ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ ಟರ್ಮಿನಲ್ ಚಿತ್ರಕ್ಕೆ ಪ್ರೇರಣೆಯಾಗಿದ್ದ ಇರಾನಿ ವ್ಯಕ್ತಿ ಇನ್ನು ನೆನಪು ಮಾತ್ರ

|
Google Oneindia Kannada News

ನವದೆಹಲಿ, ನವೆಂಬರ್‌ 14: 18 ವರ್ಷಗಳ ಕಾಲ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದು, ಸ್ಟೀವನ್ ಸ್ಪೀಲ್‌ಬರ್ಗ್ ಅವರ ಚಲನಚಿತ್ರ ದಿ ಟರ್ಮಿನಲ್‌ಗೆ ಪ್ರೇರಣೆಯಾಗಿದ್ದ ಇರಾನಿನ ವ್ಯಕ್ತಿಯೊಬ್ಬರು ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣದಲ್ಲಿ ನಿಧನರಾದರು.

ಪ್ಯಾರಿಸ್ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಮೆಹ್ರಾನ್ ಕರಿಮಿ ನಸ್ಸೆರಿ (76) ಅವರು ಶನಿವಾರದಂದು ವಿಮಾನ ನಿಲ್ದಾಣದ ಟರ್ಮಿನಲ್ 2 ಎಫ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಪೊಲೀಸರು ಮತ್ತು ವೈದ್ಯಕೀಯ ತಂಡ ಚಿಕಿತ್ಸೆ ನೀಡಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

Breaking: ಭಾರತದ ಉಕ್ಕಿನ ಮನುಷ್ಯ ಜಮ್ಶೆಡ್ ಇರಾನಿ ನಿಧನBreaking: ಭಾರತದ ಉಕ್ಕಿನ ಮನುಷ್ಯ ಜಮ್ಶೆಡ್ ಇರಾನಿ ನಿಧನ

ಕರಿಮಿ ನಾಸ್ಸೆರಿ ಅವರು 1988 ರಿಂದ 2006 ರವರೆಗೆ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ವಾಸಿಸುತ್ತಿದ್ದರು. ಮೊದಲು ಅವರು ವಾಸಸ್ಥಳ ದೃಢೀಕರಣ ಪತ್ರಗಳ ಕೊರತೆಯಿಂದಾಗಿ ಕಾನೂನುಬದ್ಧತೆ ಅಸ್ಥಿರತೆಯನ್ನು ಹೊಂದಿದ್ದರು. ವಿಮಾನ ನಿಲ್ದಾಣದಲ್ಲಿ ಅವರು ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಪೆಟ್ಟಿಗೆಗಳಿಂದ ಸುತ್ತುವರಿದ ಕೆಂಪು ಪ್ಲಾಸ್ಟಿಕ್ ಬೆಂಚ್ ಮೇಲೆ ಮಲಗಿರುತ್ತಿದ್ದರು. ಅಲ್ಲದೆ ಸಿಬ್ಬಂದಿ ಸೌಲಭ್ಯ ಕೇಂದ್ರಗಳಲ್ಲಿ ಸ್ನಾನ ಮಾಡುತ್ತಿದ್ದರು.

The Iranian man who inspired the film The Terminal, died at the Charles de Gaulle airport

ವಿಮಾನ ನಿಲ್ದಾಣದಲ್ಲಿ ಅವರು ತಮ್ಮ ದಿನಚರಿಯಲ್ಲಿ ಬರೆಯಲು, ನಿಯತಕಾಲಿಕೆಗಳನ್ನು ಓದಲು, ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು ಮತ್ತು ಹಾದುಹೋಗುವ ಪ್ರಯಾಣಿಕರನ್ನು ಸಮೀಕ್ಷೆ ಮಾಡಲು ಸಮಯವನ್ನು ಕಳೆದರು ಎನ್ನಲಾಗಿದೆ. ಸಿಬ್ಬಂದಿ ಅವರನ್ನು ಲಾರ್ಡ್ ಆಲ್ಫ್ರೆಡ್ ಎಂದು ಅಡ್ಡಹೆಸರಿನಿಂದ ಕರೆಯುತ್ತಿದ್ದು ಅವರು ಪ್ರಯಾಣಿಕರಲ್ಲಿ ಚಿಕ್ಕ ಸೆಲೆಬ್ರಿಟಿಯಂತಿದ್ದರು.

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಶಾ ನಿಧನಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಶಾ ನಿಧನ

ಅಂತಿಮವಾಗಿ ನಾನು ವಿಮಾನ ನಿಲ್ದಾಣವನ್ನು ತೊರೆಯುತ್ತೇನೆ ಎಂದು ಅವರು 1999ರಲ್ಲಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದರು. ಆಗ ಅವರು ತಮ್ಮ ಬೆಂಚ್‌ನಲ್ಲಿ ಸಿಗರೇಟು ಸೇದುತ್ತಿದ್ದರು. ಉದ್ದವಾದ ತೆಳ್ಳಗಿನ ಕೂದಲು, ಗುಳಿಬಿದ್ದ ಕಣ್ಣುಗಳು ಮತ್ತು ಟೊಳ್ಳಾದ ಕೆನ್ನೆಗಳೊಂದಿಗೆ ದುರ್ಬಲವಾಗಿ ಕಾಣುತ್ತಿದ್ದರು. ಆದರೆ ಅವರು ಇನ್ನೂ ಪಾಸ್‌ಪೋರ್ಟ್ ಅಥವಾ ಟ್ರಾನ್ಸಿಟ್ ವೀಸಾಕ್ಕಾಗಿ ಕಾಯುತ್ತಿದ್ದರು.

ರಾಜಕೀಯ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದರು
ಕರಿಮಿ ನಾಸ್ಸೆರಿ ಅವರು 1945ರಲ್ಲಿ ಇರಾನ್‌ನ ಒಂದು ಭಾಗವಾದ ಸೊಲೈಮಾನ್‌ನಲ್ಲಿ ಇರಾನಿನ ತಂದೆ ಮತ್ತು ಬ್ರಿಟಿಷ್ ತಾಯಿಗೆ ಜನಿಸಿದವರು. ಆಗ ಆ ಪ್ರದೇಶ ಬ್ರಿಟಿಷ್ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿತ್ತು. ಅವರು 1974ರಲ್ಲಿ ಇಂಗ್ಲೆಂಡ್‌ನಲ್ಲಿ ಅಧ್ಯಯನ ಮಾಡಲು ಇರಾನ್‌ನಿಂದ ಹೊರಟರು. ಅವರು ಹಿಂದಿರುಗಿದಾಗ ಇರಾನ್‌ ಶಾ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಅವರನ್ನು ಜೈಲಿನಲ್ಲಿರಿಸಲಾಯಿತು ಮತ್ತು ಪಾಸ್‌ಪೋರ್ಟ್ ಇಲ್ಲದೆ ಹೊರಹಾಕಲಾಯಿತು ಎಂದು ಅವರು ಹೇಳಿದರು.

The Iranian man who inspired the film The Terminal, died at the Charles de Gaulle airport

ಹಿಂದೆ ಅವರು ಯುಕೆ ಸೇರಿದಂತೆ ಯುರೋಪಿನ ಹಲವಾರು ದೇಶಗಳಲ್ಲಿ ರಾಜಕೀಯ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ತಿರಸ್ಕರಿಸಲಾಯಿತು. ಅಂತಿಮವಾಗಿ ಬೆಲ್ಜಿಯಂನಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಅವರಿಗೆ ನಿರಾಶ್ರಿತರ ಋಜುವಾತುಗಳನ್ನು ನೀಡಿತು. ಆದರೆ ನಿರಾಶ್ರಿತರ ಪ್ರಮಾಣಪತ್ರವನ್ನು ಹೊಂದಿರುವ ತನ್ನ ಬ್ರೀಫ್‌ ಕೇಸ್ ಅನ್ನು ಪ್ಯಾರಿಸ್ ರೈಲು ನಿಲ್ದಾಣದಲ್ಲಿ ಕಳವು ಮಾಡಲಾಯಿತು ಎಂದು ಹೇಳಿದರು.

ಬಳಿಕ ಫ್ರೆಂಚ್ ಪೊಲೀಸರು ನಂತರ ಅವರನ್ನು ಬಂಧಿಸಿದರು. ಆದರೆ ಯಾವುದೇ ಅಧಿಕೃತ ದಾಖಲೆಗಳನ್ನು ಹೊಂದಿಲ್ಲದ ಕಾರಣ ಅವರನ್ನು ಎಲ್ಲಿಯೂ ಗಡಿಪಾರು ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಅವರು ಆಗಸ್ಟ್ 1988ರಲ್ಲಿ ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣದಲ್ಲಿ ನಿಲ್ಲಬೇಕಾಯಿತು. ಅಲ್ಲೇ ಅವರು ಉಳಿದುಕೊಂಡರು. ನಾಸ್ಸೆರಿ ಬದುಕಿನ ಘಟನೆ ಆಧಾರದ ಮೇಲೆ ಸ್ಟೀವನ್ ಸ್ಟೀಲ್ ಬರ್ಗ್ ದಿ ಟರ್ಮಿನಲ್ ಚಿತ್ರ ನಿರ್ದೇಶಿಸಿದರು. ಟಾಮ್ ಹ್ಯಾಂಕ್ಸ್ ಹಾಗೂ ಕ್ಯಾಥರೀನ್ ಝೆಟಾ ಜೋನ್ಸ್ ಮುಖ್ಯಭೂಮಿಕೆಯಲ್ಲಿದ್ದಾರೆ.

English summary
An Iranian man who lived in Paris for 18 years and was the inspiration for Steven Spielberg's film The Terminal has died at Charles de Gaulle airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X