ಮೋದಿ 2ನೇ ಬಾರಿ ಪ್ರಧಾನಿ ಚೌಡೇಶ್ವರಿ ದೇವಿ ಭವಿಷ್ಯವೇನು?

ಪ್ರಧಾನಿಯಾಗ್ತಾರೆ ಎಂದು ಹೇಳಿದ್ದೆ? ಆದ್ರಾ..
ಇಲ್ಲಿಗೆ ಬರ್ತಾರೆ ಅಂತಾ ಹೇಳಿದ್ದೆ? ಬಂದಿಲ್ಲ
ಈಗ ಪ್ರಧಾನಿಯಾಗ್ತರೋ? ಬೇರೆ ಯಾರದ್ರೂ ಆಗ್ತರೋ? ಹೀಗೆ ದಸರೀಘಟ್ಟ ಚೌಡೇಶ್ವರಿ ದೇವಿ ದೇಗುಲದ ಅರ್ಚಕ ಕೃಷ್ಣೇಗೌಡರು ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಕಳಶ ರೂಪಿಯಾಗಿ ತಾಯಿ ಚೌಡೇಶ್ವರಿ ಭವಿಷ್ಯವನ್ನು ಅಕ್ಷರ ರೂಪದಲ್ಲಿ ಮೂಡಿಸುತ್ತಾಳೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ದೇಶದ ಪ್ರಧಾನಿಯಾಗ್ತಾರೆ, ಗುಜರಾತಿನ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ದೇಶವನ್ನಾಳಲಿದ್ದಾರೆ ಎಂದು ಚೌಡೇಶ್ವರಿ ತಾಯಿ ಭವಿಷ್ಯ ನುಡಿದಿದ್ದಳು. ಈಗ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ದಸರೀಘಟ್ಟ ಚೌಡೇಶ್ವರಿ ದೇವಿ ದೇಗುಲದ ಅರ್ಚಕ ಕೃಷ್ಣೇಗೌಡರ ಈ ಬಗ್ಗೆ ವಿವರಿಸಿ, ಈ ಬಾರಿ ಕೂಡಾ ಪ್ರಧಾನಿಯಾಗುತ್ತಾರೆ, ಆದರೆ, ಹಾದಿ ಸುಗಮವಾಗಿಲ್ಲ. ಮಿತ್ರಪಕ್ಷದ ನೆರವಿನಿಂದ ಮಾತ್ರ ಪ್ರಧಾನಿಯಾಗಬಹುದು ಎಂದಿದ್ದಾರೆ.

ದೇವಿಯ ಉತ್ಸವ ಮೂರ್ತಿಯನ್ನು ಇಬ್ಬರು ಬಗ್ಗಿಸಿ ಕಳಶವು ಟೇಬಲ್ ಕಡೆ ತಿರುಗುವಂತೆ ಹಿಡಿದುಕೊಳ್ಳಲಾಗುತ್ತದೆ. ಅರ್ಚಕರು ಕೇಳುವ ಪ್ರಶ್ನೆಗಳಿಗೆ ಕ್ಲುಪ್ತವಾಗಿ ಕನ್ನಡದಲ್ಲೇ ದೇವಿ ಉತ್ತರಿಸುತ್ತದೆ. ಟೇಬಲ್ ಮೇಲೆ ಅಕ್ಕಿ, ಹಿಟ್ಟು ಹಾಕಿರಲಾಗುತ್ತದೆ.

ದಸರೀಘಟ್ಟ ಚೌಡೇಶ್ವರಿ ದೇವಿಯು ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿದೆ. ಇದು ಬೆಂಗಳೂರಿನಿಂದ 160 ಕಿಮೀ ದೂರದಲ್ಲಿದೆ. ಸಮಸ್ಯೆಯಲ್ಲಿರುವವರು ಇಲ್ಲಿಗೆ ಹೋಗಿ ತಾಯಿಯ ದರ್ಶನ ಪಡೆದರೆ ಖಂಡಿತ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ.

ರವಿಶಂಕರ್ ಗುರೂಜಿ ಅವರಿಂದ ಮೋದಿಗೆ ಮಾಹಿತಿ

ರವಿಶಂಕರ್ ಗುರೂಜಿ ಅವರಿಂದ ಮೋದಿಗೆ ಮಾಹಿತಿ

ತಿಪಟೂರಿನ ದಸರೀಘಟ್ಟ ಚೌಡೇಶ್ವರಿ ದೇವಿಯಿಂದ ನಿಮ್ಮ ರಾಜಕೀಯ ಭವಿಷ್ಯ ತಿಳಿಯುವ ಬಗ್ಗೆ ಮೋದಿಗೆ ರವಿಶಂಕರ್ ಗುರೂಜಿ ಸೂಚಿಸಿದ್ದರು. ದೇವಿಯ ಪಂಚಲೋಹ ವಿಗ್ರಹವನ್ನು ಆಶ್ರಮಕ್ಕೆ ತಂದು ಪದ್ಧತಿಯಂತೆ ಪ್ರಶ್ನೆ ಭವಿಷ್ಯ ಕೇಳಲಾಯಿತು. ಅದರಂತೆ 2014ರಲ್ಲಿ ಮೋದಿ ಪ್ರಧಾನಿಯಾಗುವ ಭವಿಷ್ಯ ಹೊರ ಬಂದಿತ್ತು. ಇದೇ ರೀತಿ ತುಮಕೂರಿನ ಮತ್ತೊಂದು ಕಡೆ ಇರುವ ಚೌಡೇಶ್ವರಿಯ್ ಮಹಿಮೆ ಬಗ್ಗೆ ಮುಂದೆ ಓದಿ...

ಶಿವಮೊಗ್ಗದಿಂದ ತುಮಕೂರು ಜಿಲ್ಲೆಗೆ ಬಂದ ದೇವಿ

ಶಿವಮೊಗ್ಗದಿಂದ ತುಮಕೂರು ಜಿಲ್ಲೆಗೆ ಬಂದ ದೇವಿ

ಶಿವಮೊಗ್ಗ ಜಿಲ್ಲೆಯ ಹನಕೆರೆ ಷರೀಫ್ ಎಂಬುವರು ಕಟ್ಟಡ ಕಾಮಗಾರಿ ಮಾಡುವಾಗ ದೇವಿ ವಿಗ್ರಹ ಸಿಗುತ್ತದೆ. ದೇವಪಟ್ಟಣ ಎಂಬ ಊರಿನ ದೇವಿ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಉತ್ತರ ಸಿಕ್ಕಿತು. ದೇವಪಟ್ಟಣ ಹುಡುಕಿ ಹೊರಟ ಷರೀಫ್ ಅವರಿಗೆ ದೇವಪಟ್ಟಣ ಹುಡುಕಲು ಸಾಧ್ಯವಾಗಲಿಲ್ಲ. ನಂತರ ಮತ್ತೆ ಪ್ರಶ್ನೆ ಕೇಳಿದಾಗ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಊರು ಎಂದು ತಿಳಿದು ಬಂದಿತು. ಇದು ನಮ್ಮ ಗ್ರಾಮದ ವಿಗ್ರಹವಲ್ಲ ಇದು ಉಗ್ರ ಸ್ವರೂಪಿ ಎಂದು ಗ್ರಾಮಸ್ಥರು ಇರಿಸಿಕೊಳ್ಳಲು ನಿರಾಕರಿಸಿದರು.

ಶನೈಶ್ಚರ ದೇಗುಲದ ದೀಕ್ಷೆ ತೊಟ್ಟ ಯುವಕ

ಶನೈಶ್ಚರ ದೇಗುಲದ ದೀಕ್ಷೆ ತೊಟ್ಟ ಯುವಕ

ನಂತರ ಮತ್ತೆ ಪ್ರಶ್ನೆ ಮಾಡಿದಾಗ ಮಠ, ದೇಗುಲಕ್ಕೆ ಕೊಟ್ಟುಬಿಡಿ ಎಂದು ತಿಳಿಸಲಾಯಿತು. ಹತ್ತಿರದಲ್ಲಿದ್ದ ಶನೈಶ್ಚರ ದೇಗುಲಕ್ಕೆ ನೀಡಲು ಮುಂದಾದರೂ ಸಫಲವಾಗಲಿಲ್ಲ. ಆದರೆ, ಈ ಬಗ್ಗೆ ಆ ದೇಗುಲದಾ ಯುವ ಅರ್ಚಕನ ಬಗ್ಗೆ ಚರ್ಚೆ ಮಾಡಲಾಯಿತು. ಕೊನೆಗೆ ವಿಗ್ರಹವನ್ನು ಇರಿಸಿಕೊಳ್ಳಲು ಒಪ್ಪಿದ ಆ ಯುವಕ, ಷರತ್ತು ವಿಧಿಸುತ್ತಾನೆ. ಹತ್ತಿರದ ತೆಪ್ಪದಲ್ಲಿ ಇಟ್ಟು ಒಂದು ತುದಿಯಲ್ಲಿ ಇಟ್ಟಿರಿ, ಇನ್ನೊಂದು ತುದಿಯಲ್ಲಿ ನಾನಿರುತ್ತೇನೆ. ನನ್ನತ್ತ ಬಂದರೆ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾನೆ.

ಮೋದಿ ಪ್ರಧಾನಿಯಾಗುತ್ತಾರೆ.

ಮೋದಿ ಪ್ರಧಾನಿಯಾಗುತ್ತಾರೆ.

ಹೀಗೆ ದೇವಿಯನ್ನು ಪಡೆದಿದ್ದು ಬಾಲ ಮಂಜುನಾಥಸ್ವಾಮಿ, ಕೆರೆಯಲ್ಲಿ ಅಲೆಗಳು ಏದ್ದಿದ್ದನ್ನು ನೋಡಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಹಂಗರಹಳ್ಳಿಯ ವಿದ್ಯಾಚೌಡೇಶ್ವರಿ ದೇಗುಲದ ತಾಯಿ ಕೂಡಾ ಮೋದಿ ಈ ಬಾರಿ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾಳೆ. ಮಂಜುನಾಥಸ್ವಾಮಿ ಅವರು ದೇವಿಯನ್ನು ಪ್ರಶ್ನಿಸಿ, ಮೋದಿ ಪ್ರಧಾನಿಯಾಗುತ್ತಾರೆ ಎಂದರೆ ಬಲಗಡೆ ಪ್ರಸಾದ ನೀಡು, ಇಲ್ಲಾಂದ್ರೆ ಎಡಗಡೆ ನೀಡು ಎಂದು ಕೇಳುತ್ತಾರೆ. ಆಗ ಬಲಗಡೆಯಿಂದ ಹೂಮಾಲೆ ಪ್ರಸಾದ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+