಟು ಅವಳ ಸ್ಥಿತಿ ಸಾಕಷ್ಟು ಸುಧಾರಿಸಿತು. ಸುಮಾರು 2 ತಿಂಗಳು ಆಸ್ಪತ್ರೆಯಲ್ಲಿ ಅತ್ಯಂತ ದಾರುಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 15 ವರ್ಷದ 'ಮಲಾಲ,' ಸಂಪೂರ್ಣ ಗುಣಹೊಂದಿ 2013 ರ, ಮಾರ್ಚ್ 19 ರಿಂದ ಅವರ ಶಾಲೆಗೆ ಹೋಗುವ ಕನಸು ನನಸಾಯಿತು.

 ಮಲಾಲಗೆ ಸಂದ ಪ್ರಶಸ್ತಿಗಳು

ಮಲಾಲಗೆ ಸಂದ ಪ್ರಶಸ್ತಿಗಳು

ಇವರಿಗೆ 2003ರಲ್ಲಿ ಮಲಾಲ ಸಖರೊವ್ ಪ್ರೈಜ್ ಫಾರ್ ಫ್ರೀಡಮ್ ಆಫ್ ಥಾಟ್(ಯೋಚನೆಯ ಸ್ವಾತಂತ್ರ್ಯಕ್ಕೆ ಸಖರೊವ್ ಪ್ರಶಸ್ತಿ) ದೊರಕಿತು. ಇವರಿಗೆ 2000 ನೇ ಇಸವಿಯಿಂದ ಮಕ್ಕಳ ನೋಬೆಲ್ ಪ್ರಶಸ್ತಿಯೆಂದೇ ಗುರುತಿಸಲ್ಪಡುವ ವಿಶ್ವಮಕ್ಕಳ ಪ್ರಶಸ್ತಿಯನ್ನು ನೀಡಲಾಗಿದೆ. ಒಟ್ಟಾರೆ 110 ವಿಶ್ವದ ರಾಷ್ಟ್ರಗಳ 70 ಸಾವಿರ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿಮೂಡಿಸುವ ದೃಷ್ಟಿಯಿಂದ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. ಜೊತೆಗೆ ಇವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿಯೊಂದಿಗೆ ನೀಡಲಾಗಿದೆ. ಮಾತ್ರವಲ್ಲದೇ ಈವರೆಗೆ ಮಲಾಲ ಅವರಿಗೆ ನ್ಯಾಷಿನಲ್ ಯೂತ್ ಪೀಸ್ ಪ್ರೈಜ್, ಮದರ್ ತೆರೇಸ ಗ್ಲೋಬಲ್ ಅವಾರ್ಡ್, ಇಂಟರ್ನ್ಯಾಷಿನಲ್ ಚಿಲ್ಡ್ರನ್ಸ್ ಪ್ರೈಜ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

English summary
Nobel laureate Malala Yousafzai introduced fans to her husband Asser Malik with the first pictures from the ceremony which was held in Birmingham, England.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X