ಮೀಟಿಂಗ್‌ನಲ್ಲಿ ಕೊಟ್ಟ ಕೇಕ್ ಅನ್ನು ಕದ್ದು ತಿಂದ ಇಲಿ: ದೃಶ್ಯ ಸೆರೆ
ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಅನೇಕ ವಿಡಿಯೋಗಳು ವೇಗವಾಗಿ ಜನರನ್ನು ತಲುಪುತ್ತವೆ. ಅಷ್ಟೇ ವೇಗವಾಗಿ ಜನರ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತವೆ. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಮೀಟಿಂಗ್ ವೇಳೆ ಟೇಬಲ್ ಮೇಲೆ ಇರಿಸಿದ ಕೇಕ್ ಅನ್ನು ಇಲಿಯೊಂದು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ನಾಲ್ಕೈದು ಜನ ಗಂಭೀರವಾಗಿ ಸಭೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಟೇಬಲ್ ಮೇಲೆ ಇರಿಸಿದ ಕೃತಕ ಹೂ ಗುಚ್ಚದಲ್ಲಿ ಕುಳಿತ ಇಲಿ ಅದರ ಪಕ್ಕ ಪ್ಲೇಟ್‌ನಲ್ಲಿ ಇರಿಸಲಾದ ಕೇಕ್‌ನ್ನು ತಿನ್ನುತ್ತದೆ. ಈ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಭಾರೀ ವೈರಲ್ ಆಗಿದೆ. ಕ್ಯಾಮೆರಾವನ್ನು ಜೂಮ್ ಮಾಡಿದಾಗ, ಅತಿಥಿಗಾಗಿ ಟೇಬಲ್ ಮೇಲೆ ಇಟ್ಟಿದ್ದ ಕೇಕ್ ಅನ್ನು ಇಲಿ ತಿನ್ನುವುದನ್ನು ಕಾಣಬಹುದು. ವಿಡಿಯೋವನ್ನು "ಸಭೆಯಲ್ಲಿ ಇಲಿ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
ಡಿಸೆಂಬರ್ 5 ರಂದು ಪೋಸ್ಟ್ ಮಾಡಲಾದ ವಿಡಿಯೊ ಟ್ವಿಟರ್‌ನಲ್ಲಿ 22,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹಲವಾರು ಲೈಕ್ಸ್ ಕೂಡ ಬಂದಿವೆ. ಇದನ್ನು ಕಂಡು ಹಲವರು ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು "ಇಲಿಯನ್ನೂ ಸಭೆಗೆ ಆಹ್ವಾನಿಸಲಾಗಿದೆ" ಎಂದು ತಮಾಷೆ ಮಾಡಿದ್ದಾರೆ. ವಿಡಿಯೊವನ್ನು ಕಂಡು ಬೇಸರಗೊಂಡ ಮತ್ತೊಬ್ಬರು "ಅಯ್ಯೋ" ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು, "ಇಲಿ ಸಮಾನವಾಗಿ ಭಾಗವಹಿಸುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಅದಾಗ್ಯೂ ಈ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಗಾಂಜಾ ತಿಂದ ಇಲಿ
ಈ ಹಿಂದೆ ಮಥುರಾ ಪೊಲೀಸರು ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ (1985) ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಶೇರ್ಗಢ್ ಮತ್ತು ಹೈವೇ ಪೊಲೀಸ್ ಠಾಣೆಯ ಗೋದಾಮುಗಳಲ್ಲಿ ಶೇಖರಿಸಿಡಲಾಗಿದ್ದ 5 ಸಾವಿರ ಕೆಜಿಗೂ ಹೆಚ್ಚು ಜಪ್ತಿ ಮಾಡಿದ ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಹೇಳಿತ್ತು.

ಶೇರ್ಗಢ್ ಮತ್ತು ಹೈವೇ ಠಾಣೆ ಪೊಲೀಸರು ಎರಡು ವಿಭಿನ್ನ ಪ್ರಕರಣಗಳಲ್ಲಿ 586 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ 586 ಕೆಜಿ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಕೇಳಿದ ನಂತರ ಪೊಲೀಸರು ಈ ಹೇಳಿಕೆ ನೀಡಿದ್ದರು.
Rat in the meeting... pic.twitter.com/I0cF6Lz8gZ
— Dr Arif Khawaja MDS (@DrArifKhawaja) December 5, 2022
"ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿದ ವಸ್ತುಗಳನ್ನು ಇಲಿಗಳಿಂದ ಉಳಿಸಲು ಯಾವುದೇ ಸ್ಥಳವಿಲ್ಲ. ಹೀಗಾಗಿ ಇಲಿಗಳು ತಿಂದು ನಾಶ ಮಾಡಿವೆ. ಉಳಿದ ಗಾಂಜಾವನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ" ಎಂದು ಪೊಲೀಸ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು.












Click it and Unblock the Notifications