ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾ.. ನಾನೂ ಬೆಂಗಳೂರಿಗೆ ಹೋಗಬೇಕು ಅಂತಿರೋದೇಕೆ ಈ ಜನರು!?

|
Google Oneindia Kannada News

ಬೆಂಗಳೂರು, ಮೇ 20: ಸಿಲಿಕಾನ್ ಸಿಟಿ ಸಖತ್ ಕೂಲ್ ಕೂಲ್ ಆಗಿದೆ. ಉತ್ತರ ಭಾರತದಲ್ಲಿ ಸೂರ್ಯನ ಕೋಪಕ್ಕೆ ಕೆಂಡದಂತೆ ಆಗಿರುವ ವಾತಾವರಣದಲ್ಲಿ ಜನರು ರೋಸ್ಟ್ ಆಗುತ್ತಿದ್ದರೆ, ಬೆಂಗಳೂರಿನ ಮಂದಿ ಮಾತ್ರ ವರುಣನ ಕೃಪೆಯಿಂದ ಮಳೆ ನೀರಿನಲ್ಲಿ ಮುಳುಗಿದ್ದಾರೆ.

ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಂದಿ ಹೈರಾಣಾಗಿದ್ದಾರೆ. ನಗರದ ರಸ್ತೆಗಳು ಕೆರೆಗಳಂತೆ ಆಗಿವೆ. ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳು ಬೋಟ್ ರೀತಿಯಲ್ಲಿ ತೇಲಿಕೊಂಡು ಹೋಗುತ್ತಿವೆ. ಜನರು ಮನೆಯಿಂದ ಹೊರ ಬರುವುದಕ್ಕೆ ಛತ್ರಿ ಬೇಕೇ ಬೇಕು ಅಂತಿದ್ದಾರೆ.

ಬೆಂಗಳೂರಿನಲ್ಲಿ 7 ಜನ ಮಂತ್ರಿಗಳಿದ್ದು, ಮಳೆ ಹಾನಿ ಬಗ್ಗೆ ಒಂದಾದರೂ ಸಭೆ ಮಾಡಿದ್ದಾರಾ? ಬೆಂಗಳೂರಿನಲ್ಲಿ 7 ಜನ ಮಂತ್ರಿಗಳಿದ್ದು, ಮಳೆ ಹಾನಿ ಬಗ್ಗೆ ಒಂದಾದರೂ ಸಭೆ ಮಾಡಿದ್ದಾರಾ?

ಇಂಥದರ ನಡುವೆ ಮೈ ನಡುಗುವ ಚಳಿಯು ರಾಜಧಾನಿಯಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಮೇ ತಿಂಗಳ ವಾತಾವರಣವನ್ನು ನೋಡುತ್ತಿದ್ದರೆ ಬೆಂಗಳೂರು ಭಾರತದಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಹುಟ್ಟಿಕೊಳ್ಳುತ್ತದೆ.

What netizens says about Bengaluru Rain Is Bengaluru really in India

ಅಚ್ಚರಿ ಅನಿಸಿದರೂ ಇದು ಸತ್ಯ ಎನ್ನುವುದನ್ನು ಸೋಷಿಯಲ್ ಮೀಡಿಯಾಗಳು ಸಾರಿ ಸಾರಿ ಹೇಳುತ್ತಿವೆ.

ಮಳೆ ಹನಿ ಜೊತೆ ಚಳಿ ಗಾಳಿ

ಮಳೆ ಹನಿ ಜೊತೆ ಚಳಿ ಗಾಳಿ

ಉತ್ತರ ಭಾರತದಲ್ಲಿ ನೆತ್ತಿ ಸುಡುವ ಬಿಸಿಲಿದ್ದರೆ, ಸಿಲಿಕಾನ್ ಸಿಟಿಯಲ್ಲಿ ಮೈ ಚಳಿ ಹೆಚ್ಚಿಸುವ ಗಾಳಿ. ಚಳಿ ಗಾಳಿಗೆ ಸುರಿಯುವ ಮಳೆಯೇ ಸಹಪಾಟಿ. ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಮುಂಜಾನೆಯಿಂದ ರಾತ್ರಿಯವರೆಗೂ ಚಳಿಯೋ ಚಳಿ. ಕಳೆದೊಂದು ವಾರದಲ್ಲಿ ವಾತಾವರಣವು ಶೇ.17.90 ಡಿಗ್ರಿ ಸೆಲ್ಸಿಯಸ್ ಆಗಿದ್ದು, 10 ವರ್ಷಗಳಲ್ಲೇ ಹೊಸ ದಾಖಲೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇ ತಿಂಗಳಲ್ಲಿ ದಾಖಲಾದ ಕನಿಷ್ಠ 16.7 ಡಿಗ್ರಿ ಸೆಲ್ಸಿಯಸ್ (°C) ಇದು ಮೇ 6ರ ಮೇ 1945ರಂದು ದಾಖಲಾಗಿತ್ತು.

ಮೇ ತಿಂಗಳಿನಲ್ಲಿ 100 ಅಡಿ ನೀರು ಸಂಗ್ರಹ

ಮೇ ತಿಂಗಳಿನಲ್ಲಿ 100 ಅಡಿ ನೀರು ಸಂಗ್ರಹ

ಕೇರಳ ಮತ್ತು ಕರ್ನಾಟಕದ ಮಡಿಕೇರಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೃಷ್ಣರಾಜ ಸಾಗರ ಜಲಾಶಯದಲ್ಲಿ ದಾಖಲೆ ಪ್ರಮಾಣದ ನೀರು ಸಂಗ್ರಹವಾಗಿದೆ. ಬರೋಬ್ಬರಿ 10 ವರ್ಷಗಳ ನಂತರ ಮೇ ತಿಂಗಳಿನಲ್ಲೇ ಜಲಾಶಯದಲ್ಲಿ 100 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.

ಸಿಲಿಕಾನ್ ಸಿಟಿ ಮಳೆ ಕಂಡು ದಂಗಾದ ನೆಟ್ಟಿಗರು

ಬೆಂಗಳೂರಿನಲ್ಲಿ ಮಳೆಯ ನಂತರ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿ ರಿಯಾಕ್ಷನ್ ಕೊಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಅಸಹನೀಯ ಬಿಸಿಲನ್ನು ಎದುರಿಸುತ್ತಿರುವ ಜನರು ತಮ್ಮ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದಾರೆ. ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ನೀವು ತಿಳಿಯಿರಿ.

ನಾನು ಬೆಂಗಳೂರಿಗೆ ಹೋಗಬೇಕಪ್ಪಾ

ಉತ್ತರ ಪ್ರದೇಶದಲ್ಲಿ ಬಿಸಿಲು ಜಾಸ್ತಿ ಆಗಿದೆಯಪ್ಪಾ. ನಾವು ಇಲ್ಲಿ ಇರೋದಿಲ್ಲ. ಯುಪಿಯಲ್ಲಿ ಇರುವುದಕ್ಕಿಂತ ಬೆಂಗಳೂರಿಗೆ ಹೋಗುವುದೇ ಲೇಸು. ನಾನು ಬೆಂಗಳೂರಿಗೆ ಹೋಗುತ್ತೀನಪ್ಪಾ ಎಂಬುದನ್ನು ಹೇಳುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

Recommended Video

RCB ಅಭಿಮಾನಿಗಳೆಲ್ಲಾ ಈಗ Mumbai Indians ಅಭಿಮಾನಿಗಳು | Oneindia Kannada

English summary
Rain in Bengaluru Take Internet By Storm, Twitter Flooded With Memes. Check the hilarious tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X