• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Stories of Strength: ಮಹಾರಾಷ್ಟ್ರದ ಈ ಗ್ರಾಮ ಕೋವಿಡ್‌ ಮುಕ್ತ - ರಾಜ್ಯದ ಕಿರಿಯ ಸರ್ಪಂಚ್‌ಗೆ ಧನ್ಯವಾದ

|
Google Oneindia Kannada News

ಮುಂಬೈ, ಜೂ. 02: ಪಂಚ ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ಹಾಗೂ ಜನರಲ್ಲಿ ಕೊರೊನಾ ಕುರಿತು ಜವಾಬ್ದಾರಿಯುತ ಭಾವನೆ ಮೂಡಿಸುವಲ್ಲಿ ಮಹಾರಾಷ್ಟ್ರದ ಕಿರಿಯ ಸರ್ಪಂಚ್ ಋತುರಾಜ್‌ ದೇಶ್ಮುಖ್ ಮತ್ತು ತಂಡ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮುಖೇನ ಸೋಲಾಪುರ ಜಿಲ್ಲೆಯಲ್ಲಿರುವ ತಮ್ಮ ಗ್ರಾಮವನ್ನು ಕೊರೊನಾವೈರಸ್‌ ಸೋಂಕು ಮುಕ್ತವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

21 ವರ್ಷದ ಋತುರಾಜ್‌ ದೇಶ್ಮುಖ್ 1,500 ಜನಸಂಖ್ಯೆಯನ್ನು ಹೊಂದಿರುವ ಘಟ್ನೆವಿಲೇಜ್‌ನ ಸರ್ಪಂಚ್ ಆಗಿದ್ದಾರೆ. ಈ ಗ್ರಾಮದಲ್ಲಿ ಸರ್ಪಂಚ್‌ ಕೈಗೊಂಡ ಕೊರೊನಾ ಜಾಗೃತಿ ಕಾರ್ಯಕ್ರಮದಿಂದಾಗಿ 2020 ರ ಮಾರ್ಚ್‌ನಿಂದ 2021 ರ ಏಪ್ರಿಲ್‌ವರೆಗೆ ಯಾವುದೇ ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿಲ್ಲ. ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಈ ಬೆಳವಣಿಗೆಯು ದೇಶಕ್ಕೆ ಸ್ಪೂರ್ತಿಯಾಗಿದೆ.

Stories of Strength: ಬೇಗ ಚಿಕಿತ್ಸೆ ತೆಗೆದುಕೊಳ್ಳಿ, ವೈದ್ಯರ ಮಾತು ಕೇಳಿ Stories of Strength: ಬೇಗ ಚಿಕಿತ್ಸೆ ತೆಗೆದುಕೊಳ್ಳಿ, ವೈದ್ಯರ ಮಾತು ಕೇಳಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ತಮ್ಮ ಭಾಷಣದಲ್ಲಿ ಗ್ರಾಮವನ್ನು ಕೊರೊನಾ ಮುಕ್ತವಾಗಿಸುಲ್ಲಿ ಸರ್ಪಂಚ್‌ ಋತುರಾಜ್‌ ದೇಶ್ಮುಖ್‌ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಕೊರೊನಾ ವಿರುದ್ದ ಹೋರಾಡಿ "ಮೈ ವಿಲೇಜ್ ಕೊರೊನಾ ಫ್ರೀ" (ನನ್ನ ಗ್ರಾಮ ಕೊರೊನಾ ಮುಕ್ತ) ಎಂಬ ಘೋಷಿಸಲು ಸರ್ಪಂಚ್‌ ಋತುರಾಜ್‌ರಿಂದ ಸ್ಫೂರ್ತಿ ಪಡೆಯುವಂತೆ ರಾಜ್ಯದ ಎಲ್ಲಾ ಸರ್ಪಂಚಿಗಳಿಗೆ ಮನವಿ ಮಾಡಿದ್ದಾರೆ.

ಸರ್ಪಂಚ್ ಋತುರಾಜ್‌ ದೇಶ್ಮುಖ್, ಕಳೆ ಏಪ್ರಿಲ್ ಮೊದಲ ವಾರದಲ್ಲಿ, ಎರಡು ಕೋವಿಡ್ -19 ಪ್ರಕರಣಗಳು ದಾಖಲಾಗಿದೆ. ಆದರೆ ಎರಡೂ ರೋಗಿಗಳು ಸಾವನ್ನಪ್ಪಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿತ್ತು. ಅನೇಕ ಜನರು ತಮ್ಮ ಮನೆಗಳನ್ನು ತೊರೆದು ತಮ್ಮ ಹೊಲಗಳಲ್ಲಿ ವಾಸಿಸಲು ಪ್ರಾರಂಭಿಸಿದರು" ಎಂದು ಹೇಳಿದ್ದಾರೆ. ಈ ಹಂತದಲ್ಲಿ, ದೇಶ್ಮುಖ್ ತಮ್ಮ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸಿದ್ದು, ಕೊರೊನಾ ವಿರುದ್ದ ಹೋರಾಡುವ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದರು ಎಂದು ತಿಳಿಸಿದ್ದಾರೆ.

"ಸಕಾರಾತ್ಮಕ ದೃಷ್ಟಿಕೋನದಿಂದ ನಮ್ಮ ಹಳ್ಳಿಯನ್ನು ನಾವು ಕೊರೊನಾವೈರಸ್‌ ಮುಕ್ತವಾಗಿರಿಸಿಕೊಳ್ಳಬಹುದು ಎಂಬ ವಿಶ್ವಾಸವಿರಬೇಕು ಎಂಬುದು ನನ್ನ ಮಂತ್ರ" ಎಂದು ದೇಶಮುಖ್ ಹೇಳಿದ್ದಾರೆ.

Stories of Strength: ಧೈರ್ಯ ಇದ್ದರೆ ಮಾತ್ರ ಇಲ್ಲಿ ಬೇಗ ಗುಣವಾಗಲು ಸಾಧ್ಯ: ಅಕ್ಷಯ ಕೃಷ್ಣ ಭೈರುಮನೆ Stories of Strength: ಧೈರ್ಯ ಇದ್ದರೆ ಮಾತ್ರ ಇಲ್ಲಿ ಬೇಗ ಗುಣವಾಗಲು ಸಾಧ್ಯ: ಅಕ್ಷಯ ಕೃಷ್ಣ ಭೈರುಮನೆ

ಇನ್ನು ತಾವು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಸರ್ಪಂಚ್, "ನಾನು ಮತ್ತು ನಮ್ಮ ತಂಡವು ಪಂಚ ಅಂಶಗಳ ಕಾರ್ಯಕ್ರಮದಡಿ ಜೊತೆಗೂಡಿದೆವು. ನಾವು ಪತ್ತೆಹಚ್ಚುವಿಕೆ, ಪರೀಕ್ಷೆ, ಚಿಕಿತ್ಸೆ, ವ್ಯಾಕ್ಸಿನೇಷನ್ ಮತ್ತು ಕೋವಿಡ್ ತಡೆಗೆ ಸೂಕ್ತವಾದ ಜೀವನ ಕ್ರಮ ಅನುಸರಿಸುವುದನ್ನು ಒಳಗೊಂಡ ಐದು ಅಂಶಗಳ ಕಾರ್ಯಕ್ರಮವನ್ನು ರೂಪಿಸಿದೆವು" ಎಂದು ತಿಳಿಸಿರುವ ದೇಶ್ಮುಖ್, "ಇದಲ್ಲದೆ, ಆಶಾ ಕಾರ್ಯಕರ್ತರು ಹಳ್ಳಿಯ ಪ್ರತಿ ಮನೆಗೆ ಭೇಟಿ ನೀಡಿ ರಕ್ತದ ಆಕ್ಸಿಜನ್‌ ಮಟ್ಟ ಮತ್ತು ದೇಹದ ಉಷ್ಣತೆಯ ಪರಿಶೀಲನೆ ನಡೆಸುತ್ತಿದ್ದರು" ಎಂದು ಕೂಡಾ ವಿವರಿಸಿದ್ದಾರೆ.

ಹಾಗೆಯೇ ರಕ್ತದ ಆಮ್ಲಜನಕದ ಮಟ್ಟ 92 ಕ್ಕಿಂತ ಕಡಿಮೆ ಇರುವ ಗ್ರಾಮಸ್ಥರನ್ನು ಪ್ರತ್ಯೇಕ ಕೇಂದ್ರಗಳಿಗೆ ಅಥವಾ ಗ್ರಾಮದಿಂದ 4 ಕಿ.ಮೀ ದೂರದಲ್ಲಿರುವ ಮೊಹೋಲ್ ತಾಲ್ಲೂಕಿನ ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದಿದ್ದಾರೆ ದೇಶ್ಮುಖ್.

(ಒನ್ಇಂಡಿಯಾ ಸುದ್ದಿ)

English summary
This village in Maharashtra is now COVID-19 free, thanks to its youngest sarpanch of state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X