ರೈಲು ಟಿಕೆಟ್ ರದ್ದು ಮಾಡಿದರೆ ಜಿಎಸ್‌ಟಿ ಶುಲ್ಕ, ಯಾಕೆ?
ವಿಕೆಂಡ್ ಹಾಗೂ ರಜಾದಿಗಳ ಈ ಮಧ್ಯದಲ್ಲಿ ಹಬ್ಬಗಳು ಬರುತ್ತಿರುತ್ತವೆ. ಆದರೆ, ರೈಲು ಪ್ರಯಾಣಿಕರು ಯೋಜಿತ ಪ್ಲಾನ್ ಇಲ್ಲದೆ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಲು ಹಾಗೂ ಖಚಿತ ಪಡಿಸಿಕೊಳ್ಳಲು ಆನ್‌ಲೈನ್‌ಗಳಲ್ಲಿ ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ ಹಾಗೂ ಮುಂಚಿತವಾಗಿ ತಾವು ಸರಳವಾಗಿ ಟಿಕೆಟ್‌ಗಳನ್ನು ರದ್ದು ಮಾಡಬಹುದೆ ಎಂದು ಒಂದು ರೂಟ್‌ಗೆ ಟಿಕೆಟ್ ಖಚಿತಪಡಿಸಲು ಎರಡು ಅಥವಾ ಮೂರು ಟಿಕೆಟ್‌ಗಳನ್ನು ಮುಂಚಿತವಾಗಿ ಬುಕಿಂಗ್ ಮಾಡುತ್ತಿರುತ್ತಾರೆ. ಆದರೆ ನೀವು ಟಿಕೆಟ್ ರದ್ದು ಮಾಡುವ ವೇಳೆ ಜಿಎಸ್‌ಟಿ ಶುಲ್ಕವನ್ನು ವಿಧಸಲಾಗುತ್ತಿದೆ ಹೌದು ಟಿಕೆಟ್ ರದ್ದು ಮಾಡಿದಾಗ ರದ್ದುಗೊಳಿಸಿದ ಚಾರ್ಜ್ ಜೊತೆಗೆ ಜಿಎಸ್‌ಟಿ ಕೂಡ ನೀವು ಪಾವತಿಸಬೇಕಾಗುತ್ತದೆ.
ಇನ್ನು ರಜಾದಿನಗಳು ಅಥವಾ ಹಬ್ಬದ ಋತುವಿನಲ್ಲಿ ರೈಲ್ವೆ ಟಿಕೆಟ್‌ಗಳ ಬೇಡಿಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತದೆ. ಆಸನವನ್ನು ಖಚಿತಪಡಿಸಿಕೊಳ್ಳಲು ಜನರು ಸಾಮಾನ್ಯವಾಗಿ ಮುಂಚಿತವಾಗಿ ಟಿಕೆಟ್‌ಗಳನ್ನು ಖರೀದಿಸುತ್ತಾರೆ. ಆದರೆ ಅನಿರೀಕ್ಷಿತ ತುರ್ತು ಪರಿಸ್ಥಿತಿ ಅಥವಾ ಅಗತ್ಯ ಯೋಜನೆಗಳು ಅಥವಾ ಅನೇಕ ಬದಲಾವಣೆಯಿಂದಾಗಿ ಬಹಳಷ್ಟು ಜನರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಅವರಲ್ಲಿ ಒಬ್ಬರಾಗಿದ್ದರೆ, ಭಾರತೀಯ ರೈಲ್ವೇ ಟಿಕೆಟ್ ರದ್ದತಿ ಶುಲ್ಕದ ನಿಯಮವನ್ನು ಬದಲಾಯಿಸಿದೆ ಈ ಕುರಿತು ನೀವ ಈ ಮಾಹಿತಿಯನ್ನು ತಿಳಿದುಕೊಳ್ಳವುದು ಅವಶ್ಯವಾಗಿದೆ.
ದೃಢೀಕೃತ ರೈಲುಗಳ ಟಿಕೆಟ್‌ಗಳ ರದ್ದತಿಯು ಈಗ ದುಬಾರಿಯಾಗಲಿದೆ ಏಕೆಂದರೆ ಅದು ಸರಕು ಮತ್ತು ಸೇವಾ ತೆರಿಗೆಯನ್ನು (GST) ಶುಲ್ಕ ಕಟ್ಟಬೇಕಾಗುತ್ತದೆ. ಸುತ್ತೋಲೆಯನ್ನು ಹೊರಡಿಸಿದ ಹಣಕಾಸು ಸಚಿವಾಲಯದ ತೆರಿಗೆ ಸಂಶೋಧನಾ ಘಟಕವು ಟಿಕೆಟ್‌ಗಳ ಬುಕಿಂಗ್ ಒಂದು 'ಒಪ್ಪಂದ' ಎಂದು ಹೇಳಿಕೊಂಡಿದೆ ಅದರ ಅಡಿಯಲ್ಲಿ ಸೇವಾ ಪೂರೈಕೆದಾರರು (ಐಆರ್‍ಸಿಟಿಸಿ/ಭಾರತೀಯ ರೈಲ್ವೇ) ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ಭರವಸೆಯನ್ನು ನೀಡುತ್ತಾರೆ.

ಟಿಕೆಟ್ ರದ್ದತಿಯ ಮೇಲೆ ಜಿಎಸ್‌ಟಿ ಏಕೆ?
ಒಪ್ಪಂದವನ್ನು ಉಲ್ಲಂಘಿಸಿದಾಗ ರೈಲಿನ ಟಿಕೆಟ್ ರದ್ದುಪಡಿಸುವ ಮೂಲಕ ಸೇವಾ ಪೂರೈಕೆದಾರರಿಗೆ ಸಣ್ಣ ಮೊತ್ತದೊಂದಿಗೆ ಪರಿಹಾರವನ್ನು ನೀಡಲಾಗುತ್ತದೆ. ರದ್ದತಿ ಶುಲ್ಕವಾಗಿ ಸಂಗ್ರಹಿಸಲಾಗುತ್ತದೆ. ರದ್ದತಿ ಶುಲ್ಕವು ಒಪ್ಪಂದದ ಉಲ್ಲಂಘನೆಯ ಬದಲಿಗೆ ಪಾವತಿಯಾಗಿರುವುದರಿಂದ, ಹಣಕಾಸು ಸಚಿವಾಲಯದ ಸುತ್ತೋಲೆಯ ಪ್ರಕಾರ ಇದು ಜಿಎಸ್‌ಟಿಯನ್ನು ಆಕರ್ಷಿಸುತ್ತದೆ. ಅಂದರೆ ಟಿಕೆಟ್‌ಗಳ ರದ್ದತಿಗೂ ಜಿಎಸ್‌ಟಿ ಶುಲ್ಕ ಪಾವತಿಸಬೇಕು.

ಟಿಕೆಟ್ ರದ್ದು ಮಾಡಿದರೆ ಶುಲ್ಕವೇಷ್ಟು?
*ಎಸಿ ಕೋಚ್‌ನ ಫಸ್ಟ್ ಅಥವಾ ಎಸಿ ಕೋಚ್ ಟಿಕೆಟ್‌ಗಳಿಗೆ 5% ಜಿಎಸ್‌ಟಿ (GST) ವಿಧಿಸಲಾಗುತ್ತದೆ, ಆದ್ದರಿಂದ ಅದೇ ದರದಲ್ಲಿ ಜಿಎಸ್‌ಟಿ ರದ್ದತಿ ಶುಲ್ಕಗಳಿಗೆ ಅನ್ವಯಿಸುತ್ತದೆ.
*ರೈಲು ಹೊರಡುವ 48 ಗಂಟೆಗಳ ಮೊದಲು ಎಸಿ ಫಸ್ಟ್ ಕ್ಲಾಸ್ ಅಥವಾ ಎಸಿ ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್‌ನ್ನು ರದ್ದುಗೊಳಿಸಲು ಭಾರತೀಯ ರೈಲ್ವೇಯು ಈಗ 240 ರೂ. ಶುಲ್ಕ ವಿಧಿಸುತ್ತದೆ.
*ಈಗ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣಿಕರು ಶೇ 5ರಷ್ಟು ಜಿಎಸ್‌ಟಿ ಪಾವತಿಸಬೇಕು.
*ಹಣಕಾಸು ಸಚಿವಾಲಯದ ಹೊಸ ಸುತ್ತೋಲೆಯ ಪ್ರಕಾರ, ಪ್ರಯಾಣಿಕರು ರದ್ದತಿ ಶುಲ್ಕದ ಮೇಲೆ ಅದೇ ಮೊತ್ತದ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, ದೃಢೀಕರಿಸಿದ ಎಸಿ ಫಸ್ಟ್ ಕ್ಲಾಸ್ ಟಿಕೆಟ್‌ನ್ನು ರದ್ದುಗೊಳಿಸಿದರೆ, ಒಬ್ಬ ಪ್ರಯಾಣಿಕನು ಜಿಎಸ್‌ಟಿಗೆ (₹ 240 ರಲ್ಲಿ 5%) ಪಾವತಿಸಬೇಕು.
*ದೃಢೀಕರಿಸಿದ ಎಸಿ 2 ಶ್ರೇಣಿಯ ಟಿಕೆಟ್‌ಗಳಿಗೆ ರೂ. 200 ರದ್ದತಿ ಶುಲ್ಕವಾಗಿ ಮತ್ತು ದೃಢೀಕರಿಸಿದ ಎಸಿ 3 ಶ್ರೇಣಿಯ ಟಿಕೆಟ್‌ಗಳಿಗೆ ರೂ. 180 (ರೈಲು ಹೊರಡುವ 48 ಗಂಟೆಗಳ ಮೊದಲು ಅವುಗಳನ್ನು *ರದ್ದುಗೊಳಿಸಿದರೆ) ವಿಧಿಸಲಾಗುತ್ತದೆ.
*ರೈಲು ನಿಗದಿತ ನಿರ್ಗಮನದಿಂದ 48 ಗಂಟೆಗಳಿಂದ 12 ಗಂಟೆಗಳ ಮೊದಲು ದೃಢಪಡಿಸಿದ ಟಿಕೆಟ್‌ನ್ನು ರದ್ದುಗೊಳಿಸಿದರೆ, ಟಿಕೆಟ್ ಮೊತ್ತದ ಶೇಕಡಾ 25 ರಷ್ಟನ್ನು ರದ್ದತಿ ಶುಲ್ಕವಾಗಿ ವಿಧಿಸಲಾಗುತ್ತದೆ.
*ಪ್ರಯಾಣಿಕರು 12 ಗಂಟೆಯಿಂದ 4 ಗಂಟೆಗಳ ನಡುವೆ ದೃಢೀಕೃತ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಬುಕಿಂಗ್ ಮೊತ್ತದ 50 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ.

4 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ?
ನಿಮ್ಮ ಟಿಕೆಟ್ ಕನ್ಫರ್ಮ್ ಆಗಿದ್ದರೆ ಮತ್ತು ಪ್ರಯಾಣವನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದರೆ, ನಂತರ ರೈಲ್ವೆ ಟಿಕೆಟ್ ರದ್ದತಿಯ ನಿಯಮಗಳ ಪ್ರಕಾರ, ಟಿಕೆಟ್ ರದ್ದತಿ ಸಮಯದಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಟಿಕೆಟ್ ದೃಢೀಕರಿಸಲ್ಪಟ್ಟಿದೆ ಮತ್ತು ರೈಲಿನ ನಿಗದಿತ ನಿರ್ಗಮನ ಸಮಯದಿಂದ ನಾಲ್ಕು ಗಂಟೆಗಳ ಮೊದಲು ಟಿಕೆಟ್‌ನ್ನು ರದ್ದುಗೊಳಿಸಲು ನಿಮಗೆ ಸಾಧ್ಯವಾಗದಿದ್ದರೆ, ನಂತರ ನೀವು ರೈಲ್ವೆ ಕಡೆಯಿಂದ ಯಾವುದೇ ಮರುಪಾವತಿಯನ್ನು ಪಡೆಯುವುದಿಲ್ಲ.

ದೃಢೀಕರಿಸಿದ ಟಿಕೆಟ್‌ನ ರದ್ದತಿಗೆ ಕಡಿತಗೊಳಿಸುವಿಕೆ
ದೃಢೀಕೃತ ರೈಲು ಟಿಕೆಟ್‌ನ್ನು 48 ಗಂಟೆಗಳ ಒಳಗೆ ಮತ್ತು ನಿಗದಿತ ನಿರ್ಗಮನ ಸಮಯಕ್ಕಿಂತ 12 ಗಂಟೆಗಳ ಮೊದಲು ರದ್ದುಗೊಳಿಸಿದರೆ, ಒಟ್ಟು ಮೊತ್ತದ 25% ವರೆಗೆ ಕಡಿತಗೊಳಿಸಲಾಗುತ್ತದೆ. ರೈಲಿನ ನಿಗದಿತ ನಿರ್ಗಮನ ಸಮಯಕ್ಕಿಂತ 4 ಗಂಟೆ ಮತ್ತು 12 ಗಂಟೆಗಳ ಮೊದಲು ನೀವು ಟಿಕೆಟ್‌ನ್ನು ರದ್ದುಗೊಳಿಸಿದರೆ, ಅರ್ಧದಷ್ಟು ಹಣವನ್ನು ಅಂದರೆ ಟಿಕೆಟ್‌ನ 50% ಕಡಿತಗೊಳಿಸಲಾಗುತ್ತದೆ. ರೈಲಿನ ನಿಗದಿತ ನಿರ್ಗಮನ ಸಮಯಕ್ಕಿಂತ ನಾಲ್ಕು ಗಂಟೆಗಳ ಮೊದಲು ಟಿಕೆಟ್‌ನ್ನು ರದ್ದುಗೊಳಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಯಾವುದೇ ಒಂದು ಮರುಪಾವತಿಯನ್ನು ಪಡೆಯುವುದಿಲ್ಲ.












Click it and Unblock the Notifications