• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: 'ಊ ಅಂಟವಾ ಮಾವಾ..' ಅಂದ ವಿದೇಶಿ ಹುಡುಗಿ

|
Google Oneindia Kannada News

ಕೆಲ ದಿನಗಳ ಹಿಂದೆ, ದಕ್ಷಿಣದ ಸೂಪರ್-ಹಿಟ್ ಚಲನಚಿತ್ರ 'ಪುಷ್ಪ: ದಿ ರೈಸ್' ಬಿಡುಗಡೆಯಾಯಿತು. ಇದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಚಿತ್ರದ ಕಥೆಯ ಜೊತೆಗೆ ಹಾಡುಗಳು ಕೂಡ ಪ್ರೇಕ್ಷಕರ ಮನ ಗೆದ್ದಿವೆ. ಅದರಲ್ಲೂ 'ಊ ಅಂಟವಾ' ಹಾಡನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಹಾಡಿನಲ್ಲಿ ಕಾಣಿಸಿಕೊಂಡ ನಟಿ ಸಮಂತಾ ರುತ್ ಪ್ರಭು ಕೂಡ ಪಡ್ಡ ಹುಡುಗರ ಮನ ಗೆದ್ದಿದ್ದಾರೆ. ಇಂದಿಗೂ ಜನರು ಈ ಸೂಪರ್ ಹಿಟ್ ಹಾಡನ್ನು ಇಷ್ಟಪಡುತ್ತಾರೆ. ಹೀಗಿರುವಾಗ ಡಚ್‌ನ ಖ್ಯಾತ ಗಾಯಕಿ ಎಮ್ಮಾ ಹೀಸ್ಟರ್ಸ್ ಇದೀಗ ಈ ಹಾಡಿಗೆ ಧ್ವನಿ ನೀಡಿದ್ದಾರೆ.

ಇತ್ತೀಚೆಗೆ, ಡಚ್ ಗಾಯಕಿ ಎಮ್ಮಾ ಹೀಸ್ಟರ್ಸ್ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು 'ಊ ಅಂಟವಾ' ಹಾಡನ್ನು ಹಾಡಿದ್ದಾರೆ. ಈಗ ಎಮ್ಮಾ ಅವರ ಈ ವಿಡಿಯೋ ಭಾರತದಲ್ಲಿ ಸಾಕಷ್ಟು ಜನಪ್ರೀಯತೆಯನ್ನು ಪಡೆದುಕೊಂಡಿದೆ. ಎಮ್ಮಾ ಈ ಹಾಡಿಗೆ ಧ್ವನಿ ನೀಡಿರುವ ರೀತಿಯನ್ನು ಕೇಳಿದ ಜನರು ಸಾಕಷ್ಟು ಆಶ್ಚರ್ಯಗೊಂಡಿದ್ದಾರೆ. ಏಕೆಂದರೆ ವಿದೇಶಿ ಗಾಯಕಿಯೊಬ್ಬಳು ಭಾರತೀಯ ಹಾಡನ್ನು ಇಷ್ಟು ಚೆನ್ನಾಗಿ ಹಾಡಿದ್ದಾಳೆ ಎಂದು ಕೋಮಡಾಡಿದ್ದಾರೆ. ಎಮ್ಮಾ ಅವರ ಈ ಹಾಡನ್ನು ನೀವು ಕೇಳಿದರೆ, ನೀವು ಮೂಲ ಗಾಯಕನ ಧ್ವನಿಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಈ ವಿಡಿಯೊ ಕಾಣಿಸಿಕೊಂಡಾಗ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್‌ಗಳ ಮೂಲಕ ಗಾಯಕನನ್ನು ಹೊಗಳಿದರು.

ಅಸ್ಸಾಂ ಜನರ ನೆಚ್ಚಿನ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿಅಸ್ಸಾಂ ಜನರ ನೆಚ್ಚಿನ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ

Video of Foreign Girl Singing Pushpa Song ‘Oo Antava’

ಬಾಹುಬಲಿ, ಕೆಜಿಎಫ್, ಸಿನಿಮಾಗಳ ನಂತರ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ 'ಪುಷ್ಪ' ಸಿನಿಮಾ ಬಿಡುಗಡೆ ಆಗಿ ನಿರೀಕ್ಷೆಯನ್ನು ಮುಟ್ಟಿದೆ. ಅಲ್ಲು ಅರ್ಜುನ್-ನಿರ್ದೇಶಕ ಸುಕುಮಾರ್ ಜೋಡಿಯ ಮೂರನೇ ಸಿನಿಮಾ ಇದು. ಈ ಸಿನಿಮಾ ರಕ್ತ ಚಂದನ ಕಳ್ಳಸಾಗಣೆ ಕುರಿತಾದದ್ದು. ಪುಷ್ಪರಾಜ್ ಅಲಿಯಾಸ್ ಪುಷ್ಪ ಪಾತ್ರ ಮಾಡಿರುವ ಅಲ್ಲು ಅರ್ಜುನ್ ಇಲ್ಲಿ ರಕ್ತ ಚಂದನ ಕಳ್ಳಸಾಗಣೆದಾರ. ಸಿನಿಮಾದ ಆರಂಭದಲ್ಲಿ ರಕ್ತ ಚಂದನದ ಕುರಿತು, ಅದರ ಕಳ್ಳ ಸಾಗಣೆ, ಪೊಲೀಸರ ದಾಳಿ, ಅದರಿಂದ ತಪ್ಪಿಸಿಕೊಳ್ಳುವುದು, ಮರ ಕಡಿವವರ ಗುಂಪು, ಅದರ ನಾಯಕ, ಮರ ಕಡಿವವರ ಕೂಲಿ, ರಕ್ತ ಚಂದನದ ಮಾರುಕಟ್ಟ ಮೌಲ್ಯ, ಅದು ದೊರಕುವ ಸ್ಥಳ ಇತ್ಯಾದಿ ಕೆಲವು ಮಾಹಿತಿಗಳನ್ನು ಸಿನಿಮಾದಲ್ಲಿ ನಿರ್ದೇಶಕರು ನೀಡಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮುಖ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ಸುನೀಲ್, ಧನಂಜಯ್ ಕೂಡ ವಿಲನ್ ಆಗಿ ಅಭಿನಯಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Dutch singer Emma Heister voices the song "Push: The Rice". The video is viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X