• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Veerendra Heggade : ಅಪ್ರತಿಮ ಧರ್ಮಸೇವಕ, ಸಮಾಜಸೇವಕ ವೀರೇಂದ್ರ ಹೆಗ್ಗಡೆ

|
Google Oneindia Kannada News

ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಧರ್ಮಾಧಿಕಾರಿಯಾಗಿರುವ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಭಕ್ತಿ, ಧರ್ಮಸೇವೆ ಮತ್ತು ಸಮಾಜಸೇವೆಗಳಿಂದ ಜನಜನಿತವಾಗಿದ್ದಾರೆ. ಶ್ರೀ ಕ್ಷೇತ್ರಕ್ಕೆ ಒಂದು ಭವ್ಯ ಕಳೆ ಮತ್ತು ಗೌರವ ತಂದುಕೊಟ್ಟ ಕೀರ್ತಿ ಅವರದ್ದು.

Recommended Video

   Veerendra Heggade ಯವರು ರಾಜ್ಯಸಭೆಗೆ ಪ್ರವೇಶಿಸುವ ಬಗ್ಗೆ ಬೊಮ್ಮಾಯಿ ಮಾತು | Politics | OneIndia Kannada

   ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡದ ಕನ್ನಡಿಗರು ಯಾರೂ ಇಲ್ಲ ಎಂದರೆ ಅತಿಶಯೋಕ್ತಿ ಎನಿಸಲಾರದು. ಬಹುತೇಕ ಭಕ್ತರಿಗೆ ಧರ್ಮಸ್ಥಳದ ಮಂಜುನಾಥ ಎಂದರೆ ಗಾಢವಾದ ಭಕ್ತಿ ಮತ್ತು ನಂಬಿಕೆ. ಹಾಗೆಯೇ, ಧರ್ಮಾಧಿಕಾರಿ ವೀರಂದ್ರ ಹೆಗ್ಗಡೆ ಎಂದರೆ ಅಷ್ಟೇ ಗೌರವ.

   ವೀರೇಂದ್ರ ಹೆಗ್ಗಡೆ, ಇಳಯರಾಜ, ಪಿ.ಟಿ. ಉಷಾ ರಾಜ್ಯಸಭೆಗೆ ನಾಮನಿರ್ದೇಶನವೀರೇಂದ್ರ ಹೆಗ್ಗಡೆ, ಇಳಯರಾಜ, ಪಿ.ಟಿ. ಉಷಾ ರಾಜ್ಯಸಭೆಗೆ ನಾಮನಿರ್ದೇಶನ

   ಈಗ ಕೇಂದ್ರ ಸರಕಾರ ನಾಲ್ವರು ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಅದರಲ್ಲಿ ವೀರೇಂದ್ರ ಹೆಗ್ಗಡೆ ಕೂಡ ಒಬ್ಬರು. ಚಿನ್ನದ ಓಟಗಾರ್ತಿ ಪಿಟಿ ಉಷಾ, ಬಾಹುಬಲಿ ಖ್ಯಾತಿಯ ಚಿತ್ರಸಾಹಿತಿ ವಿ ವಿಜಯೇಂದ್ರ ಪ್ರಸಾದ್, ಸಂಗೀತ ಮಾಂತ್ರಿಕ ಇಳಯರಾಜ ಅವರು ರಾಜ್ಯಸಭೆಗೆ ನಾಮನಿರ್ದೇಶನವಾಗಿರುವ ಇತರ ಮೂವರು.

   ಪ್ರಧಾನಿ ಮೋದಿ ಟ್ವೀಟ್

   ಪ್ರಧಾನಿ ನರೇಂದ್ರ ಮೋದಿ ಅವರು ಈ ನಾಲ್ವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ವೀರೇಂದ್ರ ಹೆಗ್ಗಡೆ ಅವರು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥಿಸುವ ಅವಕಾಶ ಸಿಕ್ಕಿತು. ಹಾಗೆಯೇ, ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಶ್ರೇಷ್ಠ ಕಾರ್ಯವನ್ನು ನೋಡುವ ಅವಕಾಶವೂ ಸಿಕ್ಕಿತು. ಸಂಸದೀಯ ಕಲಾಪಗಳಿಗೆ ಅವರಿಂದ ಇನ್ನಷ್ಟು ಮೆರಗು ಸಿಗುತ್ತದೆ" ಎಂದು ಪ್ರಧಾನಿಗಳು ಶ್ಲಾಘಿಸಿದ್ದಾರೆ.

    ಜೈನ ಕುಟುಂಬದವರು

   ಜೈನ ಕುಟುಂಬದವರು

   ವೀರೇಂದ್ರ ಹೆಗ್ಗಡೆ ಅವರು ಜೈನ ಧರ್ಮೀಯರು, ಬಂಟ ಸಮುದಾಯದವರು. ಅವರದ್ದು ತುಳು ಮಾತೃಭಾಷಿಕ ಪೇರ್ಗಡೆ ವಂಶ. ಅನೇಕ ವರ್ಷಗಳಿಂದ ವೀರೇಂದ್ರ ಹೆಗ್ಗಡೆ ಕುಟುಂಬದವರೇ ಧರ್ಮಸ್ಥಳದ ಧರ್ಮಾಧಿಕಾರಿಯಾಗುತ್ತಿರುವ ಪರಂಪರೆ ಇದೆ.

   ಬಂಟ್ವಾಳದಲ್ಲಿ 1948 ನವೆಂಬರ್ 25ರಂದು ಜನಿಸಿದ ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿಯಾಗುತ್ತಿರುವ ಪೇರ್ಗಡೆ ವಂಶದ 21ನೆಯ ತಲೆಮಾರಿನವರು. ಕೇವಲ 19ನೇ ವಯಸ್ಸಿಗೆ ಇವರು ಧರ್ಮಾಧಿಕಾರಿ ಪಟ್ಟ ಏರಿದರು. ಇವರಿಗೆ ಪುತ್ರ ಇಲ್ಲದ್ದರಿಂದ ಮುಂದಿನ ಧರ್ಮಾಧಿಕಾರಿ ಸ್ಥಾನವನ್ನು ಇವರ ಕಿರಿಯ ಸಹೋದರ ಹರ್ಷೇಂದ್ರ ಅವರಿಗೆ ನೀಡಲಾಗುತ್ತದೆ.

    ಹೆಗ್ಗಡೆಯವರ ಕೈಂಕರ್ಯಗಳು

   ಹೆಗ್ಗಡೆಯವರ ಕೈಂಕರ್ಯಗಳು

   ಧರ್ಮಸ್ಥಳ ಎಂದರೆ ಪ್ರತಿಯೊಬ್ಬರಿಗೂ ಧುತ್ತನೇ ನೆನಪಿಗೆ ಬರುವುದೆಂದರೆ ಅದ್ಭುತ ಅನ್ನಸಂತರ್ಪಣೆ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಶಾಲೆ ಕಾಲೇಜು, ವಿವಿಧ ಧರ್ಮ ಛತ್ರಗಳು, ಆಸ್ಪತ್ರೆಗಳು, ಹೀಗೆ ಲೆಕ್ಕವಿಲ್ಲದಷ್ಟು ಕಾರ್ಯಗಳು ವೀರೇಂದ್ರ ಹೆಗ್ಗಡೆ ನಡೆಸಿಕೊಂಡು ಬರುತ್ತಿದ್ದಾರೆ.

   ಧರ್ಮಸ್ಥಳದಲ್ಲಿರುವ ನಿಸರ್ಗ ಚಿಕಿತ್ಸೆ ಕೇಂದ್ರ ಬಹಳ ಖ್ಯಾತವಾಗಿದೆ. 1972ರಿಂದಲೂ ಇಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುಕೊಂಡು ಬರುತ್ತಿದ್ಧಾರೆ. ಬಂಟ್ವಾಳ, ಶ್ರವಣಬೆಳಗೊಳ, ಕಲ್ಲಹಳ್ಳಿ, ಬೆಂಗಳೂರು, ಭದ್ರಾವತಿ, ಐಸೂರು ಮೊದಲಾದೆಡೆ ಧರ್ಮಸ್ಥಳ ಛತ್ರಗಳನ್ನು ನಿರ್ಮಿಸಿದ್ದಾರೆ.

   ಕರಾವಳಿಯ ಗ್ರಾಮೀಣ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಧರ್ಮಸ್ಥಳದ ವತಿಯಿಂದ ಆಯೋಜಿಸಿದ್ದಾರೆ. ಮಹಿಳಾ ಸಬಲೀಕರಣ, ಪರ್ಯಾಯ ಇಂಧನ, ಶಿಕ್ಷಣ, ಆರೋಗ್ಯ, ಕೃಷಿ ಇತ್ಯಾದಿ ವಿವಿಧ ರೀತಿಯಲ್ಲಿ ಅವರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.

   ಧರ್ಮಸ್ಥಳಕ್ಕೆ ಹೋದವರು ತಪ್ಪದೇ ಉಚಿತ ಅನ್ನಸಂತರ್ಪಣೆಯಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸುವುದಿಲ್ಲ. ನಿತ್ಯವೂ ಇಲ್ಲಿ ಸುಮಾರು ಐವತ್ತು ಸಾವಿರ ಜನರು ಆಹಾರ ಸ್ವೀಕರಿಸುತ್ತಾರೆ.

    ಪ್ರಶಸ್ತಿ ಗೌರವಗಳು

   ಪ್ರಶಸ್ತಿ ಗೌರವಗಳು

   ಡಾ. ವೀರೇಂದ್ರ ಹೆಗ್ಗಡೆ ಅವರ ಕಾರ್ಯಗಳಿಗೆ ಎಷ್ಟು ಪ್ರಶಸ್ತಿ ಗೌರವಗಳು ಸಿಕ್ಕರೂ ಕಡಿಮೆಯೇ. ಭಕ್ತರು ನೀಡುವ ಗೌರವವೇ ತಮಗೆ ಅತಿ ದೊಡ್ಡ ಪ್ರಶಸ್ತಿ ಎಂದು ಹೆಗ್ಗಡೆ ಹೇಳಿಕೊಂಡಿರುವುದುಂಟು. ಪದ್ಮವಿಭೂಷಣ ಪ್ರಶಸ್ತಿ ಪಡೆದಿವರಿಗೆ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿಯೂ ಪ್ರಾಪ್ತವಾಗಿದೆ.

   ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ
   ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
   ರಾಷ್ಟ್ರಪತಿಗಳಿಂದ ರಾಜರ್ಷಿ ಗೌರವ
   ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್
   ಕರ್ನಾಟಕ ರತ್ನ ಪ್ರಶಸ್ತಿ
   ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ
   ಕರ್ನಾಟಕ ಸರಕಾರದಿಂದ ಶ್ರೀ ಭಗವಾನ್ ಮಹಾವೀರ ಶಾಂತ ಪ್ರಶಸ್ತಿ


   (ಒನ್ಇಂಡಿಯಾ ಸುದ್ದಿ)

   English summary
   Veerendra Heggade Biography in Kannada: Philanthropist Veerendra Heggade nominated to Rajya Sabha.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X