ವಿಶ್ವ ರೇಡಿಯೋ ದಿನ ಆಚರಿಸಿದ ಟ್ವಿಟ್ಟಿಗರು

ಇಂಟರ್ನೆಟ್ ಯುಗದಲ್ಲಿ, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ ಸ್ಟಾಗ್ರಾಮ್ ಸಾಮಾಜಿಕ ಜಾಲ ತಾಣಗಳ ಭರಾಟೆಯಲ್ಲಿ, ಅಂಗೈನಲ್ಲೇ ಸ್ಮಾರ್ಟ್ ಫೋನ್ ನಲ್ಲಿ ಎಚ್ಡಿ ಗುಣಮಟ್ಟದ ಟಿವಿ ನೋಡುವ ಕಾಲದಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ರೇಡಿಯೋಗೆ ಈ ದಿನ ಮೀಸಲು.

ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನ ಆಚರಿಸಲು ಯುನೆಸ್ಕೋ ತೆಗೆದುಕೊಂಡ ನಿರ್ಣಯ ಇಂದಿಗೂ ಪಾಲಿಸಿಕೊಂಡು, ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಥೀಮ್ 'ರೇಡಿಯೋ ಹಾಗೂ ಕ್ರೀಡೆ'. ಸಂಸ್ಕೃತಿಯ ಜತೆ ಹೇಗೆ ಕ್ರೀಡೆ ಬೆರೆತಿದೆ, ಕ್ರೀಡಾಪಟುಗಳು ಹೇಗೆ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂಬುದನ್ನು ಪ್ರಸ್ತುತ ಪಡಿಸಲಾಗುತ್ತಿದೆ.

ಭಾರತದಲ್ಲಿ ಆಕಾಶವಾಣಿ ಎಂದರೆ ಚಿತ್ರಗೀತೆ, ವಾರ್ತೆಗಳು, ಕೃಷಿ, ನಾಟಕ, ಸೇರಿದಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಅತಿವೃಷ್ಟಿ, ಸುನಾಮಿಯಂಥ ಪ್ರಕೃತಿ ವಿಕೋಪ, ಯುದ್ಧ ಅಥವಾ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಆಕಾಶವಾಣಿಯೇ ಜನರಿಗೆ ಆಸರೆಯಾಗಲಿದೆ.

ಎಫ್ಎಂ ತರಂಗಾಂತರದಲ್ಲಿ ರೇಡಿಯೋ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಸಮುದಾಯ ರೇಡಿಯೋಗಳು ಸಂಸ್ಕೃತಿಯನ್ನು ಕಟ್ಟಿ ಬೆಳಸಲು ಸಹಕಾರಿಯಾಗಿವೆ.

ವಿಶ್ವ ರೇಡಿಯೋ ದಿನ

ವಿಶ್ವ ರೇಡಿಯೋ ದಿನ

ಜೇಮ್ಸ್‌ ಕ್ಲಾರ್ಕ್‌ ಮ್ಯಾಕ್ಸ್‌ವೆಲ್‌, ಹೆನ್ರಿಜ್‌ ರುಡಾಲ್ಫ್, ಮಾರ್ಕೋನಿ ಅವರ ತಂಡದ ಆವಿಷ್ಕಾರವಾದ ರೇಡಿಯೋ 1896ರಿಂದ ಇಲ್ಲಿ ತನಕ ಸಾಕಷ್ಟು ಬೆಳವಣಿಗೆ ಕಂಡಿದೆ. ಆಂಪ್ಲಿಟ್ಯೂಡ್‌ ಮಾಡ್ಯುಲೇಶನ್‌(ಎ ಎಂ), ಫ್ರೀಕ್ವೇನ್ಸಿ ಮಾಡ್ಯುಲೇಶನ್‌(ಎಫ್ಎಂ) ತರಂಗಗಳು ರೂಪುಗೊಂಡು ಎಲ್ಲೆಡೆ ವಿಸ್ತಾರ ಪಡೆದುಕೊಂಡಿದೆ.

ಮೈಸೂರಿನಲ್ಲಿ ಮೊದಲಿಗೆ ಬಾನುಲಿ

ಮೈಸೂರಿನಲ್ಲಿ ನಮ್ಮ ದೇಶದ ಮೊಟ್ಟಮೊದಲು ರೇಡಿಯೋ ಕಾರ್ಯಕ್ರಮ ಪ್ರಸಾರವಾಗಿದ್ದು ಎಂಬುದು ವಿಶೇಷ. ಪ್ರಾಧ್ಯಾಪಕರಾಗಿದ್ದ ಡಾ.ಎಮ್.ವಿ.ಗೋಪಾಲಸ್ವಾಮಿಯವರು ಮುತುವರ್ಜಿಯಿಂದ 1935ರಲ್ಲೇ ಮೊದಲ ಆಕಾಶವಾಣಿ ಕೇಂದ್ರ ಕಾರ್ಯಾರಂಭವಾಯಿತು. ಕುವೆಂಪು ಕವನ ವಾಚನದೊಂದಿಗೆ ಬಾನುಲಿ ಪ್ರಸಾರ ಕಾರ್ಯ ಮೊದಲುಗೊಂಡಿತು.

A.I. R ಆಲ್ ಇಂಡಿಯಾ ರೇಡಿಯೋ

ಆಲ್ ಇಂಡಿಯಾ ರೇಡಿಯೋ ತನ್ನ ಕೇಳುಗರು ನೀಡಿರುವ ಪ್ರತಿಕ್ರಿಯೆಗಳ ಗುಚ್ಛವನ್ನು ಸಂಗ್ರಹಿಸಿ ಈ ದಿನ ಟ್ವೀಟ್ ಮಾಡಿ ವಿಶ್ವ ರೇಡಿಯೋದಿನವನ್ನು ಆಚರಿಸಿದೆ.

ಮರಳು ಶಿಲ್ಪದಲ್ಲಿ ರೇಡಿಯೋ

ಮರಳು ಶಿಲ್ಪದಲ್ಲಿ ಅರಳಿದ ರೇಡಿಯೋ. ಯುನೆಸ್ಕೋ ಥೀಮ್ ರೇಡಿಯೋ ಹಾಗೂ ಕ್ರೀಡೆಯನ್ನು ಒಳಗೊಂಡ ಮರಳು ಕಲೆಯನ್ನು ಅನಾವರಣಗೊಳಿಸಿದ ಕಲಾವಿದ ಸುದರ್ಶನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+