Viral Video: ದೆಹಲಿಯ ಗರಿಷ್ಠ ಶಾಖಕ್ಕೆ ಸಿಂಟ್ಯಾಕ್ಸ್ ನೀರು ಕೊತ..ಕೊತ..! ಚರ್ಚೆಗೆ ಕಾರಣವಾದ ವಿಡಿಯೋ
ನವದೆಹಲಿ, ಜೂನ್ 04: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಸಿ ಗಾಳಿಯ ಆರ್ಭಟ ಮುಂದುವರಿದಿದೆ. ಇಲ್ಲಿನ ಶಾಖದ ಅಲೆಗೆ ಜನ ತತ್ತರಿಸಿದ್ದಾರೆ. ಇದೀಗ ದೆಹಲಿ ಬಿಸಿಲಿನ ಕಾವಿಗೆ ಸಿಂಟ್ಯಾಕ್ಸ್ ನಲ್ಲಿ ತುಂಬಿರುವ ನೀರು ಕೊತ ಕೊತ ಕುದಿಯುವ ವಿಡಿಯೋ ವೈರಲ್ ಆಗಿದೆ.
ಹಲವು ದಿನಗಳಿಂದ ದೆಹಲಿಯು ತೀವ್ರ ಬಿಸಿಗಾಳಿಯಿಂದ ತತ್ತರಿಸಿದೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನವು 44 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಮುಂದಿನ 24 ಗಂಟೆಯಲ್ಲಿ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ನವದೆಹಲಿಯು ಈ ಹಿಂದೆ ಶಾಖದ ಅಲೆ ವಿಚಾರವಾಗಿ ರೆಡ್ ಅಲರ್ಟ್ ಪಡೆದಿತ್ತು. ದೆಹಲಿಯ ಕೆಲವಡೆ ಗರಿಷ್ಠ ತಾಪಮಾನವು 52 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇಂತಹ ಶಾಖದ ಅಲೆಗೆ 'ದೆಹಲಿಯಲ್ಲಿನ ಶಾಖವು ನೀರನ್ನು ಕುದಿಸುತ್ತಿದೆ' ಎಂಬ ಶೀರ್ಷಿಕೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಸಿಲಿಗೆ ಕುದ್ದ ನೀರು: ವಿಡಿಯೋದಲ್ಲಿ ಏನಿದೆ?
ಈ ವಿಡಯೋ ಅನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಜೂನ್ 1 ರಂದು ವೀಡಿಯೋ ಹಂಚಿಕೊಳ್ಳಲಾಗಿದೆ. ಸಿಂಟ್ಯಾಕ್ಸ್‌ನಲ್ಲಿ ತುಂಬಿರುವ ನೀರು ಬಿಸಿಲಿನ ಶಾಖಕ್ಕೆ ಪಳ ಪಳ ಕುದಿಯುತ್ತಿರುವ, ನೀರಿನ ಮೇಲೆ ಕುದಿಯುವ ನೀರಿನ ಗುಳ್ಳೆಗಳು ಹೊರಬರುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಆದರೆ ವಾಸ್ತವದಲ್ಲಿ ಈ ನೀರಿನ ಟ್ಯಾಂಕರ್ ನಲ್ಲಿ ನೀರು ಪೂರೈಕೆಯ ಒತ್ತಡದಿಂದ ಗುಳ್ಳೆಗಳು ಬಿದ್ದಿರಬಹುದು. ಬಿಸಿಲಿಗೆ ನೀರು ಕಾಯುತ್ತಿಲ್ಲ ಅಂತಲೂ ಹೇಳಲಾಗಿದೆ. ವಿಜ್ಞಾನಗಳಿಗೆ ಸವಾಲು ರೀತಿಯಲ್ಲಿದ್ದು, ಇದೊಂದು ವಿಲಕ್ಷಣ ವೀಡಿಯೊ ಎಂದು ಕೆಲವು ಭಾವಿಸಿದ್ದಾರೆ. ಈ ಪೋಸ್ಟ್ ಈವರೆಗೆ 81.47 ವೀಕ್ಷಣೆ ಕಂಡಿದೆ. ಬರೋಬ್ಬರಿ 89,000 ಲೈಕ್ಸ್‌ಗಳು ಬಂದಿವೆ.
Heat in Delhi is making water boil.🥵 pic.twitter.com/IUErkhHjW8
— Tathvam-asi (@ssaratht) June 1, 2024
ಜಾಲತಾಣದಲ್ಲಿ ವಿಡಿಯೋ ಬಗ್ಗೆ ವೈಜ್ಞಾನಿಕ ಚರ್ಚೆ
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ಇದು ಬಿಸಿಲಿನಿಂದ ಸುಡುತ್ತಿರುವ ನೀರಲ್ಲ. ಟ್ಯಾಂಕ್ ಒಳಗೆ ಸಂಪರ್ಕಗೊಂಡಿರುವ ಟ್ಯಾಪ್‌ನಿಂದ ನೀರು ಉಕ್ಕಿ ಹರಿಯುತ್ತಿದೆ. ಹೊರಗಿನಿಂದ ನೋಡುವಾಗ ಈ ಬಿಳಿ ಸಿಂಟ್ಯಾಕ್ಸ್ ನಲ್ಲಿ ನೀರು ಬಿಸಿಲಿಗೆ ಕುದಿಯುವಂತೆ ಕಾಣುತ್ತಿದೆ. ನೀರು ಸುಮಾರು 100 ಡಿಗ್ರಿ ಸೆಲ್ಸಿಯಸ್ ಶಾಖಕ್ಕೆ ಕುದಿಯುತ್ತದೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು 'ಅಬ್ಕಿ ಬಾರ್ 50 ಪಾರ್' ಎಂದು ತಾಪಮಾನ ಕುರಿತು ಬರೆದಿದ್ದಾರೆ. ಇಷ್ಟು ಬಿಸಲಿಗೆ ನೀರು ಈ ಮಟ್ಟಕ್ಕೆ ಕುದಿಯುವುದಿಲ್ಲ. ಇದನ್ನು ನಂಬಬೇಡಿ. ನೀರು ಕುದಿಯಲು ಗರಿಷ್ಠ 100 ° C ಬೇಕಾಗುತ್ತದೆ ಎಂದು ನಾನು ನಂಬಿದ್ದೇನೆ ಎಂದರು.
ಸದ್ಯ ದೆಹಲಿಯಲ್ಲಿನ ತಾಪಮಾನ ಹೆಚ್ಚಾಗಿರುವ ಕಾರಣ ಬಿಸಿ ಶಾಖದ ಅಲೆ ಬಗ್ಗೆ ಏನೇ ಹೇಳಿದರೂ ನಂಬುವ ವಾತಾವರಣ ಇದೆ. ಇದೇ ಕಾರಣಕ್ಕೆ ವೈರಲ್ ಆದ ವಿಡಿಯೋ ಹೆಚ್ಚು ಸದ್ದು ಮಾಡುತ್ತಿದೆ.












Click it and Unblock the Notifications