• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳದಿಂದ ಸೂರ್ಯಗ್ರಹಣ: ಪುಟ್ಟ ಚಂದ್ರ ಹಾದುಹೋಗುವ ಅಪರೂಪದ ವಿಡಿಯೋ

|
Google Oneindia Kannada News

ನವದೆಹಲಿ, ಏ. 21: ಮಂಗಳ ಗ್ರಹದಿಂದ ಕಾಣುವ ಸೂರ್ಯಗ್ರಹಣ (Solar Eclipse from Mars) ಮತ್ತೊಂದು ದೃಶ್ಯ ಇದೀಗ ಲಭಿಸಿದೆ. ನಾಸಾದ ಪರ್ಸಿವಿಯರೆನ್ಸ್ ಮಾರ್ಸ್ ರೋವರ್ ನೌಕೆ (Perseverance Mars Rover) ಮಂಗಳ ಗ್ರಹದಿಂದ ಸೂರ್ಯಗ್ರಹಣದ ದೃಶ್ಯವನ್ನು ಸೆರೆಹಿಡಿದು ಭೂಮಿಗೆ ಕಳುಹಿಸಿದೆ. ಹಿಂದೆ ಹಲವಾರು ವರ್ಷಗಳಿಂದ ನಾಸಾದ ಗಗನನೌಕೆಗಳು ಸೂರ್ಯಗ್ರಹಣದ ದೃಶ್ಯಗಳನ್ನ ಕ್ಯಾಪ್ಚರ್ ಮಾಡಿ ಕಳುಹಿಸಿರುವುದುಂಟು. ಅದರೆ, ಪರ್ಸಿವಿಯರೆನ್ಸ್ ರೋವರ್ ಕಳುಹಿಸಿರುವ ಈ ಲೇಟೆಸ್ಟ್ ವಿಡಿಯೋ ಬಹಳ ಅಮೋಘವಾಗಿದೆ. ಅತ್ಯಾಧುನಿಕ ಮತ್ತು ಅತ್ಯುತ್ತಮ ಗುಣಮಟ್ಟದ ಹೈ ರೆಸಲ್ಯೂಷನ್ ಇರುವ ವಿಡಿಯೋ ಇದಾಗಿದ್ದು, ನೋಡಲು ರಮಣೀಯವಾಗಿದೆ.

ಏನಿದು ಮಂಗಳ ಗ್ರಹದಲ್ಲಿ ಸೂರ್ಯಗ್ರಹಣ:
ಭೂಮಿಯಲ್ಲಿ ಸೂರ್ಯಗ್ರಹಣ ಆದಾಗ ಸೂರ್ಯ ಮತ್ತು ಭೂಮಿ ಮಧ್ಯೆ ಚಂದ್ರ ಹಾದು ಹೋಗುತ್ತದೆ. ಆಗ ಸೂರ್ಯ ಒಂದಷ್ಟು ಕಾಲ ಮರೆಯಾದಂತೆ ಕಾಣುತ್ತದೆ. ಅದೇ ರೀತಿ ಮಂಗಳ ಗ್ರಹದಲ್ಲಿ ನಿಂತಾಗಲೂ ಅಲ್ಲಿ ಆಗಾಗ ಸೂರ್ಯಗ್ರಹಣ ಆಗುತ್ತಿರುತ್ತದೆ. ಮಂಗಳಕ್ಕೆ ಎರಡು ಚಂದ್ರ (ಉಪಗ್ರಹ) ಇದೆ. ಫೋಬೋಸ್ (Phobos) ಮತ್ತು ಡೇಮೋಸ್ (Deivos). ಇದೀಗ ಮಂಗಳ ಗ್ರಹ ಮತ್ತು ಸೂರ್ಯನ ಮಧ್ಯೆ ಪೋಬೋಸ್ ಚಂದ್ರ ಹಾದುಹೋದ ದೃಶ್ಯವನ್ನು ಮಂಗಳ ಗ್ರಹದಿಂದ ನಾಸಾದ ಗಗನನೌಕೆಯ ಕ್ಯಾಮೆರಾ ಸೆರೆಹಿಡಿದಿದೆ.

ಮಂಗಳ ಗ್ರಹದ ಮೇಲೂ ಕಲ್ಲು, ಮಣ್ಣು ಹುಡುಕುತ್ತಿರುವ ಅಮೆರಿಕ!ಮಂಗಳ ಗ್ರಹದ ಮೇಲೂ ಕಲ್ಲು, ಮಣ್ಣು ಹುಡುಕುತ್ತಿರುವ ಅಮೆರಿಕ!

ಈ ಗ್ರಹಣ 40 ಸೆಕೆಂಡ್ ಕಾಲ ಇದೆ. ಭೂಮಿಯಲ್ಲಿ ನಡೆಯುವ ಸೂರ್ಯಗ್ರಹದ ಕಾಲಕ್ಕಿಂತ ಇದು ಬಹಳ ಕಡಿಮೆ. ಇದಕ್ಕೆ ಕಾರಣ ಮಂಗಳನ ಚಂದ್ರ ಫೋಬೋಸ್ ಭೂಮಿಯ ಚಂದ್ರನಿಗಿಂತ 157 ಪಟ್ಟು ಚಿಕ್ಕದಾಗಿರುವುದು. ಇನ್ನು, ಮಂಗಳನ ಇನ್ನೊಂದು ಉಪಗ್ರಹ ಅಥವಾ ಚಂದ್ರ ಡೇಮೋಸ್ ಇನ್ನೂ ಚಿಕ್ಕದಿದೆ.

ನಾಸಾದ ಪರ್ಸಿವಿಯರೆನ್ಸ್ ಮಾರ್ಸ್ ರೋವರ್ ನೌಕೆ ಕಳುಹಿಸಿರುವ ವಿಡಿಯೋದಲ್ಲಿ ಸೂರ್ಯನ ಮೇಲೆ ಆಲೂಗಡ್ಡೆಯ ನೆರಳು ಹಾದುಹೋದಂತೆ ಕಾಣಿಸುತ್ತದೆ. ಅದಕ್ಕೆ ಕಾರಣ ಫೋಬೋಸ್‌ನ ಆಕಾರ. ಇದು ಹೆಚ್ಚೂಕಡಿಮೆ ಆಲೂಗಡ್ಡೆಯ ಆಕಾರದಲ್ಲಿ ಇದೆ.

ನಾಸಾ ನೌಕೆಯ ಅದ್ಭುತ ಕ್ಯಾಮೆರಾ:
2004ರಿಂದಲೇ ನಾಸಾದ ಬೇರೆ ಬೇರೆ ನೌಕೆಗಳು ಮಂಗಳ ಗ್ರಹದಿಂದ ಕಾಣಿಸುವ ವಿವಿಧ ದೃಶ್ಯ ಮತ್ತು ಫೋಟೋಗಳನ್ನ ಭೂಮಿಗೆ ಕಳುಹಿಸುತ್ತಲೇ ಬಂದಿದೆ. ಆಗ ಸ್ಪಿರಿಟ್ (Spirit) ಮತ್ತು ಆಪೋರ್ಚೂನಿಟಿ (Opportunity) ಎಂಬ ರೋವರ್‌ಗಳು ಫೋಬೋಸ್‌ನಿಂದ ಆದ ಸೂರ್ಯಗ್ರಹಣದ ಫೋಟೋಗಳನ್ನ ಕಳುಹಿಸಿದ್ದವು.

 ಬಾಹ್ಯಾಕಾಶ ಲೋಕದ ಅಚ್ಚರಿ..! ಮಂಗಳ ಗ್ರಹಕ್ಕಿಂತ ಶುಕ್ರಗ್ರಹ ವಯಸ್ಸಿನಲ್ಲಿ ಚಿಕ್ಕದು..! ಬಾಹ್ಯಾಕಾಶ ಲೋಕದ ಅಚ್ಚರಿ..! ಮಂಗಳ ಗ್ರಹಕ್ಕಿಂತ ಶುಕ್ರಗ್ರಹ ವಯಸ್ಸಿನಲ್ಲಿ ಚಿಕ್ಕದು..!

ಈಗ ವಿಡಿಯೋ ಕಳುಹಿಸಿರುವ ಪರ್ಸಿವಿಯರೆನ್ಸ್ ರೋವರ್ ಕಳೆದ ವರ್ಷ (2021) ಫೆಬ್ರವರಿಯಲ್ಲಿ ಮಂಗಳ ಗ್ರಹ ತಲುಪಿದೆ. ಈ ನೌಕೆಯಲ್ಲಿ ಮಾಸ್ಟ್‌ಕ್ಯಾಮ್-ಝಡ್ (MastCam-Z) ಎಂಬ ಹೊಸ ತಲೆಮಾರಿನ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಹೀಗಾಗಿ ಇದು ಸೆರೆಹಿಡಿಯುವ ದೃಶ್ಯಗಳು ಬಹಳ ಹೈ ರೆಸಲ್ಯೂಷನ್‌ನಿಂದ ಕೂಡಿರುತ್ತವೆ.

ಮಂಗಳನ ಮೇಲೆ ಫೋಬೋಸ್ ಪ್ರಭಾವ:
ಫೋಬೋಸ್‌ನ ಗುರುತ್ವ ಶಕ್ತಿಯಿಂದ ಮಂಗಳ ಗ್ರಹದ ಒಳಗಿನ ರಚನೆಯಲ್ಲಿ ಒಂದಷ್ಟು ವಿಕಾರ ಆಗುತ್ತಿರುತ್ತದೆ. ಹಾಗೆಯೇ, ಫೋಬೋಸ್‌ನ ಕಕ್ಷೆ ಕೂಡ ನಿಧಾನವಾಗಿ ಬದಲಾಗುತ್ತಾ ಹೋಗುತ್ತಿರುತ್ತದೆ.

ಫೋಬೋಸ್ ಆತ್ಮಹತ್ಯೆ ಹಾದಿ:
ಸದ್ಯ ನಾಸಾದವರು ಪತ್ತೆ ಹಚ್ಚಿರುವ ಒಂದು ಅಂಶ ಎಂದರೆ ಮಂಗಳನ ಎರಡು ಉಪಗ್ರಹಗಳಲ್ಲಿ ಒಂದಾಗಿರುವ ಫೋಬೋಸ್ ಆತ್ಮಹತ್ಯೆಯ ಹಾದಿಯಲ್ಲಿದೆಯಂತೆ. ಫೋಬೋಸ್‌ನ ಕಕ್ಷೆ (Orbit) ಬದಲಾಗುತ್ತಿದ್ದು ಅದು ಮಂಗಳ ಗ್ರಹಕ್ಕೆ ಸಮೀಪ ಹೋಗುತ್ತಿದೆ. ಮುಂದೊಂದು ಕಾಲದಲ್ಲಿ ಮಂಗಳ ಗ್ರಹಕ್ಕೆ ಫೋಬೋಸ್ ಅಪ್ಪಳಿಸುವುದು ಖಚಿತ. ಆದರೆ, ಸದ್ಯದಲ್ಲಿ ಅಲ್ಲ, ಕೋಟ್ಯಂತರ ವರ್ಷಗಳ ಬಳಿ ನಡೆಯುವ ಮಹಾಘಟನೆ ಇದು.

ಹಾಗೆಯೇ, ಫೋಬೋಸ್ ಮಂಗಳ ಗ್ರಹಕ್ಕೆ ಸಮೀಪ ಹೋಗುತ್ತಿರುವ ಸಂಗತಿಯನ್ನ ಹಲವು ವರ್ಷಗಳ ಅಧ್ಯಯನದಿಂದ ನಾಸಾ ಕಂಡುಕೊಂಡಿದೆ. ಎರಡು ದಶಕಗಳಿಂದ ಸೂರ್ಯಗ್ರಹಣಗಳನ್ನ ಅಧ್ಯಯನ ನಡೆಸಿರುವ ನಾಸಾಗೆ ಫೋಬೋಸ್ ಮುಂದಿನ ಭವಿಷ್ಯ ಏನಿರಬಹುದು ಎಂದು ನಿಖರವಾಗಿ ಅಂದಾಜಿಸಲು ಸಾಧ್ಯವಾಗುವ ಹಲವು ಸುಳಿವುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.

ನಾಸಾದ ಪರ್ಸಿವಿಯರೆನ್ಸ್ ರೋವರ್ ನೌಕೆಯ ಬೇರೆ ಉದ್ದೇಶಗಳು:
ಪರ್ಸಿವಿಯರೆನ್ಸ್ ರೋವರ್ ನೌಕೆ ಮಂಗಳ ಗ್ರಹದ ಅಧ್ಯಯನಕ್ಕೆ ಬದ್ಧವಾಗಿದೆ. ಅಲ್ಲಿ ಪ್ರಾಚೀನವಾಗಿರುವ ಸೂಕ್ಷ್ಮಾಣು ಜೀವಿಗಳು (Ancient Microbial Life) ಅಸ್ತಿತ್ವದಲ್ಲಿದ್ದವೇ ಅಥವಾ ಈಗ ಇವೆಯೇ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
NASA’s Perseverance Mars rover has captured dramatic footage of Phobos, Mars’ potato-shaped moon, crossing the face of the Sun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X