ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ ಬಂಧಿತರಾದ ಗುಪ್ತ ಸಹೋದರರು ಯಾರು?

|
Google Oneindia Kannada News

ದಕ್ಷಿಣ ಆಫ್ರಿಕಾದಲ್ಲಿ ಮಾಜಿ ಅಧ್ಯಕ್ಷ ಜೇಕಬ್ ಜುಮಾ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತುಕೊಂಡಿದ್ದ ಭಾರತೀಯ ಮೂಲದ ಗುಪ್ತಾ ಸೋದರರನ್ನು ದುಬೈನಲ್ಲಿ ಬಂಧಿಸಲಾಗಿದೆ. ಹಲವು ಕಂಪನಿಗಳಿಗೆ ವಂಚಿಸಿದ ಆರೋಪ ಹೊತ್ತುಕೊಂಡಿರುವ ಗುಪ್ತಾ ಕುಟುಂಬದ ಇಬ್ಬರು ಸದಸ್ಯರಾದ ಅಜಯ್‌ ಗುಪ್ತಾ ಹಾಗೂ ರಾಜೇಶ್‌ ಗುಪ್ತಾ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಅಜಯ್‌ ಗುಪ್ತಾ ಹಾಗೂ ರಾಜೇಶ್‌ ಗುಪ್ತಾ ಇಬ್ಬರ ವಿರುದ್ಧ ರೆಡ್‌ ಕಾರ್ನರ್ ನೊಟೀಸ್‌ ಜಾರಿ ಮಾಡಲಾಗಿತ್ತು. ದುಬೈಗೆ ಪರಾರಿಯಾಗಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಬೃಹತ್ತಾದ ಸಾಮ್ರಾಜ್ಯವನ್ನೇ ಹೊಂದಿದ್ದಾರೆ. ಮಾಜಿ ಅಧ್ಯಕ್ಷ ಜಾಕಬ್‌ ಜುಮಾ ಅವರ ಆಡಳಿತಾವಧಿಯಲ್ಲಿ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಹಲವು ಅಧಿಕಾರಿಗಳ ವರ್ಗಾವಣೆ ಮಾಡಿ ಅಕ್ರಮಗಳನ್ನು ಮಾಡಿ ಕೋಟ್ಯಂತರ ರುಪಾಯಿ ವಂಚನೆ ಮಾಡಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಯಾರು ಈ ಗುಪ್ತಾ ಸಹೋದರರು? ಅವರ ಹಿನ್ನೆಲೆ ಸಂಪೂರ್ಣ ಚಿತ್ರಣ ಇಲ್ಲಿದೆ.

ಅಜಯ್‌ ಗುಪ್ತಾ, ರಾಜೇಶ್‌ ಗುಪ್ತಾ, ಅತುಲ್‌ ಗುಪ್ತಾ ಉತ್ತರ ಪ್ರದೇಶ ಸಹರಣ್‌ದಲ್ಲಿ ಜನಿಸಿದರು. ಇವರ ತಂದೆ ಶಿವಕುಮಾರ್‌ ಸಹರಣ್‌ ಪುರದಲ್ಲಿ ಪಡಿತರ ಅಂಗಂಡಿಗಳನ್ನು ನಡೆಸುತ್ತಿದ್ದರು. ದೆಹಲಿಯಲ್ಲಿಆರಂಭವಾಗಿದ್ದ ತಮ್ಮ ಕಂಪನಿಯಿಂದ ಸಾಂಬಾರ ಪದಾರ್ಥಗಳನ್ನು ವಿವಿಧಡೆಗೆ ರಫ್ತು ಮಾಡುತಿದ್ದರು. ಸಹರಣ್‌ಪುರದ ರಾಣಿ ಬಜಾರ್‌ನಲ್ಲಿ ಪೂರ್ವಜರ ಮನೆಯನ್ನು ಹೊಂದಿರುವ ಗುಪ್ತಾ ಸಹೋದರರು ಇದಕ್ಕೂ ಮುನ್ನ ಸೋಪ್‌ ಪೌಡರ್‌ ಅನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಗುಪ್ತಾ ಸಹೋದರರು 1993ರಲ್ಲಿ ದಕ್ಷಿಣ ಆಫ್ರಿಕಾಗೆ ಕುಟುಂಬ ಸಮೇತ ವಲಸೆ ಬಂದರು. ದಕ್ಷಿಣ ಆಫ್ರಿಕಾದಲ್ಲಿ ಸಹರಾ ಕಂಪ್ಯೂಟರ್‌ ಹೆಸರಿನ ಕಂಪೆನಿ ಆರಂಭಿಸಿ ಈ ಗುಪ್ತಾ ಸಹೋದರರು ಕ್ರಮೇಣ ಗಣಿಗಾರಿಕೆ, ವಿಮಾನಯಾನ, ಇಂಧನ, ತಂತ್ರಜ್ಞಾನ ಮತ್ತು ಮಾಧ್ಯಮ ಕ್ಷೇತ್ರಗಳಿಗೆ ಕಾಲಿಟ್ಟು ಹಣಕಾಸಿನ ಉತ್ತುಂಗಕ್ಕೆ ಏರಿ ತಮ್ಮ ಕಂಪೆನಿಗಳಲ್ಲಿ ಸುಮಾರು 10,000 ಜನರನ್ನು ಹೊಂದಿರುವ ಉದ್ಯೋಗಿಗಳ ಬಳಗ ಕಟ್ಟಿದರು.

 ದಕ್ಷಿಣ ಆಫ್ರಿಕಾದಲ್ಲೇ ಶ್ರೀಮಂತ್ರ ಕುಟುಂಬ

ದಕ್ಷಿಣ ಆಫ್ರಿಕಾದಲ್ಲೇ ಶ್ರೀಮಂತ್ರ ಕುಟುಂಬ

ಷೇರು ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದ ಅತುಲ್‌ ಗುಪ್ತಾ ವಾರ್ಷಿಕ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಾಜಿ ಅಧ್ಯಕ್ಷ ಜೇಕಬ್ ಜುಮಾ ಅವರನ್ನು ಅಧ್ಯಕ್ಷಗಾದಿಗೆ ಏರುವ ಮುನ್ನ ಅತಿಥಿಯಾಗಿ ಭೇಟಿಯಾದರು. ಮುಂದೆ ಜೇಕಬ್ ಜುಮಾ ಅವರಿಗೆ ಹತ್ತಿರವಾದ ಇವರು ದಕ್ಷಿಣ ಆಫ್ರಿಕಾದಲ್ಲಿ ಬಹಳ ಉನ್ನತ ಸ್ಥಾನಮಾನಕ್ಕೆ ಬೆಳೆದರು. ಮುಂದುವರಿದು ದಕ್ಷಿಣ ಆಫ್ರಿಕಾದಲ್ಲೇ ಶ್ರೀಮಂತ್ರ ಕುಟುಂಬಗಳಲ್ಲೇ ಗುಪ್ತಾ ಕುಟುಂಬವೂ ಒಂದಾಯಿತು.

ಬಳಿಕ ವ್ಯಾಪಾರ ಉತ್ತುಂಗಕ್ಕೆ ತಲುಪಿದಂತೆ ಜುಮಾರೊಂದಿಗೆ ಹೊಂದಿದ್ದ ಅವರ ಸಂಬಂಧದ ಹಿನ್ನೆಲೆಯಲ್ಲಿ ಜುಪ್ತಾಸ್‌ ಎಂದೇ ಕರೆಯಲಾಗುತ್ತಿತ್ತು. ಬಳಿಕ ಜೇಕಬ್ ಜುಮಾ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗುತ್ತಿದ್ದಂತೆ ಗುಪ್ತಾ ಸಹೋದರರು ಗಣಿಗಳನ್ನು ಖರೀದಿಸಿದರು.

 2010 ರಲ್ಲಿ ಗುಪ್ತಾ ಸಹೋದರರ ಭ್ರಷ್ಟಾಚಾರದ ಮೊದಲ ಆರೋಪ

2010 ರಲ್ಲಿ ಗುಪ್ತಾ ಸಹೋದರರ ಭ್ರಷ್ಟಾಚಾರದ ಮೊದಲ ಆರೋಪ

ಹಲವಾರು ಪ್ರಮುಖ ದಕ್ಷಿಣ ಆಫ್ರಿಕಾದ ಕಂಪನಿಗಳು ಮತ್ತು ಸಚಿವಾಲಯಗಳು ಮತ್ತು ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನ ಐಟಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡಿದರು. ನಂತರ ಈ ಎಲ್ಲೆಡೆ ಅಕ್ರಮಗಳ ಆರೋಪಗಳು ಹೊರಬಂದವು. ಅಧ್ಯಕ್ಷರಾಗಿದ್ದ ಜೇಕಬ್‌ ಜುಮಾ ಅವರು 2010 ರಲ್ಲಿ ಗುಪ್ತಾ ಸಹೋದರರ ಭ್ರಷ್ಟಾಚಾರದ ಮೊದಲ ಆರೋಪಗಳು ಕೇಳಿ ಬಂದಾಗ ಮೂರು ಗುಪ್ತಚರ ಏಜೆನ್ಸಿಗಳ ಮುಖ್ಯಸ್ಥರನ್ನು ವಜಾ ಮಾಡಿದರು. 2013ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಡ ರೈತರನ್ನು ಸಬಲೀಕರಣಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ಲೂಟಿ ಮಾಡಿ ಹಣವನ್ನು ದುಬೈಗೆ ರವಾನೆ ಮಾಡಲಾಯಿತು.

 ಹ್ಯಾಶ್‌ಟ್ಯಾಗ್‌ಗಳು ಮತ್ತು ನಕಲಿಗಳ ಸರಣಿ ಆರಂಭ

ಹ್ಯಾಶ್‌ಟ್ಯಾಗ್‌ಗಳು ಮತ್ತು ನಕಲಿಗಳ ಸರಣಿ ಆರಂಭ

ಗುಪ್ತ ಸಹೋದರರು ವಿದ್ಯುತ್‌ ಕಂಪೆನಿ ಎಕ್ಸಮ್‌ಗೆ ದೋಷಪೂರಿತ ಕಂಪ್ಯೂಟರ್‌ಗಳನ್ನು ನೀಡಿದರು, ANN7 ನ್ಯೂಸ್‌ನಲ್ಲಿ ಟಿವಿ ಪತ್ರಕರ್ತರ ಬದಲಿಗೆ ಮಾಡೆಲ್‌ಗಳನ್ನು ನೇಮಿಸಿಕೊಂಡರು. ಇದು ಸರ್ಕಾರಿ ಆದಾಯವನ್ನು ಗಳಿಸಲು ಸಹೋದರರಿಗೆ ಅನುಕೂಲವಾಯಿತು. ಅಲ್ಲದೆ ಹ್ಯಾಶ್‌ಟ್ಯಾಗ್‌ಗಳು ಮತ್ತು ನಕಲಿಗಳ ಸರಣಿಯನ್ನು ಪ್ರಾರಂಭಿಸಲು ಲಂಡನ್ ಮೂಲದ PR ಸಂಸ್ಥೆ ಬೆಲ್ ಪಾಟಿಂಗರ್ ಅನ್ನು ಬಳಸುತ್ತಿದ್ದರು.

2010 ರಲ್ಲಿ, ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಗುಪ್ತಾರಿಗೆ ದಕ್ಷಿಣ ಆಫ್ರಿಕಾದ ಯುರೇನಿಯಂ ಗಣಿಯಲ್ಲಿ ಹೂಡಿಕೆ ಮಾಡಲು 34 ಮಿಲಿಯನ್ ಡಾಲರ್‌ ಸಾಲವನ್ನು ನೀಡಿತು. ದಕ್ಷಿಣ ಆಫ್ರಿಕಾದ ರೈಲು ಮತ್ತು ಬಂದರು ಕಂಪನಿಯಾದ ಟ್ರಾನ್ಸ್‌ನೆಟ್‌ನಲ್ಲಿ 4.4 ಶತಕೋಟಿ ಡಾಲರ್‌ ಮೌಲ್ಯದ ಒಪ್ಪಂದವನ್ನು ಸಹ ಅವರಿಗೆ ಹಸ್ತಾಂತರಿಸಲಾಯಿತು. ಅಲ್ಲಿ ಗುಪ್ತಾಸ್ ಲಕ್ಷಾಂತರ ಕಮಿಷನ್‌ಗಳನ್ನು ಪಡೆಯಲು ಈ ಒಪ್ಪಂದವನ್ನು ಬಳಸಿಕೊಂಡರು. ಇದಲ್ಲದೆ, ಜುಮಾ ಅವರ ಪುತ್ರ ಡುಡುಜಾನೆ, ಚುನಾವಣಾ ಲಾಭಕ್ಕಾಗಿ ತಮ್ಮ ಕಂಪನಿಗಳನ್ನು ಕಪ್ಪು ವರ್ಣೀಯರ ಮಾಲೀಕತ್ವದ ಕಂಪನಿ ಎಂದು ಹೇಳಿದರು.

 ವಿರೋಧ ಪಕ್ಷವು ಅವಿಶ್ವಾಸ ನಿರ್ಣಯ

ವಿರೋಧ ಪಕ್ಷವು ಅವಿಶ್ವಾಸ ನಿರ್ಣಯ

2017ರಲ್ಲಿ, ಗುಪ್ತಾ ಸಹೋದರರು ಜೇಕಬ್ ಜುಮಾ ಸರ್ಕಾರವನ್ನು ಎಷ್ಟು ಆಳವಾಗಿ ಪ್ರಭಾವಿಸಿದ್ದಾರೆ ಎಂಬುದನ್ನು ಸ್ಥಾಪಿಸುವ ಸುಮಾರು 1 ಲಕ್ಷ ಇಮೇಲ್‌ಗಳು ಸೋರಿಕೆಯಾದವು. ಇದು ಗುಪ್ತಾ ಸಹೋದರರ ವಿರುದ್ಧ ಭಾರೀ ಪ್ರತಿಭಟನೆಗೆ ಕಾರಣವಾಯಿತು. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಜೇಕಬ್ ಜುಮಾ ವಿರುದ್ಧ ವಿರೋಧ ಪಕ್ಷವು ಅವಿಶ್ವಾಸ ನಿರ್ಣಯವನ್ನು ತಂದ ನಂತರ ಗುಪ್ತಾ ಕುಟುಂಬಕ್ಕೆ ಇದು ಅಂತಿಮವಾಗಿ ಕಂಡು ಬಂದಿತು. ನಂತರದಲ್ಲಿ ಗುಪ್ತಾ ಸಹೋದರರ ಸಾಮ್ರಾಜ್ಯ ಒಂದೊಂದಾಗಿ ಕುಸಿಯ ತೊಡಗಿತು.

 ದೇಶ ವಶಪಡಿಸಿಕೊಳ್ಳುವುಲ್ಲದೆ ಆಸ್ತಿಗಳ ವಶ

ದೇಶ ವಶಪಡಿಸಿಕೊಳ್ಳುವುಲ್ಲದೆ ಆಸ್ತಿಗಳ ವಶ

ಗುಪ್ತಾ ಹಾಗೂ ಜೇಕಬ್ ಜುಮಾ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದರು. ದಕ್ಷಿಣ ಆಫ್ರಿಕಾದ ವಿರೋಧ ಪಕ್ಷಗಳು ತನಿಖೆ ನಡೆಸಲು ಆಗ್ರಹ ಮಾಡಿದವು. ಜೇಕಬ್ ಜುಮಾ ಅವರು ಗುಪ್ತಾ ಸಹೋದರರ ಸಹಯೋಗದೊಂದಿಗೆ ದೇಶ ವಶಪಡಿಸಿಕೊಳ್ಳುವುಲ್ಲದೆ ಆಸ್ತಿಗಳನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಯಿತು. ಯುಪಿಯ ಸಹರಣ್‌ಪುರದಿಂದ ಬಂದಿರುವ ಮೂವರು ಸಹೋದರರು ಎಷ್ಟು ಪ್ರಭಾವಿಗಳಾಗಿದ್ದರು ಎಂದರೆ ಅವರು ಜೇಕಬ್ ಜುಮಾ ಸರ್ಕಾರದ ನೀತಿಗಳನ್ನು ನಿರ್ಧರಿಸಿದ್ದರು. 2018 ರಲ್ಲಿ ಜೇಕಬ್ ಜುಮಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ ನಂತರ ಗುಪ್ತಾ ಕುಟುಂಬವು ದಕ್ಷಿಣ ಆಫ್ರಿಕಾದಿಂದ ಪಲಾಯನ ಮಾಡಿದರು.

 ಇಂಟರ್‌ಪೋಲ್

ಇಂಟರ್‌ಪೋಲ್ "ರೆಡ್ ನೋಟಿಸ್"

ದಕ್ಷಿಣ ಆಫ್ರಿಕಾ ಮತ್ತು ದುಬೈ ಎರಡು ದೇಶಗಳ ನಡುವೆ ಯಾವುದೇ ಹಸ್ತಾಂತರ ಒಪ್ಪಂದವಿಲ್ಲದ ಕಾರಣ ಯುಎಇ ಜೊತೆಗಿನ ಮಾತುಕತೆಗಳು ಫಲಿತಾಂಶ ನೀಡದಿದ್ದಾಗ ದಕ್ಷಿಣ ಆಫ್ರಿಕಾದ ಸರ್ಕಾರವು ಗುಪ್ತರನ್ನು ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿಸುವಂತೆ ಮನವಿ ಮಾಡಿತ್ತು. ದಕ್ಷಿಣ ಆಫ್ರಿಕಾ ತಕ್ಷಣವೇ ಗುಪ್ತರನ್ನು ಹಸ್ತಾಂತರಿಸಲು ವಿನಂತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಈ ಒಪ್ಪಂದವನ್ನು ಜೂನ್ 2021ರಲ್ಲಿ ಅಂಗೀಕರಿಸಲಾಯಿತು. ಇದಲ್ಲದೆ, ಜುಲೈ 2021 ರಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಬೃಹತ್ ಭ್ರಷ್ಟಾಚಾರದ ಜಾಲದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೂವರು ಸಹೋದರರಲ್ಲಿ ಇಬ್ಬರು- ಅತುಲ್ ಮತ್ತು ರಾಜೇಶ್ ವಿರುದ್ಧ ಇಂಟರ್‌ಪೋಲ್ "ರೆಡ್ ನೋಟಿಸ್" ನೀಡಿತು. ಅವರ ಬಂಧನವನ್ನು ಪ್ರಕಟಿಸಿದ ದಕ್ಷಿಣ ಆಫ್ರಿಕಾದ ನ್ಯಾಯ ಮತ್ತು ತಿದ್ದುಪಡಿ ಸೇವೆಗಳ ಇಲಾಖೆಯು ಯುಎಇ ಮತ್ತು ದಕ್ಷಿಣ ಆಫ್ರಿಕಾದ ವಿವಿಧ ಕಾನೂನು ಜಾರಿ ಸಂಸ್ಥೆಗಳ ನಡುವೆ ತನಿಖೆಯ ಬಗ ಗೆ ಚರ್ಚೆಗಳು ನಡೆಯುತ್ತಿವೆ.

English summary
Who are the Gupta brothers? Dubai police arrest two Gupta brothers over South African fraud case. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X