ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣೆ: ಅಪರ್ಣಾ ಯಾದವ್ ಪ್ರೇಮ್ ಕಹಾನಿ, ರಾಜಕೀಯ ಜೀವನ

|
Google Oneindia Kannada News

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಸಮೀಪಿಸುತ್ತಿರುವಂತೆಯೇ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರಿದವರಲ್ಲಿ ಬಹುಮುಖ ಪ್ರತಿಭೆ ಅಪರ್ಣಾ ಯಾದವ್ ಕೂಡ ಒಬ್ಬರು. ಮುಲಾಯಂ ಸಿಂಗ್ ಯಾದವ್ ಅವರ ಮಗ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮಲತಾಯಿ ಮಗ ಪ್ರತೀಕ್ ಯಾದವ್ ಅವರ ಪತ್ನಿಯೇ ಅಪರ್ಣಾ ಯಾದವ್. ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ಮಗ ಪ್ರತೀಕ್ ಯಾದವ್. ಅಖಿಲೇಶ್ ಯಾದವ್ ಮೊದಲ ಪತ್ನಿ ಮಗ.

ಯುಪಿಯಲ್ಲಿ 'ಬಚ್‌ಪನ್ ಕಾ ಪ್ಯಾರ್‌' ಹಾಡಿನ ಮೂಲಕ ಬಿಜೆಪಿ ಪ್ರಚಾರಯುಪಿಯಲ್ಲಿ 'ಬಚ್‌ಪನ್ ಕಾ ಪ್ಯಾರ್‌' ಹಾಡಿನ ಮೂಲಕ ಬಿಜೆಪಿ ಪ್ರಚಾರ

ಗಾಯನದಲ್ಲಿ ಪದವಿ ಪಡೆದಿರುವ ಅಪರ್ಣಾ

ಗಾಯನದಲ್ಲಿ ಪದವಿ ಪಡೆದಿರುವ ಅಪರ್ಣಾ

ಅಪರ್ಣಾ ಯಾದವ್ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಿಂದ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಲಕ್ನೋದ ಭಾತಖಂಡೆ ಸಂಗೀತ ಸಂಸ್ಥೆಯಿಂದ ಗಾಯನದಲ್ಲಿ ಪದವಿ ಪಡೆದಿದ್ದಾರೆ. ಅವರು ನೃತ್ಯಗಾರ್ತಿಯೂ ಹೌದು. ಜೊತೆಗೆ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮುಲಾಯಂ ಅವರ ಸ್ವಂತ ಸೈಫಾಯಿ ಮಹೋತ್ಸವ ಮತ್ತು ಲಕ್ನೋ ಮಹೋತ್ಸವ ಸೇರಿದಂತೆ ಸಂಗೀತ ಕಾರ್ಯಕ್ರಮಗಳಲ್ಲಿ ಅವರು ಪ್ರದರ್ಶನ ನೀಡಿದ್ದಾರೆ. ಅಪರ್ಣಾಳ ತಂದೆ ಅರವಿಂದ್ ಸಿಂಗ್ ಬಿಷ್ತ್, ಮಾಜಿ ಪತ್ರಕರ್ತ, ಮಾಹಿತಿ ಆಯುಕ್ತರಾಗಿದ್ದಾರೆ.

ಬಾಲ್ಯ ಸ್ನೇಹಿತ ಪ್ರತೀಕ್ ಯಾದವ್

ಬಾಲ್ಯ ಸ್ನೇಹಿತ ಪ್ರತೀಕ್ ಯಾದವ್

ಅಂದಹಾಗೆ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ಮಗ ಪ್ರತೀಕ್ ಯಾದವ್ ಹಾಗೂ ಅಪರ್ಣಾ ಯಾದವ್ ಅವರದ್ದು ಪ್ರಮೇ ವಿವಾಹ. ಅಪರ್ಣಾ ಮತ್ತು ಪ್ರತೀಕ್ ಅವರು ಓದುವಾಗ ಬೇರೆ ಬೇರೆ ಶಾಲೆಗಳಲ್ಲಿದ್ದರು, ಆದರೆ ಇಬ್ಬರೂ ಇಂಟರ್ ಸ್ಕೂಲ್ ಫಂಕ್ಷನ್‌ಗಳಲ್ಲಿ ಭೇಟಿಯಾಗುತ್ತಿದ್ದರು. ಇವರಿಬ್ಬರು ಒಟ್ಟಿಗೆ ಉನ್ನತ ಶಿಕ್ಷಣ ಪಡೆದಿದ್ದಾರೆ. ಒಟ್ಟಿಗೆ ವಿದ್ಯಾಬ್ಯಾಸ ಮಾಡುವಾಗಲೇ ಇವರಿಬ್ಬರ ನಡುವೆ ಸ್ನೇಹ ಪ್ರೇಮಕ್ಕೆ ತಿರುಗಿದೆ. ಇ ಮೇಲ್ ಮೂಲಕ ಇವರಿಬ್ಬರು ಪ್ರೇಮ ಪ್ರಸ್ತಾಪ ಮಾಡಿಕೊಂಡಿದ್ದರಂತೆ. ಬಾಡಿ ಬಿಲ್ಡರ್ ಆದ ಪ್ರತೀಕ್ ಯಾದವ್ ಅವರೊಂದಿಗಿನ ಪ್ರೇಮ ವಿಚಾರವನ್ನು ಮನೆಯಲ್ಲಿ ತಿಳಿಸಿ ಈ ಜೋಡಿ ಅತ್ಯಂತ ವಿಜೃಂಭಣೆಯಿಂದ ದಾಪಂತ್ಯ ಜೀವನಕ್ಕೆ ಕಾಲಿಟ್ಟಿತ್ತು. ಸುಮಾರು 10 ವರ್ಷಗಳ ನಂತರ, ಇಬ್ಬರೂ 2011 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ನಂತರ 2012 ರಲ್ಲಿ ವಿವಾಹವಾದರು. ಈ ಮದುವೆಯಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇವರ ಮದುವೆಗೆ ಆಗಮಿಸಿದ್ದರು. ಪ್ರತೀಕ್ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲದಿದ್ದರೂ, ಅವರು ಯಾವಾಗಲೂ ತಮ್ಮ ಜೀವನಶೈಲಿ ಮತ್ತು ಫಿಟ್ನೆಸ್ ಬಗ್ಗೆ ಚರ್ಚೆಯಲ್ಲಿದ್ದಾರೆ.

ರಾಜಕೀಯಕ್ಕಿಂತ ಸಮಾಜ ಸೇವೆ ಒಳಿತು ಎಂದಿದ್ದ ಅಪರ್ಣಾ

ರಾಜಕೀಯಕ್ಕಿಂತ ಸಮಾಜ ಸೇವೆ ಒಳಿತು ಎಂದಿದ್ದ ಅಪರ್ಣಾ

ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸಿಕೊಳ್ಳುವ ಮತ್ತು ಎನ್‌ಜಿಒ ಹರ್ಷ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ಅಪರ್ಣಾ ಯಾದವ್, ಸಮಾಜವಾದಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು, ಅವರು ಅಕ್ಟೋಬರ್ 2014 ರಲ್ಲಿ ಲಕ್ನೋದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ತಮ್ಮ ಪತಿ ಪ್ರತೀಕ್ ಯಾದವ್ ಅವರೊಂದಿಗೆ ಮೊದಲ ಬಾರಿಗೆ ಕಾಣಿಸಿಕೊಂಡರು.

ಸಮಾರಂಭದಲ್ಲಿ, ಪ್ರತೀಕ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಅವರು ಅಪರ್ಣಾ ಅವರ ಕ್ರಿಯಾಶೀಲತೆ ಅಥವಾ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಲು ನಿರಾಕರಿಸಿದರು. ಜೊತೆಗೆ ಅಪರ್ಣಾ ಕೂಡ "ರಾಜಕೀಯಕ್ಕಿಂತ ಸಮಾಜ ಸೇವೆಗೆ ಅಪರ್ಣಾ ಯಾದವ್ ಹೆಚ್ಚು ಅಗತ್ಯವಿದೆ" ಎಂದು ಹೇಳಿದ್ದರು. "ಸಾಮಾಜಿಕ ಸೇವೆಗಳು ಬೆಳೆಯಲು ಯಾವುದೇ ರಾಜಕೀಯ ವೇದಿಕೆ ಅಗತ್ಯವಿಲ್ಲ ಎಂದು ನಾನು ನಂಬುತ್ತೇನೆ. ನನ್ನ ಕೆಲಸಕ್ಕೆ ಪ್ರೀತಿ ಮತ್ತು ವಿಶ್ವಾಸ ಸಮಾಜದಲ್ಲಿ ನಿರಂತರವಾಗಿ ಬೆಳೆಯುತ್ತಿದೆ. ಒಂದು ದಿನ ಜನರು ತಮ್ಮ ನಾಯಕನನ್ನು ಪ್ರೀತಿಯಿಂದ ಆರಿಸುತ್ತಾರೆ ಎಂಬ ಭಾವನೆ ನನ್ನಲ್ಲಿದೆ" ಎಂದಿದ್ದರು.

ಗೋಹತ್ಯೆಯ ವಿರುದ್ಧ ಪೋಸ್ಟ್

ಗೋಹತ್ಯೆಯ ವಿರುದ್ಧ ಪೋಸ್ಟ್

ಈ ಹಿಂದೆ ಅಪರ್ಣಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸ್ವಚ್ಛ ಭಾರತ ಅಭಿಯಾನವನ್ನು ಹೊಗಳಿದ್ದರು, ಸಾಮಾಜಿಕ ಮಾಧ್ಯಮದಲ್ಲಿ ಮೋದಿ ಅವರೊಂದಿಗೆ ಸೆಲ್ಫಿ ಹಂಚಿಕೊಂಡಿದ್ದಾರೆ ಮತ್ತು ಗೋಹತ್ಯೆಯ ವಿರುದ್ಧ ಪೋಸ್ಟ್ ಮಾಡಿದ್ದಾರೆ. ಸೆಪ್ಟೆಂಬರ್ 2015 ರಲ್ಲಿ, ಮಹಂತ್ ಅವೈಧ್ಯಾನಾಥ್ ಅವರ ಮರಣದ ನಂತರ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಲು ಅಪರ್ಣಾ ಗೋರಖ್ ನಾಥ್ ದೇವಸ್ಥಾನಕ್ಕೆ ಹೋಗಿದ್ದರು.

ಬಿಜೆಪಿ ವಿರುದ್ಧ ಸೋತಿದ್ದ ಅಪರ್ಣಾ

ಬಿಜೆಪಿ ವಿರುದ್ಧ ಸೋತಿದ್ದ ಅಪರ್ಣಾ

2017 ರಲ್ಲಿ, ಬಿಜೆಪಿ ಭದ್ರಕೋಟೆ ಎಂದು ಪರಿಗಣಿಸಲಾದ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಪರ್ಣಾ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ 33,796 ಮತಗಳ ಅಂತರದಿಂದ ಸೋತಿದ್ದಾರೆ.

ಕಾರಣ ಅಖಿಲೇಶ್ ಯಾದವ್?

ಕಾರಣ ಅಖಿಲೇಶ್ ಯಾದವ್?

ಇತ್ತೀಚೆಗಷ್ಟೆ ಅಪರ್ಣಾ ಬಿಜೆಪಿ ಸೇರಿದ್ದು ಭಾರೀ ಸುದ್ದಿಯಾಗಿದೆ. ಇದಕ್ಕೆ ಅಖಿಲೆಶ್ ಯಾದವ್ ಕಾರಣ ಎನ್ನಲಾಗುತ್ತಿದೆ. ಅಪರ್ಣಾ ಯಾದವ್ ಅವರು ಈ ವರ್ಷದ ಉತ್ತರ ಪ್ರದೇಶ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿದ್ದರು. ಅಖಿಲೇಶ್ ಯಾದವ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲು ಒಲವು ತೋರಲಿಲ್ಲ, ಇದು ಅಪರ್ಣಾ ಯಾದವ್ ಬಿಜೆಪಿ ಸೇರಲು ಇನ್ನಷ್ಟು ಕಾರಣವಾಯಿತು.

ಲಕ್ನೋ ಕಂಟೋನ್ಮೆಂಟ್ ಬ್ರಾಹ್ಮಣ ಪ್ರಾಬಲ್ಯದ ಪ್ರದೇಶವಾಗಿದೆ. ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 1 ಲಕ್ಷ ಬ್ರಾಹ್ಮಣ ಮತದಾರರಿದ್ದಾರೆ. ಸಿಂಧಿ-ಪಂಜಾಬಿ ಮತದಾರರು ಈ ಪ್ರದೇಶದಲ್ಲಿ ಎರಡನೇ ಪ್ರಬಲ ಸಮುದಾಯವಾಗಿದ್ದರೆ ಮುಸ್ಲಿಮರು ಸುಮಾರು 25,000 ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಯಾದವ ಸಮುದಾಯದ 20,000 ಹಾಗೂ ಠಾಕೂರ್ ಸಮುದಾಯದ 15,000 ಮತದಾರರಿದ್ದಾರೆ.

Recommended Video

Indian Maharajas ತಮ್ಮ ಮೊದಲನೇ ಪಂದ್ಯದಲ್ಲೇ ಗೆದ್ದಿದ್ದು ಹೀಗೆ | Oneindia Kannada

English summary
Samajwadi Party supremo Mulayam Singh Yadav’s younger daughter-in-law Aparna Yadav joined the BJP on Wednesday as the first phase of polling in Uttar Pradesh Assembly polls inched closer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X