ವಿಡಿಯೊ: ಬೆಂಕಿಯನ್ನೇ ತಿನ್ನುವ ಅಗ್ನಿ ಪ್ರೇಮಿ
ಡೆಹ್ರಾಡೂನ್ ಮೇ 25: ಬೆಂಕಿಯೊಂದಿಗೆ ಸರಸ ಬೇಡ ಎನ್ನುವ ಮಾತು ಜನಜನಿತವಾಗಿದ್ದರೂ ಇಲ್ಲೊಬ್ಬ ವ್ಯಕ್ತಿ ಬೆಂಕಿಯನ್ನು ಸುಲಭ ಹಾಗೂ ಸರಳವಾಗಿ ಆಹಾರ ಸೇವಿಸುವಂತೆ ತಿನ್ನುತ್ತಾನೆ. ನೀವು ಇಂತಹ ವ್ಯಕ್ತಿಯನ್ನು ಎಲ್ಲಾದರೂ ನೋಡಿರುವುದು ಉಂಟೆ? ಬೆಂಕಿಯೊಂದಿಗೆ ಕಟ್ಟಿಗೆಯನ್ನು ತಿನ್ನುವುದು ಈತನ ಹವ್ಯಾಸ. ಹೌದು, ಈ ವ್ಯಕ್ತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಅನೇಕ ಜನರು ಈತನನ್ನು "ಬೆಂಕಿ ತಿನ್ನುವ ಮನುಷ್ಯ" ಎಂದು ಕರೆಯುತ್ತಾರೆ. ಭೂಮಿಯ ಮೇಲೆ ಯಾರು ಬೆಂಕಿಯನ್ನು ತಿನ್ನಲು ಬಯಸುವುದಿರಲಿ ಅದರ ಹತ್ತಿರ ಸುಳಿಯಲು ಯೋಚಿಸುತ್ತಾರೆ. ಹೀಗಿರುವಾಗ ಈತ ಉರಿಯನ್ನು ಬಾಯಲ್ಲಿಟ್ಟುಕೊಂಡು ತಿನ್ನುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

'ಕಲ್ಲಿದ್ದಲು ಬಿಕ್ಕಟ್ಟಿಗೆ ಇವರೇ ಕಾರಣ'
ಈ ವ್ಯಕ್ತಿಯನ್ನು ನೋಡಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ತಾಸ್ಪದವಾಗಿ ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಹೋಗೊಬ್ಬ ವ್ಯಕ್ತಿ, "ಕಲ್ಲಿದ್ದಲು ಬಿಕ್ಕಟ್ಟು ಮತ್ತು ವಿದ್ಯುತ್ ಸಿಗದಕ್ಕೆ ಕಾರಣ ಈ ವ್ಯಕ್ತಿಯೇ, ಈತನನ್ನು ಇಂಟರ್ನೆಟ್ನಲ್ಲಿ ಹುಡುಕುವುದು ಕಷ್ಟ...!"ಎಂದು ಬರೆದಿದ್ದಾರೆ. ಜೊತೆಗೆ ಅದೇ ಸಮಯಕ್ಕೆ ಮತ್ತೊಬ್ಬರು, "ಇವರಿಗೆ ಆಧಾರ್ ಕಾರ್ಡ್ ಕೇಳಬೇಕು, ಅಷ್ಟಕ್ಕೂ ಇವರು ಯಾರು?" ಎಂದು ಬರೆದಿದ್ದಾರೆ.

ಅಗ್ನಿ ದೇವತೆ ಸಿಕ್ಕ ಮನುಷ್ಯ
ಈ ವೀಡಿಯೋವನ್ನು ನೋಡಿದ ಬಲುದ್ದೀನ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ "ಈ ಮನುಷ್ಯನೊಳಗೆ ಆತ್ಮವಿದೆ" ಎಂದು ಬರೆದಿದ್ದಾರೆ. ರಿಜ್ಜಿ ಹುಸೇನ್ ಎಂಬ ಬಳಕೆದಾರ, "ಸರ್ಕಾರ ಇವರ ಪಡಿತರ ಚೀಟಿಯನ್ನು ಮುಟ್ಟುಗೋಲು ಹಾಕಿಕೊಂಡಂತೆ ತೋರುತ್ತಿದೆ" ಎಂದು ಬರೆದಿದ್ದಾರೆ. ಹರಿನಾರಾಯಣ ಗಾರ್ಗ್ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರ, "ಸಹೋದರರೇ..ಇವರಿಗೆ ಅಗ್ನಿ ದೇವತೆ ಸಿಕ್ಕಿದ್ದಾರೆ! ಮೋದಿ ಸರ್ಕಾರಕ್ಕೆ ನನ್ನ ವಿನಮ್ರ ವಿನಂತಿಯೆಂದರೆ ಅವರಿಗೆ ಅಗ್ನಿ ದೇವತಾ ಬಿರುದು ನೀಡಿ!" ಎಂದು ಬರೆದಿದ್ದಾರೆ.
|
'ಬಿಸಿ ಆಹಾರ ಆರೋಗ್ಯಕ್ಕೆ ಒಳ್ಳೆದು ಹಾಗಂತಾ..'
ಈ ವ್ಯಕ್ತಿ ಪರ್ವತ ಪ್ರದೇಶದವರು. ಆದರೆ, ಅವರ ವೈಯಕ್ತಿಕ ಗುರುತು ಇನ್ನೂ ಬಹಿರಂಗವಾಗಿಲ್ಲ. ಆದರೆ.. ಇದನ್ನು ನೋಡಿದ ಜನ ಅಚ್ಚರಿಗೊಂಡಿದ್ದಾರೆ. ಬಳಕೆದಾರ ತಾಮ್ರಕರ್ ಬಿಜೇಂದ್ರ ಅವರು ಪ್ರತಿಕ್ರಿಯಿಸಿ, 'ಓಹ್ ಸಹೋದರ, ತಾಜಾ ಮತ್ತು ಬಿಸಿಯಾದ ಆಹಾರವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನೀವು ಇದನ್ನು ಕಲಿಯಬಹುದೇ!" ಎಂದು ಪ್ರಶ್ನೆ ಮಾಡಿದ್ದಾರೆ. ಅಂತೆಯೇ ಇನ್ನೊಬ್ಬ ಬಳಕೆದಾರ "ಸಹೋದರ ವಿದ್ಯುತ್ ಸ್ಥಾವರದಲ್ಲಿ ಕೆಲಸ ಇದೆ ನೀವು ಬರುತ್ತೀರಾ?" ಎಂದು ಕೇಳಿದ್ದಾರೆ.

ವ್ಯಕ್ತಿ ವಿರುದ್ಧ ಕ್ರಮಕ್ಕೆ ಒತ್ತಾಯ
ಇವರನ್ನು ಉತ್ತರಾಖಂಡದವರು ಎಂದು ಹೇಳಲಾಗುತ್ತಿದೆ. ಆದರೆ ಇವರ ನಿಜವಾದ ಸ್ಥಳ ಇನ್ನೂ ಬಹಿರಂಗವಾಗಿಲ್ಲ. ಇವರ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜನ ಇವರು ಬೆಂಕಿ ತಿನ್ನುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಂತಹ ನಡುವಳಿಕೆಗಳು ಬೇರೆಯವರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಕೆಲವರು ಮನವಿ ಮಾಡಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications