ವರದಕ್ಷಿಣೆಯ ಬಲಿಗೆ ಅಂತ್ಯ ಯಾವಾಗ?
ವರದಕ್ಷಿಣೆ ದಾಹಕ್ಕೆ ಹೆಣ್ಣು ಮಕ್ಕಳು ಬಲಿಯಾಗುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಆಧುನಿಕ ಸಮಾಜಕ್ಕೊಂದು ಕಪ್ಪುಚುಕ್ಕೆಯಾಗಿದೆ. ವರದಕ್ಷಿಣೆಗಾಗಿ ಗಂಡ ನೀಡುವ ಕಿರುಕುಳವನ್ನು ಸಹಿಸಿಕೊಳ್ಳಲಾಗದೆ ತಾವೇ ಒಂದೆಡೆ ಆತ್ಮಹತ್ಯೆ ಮಾಡಿಕೊಂಡರೆ ಮತ್ತೆ ಕೆಲವು ಪ್ರಕರಣಗಳಲ್ಲಿ ಗಂಡ ಮತ್ತು ಆತನ ಮನೆಯವರು ಸೇರಿ ಕೊಲೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ.
ಮುದ್ದಿನಿಂದಲೇ ಮಗಳನ್ನು ಸಾಕುವ ಹೆತ್ತವರು ಆಕೆಯ ಬೇಕು ಬೇಡಗಳನ್ನೆಲ್ಲ ಪೂರೈಸಿ, ವಯಸ್ಸಿಗೆ ಬಂದಾಗ ಮದುವೆ ಮಾಡಿ ತನ್ನ ಜವಬ್ದಾರಿ ಕಳೆದುಕೊಳ್ಳುವುದರೊಂದಿಗೆ ಮಗಳು ಹೋದ ಮನೆಯಲ್ಲಿ ಸದಾ ಸುಖವಾಗಿರಲೆಂದು ಆಶಿಸುತ್ತಾರೆ. ಆದರೆ ಆ ಮನೆ ಮಗಳ ಪಾಲಿಗೆ ನರಕವಾಗಿ ಆಕೆಯನ್ನೇ ಬಲಿ ತೆಗೆದುಕೊಂಡರೆ ಹೆತ್ತವರ ಗತಿ ಏನಾಗಬೇಕು?.
ಇವತ್ತು ನಾವೆಷ್ಟು ಮುಂದುವರೆದಿದ್ದರೂ ಕಾನೂನಾತ್ಮಕವಾಗಿ ವರದಕ್ಷಿಣೆ ಪದ್ಧತಿಯನ್ನು ನಿಷೇಧಿಸಿದ್ದರೂ ಅದು ಒಳಗೊಳಗೆ ನಡೆಯುತ್ತಲೇ ಇದೆ. ಸಂಬಂಧಗಳು ಕುದುರುವುದು, ಮದುವೆಗಳು ನಡೆಯುವುದು ವರದಕ್ಷಿಣೆ ಎಷ್ಟು ಕೊಡುತ್ತಾರೆ? ಎಂಬುದರ ಮೇಲೆಯೇ ಎಂದರೆ ಅಚ್ಚರಿಯಾಗುತ್ತದೆ.

ಹುಡುಗಿ ಮನೆಯವರು ಕೊಡುವ ವರದಕ್ಷಿಣೆ ಮೇಲೆಯೇ ಸಂಬಂಧಗಳನ್ನು ಬೆಸೆಯುವ ಕೆಟ್ಟ ಸಂಪ್ರದಾಯ ಆಧುನಿಕ ಯುಗದಲ್ಲಿಯೂ ಮುಂದುವರೆಯುತ್ತಿರುವುದು ದುರಂತದ ಸಂಗತಿ. ಮದುವೆಗಳು ಪಕ್ಕಾ ಕೊಂಡುಕೊಳ್ಳುವ ವ್ಯವಹಾರವಾಗಿ ನಡೆಯುತ್ತಿರುವುದರಿಂದಲೇ ಹಣದಾಹಿ ಗಂಡನ ಮನೆಯವರು ಹೆಣ್ಣನ್ನು ಹಣ ತರುವ ಸರಕಾಗಿ ಮಾರ್ಪಡಿಸಿ. ಆಕೆ ತನ್ನೊಂದಿಗೆ ತಂದ ಹಣ, ಚಿನ್ನವನ್ನು ತಿಂದು ತೇಗಿ ಮತ್ತೆ, ಮತ್ತೆ ಬೇಡಿಕೆಯಿಡುತ್ತಾರೆ.
ಹಣಕ್ಕಾಗಿ ಕಿರುಕುಳ ನೀಡುವ ಪಾಪಿಗಳು; ಇನ್ನು ಆಕೆಯ ತವರು ಮನೆಯಿಂದ ತಮಗೇನು ಲಾಭವಾಗಲ್ಲ ಎಂದು ತಿಳಿಯುತ್ತಿದ್ದಂತೆಯೇ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸುತ್ತಾರೆ. ಸೂಕ್ಷ್ಮ ಮನಸ್ಸಿನ ಹೆಣ್ಣು ಮಕ್ಕಳು ಕಿರುಕುಳ ಸಹಿಸಲಾರದೆ ತಾವೇ ಸಾವಿಗೆ ಶರಣಾಗುತ್ತಾರೆ.
ಮಗಳು ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿರಲಿ ಎಂದು ಸಾಲಸೋಲ ಮಾಡಿ ಮದುವೆ ಮಾಡಿ ಗಂಡನ ಮನೆಯವರು ಕೇಳಿದಾಗಲೆಲ್ಲಾ ಹಣಕೊಟ್ಟು ಖಾಲಿ ಕೈಯ್ಯಲ್ಲಿರುವ ಹೆಣ್ಣು ಹೆತ್ತವರ ನೋವು ಮಗಳಿಗೆ ಗೊತ್ತಿರುವ ಕಾರಣ ತಮ್ಮಿಂದ ಹೆತ್ತವರು ನೋವು ಅನುಭವಿಸಬಾರದೆಂಬ ಕಾರಣಕ್ಕೆ ತಾವೇ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಹೆಣ್ಣು ಮಕ್ಕಳು ಜೀವವನ್ನೇ ಕಳೆದು ಕೊಳ್ಳುತ್ತಿದ್ದಾರೆ.
ಹೆಣ್ಮಕ್ಕಳ ಕನಸು ನುಚ್ಚು ನೂರು; ತವರು ಮನೆಯಲ್ಲಿ ಸಾಲ ಮಾಡಿಕೊಂಡಿರುವ ಹೆತ್ತವರು ಬದುಕೋದಕ್ಕೆ ಪರದಾಡುತ್ತಿರುವಾಗ ಅವರಲ್ಲಿ ಹಣ ತಾನೆ ಎಲ್ಲಿರುತ್ತೆ?. ನಾನು ಹೇಗೆ ಕೇಳಲಿ ಎಂದು ಯೋಚಿಸುತ್ತಾ ಮಗಳು ಕೊನೆಗೆ ನನ್ನಿಂದಾಗಿ ತಾನೆ ಈ ಕಷ್ಟ. ನಾನೇ ಹೋಗಿಬಿಟ್ಟರೆ ಯಾವ ಚಿಂತೆ ಇರುವುದಿಲ್ಲ ಎಂಬ ನಿರ್ಧಾರಕ್ಕೆ ಬರುವುದರೊಂದಿಗೆ ಆತ್ಮಹತ್ಯೆಗೆ ಶರಣಾಗಿ ಬಿಡುತ್ತಾಳೆ.
ಇಂತಹದ್ದೊಂದು ಘಟನೆಗಳು ಆಗಾಗ್ಗೆ ಅಲ್ಲಲ್ಲಿ ನಡೆಯುತ್ತಲೇ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಗಂಡ, ಮಕ್ಕಳು ಸಂಸಾರ ಅಂಥ ಸುಂದರ ಕನಸುಗಳನ್ನು ಕಟ್ಟಿಕೊಂಡು ಚಿಕ್ಕ ವಯಸ್ಸಿಗೆ ಗಂಡನ ಮನೆಗೆ ಹೋಗೋ ಅದೆಷ್ಟೋ ಹೆಣ್ಣು ಮಕ್ಕಳು ಬಾಳದೆ ತಮ್ಮ ಬದುಕಿಗೆ ಅಂತ್ಯಹಾಡಿಕೊಳ್ಳುವುದನ್ನು ನೋಡಿದರೆ ಇದಕ್ಕೆಲ್ಲ ಅಂತ್ಯ ಯಾವಾಗ ಎಂಬ ಪ್ರಶ್ನೆಗಳು ಕಾಡುತ್ತವೆ.
ಅದೊಂದು ಹೆತ್ತವರ ಕೆಟ್ಟ ಬಯಕೆ; ಬಹಳಷ್ಟು ಹೆತ್ತವರಿಗೆ ಕೆಟ್ಟದೊಂದು ಬಯಕೆ ಇರುತ್ತದೆ. ನಮಗಿಂತ ಶ್ರೀಮಂತವಾಗಿರುವ ಮನೆಯನ್ನು ಮಗಳು ಸೇರಿದರೆ ಸುಖವಾಗಿರುತ್ತಾಳೆ ಎಂಬ ನಂಬಿಕೆ ಅವರದ್ದಾಗಿರುತ್ತದೆ. ಹಾಗಾಗಿಯೇ ಸಾಲ ಮಾಡಿಯಾದರೂ ಅಳಿಯನ ಡಿಮ್ಯಾಂಡ್ ಗಳನ್ನೆಲ್ಲ ಈಡೇರಿಸಿ ಮದುವೆ ಮಾಡಿಕೊಟ್ಟು ತಾವು ಕಷ್ಟ ಪಟ್ಟರೂ ಪರ್ವಾಗಿಲ್ಲ ಮಗಳು ಸುಖವಾಗಿರಲಿ ಎಂದು ಕನಸು ಕಾಣುತ್ತಾರೆ. ಆದರೆ ಕೆಲವೊಮ್ಮೆ ಆಗುವುದೇ ಬೇರೆ.
ಸಮಸ್ಯೆಗಳನ್ನು ಎದುರಿಸಿ ಬದುಕ ಬೇಕು; ಇನ್ನಾದರೂ ಹೆತ್ತವರು ಮಗಳಿಗೆ ಮದುವೆ ಮಾಡಿ ಜವಬ್ದಾರಿ ಮುಗಿಸಿಕೊಳ್ಳುವ ಮುನ್ನ ಮಗಳು ಹೋದ ಮನೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಬದುಕುವುದನ್ನು ಹೇಳಿಕೊಡುವ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ವಿದ್ಯಾವಂತರಾದ ಹೆಣ್ಣು ಮಕ್ಕಳು ಏನೇ ಬಂದರೂ ಅದನ್ನು ಎದುರಿಸುತ್ತೇನೆ ಎನ್ನುವ ಧೈರ್ಯವನ್ನು ತಂದುಕೊಳ್ಳಬೇಕು ಹಾಗಾದರೆ ಮಾತ್ರ ವರದಕ್ಷಿಣೆ ಪಿಡುಗಿಗೆ ಅಂತ್ಯ ಹೇಳಬಹುದಲ್ಲದೆ, ಹೆಣ್ಣುಮಕ್ಕಳ ಜೀವ ಉಳಿಯಲು ಸಾಧ್ಯವಾಗುತ್ತದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications