ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ!

|
Google Oneindia Kannada News

Recommended Video

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ! | Oneindia Kannada

ಬೆಂಗಳೂರು, ಮಾರ್ಚ್ 18 : ಲೋಕಸಭಾ ಚುನಾವಣೆಯ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಗೊಂಡಿದೆ. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 13 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಜೆಡಿಎಸ್ ಪಕ್ಷ 8 ಕ್ಷೇತ್ರಗಳ ಪೈಕಿ 1ರಲ್ಲಿ ಮಾತ್ರ ಜಯಗಳಿಸಲಿದೆ.

ಸೋಮವಾರ ಸಂಜೆ ಟೈಮ್ಸ್‌ ನೌ ಮತ್ತು ವಿಎಂಆರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. ಕಾಂಗ್ರೆಸ್‌ 20 ಮತ್ತು ಜೆಡಿಎಸ್‌ 8 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.

ನ್ಯೂಸ್ ನೇಷನ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೋದಿ ಬಲನ್ಯೂಸ್ ನೇಷನ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮೋದಿ ಬಲ

ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23ರಂದು 2 ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಪೂರ್ವ ಸಮೀಕ್ಷೆಯ ಅನ್ವಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 13 (12+1), ಬಿಜೆಪಿ 15 ಕ್ಷೇತ್ರಗಳಲ್ಲಿ ಜಯಗಳಿಸಲಿವೆ. ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರವೇ ಅಸ್ತಿತ್ವದಲ್ಲಿವೆ.

ಏರ್ ಸ್ಟ್ರೈಕ್ ನಂತರ ಉತ್ತರ ಪ್ರದೇಶದಲ್ಲಿ ಬದಲಾಗಲಿದೆಯೆ ಬಿಜೆಪಿ ಲಕ್ಕು?ಏರ್ ಸ್ಟ್ರೈಕ್ ನಂತರ ಉತ್ತರ ಪ್ರದೇಶದಲ್ಲಿ ಬದಲಾಗಲಿದೆಯೆ ಬಿಜೆಪಿ ಲಕ್ಕು?

ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಮೈತ್ರಿಕೂಟ ಶೇ 43.50ರಷ್ಟು ಮತಗಳನ್ನು ಪಡೆಯಲಿದೆ. ಬಿಜೆಪಿ 44.30 ರಷ್ಟುಮತ ಹಾಗೂ ಇತರರು 11.20 ರಷ್ಟು ಮತಗಳನ್ನು ಪಡೆಯಲಿದ್ದಾರೆ. ಸಮೀಕ್ಷೆಗಳ ವಿವರ ಚಿತ್ರಗಳಲ್ಲಿ....

ಇಂಡಿಯಾ TV-CNX ಸಮೀಕ್ಷೆ: ಬಿಜೆಪಿ 238, ಕಾಂಗ್ರೆಸ್ ಗೆ 82 ಸ್ಥಾನಇಂಡಿಯಾ TV-CNX ಸಮೀಕ್ಷೆ: ಬಿಜೆಪಿ 238, ಕಾಂಗ್ರೆಸ್ ಗೆ 82 ಸ್ಥಾನ

ಸಮೀಕ್ಷೆಯ ಫಲಿತಾಂಶ

ಸಮೀಕ್ಷೆಯ ಫಲಿತಾಂಶ

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಟೈಮ್ಸ್‌ ನೌ ಮತ್ತು ವಿಎಂಆರ್ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮಾಡಿದ್ದು, ವರದಿಯನ್ನು ಪ್ರಕಟಿಸಿದೆ.

* ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟ : 13 ಸ್ಥಾನಗಳು (ಕಾಂಗ್ರೆಸ್‌ 12, ಜೆಡಿಎಸ್ 1)
* ಬಿಜೆಪಿ 15 ಸ್ಥಾನಗಳಲ್ಲಿ ಜಯಗಳಿಸಲಿದೆ
* ಇತರ ಯಾವುದೇ ಪಕ್ಷಗಳು ಯಾವುದೇ ಕ್ಷೇತ್ರದಲ್ಲಿ ಜಯಗಳಿಸುವುದಿಲ್ಲ.

ಜೆಡಿಎಸ್‌ಗೆ ಕೇವಲ ಒಂದೇ ಸೀಟು

ಜೆಡಿಎಸ್‌ಗೆ ಕೇವಲ ಒಂದೇ ಸೀಟು

ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಚುನಾವಣೆ ಎದುರಿಸುತ್ತವೆ. ಜೆಡಿಎಸ್ 8 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ 20 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಟೈಮ್ಸ್‌ ನೌ ಮತ್ತು ವಿಎಂಆರ್ ಸಮೀಕ್ಷೆ ಪ್ರಕಾರ ಜೆಡಿಎಸ್ 8 ಕ್ಷೇತ್ರ ಪೈಕಿ 1ರಲ್ಲಿ ಮಾತ್ರ ಜಯಗಳಿಸಲಿದೆ.

ಕಾಂಗ್ರೆಸ್ ಪಕ್ಷಕ್ಕೆ 12 ಸೀಟು

ಕಾಂಗ್ರೆಸ್ ಪಕ್ಷಕ್ಕೆ 12 ಸೀಟು

ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಟೈಮ್ಸ್‌ ನೌ ಮತ್ತು ವಿಎಂಆರ್ ಸಮೀಕ್ಷೆ ಪ್ರಕಾರ ಪಕ್ಷ 12 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.

ಯಾರಿಗೆ ಎಷ್ಟು ಮತಗಳು

ಯಾರಿಗೆ ಎಷ್ಟು ಮತಗಳು

ಟೈಮ್ಸ್‌ ನೌ ಮತ್ತು ವಿಎಂಆರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌-ಜೆಡಿಎಸ್‌ 43.50 ರಷ್ಟು ವೋಟ್‌ ಶೇರ್, ಬಿಜೆಪಿ 44.60 ರಷ್ಟು ಮತಗಳನ್ನು ಪಡೆಯಲಿವೆ. ಇತರರು 11.20 ಮತಗಳನ್ನು ಪಡೆಯಲಿದ್ದಾರೆ.

ಯಾರಿಗೆ ಎಷ್ಟು ಸೀಟು

ಯಾರಿಗೆ ಎಷ್ಟು ಸೀಟು

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 9, ಜೆಡಿಎಸ್ 2 (11 ಕ್ಷೇತ್ರ), ಬಿಜೆಪಿ17 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

English summary
Times Now-VMR pre poll survey predicts 13 seat for Congress-JDS and 15 seat for BJP in Karnataka in 2019 Lok sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X