ಡಿಜಿಟಲ್ ಚುನಾವಣೆ ಪ್ರಚಾರಕ್ಕೆ 53 ಕೋಟಿ ಖರ್ಚು; ಬಿಜೆಪಿಯದು ಸಿಂಹಪಾಲು

ವಿವಿಧ ರಾಜಕೀಯ ಪಕ್ಷಗಳು ಗೂಗಲ್, ಫೇಸ್ ಬುಕ್ ನಂಥ ಡಿಜಿಟಲ್ ಪ್ರಸಾರ ಮಾಧ್ಯಮಗಳಿಗೆ ಈ ವರ್ಷದ ಫೆಬ್ರವರಿಯಿಂದ ಮೇ ತಿಂಗಳ ಮಧ್ಯೆ 53 ಕೋಟಿ ರುಪಾಯಿ ಖರ್ಚು ಮಾಡಿದೆ. ಈ ಖರ್ಚಿನಲ್ಲಿ ಬಿಜೆಪಿಯದು ಸಿಂಹಪಾಲು. ಫೇಸ್ ಬುಕ್ ನ ಜಾಹೀರಾತು ಮೂಲದ ಪ್ರಕಾರ, 1.21 ಲಕ್ಷ ರಾಜಕೀಯ ಜಾಹೀರಾತುಗಳಿಗೆ ಫೆಬ್ರವರಿಯಿಂದ ಮೇ 15ರ ಮಧ್ಯೆ 26.5 ಕೋಟಿ ಖರ್ಚಾಗಿದೆ.

ಅದೇ ರೀತಿ ಗೂಗಲ್, ಯೂಟ್ಯೂಬ್ ಮತ್ತು ಸಹಯೋಗಿಗಳಿಗೆ ಫೆಬ್ರವರಿ 19ಕ್ಕೆ 27.36 ಕೋಟಿ ರುಪಾಯಿ ಹಾಗೂ 14,837 ಜಾಹೀರಾತು ನೀಡಲಾಗಿದೆ. ಆಡಳಿತಾರೂಢ ಬಿಜೆಪಿಯು ಫೇಸ್ ಬುಕ್ ನಲ್ಲಿ 2500 ಜಾಹೀರಾತಿಗೆ 4.23 ಕೋಟಿ ಖರ್ಚು ಮಾಡಿದೆ. 'ಮೈ ಫಸ್ಟ್ ವೋಟ್ ಫಾರ್ ಮೋದಿ', 'ಭಾರತ್ ಕೇ ಮನ್ ಕೀ ಬಾತ್' ಮತ್ತು ನೇಷನ್ ವಿತ್ ನಮೋ ಪೇಜ್ ಗಳಿಗೆ 4 ಕೋಟಿ ರುಪಾಯಿಯಷ್ಟು ಜಾಹೀರಾತು ನೀಡಲಾಗಿದೆ. ಇವುಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ 200 ಮಿಲಿಯನ್ ಗೂ ಹೆಚ್ಚು ಬಳಕೆದಾರರಿದ್ದಾರೆ.

ಗೂಗಲ್ ನಲ್ಲಿ ಇದಕ್ಕಾಗಿ 17 ಕೋಟಿ ರುಪಾಯಿಗೂ ಹೆಚ್ಚು ಹಣ ವ್ಯಯಿಸಲಾಗಿದೆ. ಇನ್ನು ಕಾಂಗ್ರೆಸ್ ನಿಂದ ಫೇಸ್ ಬುಕ್ ನಲ್ಲಿ 3,686 ಜಾಹೀರಾತಿಗೆ 1.46 ಕೋಟಿ ವೆಚ್ಚವಾಗಿದೆ. ಅದೇ ರೀತಿ 2.71 ಕೋಟಿ ರುಪಾಯಿಯಲ್ಲಿ 425 ಜಾಹೀರಾತನ್ನು ಗೂಗಲ್ ನಲ್ಲಿ ನೀಡಲಾಗಿದೆ. ಫೇಸ್ ಬುಕ್ ನ ಮಾಹಿತಿ ಪ್ರಕಾರ ತೃಣಮೂಲ ಕಾಂಗ್ರೆಸ್ ನಿಂದ 29.28 ಲಕ್ಷ ರುಪಾಯಿ ವೆಚ್ಚ ಮಾಡಲಾಗಿದೆ.

Various political parties spent 53 crore for digital campaign, BJPs lion share

ಆಮ್ ಆದ್ಮಿ ಪಕ್ಷವು ಫೇಸ್ ಬುಕ್ ಪೇಜ್ ನಲ್ಲಿ 176 ಜಾಹೀರಾತು ನೀಡಿದ್ದು, ಅದಕ್ಕಾಗಿ 13.62 ಲಕ್ಷ ಖರ್ಚು ಮಾಡಿದೆ. ಇನ್ನು ಆಪ್ ನ ಪ್ರಚಾರವನ್ನು ನೋಡಿಕೊಳ್ಳುವ ಔಬರ್ನ್ ಡಿಜಿಟಲ್ ಸಲ್ಯೂಷನ್ ಫೆಬ್ರವರಿಯಿಂದ ಈಚೆಗೆ 2.18 ಕೋಟಿ ರುಪಾಯಿ ವೆಚ್ಚ ಮಾಡಿರುವುದಾಗಿ ಲೆಕ್ಕವನ್ನು ತೋರಿಸುತ್ತಿದೆ.

ದೇಶದಲ್ಲಿ ಚುನಾವಣೆ ನಡೆಯುವಾಗ ಗೂಗಲ್, ಫೇಸ್ ಬುಕ್ ಇಂಥ ಡಿಜಿಟಲ್ ಜಾಹೀರಾತುಗಳು ಎಷ್ಟು ಬಂದಿವೆ ಎಂಬ ಬಗ್ಗೆ ಮಾಹಿತಿ ನೀಡುತ್ತಾ ಬರಲಾಗುತ್ತಿದೆ. ಪಾರದರ್ಶಕತೆ ಎಂಬ ದೃಷ್ಟಿಯಿಂದ ಇಂಥ ಕ್ರಮ ಕೈಗೊಳ್ಳಲಾಗುತ್ತಿದೆ. ಮೇ 19ನೇ ತಾರೀಕು ದೇಶದ ವಿವಿಧೆಡೆಯ 59 ಸ್ಥಾನಗಳಿಗೆ ಮತದಾನ ನಡೆಯುವ ಮೂಲಕ ಚುನಾವಣೆ ಅಂತಿಮ ಹಂತ ತಲುಪಿದೆ. ಮೇ 23ನೇ ತಾರೀಕು ಫಲಿತಾಂಶ ಪ್ರಕಟ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+