ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಡುತ್ತಿರುವ ಓಮಿಕ್ರಾನ್ ಮಧ್ಯೆ ಪ್ರಯಾಣಿಸುತ್ತೀರಾ? ರಾಜ್ಯವಾರು ಹಾರುವ ಮಾರ್ಗಸೂಚಿಗಳು ಇಲ್ಲಿ ಪರಿಶೀಲಿಸಿ

|
Google Oneindia Kannada News

ನವದೆಹಲಿ, ಡಿಸೆಂಬರ್ 6: ದೇಶದ ವಿವಿಧ ಭಾಗಗಳಿಂದ ಕೊರೊನಾ ರೂಪಾಂತರ ವೈರಸ್ ಓಮಿಕ್ರಾನ್ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಹಲವಾರು ರಾಜ್ಯಗಳು ಪ್ರಯಾಣ ನಿರ್ಬಂಧಗಳು ಮತ್ತು ಕ್ವಾರಂಟೈನ್ ಮಾನದಂಡಗಳನ್ನು ಪರಿಷ್ಕರಿಸಿವೆ. ಓಮಿಕ್ರಾನ್ ವೇಗವಾಗಿ ಹರಡುವುದರಿಂದ ದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಶನಿವಾರ ಮುಂಜಾನೆ ದಕ್ಷಿಣ ಆಫ್ರಿಕಾದಿಂದ ದುಬೈ ಮತ್ತು ದೆಹಲಿ ಮೂಲಕ ಮುಂಬೈಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಓಮಿಕ್ರಾನ್ ಪಾಸಿಟಿವ್ ಬಂದಿದೆ. ಇದು ಮುಂಬೈನಲ್ಲಿ ಕಂಡುಬಂದ ಮೊದಲ ಪ್ರಕರಣವಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ.ಅರ್ಚನಾ ಪಾಟೀಲ್ ಹೇಳಿದ್ದಾರೆ. "ಅವರು ನಾಲ್ಕು ಜನರ ಗುಂಪಿನೊಂದಿಗೆ ಬಂದರು. ನಾವು ಅವರನ್ನು ಪತ್ತೆಹಚ್ಚುತ್ತೇವೆ ಮತ್ತು ಟ್ರ್ಯಾಕ್ ಮಾಡುತ್ತಿದ್ದೇವೆ. ಅವರ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಜೀನೋಮ್ ಸೀಕ್ವೆನ್ಸಿಂಗ್ ಅನ್ನು ಸಹ ಮಾಡಲಾಗುತ್ತದೆ" ಎಂದು ಅವರು ಹೇಳಿದರು.

ಇದರೊಂದಿಗೆ ಭಾರತದಲ್ಲಿ ಓಮಿಕ್ರಾನ್ ವೈರಸ್ ವಾರದಲ್ಲಿ ಕ್ರಮೇಣವಾಗಿ ಕರ್ನಾಟಕ ಮತ್ತು ಗುಜರಾತ್ ನಂತರ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಹಲವಾರು ರಾಜ್ಯಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳನ್ನು ಬಿಗಿಗೊಳಿಸಿವೆ. ಭಾರತದಲ್ಲಿ ಡಿಸೆಂಬರ್ 1 ರಂದು ಹೊಸ ಮಾರ್ಗಸೂಚಿಗಳು ಜಾರಿಗೆ ಬಂದಿವೆ. ವಿಮಾನ ಪ್ರಯಾಣಿಕರಿಗೆ ರಾಜ್ಯವಾರು ಪ್ರಯಾಣ ಮಾರ್ಗಸೂಚಿಗಳು ಇಲ್ಲಿವೆ.

ಮಹಾರಾಷ್ಟ್ರ

ಮಹಾರಾಷ್ಟ್ರ

ಮಹಾರಾಷ್ಟ್ರ ಈ ಹಿಂದೆ ಅತೀ ಹೆಚ್ಚು ಕೊರೊನಾ ಹೊಡೆತಕ್ಕೆ ಸಿಲುಕಿದ ರಾಜ್ಯವಾಗಿದೆ. ಹೀಗಾಗಿ ಮಹಾರಾಷ್ಟ್ರ ರಾಜ್ಯದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಓಮಿಕ್ರಾನ್ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿದೆ. ಓಮಿಕ್ರಾನ್ ಹೆಚ್ಚು ಕಂಡು ಬಂದಿರುವ ಪ್ರದೇಶಗಳಿಂದ ಬರುವ ವಿಮಾನ ಪ್ರಯಾಣಿಕರ (ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಮತ್ತು ಜಿಂಬಾಬ್ವೆಯಿಂದ ಬರುವವರು) ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಅವರ ತಪಾಸಣೆ ಮತ್ತು ಪ್ರತ್ಯೇಕ ಕೌಂಟರ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ.

"ಹೆಚ್ಚಿನ ಅಪಾಯವಿರುವ ಪ್ರದೇಶಗಳಿಂದ ಬರುವ ವಿಮಾನ ಪ್ರಯಾಣಿಕರು" ಆಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣವೇ RTPCR ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು 7 ದಿನಗಳು ಕಡ್ಡಾಯವಾಗಿ ಕ್ವಾಂರಟೈನ್ ಇರಬೇಕಾಗುತ್ತದೆ. ಬಳಿಕ 7ನೇ ದಿನದಂದು ಎರಡನೇ RTPCR ಪರೀಕ್ಷೆಯನ್ನು ಕಡ್ಡಾಯವಾಗಿ ಒಳಗಾಗಬೇಕಾಗುತ್ತದೆ. ಯಾವುದೇ RTPCR ಪರೀಕ್ಷೆಯು ಪಾಸಿಟಿವ್‌ವೆಂದು ಕಂಡುಬಂದರೆ, ಅಂತಹ "ಹೈ ರಿಸ್ಕ್ ಏರ್ ಪ್ಯಾಸೆಂಜರ್" ಅನ್ನು COVID-19 ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ. ಒಂದು ವೇಳೆ 7 ನೇ ದಿನದ RT-PCR ಪರೀಕ್ಷೆಯ ಫಲಿತಾಂಶವು ನೆಗೆಟಿವ್‌ ಎಂದು ಬಂದರೆ ಅಂತಹ ಏರ್ ಪ್ಯಾಸೆಂಜರ್ ಅನ್ನು ಇನ್ನೂ 7 ದಿನಗಳವರೆಗೆ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ದೇಶೀಯ ವಿಮಾನ ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿರಬೇಕು ಅಥವಾ ಬೋರ್ಡಿಂಗ್ ಮೊದಲು 72 ಗಂಟೆಗಳ ಒಳಗೆ ಪಡೆದ ನೆಗೆಟಿವ್ ಫಲಿತಾಂಶಗಳನ್ನು ತೋರಿಸುವ ಆರ್‌ಟಿ-ಪಿಸಿಆರ್ ಪರೀಕ್ಷಾ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕಾಗುತ್ತದೆ.

ದೆಹಲಿ

ದೆಹಲಿ

ಇನ್ನೂ ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅಪಾಯದಲ್ಲಿರುವ ದೇಶಗಳಿಂದ ಬರುವ ಪ್ರಯಾಣಿಕರಿಗಾಗಿ 20 ಮೀಸಲಾದ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ವಿದೇಶದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರ ಆರ್‌ಟಿ-ಪಿಸಿಆರ್ ಪರೀಕ್ಷೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಒಂದು ವೇಳೆ COVID-19 ಪಾಸಿಟಿವ್ ಪರೀಕ್ಷೆ ವರದಿ ಬಂದರೆ, ಪ್ರಯಾಣಿಕರು ಕಟ್ಟುನಿಟ್ಟಾದ ಪ್ರತ್ಯೇಕತೆಯನ್ನು ಅನುಸರಿಸಬೇಕು ಮತ್ತು ಅವರ ಮಾದರಿಗಳನ್ನು ಜಿನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತದೆ. ಬಳಿಕ ಅವರನ್ನು ಪ್ರಯಾಣಿಕರನ್ನು ಪ್ರತ್ಯೇಕ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುವುದು. ಇದಕ್ಕಾಗಿ ದೆಹಲಿಯ ಲೋಕನಾಯಕ ಜೈಪ್ರಕಾಶ್ ಆಸ್ಪತ್ರೆಯಲ್ಲಿ 40 ಹಾಸಿಗೆಗಳ ಮೀಸಲಾದ ವಾರ್ಡ್ ಅನ್ನು ಮಾಡಲಾಗಿದೆ. ಒಂದು ವೇಳೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಪ್ರಯಾಣಿಕರು 7 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಎಂಟನೇ ದಿನ ಅವರನ್ನು ಮತ್ತೆ ಪರೀಕ್ಷಿಸಲಾಗುವುದು.

ವರದಿ ನೆಗೆಟಿವ್ ಬಂದರೆ ಏಳು ದಿನಗಳ ಕಾಲ ಸ್ವಯಂ ನಿಗಾ ವಹಿಸುತ್ತಾರೆ. ಪರೀಕ್ಷಾ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ. ಅಪಾಯದಲ್ಲಿರುವ ದೇಶಗಳಿಂದ ಪ್ರಯಾಣಿಸುವವರನ್ನು ಹೊರತುಪಡಿಸಿ ಬೇರೆ ದೇಶಗಳಿಂದ ಬರುವ ಪ್ರಯಾಣಿಕರಿಗೆ ಅಂತಹ ಯಾವುದೇ ನಿರ್ಬಂಧಗಳು ಅನ್ವಯಿಸುವುದಿಲ್ಲ. ಆದಾಗ್ಯೂ, 14 ದಿನಗಳವರೆಗೆ ಅವರ ರೋಗಲಕ್ಷಣಗಳನ್ನು ಸ್ವಯಂ-ಮೇಲ್ವಿಚಾರಣೆ ಮಾಡಲು ಅವರಿಗೆ ಸಲಹೆ ನೀಡಲಾಗುತ್ತದೆ. ಅನುಮಾನ ಬಂದಲ್ಲಿ 5ರಷ್ಟು ಪ್ರಯಾಣಿಕರಿಗೆ ಪರೀಕ್ಷೆ ನಡೆಸಲಾಗುವುದು. ಇಂತಹ ಪ್ರಯಾಣಿಕರು ಮತ್ತು ಅವರ ಮಾದರಿಗಳನ್ನು ಪರೀಕ್ಷಿಸುವ ವೆಚ್ಚವನ್ನು ನಾಗರಿಕ ವಿಮಾನಯಾನ ಸಚಿವಾಲಯವು ಭರಿಸುತ್ತದೆ ಮತ್ತು ಜಿನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಮಗುವಿಗೆ ರೋಗಲಕ್ಷಣಗಳು ಇದ್ದಲ್ಲಿ ಪರೀಕ್ಷಿಸಲಾಗುತ್ತದೆ.

ಕೇರಳ

ಕೇರಳ

ಕೇಂದ್ರದ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಇತರ ದೇಶಗಳಿಂದ ಬರುವ ಶೇಕಡಾ ಐದು ಪ್ರಯಾಣಿಕರನ್ನು ಯಾದೃಚ್ಛಿಕವಾಗಿ(Random) ಪರೀಕ್ಷಿಸಲಾಗುತ್ತದೆ. ‘ಹೈ ರಿಸ್ಕ್' ದೇಶಗಳಿಂದ ರಾಜ್ಯಕ್ಕೆ ಆಗಮಿಸುವವರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅವರ ಮೇಲೆ ವಿಶೇಷ ನಿಗಾ ಇಡಲಾಗುವುದು. ಅವರ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯು ನೆಗೆಟಿವ್ ಬಂದರೆ, ಕನಿಷ್ಠ ಎರಡು ವಾರಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿರಲು ಅವರಿಗೆ ತಿಳಿಸಲಾಗುತ್ತದೆ. ಅವರ ವರದಿಯು ಪಾಸಿಟಿವ್ ಬಂದರೆ ಅವರನ್ನು ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಇತರ ರಾಜ್ಯಗಳ ಪ್ರಯಾಣಿಕರು 72 ಗಂಟೆಗಳ ಮೊದಲು ಪಡೆದ ತಮ್ಮ RTPCR ಪರೀಕ್ಷೆಗಳ ವರದಿಗಳನ್ನು ವಿಮಾನ ಹತ್ತುವ ಮೊದಲು ಕೊಂಡೊಯ್ಯಬೇಕು. ಒಮಿಕ್ರಾನ್ ಪೀಡಿತ ರಾಷ್ಟ್ರಗಳಿಂದ ರಾಜ್ಯಕ್ಕೆ ಆಗಮಿಸುವವರು ಏಳು ದಿನಗಳನ್ನು ಪ್ರತ್ಯೇಕವಾಗಿ ಕಳೆಯಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ನಡೆಸುವ ಬೆಲಿಯಾಘಾಟಾ ಐಡಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಅನ್ನು ಸ್ಥಾಪಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಇದು ವಿಶೇಷವಾಗಿ ಓಮಿಕ್ರಾನ್‌ ಪಾಸಿಟಿವ್ ರೋಗಿಗಳಿಗೆ ಮೀಸಲಿರುತ್ತದೆ.

ಉತ್ತರಾಖಂಡ

ಉತ್ತರಾಖಂಡ

ಇತರ ರಾಜ್ಯಗಳಿಂದ ಉತ್ತರಾಖಂಡಕ್ಕೆ ಪ್ರಯಾಣಿಸುವ ಜನರು ಕಡ್ಡಾಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹೊರ ರಾಜ್ಯಗಳಿಂದ ಬರುವ ಯಾವುದೇ ಪ್ರಯಾಣಿಕರಿಗೆ ಕೋವಿಡ್‌ನ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆಗೊಳಪಡಿಸಬೇಕು ಮತ್ತು ನಂತರ ಪಾಸಿಟಿವ್ ಬಂದಲ್ಲಿ ಅವರು 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಎಲ್ಲಾ ಸೂಚನೆ ನೀಡಲಾಗಿದೆ.

ಕರ್ನಾಟಕ

ಕರ್ನಾಟಕ

ಕರ್ನಾಟಕ ರಾಜ್ಯಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ವಿಮಾನಯಾನ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅವರು ಏಳು ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ಬಂದರೆ, ಮಾದರಿಯನ್ನು ಜಿನೋಮಿಕ್ ಪರೀಕ್ಷೆಗೆ ಕಳುಹಿಸಲಾಗುತ್ತದೆ ಮತ್ತು ಅವರನ್ನು ಪ್ರತ್ಯೇಕವಾಗಿರಿಸಲಾಗುತ್ತದೆ. B.1.1.529 (Omicron ರೂಪಾಂತರ) ಗೆ ಜೀನೋಮಿಕ್ ಪರೀಕ್ಷೆ ನೆಗೆಟಿವ್ ಆಗಿದ್ದರೆ ಚಿಕಿತ್ಸೆ ನೀಡುವ ವೈದ್ಯರ ವಿವೇಚನೆಯಿಂದ ಅವರನ್ನು ಬಿಡುಗಡೆ ಮಾಡಲಾಗುತ್ತದೆ.

ಅಪಾಯದಲ್ಲಿರುವ ದೇಶಗಳೆಂದು ಸೇರ್ಪಡೆಗೊಂಡವರನ್ನು ಹೊರತುಪಡಿಸಿ ದೇಶಗಳಿಂದ ಬರುವ ಶೇಕಡ ಐದು ಪ್ರಯಾಣಿಕರ ಮಾದರಿ RT-PCR ಪರೀಕ್ಷೆಗೆ ಒಳಗಾಗುತ್ತದೆ. ಕೊರೊನಾ ಪಾಸಿಟಿವ್ ಬಂದರೆ ಜಿನೋಮಿಕ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಸೇರಿದಂತೆ ಯುರೋಪ್‌ನ ಎಲ್ಲಾ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ

ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಕೋವಿಡ್-19 ಪಾಸಿಟಿವ್ ಕಂಡು ಬಂದ ವ್ಯಕ್ತಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಪ್ರಮಾಣಿತ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು ತಕ್ಷಣವೇ ಗೊತ್ತುಪಡಿಸಿದ INSACOG ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬೋರೇಟರೀಸ್ (IGSLs) ಗೆ ಕಳುಹಿಸಲಾಗುತ್ತದೆ. ಪಾಸಿಟಿವ್ ಬಂದ ಪ್ರಯಾಣಿಕರ ಸಂಪರ್ಕಗಳ ನಿಕಟ ಟ್ರ್ಯಾಕಿಂಗ್ ಮತ್ತು ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಅಪಾಯಕಾರಿ ರಾಷ್ಟ್ರಗಳಿಂದ ಬರುವ ಜನರು ಏಳು ದಿನಗಳವರೆಗೆ ಹೋಮ್ ಕ್ವಾರಂಟೈನ್‌ನಲ್ಲಿರಬೇಕು. 8 ನೇ ದಿನದಂದು ಅವರನ್ನು ಮತ್ತೊಮ್ಮೆ ಪರೀಕ್ಷಿಸಬೇಕು ಮತ್ತು ಪರೀಕ್ಷೆಯು ಪಾಸಿಟಿವ್‌ವಾಗಿದ್ದರೆ ಕನಿಷ್ಠ ಎರಡು ವಾರಗಳವರೆಗೆ ಸ್ವಯಂ-ಮೇಲ್ವಿಚಾರಣೆಗೆ ಸಲಹೆ ನೀಡಲಾಗುತ್ತದೆ.

ತಮಿಳುನಾಡು

ತಮಿಳುನಾಡು

ಅಪಾಯದಲ್ಲಿರುವ ರಾಷ್ಟ್ರಗಳಿಂದ ರಾಜ್ಯದ ಯಾವುದೇ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಫ್ಲೈಯರ್‌ಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ. ಪ್ರಯಾಣಿಕರು ತಮ್ಮ ಆರ್‌ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬರುವವರೆಗೆ ಆಯಾ ವಿಮಾನ ನಿಲ್ದಾಣದಲ್ಲಿಯೇ ಇರುತ್ತಾರೆ.

ಅಪಾಯದಲ್ಲಿ ಹೊರತುಪಡಿಸಿ ಬೇರೆ ದೇಶಗಳಿಂದ ಬರುವ ಪ್ರಯಾಣಿಕರಿಗೆ ಯಾದೃಚ್ಛಿಕ ಮಾದರಿಯನ್ನು ನಡೆಸಲಾಗುತ್ತದೆ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada
ಲಕ್ಷದ್ವೀಪ

ಲಕ್ಷದ್ವೀಪ

ಪ್ರಯಾಣಿಕರು ಪ್ರಯಾಣದ 48 ಗಂಟೆಗಳ ಒಳಗೆ ಪಡೆದ ನೆಗೆಟಿವ್ RT-PCR ಪರೀಕ್ಷಾ ವರದಿಯನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ದ್ವೀಪಗಳನ್ನು ತಲುಪಿದ ನಂತರ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ತಮ್ಮ ಪ್ರಯಾಣಕ್ಕೆ 14 ದಿನಗಳ ಮೊದಲು ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡವರಿಗೆ ಇದು ಅನ್ವಯಿಸುವುದಿಲ್ಲ. ತಮ್ಮ ಪ್ರವಾಸಕ್ಕೆ 14 ದಿನಗಳ ಮೊದಲು ಎರಡು ಡೋಸ್‌ಗಳೊಂದಿಗೆ ಲಸಿಕೆ ಹಾಕಿದವರಿಗೆ ದ್ವೀಪ ಪ್ರಯಾಣಕ್ಕೆ ಯಾವುದೇ COVID-19 ಪರೀಕ್ಷಾ ಫಲಿತಾಂಶದ ಅಗತ್ಯವಿಲ್ಲ. ಆದರೆ ಭಾಗಶಃ ಅಥವಾ ಲಸಿಕೆ ಹಾಕದಿರುವವರು RT-PCR ಋಣಾತ್ಮಕ ಪರೀಕ್ಷಾ ವರದಿಯನ್ನು ಮಾತ್ರ ಕೊಂಡೊಯ್ಯಬೇಕಾಗುತ್ತದೆ. ಮೂರು ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕು.

English summary
In view of a new coronavirus variant Omicron being reported from various parts of the country, several states have revised the travel restrictions and quarantine norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X