Sleep Contest: 90 ನಿಮಿಷ ಗಾಢ ನಿದ್ದೆ ಮಾಡಿದರೆ 13ಲಕ್ಷ ರೂ. ಬಹುಮಾನ : ವಿಚಿತ್ರವಾಗಿದೆ ಈ ಸ್ಪರ್ಧೆ

Sleep Contest: ಹಣ ಗಳಿಸಬೇಕು ಎಂದರೆ ಕಷ್ಟಪಟ್ಟು ದುಡಿಯಬೇಕು. ರಾತ್ರಿ ಹಗಲು ಬೆವರಿಳಿಸಬೇಕು. ಆಗ ಮಾತ್ರ ಹಣ ಸಂಪಾದಿಸುವುದು ಸಾಧ್ಯವಾಗುತ್ತದೆ. ಆದರೆ ಸುಮ್ಮನೆ ಆರಾಮಾಗಿ ಮಲಗುವ ಮೂಲಕವೇ ಲಕ್ಷಾಂತರ ಹಣ ಗಳಿಸಬಹುದು ಎಂದಾದರೆ? ಹೌದು, ಇಂಥದ್ದೊಂದು ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸುವ ಬಗ್ಗೆ ಜಪಾನಿನ ಮ್ಯಾಟರರ್ಸ್‌ ಕಂಪನಿಯೊಂದು ನಿರ್ಧರಿಸಿದೆ. ಈ ಸ್ಪರ್ಧೆಯಲ್ಲಿ ಆಟ, ಓಟ ಇರುವುದಿಲ್ಲ. ಬದಲಾಗಿ ನಿದ್ದೆ ಮಾಡುವುದೇ ಇಲ್ಲಿ ಸ್ಪರ್ಧೆ. ಇದರಲ್ಲಿ ಗೆದ್ದರೆ ಲಕ್ಷಾಂತರ ರೂಪಾಯಿಗಳ ನಗದು ಬಹುಮಾನ.

ನಿದ್ರೆ ಮಾತ್ರವಲ್ಲ , ನಿದ್ರೆಯ ಗುಣಮಟ್ಟವೂ ಮುಖ್ಯ

ಈ ವಿಶಿಷ್ಟ ಸ್ಪರ್ಧೆಯು ಅಕ್ಟೋಬರ್ 5, 2026 ರಂದು ಜಪಾನ್‌ನ ಟೋಕಿಯೊದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಶೇರ್ ಗ್ರೀನ್ ಮಿನಾಮಿ ಅಯೋಮಾದಲ್ಲಿ ನಡೆಯಲಿದೆ. ಇಲ್ಲಿ ಗೆದ್ದವರಿಗೆ 2.22 ಮಿಲಿಯನ್ ಯೆನ್ ಅಥವಾ ಸರಿಸುಮಾರು 13.76 ಲಕ್ಷ ರೂ. ಬಹುಮಾನ ಸಿಗುತ್ತದೆ.

Sleep Contest 90 Minute Sleep Winner Can Get 13 Lakh Rupees Cash Prize amp amp 2 Awards Sleep Contest Of Japan

90 ನಿಮಿಷಗಳವರೆಗೆ ಉತ್ತಮ ನಿದ್ರೆ ಮಾಡಲೇಬೇಕು

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಇಲ್ಲಿ 90 ನಿಮಿಷಗಳ ನಿದ್ದೆ ಮಾಡಬೇಕಾಗುತ್ತದೆ. ಇಲ್ಲಿ ಮಲಗಿದ ಕೂಡಲೇ ನಿದ್ದೆ ಬಂದರೆ ಸಾಕಾಗುವುದಿಲ್ಲ, ಇದರ ಜೊತೆಗೆ ಅವರ ನಿದ್ರೆ ಎಷ್ಟು ಆಳವಾಗಿರುತ್ತದೆ, ಈ ಸಮಯದಲ್ಲಿ ಅವರ ನಿದ್ರೆ ಎಷ್ಟು ಸ್ಥಿರವಾಗಿರುತ್ತದೆ ಎಂಬುದನ್ನು ಸಂಘಟಕರು ಮೇಲ್ವಿಚಾರಣೆ ಮಾಡುತ್ತಾರೆ. ನಿದ್ರೆಗೆ ಸಂಬಂಧಿಸಿದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ನಿದ್ರೆ-ಟ್ರ್ಯಾಕಿಂಗ್ ಸಾಧನಗಳನ್ನು ಬಳಸಲಾಗುತ್ತದೆ.

ಮಲಗುವ ಮುನ್ನ ವ್ಯಾಯಾಮ ಕಡ್ಡಾಯ

ಈ ಸ್ಪರ್ಧೆಯಲ್ಲಿ ಭಾಗವಹಿಸುವಹಿಸುವವರು ಹಾಗೆಯೇ ಸುಮ್ಮನೆ ಬಂದು ಹಾಸಿಗೆ ಮೇಲೆ ಮಲಗುವುದಕ್ಕೆ ಅವಕಾಶವಿರುವುದಿಲ್ಲ. ಇದಕ್ಕೂ ಮೊದಲು ಕೆಲವು ವ್ಯಾಯಾಮಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ನಂತರ, ಪ್ರತಿ ಸ್ಪರ್ಧಿಗೆ ಮಲಗಲು ಒಂದು ವಸ್ತುವನ್ನು ನೀಡಲಾಗುತ್ತದೆ. ಇದರರ್ಥ ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಾವು ಯಾವುದರ ಜೊತೆಗೆ ಮತ್ತು ಹೇಗೆ ಮಲಗಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಲು ಅವಕಾಶವಿರುವುದಿಲ್ಲ.

ರಾತ್ರಿಯಿಡೀ ನಿದ್ದೆ ಬಿಡಲು ಅವಕಾಶವಿಲ್ಲ

ಈ ಸ್ಪರ್ಧೆಯ ಉದ್ದೇಶ ಒಬ್ಬರನ್ನು ಆಯಾಸಗೊಳಿಸಿ ನಿದ್ದೆಗೆಡಿಸುವುದು ಮಾತ್ರವಲ್ಲ. ಸ್ಪರ್ಧಿಗಳ ನೈಸರ್ಗಿಕ ನಿದ್ರೆಯ ಗುಣಮಟ್ಟವನ್ನು ಪರೀಕ್ಷಿಸುವುದು ಕೂಡಾ ಇಲ್ಲಿ ಮುಖ್ಯವಾಗಿರುತ್ತದೆ. ಆದ್ದರಿಂದ, ಸ್ಪರ್ಧೆಯ ಮೊದಲ ದಿನ ರಾತ್ರಿ ಉದ್ದೇಶಪೂರ್ವಕವಾಗಿ ಎಚ್ಚರದಿಂದ ಇರಲು ಅಥವಾ ನಿದ್ದೆ ಮಾಡದಿರಲು ಅವಕಾಶ ಇರುವುದಿಲ್ಲ. ಅಲ್ಲದೆ, ನಿದ್ರೆ ಮಾತ್ರೆಗಳು ಅಥವಾ ಇತರ ಔಷಧಿಗಳನ್ನು ಕೂಡಾ ತೆಗೆದುಕೊಳ್ಳುವ ಹಾಗಿಲ್ಲ. ಅವರ ನಿದ್ರೆ ಎಷ್ಟು ಸ್ಥಿರವಾಗಿರುತ್ತದೆ ಎಂಬುದನ್ನು ನಿರ್ಣಯಿಸಲು ಆಯೋಜಕರು ಸ್ಪರ್ಧೆಯ ಸಮಯದಲ್ಲಿ ಅನಿರೀಕ್ಷಿತ ಕಿರಿಕಿರಿಯನ್ನು ಕೂಡಾ ಉಂಟು ಮಾಡಬಹುದು.

Sleep Contest: ನೀಡಲಾಗುತ್ತದೆ ಹಲವು ರೀತಿಯ ಪ್ರಶಸ್ತಿ

ಈ ವಿಶಿಷ್ಟ ಸ್ಪರ್ಧೆಯು ಮುಖ್ಯ ವಿಜೇತರನ್ನು ಮಾತ್ರ ಗೌರವಿಸುವುದಿಲ್ಲ. ಇಲ್ಲಿ ಸ್ಪರ್ಧಿಗಳು ಯಾವ ರೀತಿ ನಿದ್ದೆ ಮಾಡುತ್ತಾರೆ ಎನ್ನುವುದನ್ನು ಆಧರಿಸಿ ವಿಶೇಷ ಪ್ರಶಸ್ತಿಗಳನ್ನು ಕೂಡಾ ನೀಡಲಾಗುತ್ತದೆ. ಇವುಗಳಲ್ಲಿ ಡೀಪ್ ಸ್ಲೀಪ್ ಡೈವ್ ಪ್ರಶಸ್ತಿ, ಮತ್ತು sleeping positions ಅಂದರೆ ನೀವು ಮಲಗುವ ಭಂಗಿಗೂ ಪ್ರಶಸ್ತಿ ನೀಡಲಾಗುತ್ತದೆ.

ಸ್ಪರ್ಧೆಗೆ ಅರ್ಜಿ ಸಲ್ಲಿಸುವವರು ಯಾವುದೇ ರೀತಿಯ ಹಣ ಕಟ್ಟಬೇಕಿಲ್ಲ. ಇದು ಉಚಿತ ಪ್ರವೇಶ. ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ ಸೆಪ್ಟೆಂಬರ್ 16 ಆಗಿತ್ತು. ಆಯೋಜಕರ ಪ್ರಕಾರ, ಮೂರು ಪ್ರತ್ಯೇಕ ಅವಧಿಗಳಲ್ಲಿ ಪ್ರತಿಯೊಂದರಲ್ಲೂ ಸುಮಾರು 20 ಜನ ಭಾಗವಹಿಸುವ ನಿರೀಕ್ಷೆಯಿದೆ.

Sleep Contest: ಈ ಸ್ಪರ್ಧೆ ನಡೆಸುವ ಉದ್ದೇಶ

ಈ ಸ್ಪರ್ಧೆಯ ಹಿಂದಿನ ಉದ್ದೇಶ ಕೇವಲ ಮನರಂಜನೆಯಲ್ಲ, ಬದಲಾಗಿ ಗಂಭೀರ ಸಮಸ್ಯೆಯತ್ತ ಗಮನ ಸೆಳೆಯುವುದು. ನಿದ್ರಾಹೀನತೆ ಮತ್ತು ಜಪಾನ್‌ನಲ್ಲಿ ಉತ್ತಮ ವಿಶ್ರಾಂತಿಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಆಯೋಜಕರ ಉದ್ದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+