Flashback : 2014ರ ಎಕ್ಸಿಟ್ ಪೋಲ್ ಸಮೀಕ್ಷೆಗಳ ಅವಲೋಕನ
ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಮುನ್ನಡೆ ಗಳಿಸಲಿದೆ ಎಂಬುದರ ಬಗ್ಗೆ ದೇಶದ ಪ್ರಮುಖ ಸುದ್ದಿವಾಹಿನಿಗಳು ನಡೆಸಿದ ಚುನಾವಣಾ ಎಕ್ಸಿಟ್ ಪೋಲ್ ಸಮೀಕ್ಷೆ ವರದಿ ಪ್ರಕಟಕ್ಕೆ ಮುಹೂರ್ತ ನಿಗದಿಯಾಗಿದೆ. ಮೇ 19ರಂದು ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿದ ಬಳಿಕ, 5 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆ ಪ್ರಸಾರವಾಗಲಿದೆ.
ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ ಪ್ರಸಾರಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದ ರೀತಿಯಲ್ಲೇ ಎಕ್ಸಿಟ್ ಪೋಲ್ ವರದಿ ಪ್ರಸಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ಟ್ವಿಟ್ಟರ್ ನಲ್ಲಿ ಎಕ್ಸಿಟ್ ಪೋಲ್ ಹ್ಯಾಶ್ ಟ್ಯಾಗ್ ತೆಗೆಸಲಾಗಿದೆ.

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆ 2019 ಏಪ್ರಿಲ್ 11 ರಿಂದ ಮೇ 19 ರತನಕ ಏಳು ಹಂತಗಳಲ್ಲಿ ಆಯೋಜನೆಗೊಂಡಿದೆ. ಮತದಾನ ಪ್ರಕ್ರಿಯೆ, ಶೇಕಡಾವಾರು ಮತದಾನದ ಆಧಾರದ ಮೇಲೆ ವಿವಿಧ ಮಾಧ್ಯಮ ಸಂಸ್ಥೆಗಳು 2019ರಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂದು ತಿಳಿಸಲಿದೆ.
2014ರ ಮತದಾನೋತ್ತರ ಸಮೀಕ್ಷೆಯಲ್ಲಿ ಎನ್ಡಿಎಗೆ ಬಹುಮತ ಎಂದು ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳು ಘೋಷಿಸಿದ್ದವು, ಟುಡೇಸ್ ಚಾಣಕ್ಯ ಅತ್ಯಂತ ನಿಖರ ಅಂಕಿ ಅಂಶ ನೀಡಿ ಗಮನ ಸೆಳೆದಿತ್ತು. ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.
| ಸುದ್ದಿವಾಹಿನಿ | ಎನ್ಡಿಎ | ಯುಪಿಎ | ಎಡಪಕ್ಷ | ಇತರೆ |
| ನ್ಯೂಸ್24-ಚಾಣಕ್ಯ | 340 | 70 | 12 | 133 |
| ಮ್ಯಾಫ್ಸ್ ಆಫ್ ಇಂಡಿಯಾ.ಕಾಂ | 330 | 91 | 17 | 120 |
| ಇಂಡಿಯಾ ಟಿವಿ-ಸಿ ವೋಟರ್ | 289 | 101 | 12 | 133 |
| ಎಬಿಪಿ-ನೆಲ್ಸನ್ | 281 | 97 | 24 | 141 |
| ಸಿಎನ್ಎನ್ ಐಬಿಎನ್ -ಸಿಎಸ್ ಡಿಎಸ್ | 272-280 | 92-102 | 14-20 | 111-143 |
| ಹೆಡ್ ಲೈನ್ಸ್ ಟುಡೇ ಸಿಸೆರೋ | 261-283 | 110-120 | 19 | 150-162 |
| ಟೈಮ್ಸ್ ನೌ-ORG | 249 | 148 | 17 | 129 |

ನ್ಯೂಸ್ 24-ಚಾಣಕ್ಯ ಎಕ್ಸಿಟ್ ಪೋಲ್
ನ್ಯೂಸ್ 24-ಚಾಣಕ್ಯ ಎಕ್ಸಿಟ್ ಪೋಲ್ ಪ್ರಕಾರ ಎನ್ಡಿಎಗೆ ಭಾರಿ ಬಹುಮತ ಸಿಗಲಿದೆ. 340 ಸ್ಥಾನಗಳೂ ಎಂದು ವರದಿ ಬಂದಿತ್ತು. ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎಗೆ 70 ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ.

ಟೈಮ್ಸ್ ನೌ ಸಮೀಕ್ಷೆ
ನೈಜ ಫಲಿತಾಂಶಕ್ಕೆ ಹತ್ತಿರವಾದ ಸಮೀಕ್ಷೆ ನೀಡಿದ ಸಂಸ್ಥೆಗಳ ಪೈಕಿ ಟೈಮ್ಸ್ ನೌ ನಂತರದ ಸ್ಥಾನದಲ್ಲಿದೆ. ಟೈಮ್ಸ್ ನೌ ಪ್ರಕಾರ ಎನ್ಡಿಎಗೆ 249 ಹಾಗೂ ಯುಪಿಎಗೆ 148 ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗಿತ್ತು. 1999ಕ್ಕೆ ಹೋಲಿಸಿದರೆ 119 ಅಧಿಕ ಸ್ಥಾನಗಳು ಸಿಗಲಿವೆ ಎನ್ನಲಾಗಿತ್ತು. ಆದರೆ, ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

ಸಿಎನ್ಎನ್ ಐಬಿಎನ್- ಸಿಎಸ್ ಡಿಎಸ್
ಸಿಎನ್ಎನ್ ಐಬಿಎನ್- ಸಿಎಸ್ ಡಿಎಸ್ ಸಮೀಕ್ಷೆ ಹಾಗೂ ದಿ ಹೆಡ್ ಲೈನ್ಸ್ ಟುಡೇ ಸಿಸಿರೋ ಸಮೀಕ್ಷೆ ಪ್ರಕಾರ ಎನ್ಡಿಎಗೆ 261 ರಿಂದ 283 ಸ್ಥಾನಗಳನ್ನು ಗೆಲ್ಲಬಹುದು ಎಂದು ವರದಿ ನೀಡಿತ್ತು. ಇದೇ ವೇಳೆ ಯುಪಿಗೆ 92 ರಿಂದ 120 ಎಂದು ಹೇಳಿತ್ತು. ಆದರೆ, ಯುಪಿಎ ಅಂತಿಮ ಫಲಿತಾಂಶದಲ್ಲಿ 60ರ ಗೆರೆ ದಾಟಲಿಲ್ಲ.

ಇಂಡಿಯಾ ಟಿವಿ -ಸಿ ವೋಟರ್ಸ್
ಇಂಡಿಯಾ ಟಿವಿ -ಸಿ ವೋಟರ್ಸ್ ಹಾಗೂ ಎಬಿಪಿ ನೆಲ್ಸನ್ ಸಮೀಕ್ಷೆ ಎರಡು ಕೂಡಾ ಎನ್ಡಿಎಗೆ ಬಹುಮತ ಸಿಗಲಿದೆ. 281 ರಿಂದ 289 ಸ್ಥಾನಗಳಿಸಬಹುದು ಎಂದು ಹೇಳಿದ್ದವು. ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಗುಜರಾತಿನಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಸಿಗಲಿದೆ ಎಂದು ಹೇಳಲಾಗಿತ್ತು.












Click it and Unblock the Notifications