ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾ ಭೂಕಂಪ: 2 ದಿನಗಳ ನಂತರ ಜೀವಂತವಾಗಿ ಹೊರಬಂದ ಮಗು

|
Google Oneindia Kannada News

ನವೆಂಬರ್ 21 ರಂದು ಇಂಡೋನೇಷ್ಯಾದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಿಂದ ಅಪಾರ ಪ್ರಾಣ ಹಾನಿ ಸಂಭವಿಸಿದೆ. ಈವರೆಗೆ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 271ಕ್ಕೆ ಏರಿಕೆಯಾಗಿದ್ದು, 151ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸತ್ತವರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಕ್ಕಳಿದ್ದಾರೆ ಎಂದು ಹೇಳಾಗುತ್ತಿದೆ. ಇದೇ ವೇಳೆ ಗಾಯಗೊಂಡವರ ಸಂಖ್ಯೆ 1083 ದಾಟಿದೆ. ಇದೆಲ್ಲದರ ನಡುವೆ ಜನರಿಗೂ ಒಂದು ಒಳ್ಳೆಯ ಸುದ್ದಿ ಕೇಳಿ ಬಂತು.

ಅದೇನೆಂದರೆ ಇಂದು ಮೂರು ದಿನಗಳ ನಂತರ ಆರು ವರ್ಷದ ಮಗುವನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆದಿರುವುದು. ಇಷ್ಟು ದಿನ ಅವಶೇಷಗಳಡಿ ಹೂತು ಹೋಗಿದ್ದರೂ ಮಗು ಜೀವಂತವಾಗಿರುವುದನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ಇಂಡೋನೇಷ್ಯಾದ ಜನರು ಇದನ್ನು ದೇವರ ಪವಾಡ ಎಂದು ಕರೆದಿದ್ದಾರೆ. ಅವಶೇಷಗಳಿಂದ ಹೊರತೆಗೆದ ನಂತರ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಗರಕ್ ಗ್ರಾಮದಲ್ಲಿ ರಕ್ಷಣಾ ಪಡೆ ಅಜ್ಕಾ ಮೌಲಾನಾ ಮಲಿಕ್ ಎಂಬ ಮಗುವನ್ನು ರಕ್ಷಿಸಿದ್ದಾರೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆ (ಬಿಎನ್‌ಪಿಬಿ) ತಿಳಿಸಿದೆ. ಆರಂಭದಲ್ಲಿ ಪಾರುಗಾಣಿಕಾ ತಂಡ ಅವಶೇಷಗಳಡಿ ಸಿಲುಕಿದ್ದ ಮಗುವನ್ನು ಪತ್ತೆ ಮಾಡಿದರು. ಅಜ್ಜಿಯ ಮೃತದೇಹದ ಪಕ್ಕದಲ್ಲಿ ಅಜ್ಕಾ (ಮಗು) ಕಂಡುಬಂದಿತ್ತು. ಇದಕ್ಕೂ ಮುನ್ನ ಮಗುವಿನ ಪೋಷಕರ ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿತ್ತು. ಅದರೆ ಮಗುವನ್ನು ರಕ್ಷಿಸುವುದು ಅಷ್ಟು ಸುಲಭವಾಗಿರಲಿಲ್ಲ. ಸತತ ಪ್ರಯತ್ನದ ಬಳಿಕ ಮಗುವನ್ನು ರಕ್ಷಿಸಲಾಗಿದೆ.

Six-year-old boy pulled alive from rubble of Indonesia quake

ಜನ್ಮ ನೀಡಿದ ಮರುಕ್ಷಣವೇ ಪ್ರಾಣ ಬಿಟ್ಟ ಮಗು

ಇದೆಂತ ವಿಪರ್ಯಾಸ ನೋಡಿ. ಅಲ್ಲಿ ಭೂಕಂಪ ಸಂಭವಿಸಿ ಮೂರು ದಿನ ಕಳೆದ ಮೇಲೆ ಮಗುವೊಂದು ಬದುಕುಳಿದಿತ್ತು. ಆದರೆ ಇಲ್ಲೊಂದು ಮಗು ಕಣ್ಣು ಬಿಟ್ಟು ಪ್ರಪಂಚವನ್ನು ನೋಡುವ ಮುನ್ನವೇ ಸಾವನ್ನಪ್ಪಿದೆ. ಭೂಕಂಪದ ನಂತರ ಗರ್ಭಿಣಿ ಮಹಿಳೆ ರೋಹ್ಮತ್ ಕಾರ್ತಿನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಭೀಕರ ಭೂಕಂಪದಿಂದ ಗಂಡ-ಹೆಂಡತಿ ಇಬ್ಬರೂ ಪಾರಾಗಿದ್ದಾರೆ. ಆದರೆ ಭೂಕಂಪದಿಂದ ಎಲ್ಲಾ ಆಸ್ಪತ್ರೆಗಳು ಮತ್ತು ಕಟ್ಟಡಗಳು ನಾಶವಾಗಿ ಮಗು ಬದುಕುಳಿಯಲಿಲ್ಲ.

Six-year-old boy pulled alive from rubble of Indonesia quake

ಸಾವು ಮತ್ತು ಜೀವನದ ಯುದ್ಧ

ತುಂಬು ಗರ್ಭಿಣಿ ರೋಹ್ಮತ್ ಅವರ ಪತಿ ಸೋಲಿಹಿನ್ ಅವರು ತಮ್ಮ ಗರ್ಭಿಣಿ ಹೆಂಡತಿಯನ್ನು ಎಲ್ಲಿಗೆ ಕರೆದೊಯ್ಯಬೇಕು. ಅವರು ತಮ್ಮ ಮಗುವಿಗೆ ಎಲ್ಲಿ ಸುರಕ್ಷಿತವಾಗಿ ಜನ್ಮ ನೀಡಬಹುದು ಎಂಬ ಗೊಂದಲದಲ್ಲಿದ್ದರು. ಅಂತಿಮವಾಗಿ, ಪತಿ ರೋಹ್ಮತ್‌ಗೆ ಟೆಂಟ್‌ನೊಂದಿಗೆ ತೆರೆದ ಮೈದಾನದಲ್ಲಿ ತಾತ್ಕಾಲಿಕ ವೈದ್ಯಕೀಯ ಸೌಲಭ್ಯ ನೀಡಲು ನಿರ್ಧರಿಸಿದರು. ರೋಹ್ಮತ್ ಮತ್ತು ಆಕೆಯ ಪತಿ ಕೆಸರುಮಯವಾದ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರಯಾಣಿಸಿ ಅಲ್ಲಿಗೆ ತಲುಪಿದರು. ಇಂಡೋನೇಷ್ಯಾ ಭೂಕಂಪದ ದುರಂತವನ್ನು ಎದುರಿಸುತ್ತಿರುವಾಗ ರೋಹ್ಮತ್ ಮತ್ತು ಸೋಲಿಹಿನ್ ದೇವರಿಂದ ನಾಲ್ಕನೇ ಮಗುವನ್ನು ಪಡೆದರು. ಗಂಡ ಹೆಂಡತಿ ಇಬ್ಬರೂ ನವಜಾತ ಶಿಶುವಿನ ಆಗಮನವನ್ನು ಸಂಭ್ರಮಿಸುತ್ತಾರೆ. ಆದರೆ ಆ ಸಂಭ್ರಮ ತುಂಬಾ ಹೊತ್ತು ಇರಲಿಲ್ಲ. ಮಗು ಹುಟ್ಟುತ್ತಲೇ ಸಾವನ್ನಪ್ಪಿತು.

Six-year-old boy pulled alive from rubble of Indonesia quake

ಇಲ್ಲಿಯವರೆಗೆ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 271 ಕ್ಕೆ ಏರಿದೆ ಎಂದು ಬಿಎನ್‌ಪಿಬಿ ಮುಖ್ಯಸ್ಥ ಮೇಜರ್ ಜನರಲ್ ಸುಹರ್ಯಾಂಟೊ ಹೇಳಿದ್ದಾರೆ. ಸತ್ತವರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ.

English summary
A 5.6 magnitude earthquake struck Indonesia on November 21, killing more children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X