ಥಗ್ಸ್ ಆಫ್ ಹಿಂದೂಸ್ತಾನ್, ಅಪನಗದೀಕರಣಕ್ಕೆ ಎರಡು ವರ್ಷ, ಕಾಲೆಳೆವ ಟ್ವೀಟ್ಸ್

ಬಿಜೆಪಿಯವರು ಈ ದಿನವನ್ನು (ನವೆಂಬರ್ 8) ಕಪ್ಪುಹಣ ವಿರೋಧಿ ದಿನ ಎಂದು ಕರೆದರೆ, ವಿರೋಧ ಪಕ್ಷಗಳು ಕರಾಳ ದಿನಾಚರಣೆ ಆಚರಿಸುತ್ತಿವೆ. ಹೌದು ಇದು ಅಪನಗದೀಕರಣದ ಎರಡನೇ ವಾರ್ಷಿಕೋತ್ಸವದ ಬಗ್ಗೆಯೇ. ಕಳೆದ ಆಗಸ್ಟ್ ನಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪಿತಪ್ಪಿಯೂ ಅಪನಗದೀಕರಣದ ಬಗ್ಗೆ ಮಾತನಾಡಲಿಲ್ಲ.

ಬಾಯಿ ತುಂಬ ಕಾಂಗ್ರೆಸ್ ಪಕ್ಷವನ್ನು ಬೈದರೆ ವಿನಾ ಅಪನಗದೀಕರಣ ಸಮರ್ಥಿಸಿಕೊಳ್ಳುವಂಥ ಒಂದೇ ಒಂದು ಮಾತನಾಡಲಿಲ್ಲ. ಮೂರು ತಿಂಗಳಿಗೊಮ್ಮೆ ಜಿಡಿಪಿ ದರ ಹೊರಬಿದ್ದಾಗ ವಿರೋಧಪಕ್ಷಗಳು ಹಣಿಯುತ್ತಿದ್ದಾಗಲೂ ಅದೇ ಅಪನಗದೀಕರಣದ ಮಾತು. ಜನಸಾಮಾನ್ಯರು ಏನೆಂದುಕೊಳ್ತಾರೆ ಎಂಬ ಕುತೂಹಲ ಇರುತ್ತದೆ ಅಲ್ಲವಾ?

ಟ್ವಿಟ್ಟರ್ ನಲ್ಲಿ ಹಾಕಿದ ಕೆಲವು ಅಭಿಪ್ರಾಯಗಳನ್ನು ನಿಮ್ಮೆದುರು ಇಟ್ಟಿದ್ದೇವೆ. ಇದೇ ದಿನ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಬಿಡುಗಡೆ ಆಗಿರುವುದಕ್ಕೂ ಅಪನಗದೀಕರಣದ ಎರಡನೇ ವಾರ್ಷಿಕೋತ್ಸವಕ್ಕೂ ಸಂಬಂಧ ಇಲ್ಲ ಎಂದು ಕಾಲೆಳೆದವರೂ ಇದ್ದಾರೆ. ಅದು ಪ್ರಧಾನ ಮಂತ್ರಿ ಬ್ಲ್ಯಾಕ್ ಮನಿ ಲಾಂಡ್ರಿಂಗ್ ಯೋಜನೆ ಎಂದು ಛೇಡಿಸಿದವರಿದ್ದಾರೆ. ಅವರವರ ಭಾವಕ್ಕೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಯ್ದ ಕೆಲವು ಇಲ್ಲಿವೆ. ನೀವೂ ಕಾಮೆಂಟ್ ಬಾಕ್ಸ್ ನಲ್ಲಿ ಅನಿಸಿಕೆ ಹಂಚಿಕೊಳ್ಳಬಹುದು.

ವಿಶು ಗುತ್ತಲ್

ಅಪನಗದೀಕರಣ ಭಯ ಆಗುವಂಥ ನೆನಪುಗಳನ್ನು ತರುತ್ತದೆ. ಒಂದು ವಾರದ ನನ್ನ ಅವಳಿ ಮಕ್ಕಳು ಐಸಿಯು (ತೀವ್ರ ನಿಗಾ ಘಟಕ) ದಲ್ಲಿದ್ದವು. ಆಸ್ಪತ್ರೆಯ ಬಿಲ್ ಪಾವತಿಗಾಗಿ ಸ್ನೇಹಿತರು, ಸಂಬಂಧಿಕರಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಒಟ್ಟು ಮಾಡುತ್ತಿದ್ದೆ. ಹೇಗೋ ಹಣ ಹೊಂದಿಸಿದೆ. ಎಲ್ಲರಿಗೂ ನನಗೆ ಸಿಗುವಂಥ ಸವಲತ್ತು ಇರುವುದಿಲ್ಲ. ಹಲವು ಜನರು-ಕೆಲವು ಮಕ್ಕಳು ಸತ್ತೇಹೋದರು.

Array

ಶಾರ್ದೂಲ್ ಪಡ್ ಗಾಂವ್ಕರ್

ಅಪನಗದೀಕರಣಕ್ಕೆ ಇಂದಿಗೆ ಎರಡು ವರ್ಷ! ಭಾರತದ ಆರ್ಥಿಕತೆಯನ್ನು ವಿಸ್ತರಿಸಿದ್ದಕ್ಕೆ ಹಾಗೂ ಪಾರದರ್ಶಕವಾಗಿ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ. ಈ ಪ್ರಮುಖ ಹೆಜ್ಜೆಯಿಂದ ಭಾರತದ ಆರ್ಥಿಕತೆ ಮತ್ತಷ್ಟು ಎತ್ತರಕ್ಕೆ ಹೋಗುತ್ತದೆ.

ಜೇ ಎನ್ ಆರ್

ಅಹಂಭಾವ, ದುರಹಂಕಾರ, ತಜ್ಞರು ಎಂದು ಪೋಸು ನೀಡುತ್ತಾ ಕೆಟ್ಟ ಸಲಹೆ ಮಾಡಿದವರು, ಇಂಗ್ಲಿಷ್ ಮಾತನಾಡುವ ನಾಗರಿಕ ಸೇವೆ ಅಧಿಕಾರಿಗಳ ಬಗ್ಗೆ ಇರುವ ಅಪನಂಬಿಕೆ, ಇವೆಲ್ಲವೂ ಸೇರಿ ಅನುಭೂತಿ ಇಲ್ಲದ ನಾಯಕನ ಕ್ರೂರ, ಉಪಯೋಗವಿಲ್ಲದ ಅನಾಹುತ ಮಾಡಿದೆ. ಅದರ ಹೆಸರು ಅಪನಗದೀಕರಣ.

Array

ನಿಶಾಂತ್ ಸಿಂಗ್

ನವೆಂಬರ್ ಎಂಟನೇ ತಾರೀಕನ್ನು ನೆನಪಿಸಿಕೊಳ್ಳಿ, ನೆನಪಿಸಿಕೊಳ್ಳಿ. ಇದೇ ದಿನ ಮೋದಿಜೀ ಅವರು ಅಪನಗದೀಕರಣ ಹೇರಿದ ದಿನ. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಗೆಲ್ಲುವ ಸಲುವಾಗಿ ಭಾರತೀಯರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ ದಿನ. ಕ್ಷಮಿಸಲು ಸಾಧ್ಯವಿಲ್ಲ, ಮರೆಯಲು ಸಾಧ್ಯವೇ ಇಲ್ಲ.

ಶಂಶೀರ್ ಮಂಬ್ರಾ

ಬಿಜೆಪಿ ನಾಯಕರು ಅಪನಗದೀಕರಣದ ಬಗ್ಗೆ ಮುಂದಿನ ವರ್ಷ ಹೀಗೆ ಹೇಳಬಹುದು:

ಅಪನಗದೀಕರಣದ ಮುಖ್ಯ ಉದ್ದೇಶ ಏನಾಗಿತ್ತು ಅಂದರೆ, ದೇಶದಲ್ಲಿ ಎಷ್ಟು ಎಟಿಎಂಗಳು 24/7 ಕೆಲಸ ಮಾಡುತ್ತವೆ ಎಂದು ತಿಳಿದುಕೊಳ್ಳಬೇಕಾಗಿತ್ತು. 2016ರ ನವೆಂಬರ್ ನಿಂದ ಈಚೆಗೆ ದೇಶದಲ್ಲಿ ಅಪನಗದೀಕರಣದಿಂದ ಬ್ಯಾಂಕಿಂಗ್ ಮೂಲಸೌಕರ್ಯ ಅಭಿವೃದ್ಧಿ ಆಗಿದೆ.

ರಾಜ್ ನಾರಾಯಣ್

ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾವನ್ನು 'ಕುಖ್ಯಾತ' ಅಪನಗದೀಕರಣದ ಎರಡನೇ ವಾರ್ಷಿಕೋತ್ಸವ ದಿನದಂದೇ ಬಿಡುಗಡೆ ಮಾಡಿರುವುದಕ್ಕೆ ಏನಾದರೂ ರಾಜಕೀಯ ಪ್ರಸ್ತುತತೆ ಇದೆಯಾ?

ಅರವಿಂದ್ ಕೇಜ್ರಿವಾಲ್

ಮೋದಿ ಸರಕಾರದ ಆರ್ಥಿಕ ಹಗರಣಗಳ ಪಟ್ಟಿಗೆ ಕೊನೆಯೇ ಇಲ್ಲ. ಆದರೆ ಅಪನಗದೀಕರಣ ಅನ್ನೋದು ಭಾರತದ ಆರ್ಥಿಕತೆಗೆ ಮಾಡಿದ ಆಳವಾದ ಗಾಯ. ಅಪನಗದೀಕರಣದ ಎರಡು ವರ್ಷದ ನಂತರ ಕೂಡ ಒಂದು ರಹಸ್ಯ ಹಾಗೇ ಉಳಿದುಹೋಗಿದೆ. ಈ ದೇಶವನ್ನು ಅಂಥ ಭೀಕರ ಅನಾಹುತಕ್ಕೆ ಏಕೆ ದೂಡಲಾಯಿತು ಎಂಬುದು ಈಗಲೂ ಗೊತ್ತಾಗಿಲ್ಲ.

ಕುಕ್ಕಿ

ಮೋದಿ ಅಪನಗದೀಕರಣ ಪ್ರಯತ್ನ ವಿಫಲವಾಗಿದೆ. ಭಾರತೀಯ ಬ್ಯಾಂಕ್ ದತ್ತಾಂಶ ಮಾಹಿತಿ ಪ್ರಕಾರ, ಒತ್ತಡವು ಹಲವರನ್ನು ಆತ್ಮಹತ್ಯೆ ಕಡೆಗೆ ನೂಕಿದೆ. ಇತರರು ಬ್ಯಾಂಕ್ ಸಾಲಿನಲ್ಲಿ ನಿಂತಿರುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅರೀಫ್ ಶೇಖ್

ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೀವಿ. ನಿಮ್ಮನ್ನು ನಾವು ಸುಡುವುದಿಲ್ಲ. 50 ದಿನಗಳನ್ನು ಮರೆತು ಬಿಡಿ, ಕಡೇಪಕ್ಷ 730 ದಿನಗಳ ನಂತರ ಕ್ಷಮೆಯಾದರೂ ಕೇಳಬಹುದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+