ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದಿ ತಿಳಿಯಿರಿ: ಹೃದಯಾಘಾತ V/s ಹೃದಯ ಸ್ತಂಭನ ಒಂದೇನಾ?; ಇದಕ್ಕೆ ಕೋವಿಡ್ ಕಾರಣನಾ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 12: ಜೀವ ಮತ್ತು ಜೀವನ ಮಧ್ಯೆ ಈ ಆಘಾತ ನೀಡುವಂಥ ಘಟನೆಗಳು ಇತ್ತೀಚಿಗೆ ಹೆಚ್ಚುತ್ತಿವೆ. ನಿಂತಲ್ಲಿ, ಕುಳಿತಲ್ಲಿ, ಮಲಗಿದಲ್ಲೇ ಪ್ರಾಣಪಕ್ಷಿ ಹಾರು ಹೋಗಿರುವಂಥ ಘಟನೆಗಳು ಇತ್ತೀಚಿಗೆ ಹೆಚ್ಚುತ್ತಿವೆ. ಇದಕ್ಕೆ ಕಾರಣವೇ ಹೃದಯ ಸ್ತಂಭನ ಹಾಗೂ ಹೃದಯಾಘಾತ.

ಉತ್ತರ ಪ್ರದೇಶದ ಬರೇಲಿಯ 48 ವರ್ಷದ ವ್ಯಕ್ತಿಯೊಬ್ಬರು ಹುಟ್ಟುಹಬ್ಬದ ಪಾರ್ಟಿಯಲ್ಲಿ ನೃತ್ಯ ಮಾಡು ಮಾಡುತ್ತಲೇ ಹಠಾತ್ ಕುಸಿದುಬಿದ್ದು ಸಾವನ್ನಪ್ಪಿದ್ದರು. ಮತ್ತೊಂದು ಘಟನೆಯಲ್ಲಿ, ಜಮ್ಮುವಿನ ನಿವಾಸಿ ಯೋಗೇಶ್ ಗುಪ್ತಾ ತಮ್ಮ ಪ್ರದರ್ಶನದ ಮಧ್ಯದಲ್ಲಿ ವೇದಿಕೆಯ ಮೇಲೆ ಕುಸಿದು ಸಾವನ್ನಪ್ಪಿದರು.

ಮೈ ಮರೆತವರು ಮಸಣಕ್ಕೆ: 44 ಸೆಕೆಂಡಿಗೆ ಒಬ್ಬರು ಪ್ರಾಣ ಬಿಡುತ್ತಿರುವುದು ಏಕೆ!?ಮೈ ಮರೆತವರು ಮಸಣಕ್ಕೆ: 44 ಸೆಕೆಂಡಿಗೆ ಒಬ್ಬರು ಪ್ರಾಣ ಬಿಡುತ್ತಿರುವುದು ಏಕೆ!?

ಇಂತಹ ಹಲವು ಘಟನೆಗಳು ವರದಿಯಾಗಿದ್ದು, ಕೋವಿಡ್ ನಂತರದ ಯುಗದಲ್ಲಿ ಹೃದಯಾಘಾತಗಳು ಹೆಚ್ಚುತ್ತಿವೆಯೇ ಎಂಬ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ವಿಷಯದ ಬಗ್ಗೆ ತಜ್ಞರು ಏನು ಹೇಳುತ್ತಾರೆ?, ಹೃದಯಾಘಾತಕ್ಕೂ, ಹೃದಯ ಸ್ತಂಭನಕ್ಕೂ ಇರುವ ವ್ಯತ್ಯಾಸವೇನು ಎಂಬುದನ್ನು ತಿಳಿದುಕೊಳ್ಳೋಣ.

ಹೃದಯಾಘಾತವೇ ಬೇರೆ, ಹೃದಯ ಸ್ತಂಭನವೇ ಬೇರೆ

ಹೃದಯಾಘಾತವೇ ಬೇರೆ, ಹೃದಯ ಸ್ತಂಭನವೇ ಬೇರೆ

ಬಹುತೇಕ ಪ್ರಕರಣದಲ್ಲಿ ಹೃದಯ ಸಂಬಂಧಿ ಕಾಯಿಲೆಗಳೆಲ್ಲ ಹೃದಯಾಘಾತ ಆಗಿರುವುದಿಲ್ಲ ಎಂದು ಆರ್‌ಎಂಎಲ್ ಆಸ್ಪತ್ರೆಯ ಕಾರ್ಡಿಯಾಲಜಿ ಪ್ರಾಧ್ಯಾಪಕ ಡಾ (ಪ್ರೊ) ತರುಣ್ ಕುಮಾರ್ ಹೇಳಿದ್ದಾರೆ. "ಯಾರಾದರೂ ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಹಲವು ಬಾರಿ ಜನರು ಹೃದಯಾಘಾತ ಮತ್ತು ಹಠಾತ್ ಹೃದಯ ಸ್ತಂಭನವನ್ನು ಒಂದೇ ಅರ್ಥದಲ್ಲಿ ಬಳಸುತ್ತಾರೆ. ಆದರೆ ಅವೆರಡೂ ಸಮಾನಾರ್ಥಕ ಪದಗಳಲ್ಲ, ಎರಡರ ಅರ್ಥವು ಒಂದೇ ಆಗಿರುವುದಿಲ್ಲ," ಎಂದು ಉಲ್ಲೇಖಿಸಿದ್ದಾರೆ.

ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ; ಡಾ.ಸಿ.ಎನ್.ಮಂಜುನಾಥ್ ಹೇಳುವುದೇನು?ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ; ಡಾ.ಸಿ.ಎನ್.ಮಂಜುನಾಥ್ ಹೇಳುವುದೇನು?

ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೂ ವ್ಯತ್ಯಾಸವೇನು?

ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೂ ವ್ಯತ್ಯಾಸವೇನು?

"ಸಾಮಾನ್ಯವಾಗಿ ಹೃದಯಾಘಾತವೆಂದರೆ ಹೃದಯಕ್ಕೆ ರಕ್ತದ ಹರಿವು ನಿಲ್ಲುವುದಾಗಿದೆ. ಅದೇ ರೀತಿ ಅಸಮರ್ಪಕವಾಗಿ ಕಾರ್ಯನಿರ್ವಹಣೆ ಮತ್ತು ಅನಿರೀಕ್ಷಿತ ಬಡಿತ ನಿಲ್ಲುವುದನ್ನೇ ಹಠಾತ್ ಹೃದಯ ಸ್ತಂಭನ ಎಂದು ಕರೆಯಲಾಗುತ್ತದೆ. ಪರಿಚಲನೆಯ ಸಮಸ್ಯೆಯಿಂದ ಹೃದಯಾಘಾತ ಸಂಭವಿಸಿದರೆ, ಹೃದಯವೇ ಕೆಲಸ ನಿಲ್ಲಿಸುವುದರಿಂದ ಹೃದಯ ಸ್ತಂಭನ ಆಗುತ್ತದೆ," ಎಂದು ಡಾ.ಕುಮಾರ್ ವಿವರಿಸಿದ್ದಾರೆ.

ಹೃದಯಾಘಾತದ ನಂತರ ಅಥವಾ ಚೇತರಿಕೆಯ ಸಮಯದಲ್ಲಿ ಹಠಾತ್ ಹೃದಯ ಸ್ತಂಭನ ಸಂಭವಿಸಬಹುದು. ಹೃದಯಾಘಾತವು ಹಠಾತ್ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಹೃದಯಾಘಾತ ಪ್ರಕರಣಗಳು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗುವುದಿಲ್ಲ. ಆದರೆ ಹಠಾತ್ ಹೃದಯ ಸ್ತಂಭನ ಸಂಭವಿಸಿದಾಗ, ಹೃದಯಾಘಾತವು ಸಾಮಾನ್ಯ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಹೃದಯ ಸ್ತಂಭನಕ್ಕೆ ಬೇರೆ ಬೇರೆ ಕಾರಣಗಳೇನು?

ಹೃದಯ ಸ್ತಂಭನಕ್ಕೆ ಬೇರೆ ಬೇರೆ ಕಾರಣಗಳೇನು?

ಇತರೆ ರೀತಿ ಹೃದಯ ಸ್ಥಿತಿಗಳು ಹೃದಯದ ಲಯವನ್ನು ಅಡ್ಡಿಪಡಿಸಬಹುದು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಇವುಗಳಲ್ಲಿ ದಪ್ಪನಾದ ಹೃದಯ ಸ್ನಾಯು (ಕಾರ್ಡಿಯೊಮಯೋಪತಿ), ಹೃದಯ ವೈಫಲ್ಯ, ಆರ್ಹೆತ್ಮಿಯಾಗಳು, ನಿರ್ದಿಷ್ಟವಾಗಿ ಕುಹರದ ಕಂಪನ ಮತ್ತು ದೀರ್ಘ ಕ್ಯೂ-ಟಿ ಸಿಂಡ್ರೋಮ್ ಸೇರಿವೆ ಎಂದು ಡಾ ಕುಮಾರ್ ಹೇಳಿದರು.

ಹೃದಯ ಸ್ತಂಭನ ಸಂದರ್ಭದಲ್ಲಿ ತಕ್ಷಣ ಮಾಡಬೇಕಾಗಿದ್ದೇನು?

ಹೃದಯ ಸ್ತಂಭನ ಸಂದರ್ಭದಲ್ಲಿ ತಕ್ಷಣ ಮಾಡಬೇಕಾಗಿದ್ದೇನು?

ಸಾಮಾನ್ಯವಾಗಿ ಹೃದಯ ಸ್ತಂಭನವು ಕಾಣಿಸಿಕೊಂಡ ಕೆಲವೇ ಸಮಯದಲ್ಲಿ ಚಿಕಿತ್ಸೆ ನೀಡುವುದರಿಂದ ಚೇತರಿಕೆಯನ್ನು ಹೊಂದಲು ಸಾಧ್ಯವಿದೆ ಎಂದು ಡಾ ಕುಮಾರ್ ಹೇಳಿದ್ದಾರೆ. ಈ ಹಂತದಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೆ ಕರೆ ಮಾಡಿ ಮತ್ತು ತಕ್ಷಣವೇ CPR (ಹೃದಯ ಶ್ವಾಸಕೋಶದ ಪುನರುಜ್ಜೀವನ) ಪ್ರಾರಂಭಿಸಿ ಮತ್ತು ವೃತ್ತಿಪರ ತುರ್ತು ವೈದ್ಯಕೀಯ ಸೇವೆಗಳು ಬರುವವರೆಗೆ ಮುಂದುವರಿಸಬೇಕು. ಹ್ಯಾಂಡ್ಸ್ ಸಿಪಿಆರ್ ಅನ್ನು ನಿರ್ವಹಿಸುವ ಮೂಲಕ ಬದುಕುಳಿಯುವ ಸಾಧ್ಯತೆಗಳು ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ. ಬೈಸ್ಟ್ಯಾಂಡರ್ ಸಿಪಿಆರ್, ಇದು ಆಸ್ಪತ್ರೆಯ ಹೃದಯ ಸ್ತಂಭನದಿಂದ ಜೀವ ಉಳಿಸುತ್ತದೆ ಎಂದು ಅವರು ಹೇಳಿದರು.

ಕೊರೊನಾವೈರಸ್ ನಂತರದಲ್ಲಿ ಹೃದಯಕ್ಕೆ ಆಪತ್ತು

ಕೊರೊನಾವೈರಸ್ ನಂತರದಲ್ಲಿ ಹೃದಯಕ್ಕೆ ಆಪತ್ತು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಜನರು ಹೆಚ್ಚಾಗಿ ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿದೆ. ಈ ಬಗ್ಗೆ ಡಾ. ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲನೆಯದಾಗಿ, ಕೋವಿಡ್ ಯುಗದಲ್ಲಿ ಮತ್ತು ಅದರ ನಂತರವೂ ದೈಹಿಕ ಚಟುವಟಿಕೆಯು ಕಡಿಮೆಯಾದ ಕಾರಣ ಸಾಮಾನ್ಯ ಜನರಲ್ಲಿ ಹೃದಯ ಸ್ತಂಭನ ಅಥವಾ ಹೃದಯಾಘಾತದ ಅಪಾಯವು ಹೆಚ್ಚಾಯಿತು.

ಎರಡನೆಯದಾಗಿ, ಕ್ಯಾಮೆರಾ ಅಥವಾ ಸಿಸಿಟಿವಿ ಫೂಟೇಜ್ ಹೊಂದಿರುವ ಮೊಬೈಲ್ ಫೋನ್‌ನ ವ್ಯಾಪಕ ಲಭ್ಯತೆಯಿಂದಾಗಿ ಅಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿಗೆ ಅಂಥ ಘಟನೆಗಳು ಇಂಟರ್ನೆಟ್ ಅಂಗಳಕ್ಕೆ ಬರುತ್ತಿದ್ದು, ವೈರಲ್ ಆಗುತ್ತಿವೆ. ಇದರಿಂದ ಅಂಥ ಪ್ರಕರಣಗಳು ಮೊದಲಿಗಿಂತ ಹೆಚ್ಚಾದಂತೆ ಗೋಚರಿಸಲು ಕಾರಣವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

English summary
Difference between Heart Attack and Sudden Cardiac Arrest: Experts Explain like this The Recent Cases and Deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X