ಭಾರತದ ಟಾಪ್ 10 ಸ್ವಚ್ಛ ನಗರಗಳು ಇವು ನೋಡಿ..
ನವದೆಹಲಿ, ನವೆಂಬರ್ 21: ಕೇಂದ್ರ ಸರ್ಕಾರವು ಶನಿವಾರ 'ಸ್ವಚ್ಛ ಸರ್ವೇಕ್ಷಣ್ 2021' ರ ಅಡಿಯಲ್ಲಿ ಭಾರತದ ಸ್ವಚ್ಛ ನಗರಗಳನ್ನು ಘೋಷಣೆ ಮಾಡಿದೆ. ಶನಿವಾರ ನವದೆಹಲಿಯಲ್ಲಿ ಇರುವ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಹತ್ತು ಸ್ವಚ್ಛ ನಗರಗಳಿಗೆ ಗೌರವವನ್ನು ಸಮರ್ಪಣೆ ಮಾಡಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಗರಗಳನ್ನು ಅಭಿನಂದನೆ ಮಾಡುವ ನಿಟ್ಟಿನಲ್ಲಿ 'ಸ್ವಚ್ಛ ಅಮೃತ ಮಹೋತ್ಸವ' ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಇಂದೋರ್ ಭಾರತದ ಅತೀ ಹೆಚ್ಚು ಸ್ವಚ್ಛವಾದ ನಗರ ಎಂಬ ಖ್ಯಾತಿಯನ್ನು ಪಡೆದಿದೆ. ಇಂದೋರ್ ಸತತ ಐದನೇ ಬಾರಿಗೆ ಭಾರತದ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟಿದೆ. ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಪ್ರಶಸ್ತಿಗಳಲ್ಲಿ ಇಂದೋರ್ ಪ್ರಶಸ್ತಿಗೆ ಭಾಜನವಾಗಿದೆ.
ಇನ್ನು ಛತ್ತೀಸ್‌ಗಢವು ರಾಜ್ಯ ವಿಭಾಗದಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. 'ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳು, 2021' ರ 'ಸ್ವಚ್ಛ ನಗರ' ವಿಭಾಗದಲ್ಲಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಕ್ರಮವಾಗಿ ಸೂರತ್ ಮತ್ತು ವಿಜಯವಾಡ ಪಡೆದುಕೊಂಡಿವೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯನ್ನು "ಸ್ವಚ್ಛ ಗಂಗಾ ಪಟ್ಟಣ" ಎಂದು ಗುರುತಿಸಲಾಗಿದೆ. ಬಿಹಾರದ ಮುಂಗೇರ್ ಮತ್ತು ಪಾಟ್ನಾ ವಿಭಾಗವಾರು ಸ್ವಚ್ಛ ನಗರದಲ್ಲಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.

ಇಲ್ಲಿದೆ ಟಾಪ್ 10 ಸ್ವಚ್ಛ ನಗರಳ ಪಟ್ಟಿ:
ಇಂದೋರ್: ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಪ್ರಶಸ್ತಿಗಳಲ್ಲಿ ಇಂದೋರ್ ಸತತವಾಗಿ ಐದನೇ ಬಾರಿಗೆ ಭಾರತದ ಅತೀ ಸ್ವಚ್ಛವಾದ ನಗರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಭಾರತದ ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇದೆ. ಜಿಲ್ಲಾ ಶ್ರೇಯಾಂಕ ವಿಭಾಗದಲ್ಲಿ ಇಂದೋರ್ ಎರಡನೇ ಸ್ಥಾನದಲ್ಲಿ ಇದೆ.
ಸೂರತ್: ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಗರ ಕೇಂದ್ರಗಳಲ್ಲಿ ನೈರ್ಮಲ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರತಿ ವರ್ಷವೂ ಈ ಸ್ವಚ್ಛ ನಗರವನ್ನು ಅನ್ನು ಘೋಷಣೆ ಮಾಡುತ್ತದೆ. ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಾದ ಸ್ವಚ್ಛ ಸರ್ವೇಕ್ಷಣ್ 2021 ರಲ್ಲಿ ಸೂರತ್ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ.
ವಿಜಯವಾಡ: ಸ್ವಚ್ಛ ಸರ್ವೇಕ್ಷಣಾ 2021 ರಲ್ಲಿ ವಿಜಯವಾಡವು ದೇಶದ ಮೂರನೇ ಸ್ವಚ್ಛ ನಗರವಾಗಿ ಸ್ಥಾನ ಪಡೆದಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ 2020 ರಲ್ಲಿ ಆರನೇ ಸ್ಥಾನದಲ್ಲಿ ಇದ್ದ ಈ ವಿಜಯವಾಡ ನಗರವು ಈಗ ಮೂರನೇ ಸ್ಥಾನಕ್ಕೆ ಜಿಗಿದಿದೆ.
ನವಿ ಮುಂಬೈ: ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆ - ಸ್ವಚ್ಛ ಸರ್ವೇಕ್ಷಣ್ 2021 ರಲ್ಲಿ ನವಿ ಮುಂಬೈ ಭಾರತದ ನಾಲ್ಕನೇ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟಿದೆ. ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಈ ನಗರವು ಈ ವರ್ಷ ಒಂದು ಸ್ಥಾನ ಕೆಳಕ್ಕೆ ಕುಸಿದಿದೆ. ಆದರೆ ಈ ನಗರದ ನಾಗರಿಕ ಆಡಳಿತವು ಈ ವರ್ಷ ಮೊದಲ ಶ್ರೇಣಿಯನ್ನು ಸಾಧಿಸುವ ನಿರ್ಧಾರ ಮಾಡಿಕೊಂಡಿತ್ತು.
ಪುಣೆ: ಕಳೆದ ವರ್ಷ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ 15 ನೇ ಸ್ಥಾನದಲ್ಲಿ ಇದ್ದ ಪುಣೆ ನಗರವು ಈ ಬಾರಿ ಭಾರೀ ಉನ್ನತಿಯನ್ನು ಕಂಡಿದೆ. ಪುಣೆ ಈ ಬಾರಿ ಕೇಂದ್ರ ಸರ್ಕಾರದ ಸ್ವಚ್ಛತಾ ಸಮೀಕ್ಷೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಭಾರತದ ಐದನೇ ಸ್ವಚ್ಛ ನಗರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.
ರಾಯಪುರ: ಕಳೆದ ಮೂರು ವರ್ಷದಿಂದ ಛತ್ತೀಸ್‌ಗಢವು ದೇಶದ ಸ್ವಚ್ಛ ರಾಜ್ಯ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸತತ ಮೂರನೇ ವರ್ಷಕ್ಕೆ ಛತ್ತೀಸ್‌ಗಢವನ್ನು ದೇಶದ ಸ್ವಚ್ಛ ರಾಜ್ಯ ಎಂದು ಗುರುತಿಸಿದೆ. ರಾಯಪುರ ಭಾರತದ ಆರನೇ ಸ್ವಚ್ಛ ನಗರವಾಗಿದೆ.
ಭೋಪಾಲ್: 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ವಚ್ಛ ನಗರಗಳಲ್ಲಿ, ಮಧ್ಯಪ್ರದೇಶದ ಎರಡು ನಗರಗಳಾದ ಭೋಪಾಲ್ ಹಾಗೂ ಇಂದೋರ್ ಟಾಪ್ 10 ಸ್ಥಾನದಲ್ಲಿ ಇದೆ. 6000 ಅಂಕಗಳ ಪೈಕಿ ಭೋಪಾಲ್ 4783.53 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಸ್ವಚ್ಛ ನಗರ ವಿಭಾಗದಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಭೋಪಾಲ್ 2017 ಮತ್ತು 2018 ರಲ್ಲಿ ದೇಶದ ಎರಡನೇ ಸ್ವಚ್ಛ ನಗರವಾಗಿ ಸ್ಥಾನ ಪಡೆದಿತ್ತು. ಆದರೆ ಬಳಿಕ 2019 ರಲ್ಲಿ 19 ನೇ ಸ್ಥಾನಕ್ಕೆ ಕುಸಿದಿತ್ತು. ಈಗ ಮತ್ತೆ ಟಾಪ್ 10 ನಗರದ ಪಟ್ಟಿಯಲ್ಲಿ ಇದ್ದು ಏಳನೇ ಸ್ಥಾನ ಪಡೆದುಕೊಂಡಿದೆ.
ವಡೋದರಾ: 4,320 ನಗರಗಳ ಭಾಗವಿಸುವಿಕೆಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ವಡೋದರಾ ಭಾರತದಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ವಿಶ್ವದ ಅತಿದೊಡ್ಡ ನಗರ ಸ್ವಚ್ಛತಾ ಸಮೀಕ್ಷೆ ಆಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಹೇಳಿದೆ.
ವಿಶಾಖಪಟ್ಟಣಂ: ಆಂಧ್ರಪ್ರದೇಶದ ಎರಡು ಪ್ರಮುಖ ನಗರಗಳಾದ ವಿಜಯವಾಡ ಮತ್ತು ಗ್ರೇಟರ್ ವಿಶಾಖಪಟ್ಟಣಂ ರಾಷ್ಟ್ರವ್ಯಾಪಿ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಾದ 'ಸ್ವಚ್ಛ ಸರ್ವೇಕ್ಷಣ್, 2021' ರ ಆರನೇ ಆವೃತ್ತಿಯಲ್ಲಿ ಮತ್ತೆ ಟಾಪ್ 10 ಪಟ್ಟಿಯಲ್ಲಿ ಇದೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸ್ವಚ್ಛ ಭಾರತೀಯ ನಗರಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಅಹಮದಾಬಾದ್: ಕಂಟೋನ್ಮೆಂಟ್ ಬೋರ್ಡ್‌ಗಳ ವಿಭಾಗದಲ್ಲಿ, ಅಹಮದಾಬಾದ್ ಸ್ವಚ್ಛ ನಗರ ಎಂದು ಸ್ಥಾನ ಪಡೆದಿದೆ. ಅಹಮದಾಬಾದ್ ಭಾರತದ ಹತ್ತನೇ ಸ್ವಚ್ಛ ನಗರ ಎಂಬ ಸ್ಥಾನವನ್ನು ಗಳಿಸಿದೆ. ಜಿಲ್ಲಾ ಶ್ರೇಯಾಂಕ ವಿಭಾಗದಲ್ಲಿ ಸೂರತ್ ಮೊದಲ ಪ್ರಶಸ್ತಿ ಪಡೆದರೆ, ಇಂದೋರ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ ನವದೆಹಲಿ ಮೂರನೇ ಸ್ಥಾನ ಗಳಿಸಿವೆ.
(ಒನ್‌ಇಂಡಿಯಾ ಸುದ್ದಿ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications