Video Viral: ಅನಿರೀಕ್ಷಿತ ಚುನಾವಣಾ ಫಲಿತಾಂಶ: ಟಿವಿ ಒಡೆದ RHP ಅಧ್ಯಕ್ಷ: ನೆಟ್ಟಿಗರು ಹೇಳಿದ್ದೇನು?
ಬೆಂಗಳೂರು, ಜೂನ್ 05: ದೇಶದಲ್ಲಿ 18 ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಈ ವೇಳೆ ನಿರೀಕ್ಷಿತ ಫಲಿತಾಂಶ ಬಾರದ್ದಕ್ಕೆ ಕೆಲವೆಡೆ ಅಭಿಮಾನಿಗಳಿಗೆ ಹೃದಯಾಘಾತವಾಗಿದೆ. ವಿಲಕ್ಷಣ ಘಟನೆಗಳು ನಡೆದಿವೆ. ಇದೇ ವೇಳೆ ರಾಷ್ಟ್ರೀಯ ಹಿಂದೂ ಪರಿಷತ್ (RHP) ಅಧ್ಯಕ್ಷ ಗೋವಿಂದ್ ಪರಾಶರ ಟಿವಿ ಒಡೆದು ಹಾಕಿರುವ ಘಟನೆ ನಡೆದಿದೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.
ಎಲ್ಲಾ ಚುನಾವಣಾ ಪೂರ್ವ ಬಿಜೆಪಿ ನಾಯಕರು 300ಕ್ಕೂ ಹೆಚ್ಚು ಸ್ಥಾನ, 400 ಸ್ಥಾನ ಗಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿದರು. ಆದರೆ ವಾಸ್ತವವಾಗಿ BJP ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಕ್ಕೆ ಸದರಿ ಲೋಕಸಭೆ ಚುನಾವಣೆಯಲ್ಲಿ ಕೇವಲ 292 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕಾಂಗ್ರೆಸ್ ನೇತೃತ್ವದ ಇಂಡಿಯಾಗೆ 233 ಸೀಟುಗಳು ಧಕ್ಕಿವೆ. ಈ ಮೂಲಕ ಎನ್‌ಡಿಗೆ ಬಹುಮತದ 272 ಕ್ಷೇತ್ರಗಳನ್ನು ತಲುಪಿಲ್ಲ ಎಂಬ ಕಾರಣಕ್ಕೆ ರಾಷ್ಟ್ರೀಯ ಹಿಂದೂ ಪರಿಷತ್ (RHP) ಅಧ್ಯಕ್ಷ ಗೋವಿಂದ್ ಪರಾಶರ್ ಅವರು ಟಿವಿ ಒಡೆದಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಬಿಜೆಪಿ ಸ್ಪಷ್ಟ ಬಹುಮತ 272 ಸಾಧಿಸುವಲ್ಲಿ ವಿಫಲವಾಗಿದ್ದಕ್ಕೆ ಬಿಜೆಪಿ ಅಭಿಮಾನಿಗಳು ಉತ್ಸಾಹ ಕಳೆದುಕೊಂಡರು. ಬೇಸರ ವ್ಯಕ್ತಪಡಿಸಿದರು. ಮತ ಎಣಿಕೆ ನೋಡುವಾಗ ಬಿಜೆಪಿ ಹಿನ್ನಡೆ ನೋಡಿ ಅವರು ಟಿವಿಯನ್ನು ಎತ್ತಿಕೊಂಡು ನೋಡ ನೋಡುತ್ತಿದ್ದಂತೆ ನೆಲಕ್ಕೆ ಒಗೆದು ಒಡೆದು ಹಾಕಿದರು. ಕಾಲಿನಿಂದ ಒದ್ದು ಒಡೆದು ಹಾಕಿದರು. ಈ ವಿಡಿಯೋ ವೈರಲ್ ಆಗಿದೆ.
RHP ರಾಷ್ಟ್ರೀಯ ಅಧ್ಯಕ್ಷರು ಮತ-ಎಣಿಕೆ ವೀಕ್ಷಿಸುತ್ತಿರುವುದು ಮತ್ತು ಟಿವಿ ಒಡೆದು ಹಾಕುವ 24-ಸೆಕೆಂಡ್‌ಗಳ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ಅದರಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಇದೆ.
ಇದು ಎಡಿಟೆಡ್ ವಿಡಿಯೋನಾ? ನೆಟ್ಟಿಗರು ಏನಂದ್ರು?
ಎಲ್‌ಇಡಿ ಟಿವಿ ಒಡೆದು ಹಾಕುವುದು ಅವರ ಕೋಪ ತೋರಿಸುತ್ತದೆ. ಇದು ನಡೆದಿದ್ದರೂ ನಡೆದಿರಬಹುದು. ಆದರೆ ಒಂದೊಮ್ಮೆ ವಿಡಿಯೋ ನೋಡಿದರೆ, ಇದು ಎಡಿಟೆಲ್ ವಿಡಿಯೋ ಎಂದನಿಸುತ್ತದೆ ಅಂತಲೂ ಕೆಲವು ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ ನೋಡಿದ ಸಾಮಾಜಿಕ ಬಳಕೆದಾರರು ಪರಾಶರ್ ಅವರು ಟಿವಿಯನ್ನು ಕೈ ಹಿಡಿದಿರುವುದು ಬೇರೆ, ನಂತರ ಅವರು ಒಡೆದು ಹಾಕಿರುವುದು ಬೇರೆ ಎಂದು ಅಭಿಪ್ರಾಯಟ್ಟಿದ್ದಾರೆ. ವಿಡಿಯೋದಲ್ಲಿನ ಪುನರಾವರ್ತನೆ ಗಮನಿಸಿದರೆ ಇದು ಸಾಮಾನ್ಯ ಎಂಬಂತೆ ಕಾಣಿಸುತ್ತಿಲ್ಲ ಎಂದಿದ್ದಾರೆ. ಇನ್ನೂ ಕೆಲವು ಚುನಾವಣೆ ಸಮಯದಲ್ಲಿ ಅಭಿಮಾನಿಗಳು ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಪಡೆಯದಿದ್ದಾರೆ. ಇಂತಹ ಘಟನೆಗಳು ನಡೆಯುವುದು ಸಾಮಾನ್ಯ ಅಂತಲೂ ಹೇಳುವ ಮೂಲಕ ವಿಡಿಯೋ ನೈಜವೆಂದು ನಂಬಿದ್ದಾರೆ.
Govind Parashar, president of Rashtriya Hindu Parishad, broke his TV over election results in Agra, UP. pic.twitter.com/cIQMtAb04V
— Piyush Rai (@Benarasiyaa) June 4, 2024
ಬಿಜೆಪಿ ಕಡಿಮೆ ಸೀಟು: ಹೃದಯಾಘಾತದಿಂದ ನಿಧನ
ಎನ್‌ಡಿಎಗೆ ಕಡಿಮೆ ಸ್ಥಾನ ಬಂದಿದ್ದಕ್ಕೆ ಹೀಗೆ ಮತ ಎಣಿಕೆಯನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಿವಾಸಿ ಶಿವಪ್ರಕಾಶ್ ಹಿರೇಮಠ್ ಎಂಬುವವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎನ್‌ಡಿಎಗೆ ಹೆಚ್ಚು ಸ್ಥಾನ ಬಂದಿಲ್ಲ, ಹಾಗೆಂದ ಮಾತ್ರಕ್ಕೆ ಸೋತಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಲು ಸಿದ್ಧವಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆಂಧ್ರ ಪ್ರದೇಶದ ವಿರೋಧ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಅವರು ಮಾಜಿ ಉಪ ಪ್ರಧಾನಿ ಸ್ಥಾನ ಅಲಂಕರಿಸಲಿದ್ದಾರೆ.












Click it and Unblock the Notifications