ವಿಡಿಯೋ: ಬಿಸಿಲಿನ ಶಾಖ ತಪ್ಪಿಸಲು ಮದುವೆ ಮೆರವಣಿಗೆಯಲ್ಲಿ ಮೊಬೈಲ್ ಸನ್‌ಶೇಡ್

ಬಿಸಿಲಿನ ಶಾಖ ಮೈಸೋಕದೇ ಇರಲು ಮದುವೆ ಮೆರವಣಿಯಲ್ಲಿ ಉಪಾಯವೊಂದನ್ನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮದುವೆ ಮೆರವಣಿಗೆಯ ವಧು-ವರ ಹಾಗೂ ಪಾಲ್ಗೊಂಡವರಿಗೆ ಬಿಸಿಲಿನ ಶಾಖ ಅಡ್ಡಿಯಾಗದಂತೆ ಟೆಂಟ್‌ ವ್ಯವಸ್ಥೆಯನ್ನೇ ಮಾಡಲಾಗಿದೆ. ಮದುವೆ ಮೆರವಣಿಯ ದಾರಿಯುದ್ದಕ್ಕೂ ಟೆಂಟ್ ವ್ಯವಸ್ಥೆನಾ? ಆ ಶ್ರೀಮಂತ ಯಾರಪ್ಪ ಅಂತಾ ಆಶ್ಚರ್ಯ ಆಗ್ತಾಯಿದಿಯಾ? ನೀವು ಅಂದುಕೊಂಡಂತೆ ದಾರಿಯುದ್ದಕ್ಕೂ ಇಲ್ಲಿ ಟೆಂಟ್ ವ್ಯವಸ್ಥೆ ಮಾಡಲಾಗಿಲ್ಲ. ಬದಲಿಗೆ ಮೆರವಣಿಗೆ ಹೊರಟಂತೆ ಮೊಬೈಲ್ ಸನ್‌ಶೇಡ್ ವ್ಯವಸ್ಥೆ ಮಾಡಲಾಗಿದೆ. ಈ ಆಲೋಚನೆಯನ್ನು ಜನ ಮೆಚ್ಚಿಕೊಂಡಿದ್ದಾರೆ.

ದೇಶಾದ್ಯಂತ ಬೇಸಿಗೆಯ ಸುಡು ಸೂರ್ಯದ ಝಳಕ್ಕೆ ಜನರು ಕಂಗಾಲಾಗಿದ್ದಾರೆ. ಈ ಮಧ್ಯೆ ಮುಂದಿನ ಕೆಲವು ದಿನ ತಾಪಮಾನ ಮತ್ತಷ್ಟು ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದೇಶದ ಅನೇಕ ಭಾಗಗಳಲ್ಲಿ 45 ಡಿಗ್ರಿ ಸೆ.ಗಿಂತ ಅಧಿಕ ಉಷ್ಣತೆ ಇರಲಿದೆ ಎಂದು ಐಎಂಡಿ ತಿಳಿಸಿದೆ. ಈ ಬೇಸಿಗೆಯಲ್ಲಿ ಮನೆಯಲ್ಲಿ ಕಾರ್ಯಕ್ರಮಗಳಿದ್ದರೆ ಬಿಸಿಲಿಗೆ ಹೆದರಿ ಕುಳಿತುಕೊಳ್ಳುವಹಾಗೇ ಇಲ್ಲ. ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡು ಜನ ಸಂಪ್ರದಾಯಗಳನ್ನು ಪಾಲಿಸುತ್ತಲೇ ಇರುತ್ತಾರೆ. ಇದಕ್ಕೆ ಈ ಮದುವೆಯ ವಿಡಿಯೋವೇ ಸಾಕ್ಷಿ.

Wedding Procession Makes Portable Sun Shade to Beat the Heatwave, Jugaad video goes viral

ಈ ಸುಡು ಬಿಸಿಲಿಗೆ ಬೆವರಿನ ಕಿರಿಕಿರಿಗೆ ಹತ್ತಿ ಬಟ್ಟೆ ಧರಿಸಿ ಫ್ಯಾನ್ ಹಾಕಿಕೊಂಡು ಕುಂತರೆ ಬರೀ ಬಿಸಿ ಗಾಳಿ ಹೊರಹೊಮ್ಮುತ್ತದೆ. ಅಂಥದ್ರಲ್ಲಿ ಮನೆಯಲ್ಲಿ ಮದುವೆಯಂತಹ ಕಾರ್ಯಕ್ರಮಗಳಿದ್ರೆ ಮುಗಿತು ಕಥೆ. ಯಾವುದೇ ನೆಪವಿಲ್ಲದೆ ಮದುವೆ ಮನೆಗೆ ತಕ್ಕಂತೆ ಉಡುಪುಗಳನ್ನ ಧರಿಸಬೇಕು. ಜೊತೆಗೆ ಮೆರವಣಿಗೆಯಂತಹ ಸಂಪ್ರದಾಯಗಳಲ್ಲೂ ಪಾಲ್ಗೊಳ್ಳಬೇಕು. ಹೀಗಿರುವಾಗ ಚೆನ್ನಾಗಿ ಅಲಂಕಾರಗೊಂಡು ಬಿರು ಬಿಸಿಲಿಗೆ ಹೋದ್ರೆ ಮದುವೆಗೆ ಬಂದ ಜನ ಒಂದು ಕಡೆ ಇರಲಿ ಮಧು-ವರರ ಪರಿಸ್ಥಿತಿ ಏನಾಗಬೇಡ. ಹೀಗಾಗಿ ಇಲ್ಲೊಂದು ಮದುವೆ ಮೆರವಣಿಗೆಯಲ್ಲಿ ಮೊಬೈಲ್ ಸನ್‌ಶೇಡ್ ವ್ಯವಸ್ಥೆ ಮಾಡಲಾಗಿದೆ. ವಧು ಮೊಬೈಲ್ ಸನ್‌ಶೇಡ್ ನಲ್ಲಿ ಕುದುರೆ ಮೇಲೆ ಕುಳಿತು ಹೊರಟರೆ, ಉಳಿದವರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Wedding Procession Makes Portable Sun Shade to Beat the Heatwave, Jugaad video goes viral

ಈ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೆರವಣಿಗೆಯಲ್ಲಿ ಮೊಬೈಲ್ ಸನ್‌ಶೇಡ್ ನಲ್ಲಿ ನೆರೆದ ಜನ ಡೋಲು ನೃತ್ಯ ಅಂತ ಎಂಜಾಯ್ ಮಾಡುವುದನ್ನು ಕಾಣಬಹುದು. ಮೊಬೈಲ್ ಸನ್‌ಶೇಡ್ ವ್ಯವಸ್ಥೆಯಲ್ಲಿ ನಾಲ್ಕು ದಿಕ್ಕಿನಲ್ಲಿ ಟೆಂಟ್ ಕಂಬಕ್ಕೆ ಚಕ್ರವನ್ನು ಅಳವಡಿಸಿ ಅದನ್ನು ನಾಲ್ಕು ಜನ ಮೆರವಣಿಗೆ ಹೋದಂತೆ ತಳ್ಳಿಕೊಂಡು ಹೋಗುತ್ತಾರೆ. ಈ ವಿಡಿಯೋವನ್ನು ದಿವ್ಯಾನಿ ಕೋಹ್ಲಿ ಎಂಬುವವರು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಲೈಕ್ಸ್ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+