• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕದಿಂದ ಮುಕ್ತಿ! : ಕಣ್ಣಿನ ದೃಷ್ಟಿಗೆ ಔಷಧಿ ಕಂಡು ಹಿಡಿದ ಅಮೆರಿಕ

|
Google Oneindia Kannada News

ಇತ್ತೀಚೆಗೆ ಮೊಬೈಲ್, ಕಂಪ್ಯೂಟರ್ ಸತತ ಬಳಕೆ, ಆಹಾರದಲ್ಲಿನ ವ್ಯತ್ಯಾಸದಿಂದ ದೃಷ್ಠಿ ದೋಷದಿಂದ ಸಾಕಷ್ಟು ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳೂ ಸಹ ಕನ್ನಡಕ ಹಾಕಿಕೊಂಡು ಓಡಾಡುವುದನ್ನು ಈಗೀಗ ಹೆಚ್ಚಾಗಿ ಕಾಣಬಹುದಾಗಿದೆ. ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಕಣ್ಣು ಮಂಜಾಗಿಸುವಿಕೆ ಇತ್ಯಾದಿ ಸಮಸ್ಯೆಗೆ ಕನ್ನಡಕಗಳು ಲಭ್ಯವಿದೆ. ಆದರೆ ಅಮೆರಿಕದಲ್ಲಿ ಹೊಸದೊಂದು ಸಂಶೋಧನೆ ನಡೆದಿದ್ದು, ಇದರಿಂದ ಕನ್ನಡಕಗಳಿಗೆ ಮುಕ್ತಿ ಸಿಗುವ ಸಾಧ್ಯತೆ ಇದೆ.

ಅಮೆರಿಕದಲ್ಲಿ ದೃಷ್ಟಿ ದೋಷ ಹೊಂದಿರುವವರಿಗೆ ಕಣ್ಣಿನ ಹನಿ (ಐ ಡ್ರಾಪ್ಸ್‌) ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ಮುಸುಕಾಗುವ ಸಮಸ್ಯೆಗೆ ಪರಿಹಾರ ದೊರೆತಿದೆ ಎನ್ನಲಾಗಿದೆ. ಇದು ಲಕ್ಷಾಂತರ ಅಮೆರಿಕನ್ನರ ಜೀವನ ಬದಲಾಯಿಸುತ್ತದೆ ಎಂದು ಹೇಳಲಾಗಿದೆ.

'ಡೋಲೊ 650': ಮೈಕ್ರೋ ಲ್ಯಾಬ್ಸ್‌ನಿಂದ ವೈದ್ಯರಿಗೆ 1000 ಕೋಟಿ ಮೌಲ್ಯದ ಗಿಫ್ಟ್'ಡೋಲೊ 650': ಮೈಕ್ರೋ ಲ್ಯಾಬ್ಸ್‌ನಿಂದ ವೈದ್ಯರಿಗೆ 1000 ಕೋಟಿ ಮೌಲ್ಯದ ಗಿಫ್ಟ್

ಅದರಲ್ಲೂ40ಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಹೆಚ್ಚಾಗಿ ಕಾಡುವ ಕಣ್ಣು ಮುಸುಕು ದೃಷ್ಟಿ ದೋಷದ ಸಮಸ್ಯೆಗೆ ಹೊಸ ಔಷಧ ಪರಿಹಾರ ನೀಡುತ್ತದೆ. ಆಹಾರ ಮತ್ತು ಔಷಧ ಆಡಳಿತ (FDA) ಅನುಮೋದನೆ ಪಡೆದಿರುವ ವ್ಯೂಟಿ (Vuity) ಐ ಡ್ರಾಪ್ ನೋಡಲು ತೊಂದರೆ ಹೊಂದಿರುವ 128 ಮಿಲಿಯನ್ ಅಮೆರಿಕನ್ನರಿಗೆ ವರದಾನವಾಗಲಿದೆ ಎನ್ನಲಾಗಿದೆ.

 6ರಿಂದ 10 ಗಂಟೆಗಳ ಕಾಲ ಪರಿಣಾಮ ಬೀರುತ್ತದೆ

6ರಿಂದ 10 ಗಂಟೆಗಳ ಕಾಲ ಪರಿಣಾಮ ಬೀರುತ್ತದೆ

ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಹೊಸ ಔಷಧವು 15 ನಿಮಿಷಗಳಲ್ಲಿ ಪರಿಣಾಮ ಬೀರುತ್ತದೆ, ಪ್ರತಿ ಕಣ್ಣಿನ ಮೇಲೆ ಒಂದು ಹನಿ ಸುಮಾರು ಆರರಿಂದ ಹತ್ತು ಗಂಟೆಗಳವರೆಗೆ ತೀಕ್ಷ್ಣವಾದ ದೃಷ್ಟಿಯನ್ನು ನೀಡುತ್ತದೆ.

ಕ್ಲಿನಿಕಲ್ ಪ್ರಯೋಗದಲ್ಲಿ 750 ಜನ ಭಾಗವಹಿಸಿದ್ದಾರೆ. ಅವರಲ್ಲಿ ಒಬ್ಬರಾದ ಟೋನಿ ರೈಟ್ ಫಲಿತಾಂಶಗಳೊಂದಿಗೆ ಸಂತಸಗೊಂಡಿದ್ದಾರೆ ಎಂದು ವರದಿಯಾಗಿದೆ. "ಇದು ಖಂಡಿತವಾಗಿಯೂ ಜೀವನವನ್ನು ಬದಲಾಯಿಸುತ್ತದೆ." ಎಂದು ಟೋನಿ ರೈಟ್ ಹೇಳಿದ್ದಾರೆ.

ಲಸಿಕೆ ಹಾಕಿಸಿಕೊಳ್ಳುವ ಮೊದಲು ರೈಟ್ ಕಚೇರಿ, ಅಡುಗೆ ಮನೆ, ಕಾರು ಚಲಾಯಿಸುವಾಗ, ಪುಸ್ತಕ ಓದುವಾಗ ಕನ್ನಡಕ ಧರಿಸಿವುದು ಅನಿವಾರ್ಯ ಎನ್ನುವಂತಾಗಿತ್ತು. ಕನ್ನಡಕ ಧರಿಸಲು ನಾನು ನಿರಾಕರಿಸಿದ್ದೆ, ಕನ್ನಡಕ ಹಾಕಿದರೆ ನನಗೆ ವಯಸ್ಸಾಗಿದೆ ಎನಿಸುತ್ತಿತ್ತು ಎಂದು ಹೇಳಿದ್ದಾರೆ.

 ಕರ್ನಾಟಕದ ನಗರಗಳಲ್ಲಿ 128 ಮಹಿಳಾ ಕ್ಲಿನಿಕ್‌ಗಳು ತೆರೆಯಲು ಚಿಂತನೆ ಕರ್ನಾಟಕದ ನಗರಗಳಲ್ಲಿ 128 ಮಹಿಳಾ ಕ್ಲಿನಿಕ್‌ಗಳು ತೆರೆಯಲು ಚಿಂತನೆ

 ಔಷಧಿಗೆ ಅನುಮೋದನೆ ನೀಡಿದ ಎಫ್‌ಡಿಎ

ಔಷಧಿಗೆ ಅನುಮೋದನೆ ನೀಡಿದ ಎಫ್‌ಡಿಎ

ಅಮೆರಿಕದ ಆಹಾರ ಮತ್ತು ಔಷಧ ಮಂಡಳಿ (ಎಫ್‌ಡಿಎ) ಮೊದಲ ಬಾರಿಗೆ ಅಸ್ಪಷ್ಟ ದೃಷ್ಟಿಗೆ ಚಿಕಿತ್ಸೆ ನೀಡಲು ಕಣ್ಣಿನ ಹನಿಗಳನ್ನು ಅನುಮೋದಿಸಿದೆ. ಈ ಹನಿಗಳು ಪ್ರಿಸ್ಬಯೋಪಿಯಾಕ್ಕೆ ಚಿಕಿತ್ಸೆ ನೀಡುತ್ತವೆ, ಇದನ್ನು ವಯಸ್ಸಿಗೆ ಸಂಬಂಧಿಸಿದ ಮಸುಕಾದ ದೃಷ್ಟಿ ಎಂದೂ ಕರೆಯುತ್ತಾರೆ.

ಪ್ರಯೋಗದ ಪ್ರಮುಖ ತನಿಖಾಧಿಕಾರಿ ಜಾರ್ಜ್ ವೇರಿಂಗ್, ಔಷಧವು ಕಣ್ಣಿನ ಪಪಿಲ್ ಗಾತ್ರವನ್ನು ಕಡಿಮೆ ಮಾಡುವ ಮೂಲಕ ಕಣ್ಣಿನ ನೋಟದ ಸಹಜ ಸಾಮರ್ಥ್ಯದ ಪ್ರಯೋಜನವನ್ನು ಪಡೆಯುತ್ತದೆ. "ಪ್ಯುಪಿಲ್ ಗಾತ್ರವನ್ನು ಕಡಿಮೆ ಮಾಡುವುದರಿಂದ ಕ್ಷೇತ್ರದ ಆಳ ಅಥವಾ ಗಮನದ ಆಳವನ್ನು ವಿಸ್ತರಿಸುತ್ತದೆ ಮತ್ತು ಇದು ನೈಸರ್ಗಿಕವಾಗಿ ವಿವಿಧ ಶ್ರೇಣಿಗಳಲ್ಲಿ ಕೇಂದ್ರೀಕರಿಸಲು ನಿಮಗೆ ಅನುವು ಮಾಡಿಕೊಡುತ್ತದೆ" ಎಂದು ಅವರು ಹೇಳಿದರು.
 ಒಂದು ತಿಂಗಳ ಔಷಧಿಗೆ 80 ಡಾಲರ್

ಒಂದು ತಿಂಗಳ ಔಷಧಿಗೆ 80 ಡಾಲರ್

ವ್ಯುಟಿ (Vuity) ವಕ್ತಾರರು ಔಷಧವು 40 ಮತ್ತು 55 ವಯಸ್ಸಿನ ಜನರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು 30 ದಿನಗಳಿಗೆ ಬರುವ ಔಷಧಿಗೆ ಸುಮಾರು 80 ಡಾಲರ್ ವೆಚ್ಚವಾಗುತ್ತದೆ ಎಂದು ಹೇಳಿದರು.

ಮೂರು ತಿಂಗಳ ಪ್ರಯೋಗದ ಸಮಯದಲ್ಲಿ, ಕಂಪನಿಯ ಪ್ರಕಾರ, ತಲೆನೋವು ಮತ್ತು ಕಣ್ಣು ಕೆಂಪಾಗುವ ಅಡ್ಡಪರಿಣಾಮಗಳು ಸಂಭವಿಸಿದೆ ಎಂದು ವರದಿಯಾಗಿದೆ. ಹೆಚ್ಚುವರಿಯಾಗಿ, ಬಳಕೆದಾರರು ಹತ್ತಿರದ ಮತ್ತು ದೂರದ ವಸ್ತುಗಳ ನಡುವೆ ಗಮನವನ್ನು ಹೊಂದಿಸಲು ತಾತ್ಕಾಲಿಕ ತೊಂದರೆ ಅನುಭವಿಸಬಹುದು.

 ಡ್ರಾಪ್ಸ್‌ನಿಂದ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ

ಡ್ರಾಪ್ಸ್‌ನಿಂದ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ

"ಇದು ದೀರ್ಘಾವಧಿಯವರೆಗೆ ಸಹಿಸಿಕೊಳ್ಳಬಹುದಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ, ಆದರೆ ಇದನ್ನು ಔಪಚಾರಿಕ ಸಾಮರ್ಥ್ಯದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅಧ್ಯಯನ ಮಾಡಲಾಗುತ್ತದೆ" ಎಂದು ವೇರಿಂಗ್ ಹೇಳುತ್ತಾರೆ.

ವ್ಯುಟಿ (Vuity) ಡ್ರಾಪ್ಸ್ ಯಾವುದೇ ರೀತಿಯಿಂದಲೂ ಚಿಕಿತ್ಸೆ ಅಲ್ಲ, ಮತ್ತು ಅವುಗಳ ತಯಾರಕರು ರಾತ್ರಿಯಲ್ಲಿ ಚಾಲನೆ ಮಾಡುವಾಗ ಅಥವಾ ಕಡಿಮೆ ಬೆಳಕಿನ ಅಗತ್ಯವಿರುವ ಇತರ ಚಟುವಟಿಕೆ ಮಾಡುವಾಗ ಡ್ರಾಪ್ಸ್ ಬಳಸದಂತೆ ಎಚ್ಚರಿಕೆ ನೀಡುತ್ತಾರೆ. ಈ ಔಷಧಿ ಸೌಮ್ಯದಿಂದ ಮಧ್ಯಂತರ ಪ್ರಕರಣಗಳಿಗೆ ಮತ್ತು ಕಣ್ಣುಗಳ ವಯಸ್ಸಾದ ಕಾರಣ 65 ವರ್ಷದ ಮೇಲ್ಪಟ್ಟವರ ಮೇಲೆ ಅಷ್ಟಾಗಿ ಪರಿಣಾಮ ಬೀರಲ್ಲ ಎಂದು ಹೇಳಿದೆ.

Recommended Video

   Jaggesh ಮೋದಿಯವರನ್ನೇ ಲಾಂಛನದ ಸಿಂಹಕ್ಕೆ ಹೋಲಿಸಿದ್ದಾರೆ | *Politics | OneIndia Kannada
   English summary
   The FDA has approved eye drops to treat blurred near vision for the first time. These drops treat presbyopia, also known as age-related blurry vision. The condition, mostly plagues those over-40, and the new drug just might provide a solution.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X