• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತದಾನಕ್ಕೆ ಮುನ್ನಾ ಮತಗಟ್ಟೆಯಲ್ಲಿ ನಡೆಯುವ ಪ್ರಕ್ರಿಯೆಗಳೇನು?

|

ಬೆಂಗಳೂರು, ಏಪ್ರಿಲ್ 17: ಮತದಾನದಂದು ಮತದಾರ ಮತಗಟ್ಟೆಗೆ ತೆರಳಿ ಮತಹಾಕಿ ಬರುತ್ತಾನೆ. ಇದು ಕೇವಲ ಮೂರು ನಿಮಿಷದಲ್ಲಿ ಮುಗಿಯುವ ಕಾರ್ಯ. ಆದರೆ ಮತದಾರ ಸುಲಭವಾಗಿ ಮತದಾನ ಮಾಡಲು ಅದಕ್ಕೆ ಮುನ್ನಾ ಏನೇನು ಕಾರ್ಯಗಳನ್ನು ಕೈಗೊಂಡಿರಲಾಗುತ್ತದೆ, ಬಲ್ಲಿರಾ?

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಮತದಾನದ ಹಿಂದಿನ ದಿನ ಸಂಜೆಯ ವೇಳೆಗೆ ಮತಗಟ್ಟೆಯ ಎಲ್ಲ ಅಧಿಕಾರಿಗಳು ಮತಯಂತ್ರದ ಜೊತೆ ಮತಕೇಂದ್ರ ತಲುಪಿರುತ್ತಾರೆ. ಮತದಾನಕ್ಕೆ ಬೇಕಾದ ವ್ಯವಸ್ಥೆ ಸೂಕ್ತವಾಗಿದೆಯೇ ಪರಿಶೀಲನೆ ಮಾಡಿಕೊಳ್ಳುತ್ತಾರೆ. ಅಲ್ಲಿ ಅವರಿಗೆ ಊಟ ವಸತಿ ನೋಡಿಕೊಳ್ಳಲು ಒಬ್ಬ ಡಿ-ದರ್ಜೆ ನೌಕರನನ್ನು ನೇಮಿಸಲಾಗಿರುತ್ತದೆ.

ಮತದಾರರೇ, ಮತದಾನಕ್ಕೂ ಮುನ್ನ EVM, VVPAT ಬಗ್ಗೆ ತಿಳಿದುಕೊಳ್ಳಿ

ಮತದಾನದ ದಿನದಂದು ಬೆಳಿಗ್ಗೆ 6 ಗಂಟೆಗೆ ಮತಗಟ್ಟೆ ಅಧಿಕಾರಿಗಳ ಕೆಲಸ ಪ್ರಾರಂಭವಾಗುತ್ತದೆ. ಆರು ಗಂಟೆಗೆ ಮುನ್ನವೇ ಮತಗಟ್ಟೆ ಸಿಬ್ಬಂದಿ ಪ್ರಿಸೈಡಿಂಗ್ ಆಫೀಸರ್ ನೇತೃತ್ವದಲ್ಲಿ ಮತಯಂತ್ರ, ವಿವಿ-ಪ್ಯಾಟ್‌ ಅನ್ನು ಹೊಂದಿಸಲಾಗುತ್ತದೆ.

ಎಲ್ಲಾ ಯಂತ್ರಗಳನ್ನು ಹೊಂದಿಸಿಕೊಳ್ಳಲಾಗುತ್ತದೆ

ಎಲ್ಲಾ ಯಂತ್ರಗಳನ್ನು ಹೊಂದಿಸಿಕೊಳ್ಳಲಾಗುತ್ತದೆ

ವಿವಿಪ್ಯಾಟ್, ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಟ್ ಯುನಿಟ್ ಎಂಬ ಮೂರು ವಿಭಾಗಗಳನ್ನು ಹೊಂದಿಸಿಕೊಳ್ಳಲಾಗುತ್ತದೆ. ಇವಿಎಂ ಅನ್ನು ಆನ್ ಮಾಡಿ ಅದು ಮತಸ್ವೀಕರಿಸಲು ಸರಿಯಿದೆಯೇ ಎಂದು ಧೃಡೀಕರಣ ಮಾಡಿಕೊಳ್ಳಲಾಗುತ್ತದೆ. ವಿವಿ-ಪ್ಯಾಟ್‌ನಲ್ಲಿ ಸ್ವಯಂ ದೃಢೀಕರಣ ವ್ಯವಸ್ಥೆ ಇರುತ್ತದೆ.

ಪರೀಕ್ಷಾ ಮತಗಳನ್ನು ಚಲಾವಣೆ ಮಾಡಲಾಗುತ್ತದೆ

ಪರೀಕ್ಷಾ ಮತಗಳನ್ನು ಚಲಾವಣೆ ಮಾಡಲಾಗುತ್ತದೆ

ಆ ನಂತರ ಪರೀಕ್ಷಾ ಮತಗಳನ್ನು ಚಲಾವಣೆ ಮಾಡಲಾಗುತ್ತದೆ. ಈ ಮತಗಳನ್ನು ನೊಂದಾಯಿತ ಏಜೆಂಟ್‌ಗಳೇ ಹಾಕುತ್ತಾರೆ. ಕನಿಷ್ಟ ಐವತ್ತು ಮತಗಳನ್ನು ಏಜೆಂಟ್‌ಗಳು ಚಲಾವಣೆ ಮಾಡುತ್ತಾರೆ. ಏಜೆಂಟ್‌ಗಳು ತಾವು ಯಾವ ಅಭ್ಯರ್ಥಿಗೆ ಮತಚಲಾಯಿಸುತ್ತಿದ್ದೇವೆ ಎಂದು ಮೊದಲೇ ತಿಳಿಸಿ ಮತ ಚಲಾಯಿಸುತ್ತಾರೆ. ಈ ಪರೀಕ್ಷಾ ಮತ ಚಲಾವಣೆ ಪ್ರಿಸೈಡಿಂಗ್ ಆಫೀಸರ್ ಎದುರೇ ಆಗುತ್ತದೆ.

ಮತಯಂತ್ರ ಸರಿಯಿಲ್ಲವೆಂದು ಸುಳ್ಳು ಹೇಳಿದರೆ ಏನು ಶಿಕ್ಷೆ?

ಮತ ಎಣಿಕೆಯನ್ನೂ ಅಲ್ಲಿಯೇ ಮಾಡಲಾಗುತ್ತದೆ

ಮತ ಎಣಿಕೆಯನ್ನೂ ಅಲ್ಲಿಯೇ ಮಾಡಲಾಗುತ್ತದೆ

ಪರೀಕ್ಷಾ ಮತ ಚಲಾವಣೆ ಬಳಿಕ ಆ ಮತಗಳನ್ನು ಅಲ್ಲಿಯೇ ಎಣಿಕೆ ಮಾಡಲಾಗುತ್ತದೆ. ವಿವಿ-ಪ್ಯಾಟ್‌ನಲ್ಲಿ ಮತಪತ್ರಗಳನ್ನು ತೆಗೆದು ಏಜೆಂಟ್‌ಗಳಿಗೆ ತೋರಿಸಿ ಅವರು ಹಾಕಿದ ಮತ ಅವರಿಗೆ ಬಿದ್ದಿದೆಯೇ ಎಂದು ಖಾತರಿ ಸಹ ಮಾಡಿಕೊಳ್ಳಲಾಗುತ್ತದೆ. ಆ ನಂತರ ಆ ಚೀಟಿಗಳನ್ನು ಕಪ್ಪು ಕವರ್‌ನಲ್ಲಿ ಹಾಕಿ ಸೀಲ್ ಮಾಡಲಾಗುತ್ತದೆ. ಆ ಸೀಲ್ ಅನ್ನು ಹತ್ತು ವರ್ಷದ ವರೆಗಿ ಇರಿಸಲಾಗುತ್ತದೆ. ಈ ಕಾರ್ಯಕ್ಕೆ ಏಜೆಂಟ್‌ರ ಸಹಿಯನ್ನೂ ಪಡೆಯಲಾಗುತ್ತದೆ.

ನಾಳೆ 2 ನೇ ಹಂತದ ಮತದಾನ, ಕರ್ನಾಟಕವೂ ರೆಡಿ: ತಿಳಿಯಬೇಕಾದ ಕೆಲ ಸಂಗತಿ

ಮತಯಂತ್ರವನ್ನು ಕ್ಲಿಯರ್ ಮಾಡಲಾಗುತ್ತದೆ

ಮತಯಂತ್ರವನ್ನು ಕ್ಲಿಯರ್ ಮಾಡಲಾಗುತ್ತದೆ

ಪರೀಕ್ಷಾ ಮತಗಳ ಚಲಾವಣೆ, ಮತ ಎಣಿಕೆ ಬಳಿಕ ಮತಯಂತ್ರವನ್ನು ಕ್ಲಿಯರ್ (ಪುನರ್‌ ನವೀಕರಣ) ಮಾಡಲಾಗುತ್ತದೆ. ಈ ಹಿಂದೆ ಹಾಕಿದ ಪರೀಕ್ಷಾ ಮತಗಳು ಇವಿಎಂನಿಂದ ಅಳಿಸಿ ಹೋಗಿ ಹೊಸ ಮತದಾನಕ್ಕೆ ಇವಿಎಂ ಅನ್ನು ಅಣಿಗೊಳಿಸಲಾಗುತ್ತದೆ.

ಸರಿಯಾಗಿ ಏಳು ಗಂಟೆ ಒಳಗೆ ಈ ಎಲ್ಲ ಕಾರ್ಯವೂ ಮುಗಿಸಲಾಗುತ್ತದೆ. ಏಳು ಗಂಟೆಗೆ ಮತದಾನ ಪ್ರಾರಂಭವಾಗುತ್ತದೆ. ಸಂಜೆ 6 ಗಂಟೆಗೆ ಸರಿಯಾಗಿ ಮತದಾನ ಮುಗಿಯುತ್ತದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ

English summary
Voting officers do so many functions before voting start in the booth. They start their work early in the morning. They run test voting and many other things before the voting begins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X