ಸುಲಭವಾಗಿ ಆಧಾರ್ ಲಾಕ್-ಅನ್ಲಾಕ್ ಮಾಡಿ, ವರ್ಚುವಲ್ ಐಡಿ ರಚಿಸಿ: ಇಲ್ಲಿದೆ ವಿಧಾನ
ನವದೆಹಲಿ, ನವೆಂಬರ್ 17: ಆಧಾರ್ ಕಾರ್ಡ್ ಬಳಕೆದಾರರಿಗೆ ಒಂದು ಸಿಹಿಸುದ್ದಿ ಇದೆ. ಹಲವಾರು ಆಧಾರ್ ಕಾರ್ಡ್ ಬಳಕೆದಾರರು, ಆಧಾರ್ ಕಾರ್ಡ್ ಆನ್‌ಲೈನ್ ಮೂಲಕ ಪಡೆಯುವ ವೇಳೆ ಇಂಟರ್‌ನೆಟ್ ಸಮಸ್ಯೆಗೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಬೇರೆಯೇ ಪರಿಹಾರವನ್ನು ಕಂಡು ಕೊಂಡಿದೆ.
ಈಗಿನಿಂದ ಆಧಾರ್ ಕಾರ್ಡ್ ಬಳಕೆದಾರರು ಸರಳ ಎಸ್‌ಎಮ್‌ಎಸ್ ಮೂಲಕ ವಿವಿಧ ಆಧಾರ್ ಸೇವೆಗಳನ್ನು ಪಡೆಯಬಹುದಾಗಿದೆ. ಈ ಸೇವೆಯನ್ನು ಪಡೆಯಲು ಬಳಕೆದಾರರು ಯುಐಡಿಎಐ ವೆಬ್‌ಸೈಟ್‌ಗೆ ಲಾಗ್‌ಇನ್ ಮಾಡಬೇಕಾಗಿಲ್ಲ ಅಥವಾ ಆಧಾರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾದ ಸನ್ನಿವೇಶವೇ ಬರುವುದಿಲ್ಲ. ಬದಲಾಗಿ ಸರಳವಾಗಿ ಎಸ್‌ಎಮ್‌ಎಸ್ ಮೂಲಕ ಆಧಾರ್ ಸೇವೆಗಳನ್ನು ಪಡೆಯಬಹುದು.
ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಆಧಾರ್ ಕಾರ್ಡ್; ಅರ್ಜಿ ಸಲ್ಲಿಸುವುದು ಹೇಗೆ?
ಇನ್ನು ಎಸ್‌ಎಂಎಸ್ ಮೂಲಕ ಸೇವೆಗಳನ್ನು ಪಡೆಯಲು ಜನರು ಸ್ಮಾರ್ಟ್‌ಪೋನ್ ಅನ್ನು ಹೊಂದಿರಬೇಕಾಗಿ ಬರುವುದಿಲ್ಲ. ಇಂಟರ್‌ನೆಟ್ ಸಂಪರ್ಕ ಇಲ್ಲದೆಯೇ ಹಾಗೂ ಮೂಲಭೂತ ವ್ಯವಸ್ಥೆಯೊಂದಿಗೆ ಮೊಬೈಲ್ ಫೋನ್ ಮೂಲಕ ಆಧಾರ್ ಸೇವೆಯನ್ನು ಮೊಬೈಲ್ ಫೋನ್ ಮೂಲಕ ಸರಳವಾಗಿ ಮಾಡಬಹುದು. ಯುಐಡಿಎಐ ಒದಗಿಸಿದ ವೈಶಿಷ್ಟ್ಯದ ಹೊರತಾಗಿಯೂ ಆಧಾರ್ ಕಾರ್ಡ್ ಬಳಕೆದಾರರು ಹಲವಾರು ಸೇವೆಗಳನ್ನು ಪಡೆಯಬಹುದು. ಈ ಸೇವೆಯ ಮೂಲಕ ಆಧಾರ್ ಬಳಕೆದಾರರು ವರ್ಚುವಲ್ ಐಡಿ ಪಡೆಯಬಹುದು, ವರ್ಚುವಲ್ ಐಡಿ ಮರುಪಡೆಯಬಹುದು, ಆಧಾರ್ ಲಾಕ್ ಸೇವೆ, ಆಧಾರ್ ಅನ್‌ಲಾಕ್ ಸೇವೆ ಇತ್ಯಾದಿಗಳನ್ನು ಇಂಟರ್‌ನೆಟ್ ಇಲ್ಲದೆಯೇ ಪಡೆಯಬಹುದು.
ಆಧಾರ್ ಸೇವೆ ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಹಾಟ್‌ಲೈನ್ ಸಂಖ್ಯೆ 1947 ಗೆ ಎಸ್‌ಎಮ್‌ಎಸ್ ಕಳುಹಿಸುವ ಮೂಲಕ ಸೇವೆಯನ್ನು ಪಡೆಯಬಹುದು. ಎಸ್‌ಎಮ್‌ಎಸ್ ಲಾಕಿಂಗ್ ಹಾಗೂ ಅನ್‌ಲಾಕಿಂಗ್ ಸೇವೆಗಳನ್ನು ಪಡೆಯಲು ಒಟಿಪಿ ಅತ್ಯಗತ್ಯವಾಗಿದೆ.
ಭಾರತದಲ್ಲಿ ಕೊವಿಡ್-19 ಲಸಿಕೆಗೆ ಆಧಾರ್ ಕಾರ್ಡ್ ಕಡ್ಡಾಯವೇ?
ವರ್ಚುವಲ್ ಐಡಿಯನ್ನು ಹೇಗೆ ರಚಿಸುವುದು?
* ಬಳಕೆದಾರರು ಮೊಬೈಲ್ ಫೋನ್‌ನಲ್ಲಿ ಎಸ್‌ಎಮ್‌ಎಸ್ ಅನ್ನು ಮೊದಲು ಸಂದೇಶ ಬರೆಯಬೇಕು
* GVID (SPACE) ಹಾಗೂ ನಿಮ್ಮ ಫೋನ್ ಸಂಖ್ಯೆಯೊಂದಿಗೆ ನೋಂದಾಯಿಸಲಾದ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಬರೆಯಿರಿ.
* ಈ ಎಸ್‌ಎಮ್‌ಎಸ್ ಅನ್ನು ಹಾಟ್‌ಲೈನ್ ಸಂಖ್ಯೆ 1947 ಗೆ ಕಳುಹಿಸಿ
* ವರ್ಚುವಲ್ ಐಡಿಯನ್ನು ರಚಿಸಲು, ಬಳಕೆದಾರರು RVID (SPACE) ಎಂದು ಟೈಪ್ ಮಾಡಬೇಕಾಗುತ್ತದೆ
* ನಂತರ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಟೈಪ್ ಮಾಡಿ
* ಬಳಿಕ ಒಂದು ಒಟಿಪಿಯಯು ಎರಡು ರೀತಿಯಾಗಿ ರಚನೆ ಆಗಲಿದೆ
* ಒಂದು ಆಧಾರ್ ಸಂಖ್ಯೆ ಮೂಲಕ
* ಇನ್ನೊಂದು VID ಮೂಲಕ
* ಆಧಾರ್ ಸಂಖ್ಯೆಯ ಹೊರತಾಗಿಯೂ ಒಟಿಪಿ ಅನ್ನು ಪಡೆಯಬಹುದು. ಅದಕ್ಕಾಗಿ GETOTP (space) ಅನ್ನು ಟೈಪ್ ಮಾಡಿ ಆಯಾ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ನಮೂದಿಸಿ
* ನಂತರ VID ಮೂಲಕ ಒಟಿಪಿ ಪಡೆಯಲು GETOTP (space) ಎಂದು ಟೈಪ್ ಮಾಡಿ
* ಬಳಿಕ ಅಧಿಕೃತ ವರ್ಚುವಲ್ ಐಡಿಯ ಕೊನೆಯ 6 ಅಂಕೆಗಳನ್ನು ನಮೂದಿಸಿ ಮತ್ತು ಹಾಟ್‌ಲೈನ್ ಸಂಖ್ಯೆ 1947 ಗೆ ಕಳುಹಿಸಿ
ಎಸ್‌ಎಮ್‌ಎಸ್ ಮೂಲಕ ಆಧಾರ್ ಲಾಕ್-ಅನ್ಲಾಕ್ ಹೇಗೆ?
ನೀವು ಎಸ್‌ಎಮ್‌ಎಸ್ ಮೂಲಕ ಆಧಾರ್ ಅನ್ನು ಲಾಕ್ ಮಾಡಬಹುದು ಹಾಗೂ ಅನ್ಲಾಕ್ ಕೂಡಾ ಮಾಡಬಹುದು. ಅದು ಹೇಗೆ ಎಂಬುವುದುನ್ನು ನಾವು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ.
* GETOTP (SPACE) ಎಂದು ಟೈಪ್ ಮಾಡಿ
* ಅದರೊಂದಿಗೆ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಸೇರಿಸಿದರೆ ನಿಮಗೆ ಲಾಕ್ ಅನ್‌ಲಾಕ್ ಮಾಡಬಹುದು
* ENABLEBIOLOCK (SPACE) ಎಂದು ಟೈಪ್ ಮಾಡಿ
* ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳು ಟೈಪ್ ಮಾಡಿ SPACE ನೀಡಿ
* ನಿಮಗೆ 6-ಅಂಕಿಯ OTP ಬರಲಿದೆ.
* ನಂತರ ಅನ್ಲಾಕ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
(ಒನ್‌ಇಂಡಿಯಾ ಸುದ್ದಿ)