• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಎರಡನೇ ಅಲೆ ಭೀಕರತೆ; ತಜ್ಞರು ಕೊಟ್ಟ ದೊಡ್ಡ ಎಚ್ಚರಿಕೆ

|

ನವದೆಹಲಿ, ಮಾರ್ಚ್ 27: ದೇಶದಲ್ಲಿ ಫೆಬ್ರವರಿ ನಂತರ ಮತ್ತೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಸೋಂಕಿನ ಎರಡನೇ ಅಲೆ ಆರಂಭವಾಗಿರುವುದಾಗಿ ತಜ್ಞರು ತಿಳಿಸಿದ್ದಾರೆ. ದೇಶದ ಹತ್ತೊಂಬತ್ತು ರಾಜ್ಯಗಳಲ್ಲಿ ಕೊರೊನಾ ಮರುಉತ್ಪತ್ತಿ ಸಂಖ್ಯೆ ಸುರಕ್ಷತಾ ಮಿತಿ ದಾಟುತ್ತಿದ್ದು, ಕೊರೊನಾ ಎರಡನೇ ಅಲೆ ಮೊದಲನೆಯದಕ್ಕಿಂತ ಅತಿ ಕೆಟ್ಟದಾಗಿರುತ್ತದೆ ಎಂದು ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಈ ಕುರಿತು ಮಾತನಾಡಿರುವ ಬೆಂಗಳೂರಿನ ಡಾ. ಗಿರಿಧರ್ ಬಾಬು, "ಸೋಂಕಿನ ಮರುಉತ್ಪತ್ತಿ ಸಂಖ್ಯೆಯು (reproduction number) ಹತ್ತೊಂಬತ್ತು ರಾಜ್ಯಗಳಲ್ಲಿ ಸುರಕ್ಷತಾ ಮಿತಿ ದಾಟಿದೆ. ರಾಷ್ಟ್ರಾದ್ಯಂತ ಈ ಸಂಖ್ಯೆ 1.65 ಇದ್ದು, ಕರ್ನಾಟಕದಲ್ಲಿ ಪ್ರಸ್ತುತ 1.66 ಇದೆ ಎಂದು ತಿಳಿಸಿದ್ದಾರೆ. ಇದರರ್ಥ, ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದರೆ, ಆ ವ್ಯಕ್ತಿಯಿಂದ 1.66 ಮಂದಿಗೆ ಸೋಂಕು ತಗುಲಬಹುದು ಎಂದು ವಿವರಿಸಿದ್ದಾರೆ. ಮುಂದೆ ಓದಿ...

ಎಚ್ಚರ: ಭಾರತದಲ್ಲಿ ಒಂದೇ 60,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ

"ಕೊರೊನಾ ಎರಡನೇ ಅಲೆ ಹೊಡೆತ ತೀವ್ರ"

ಕೊರೊನಾ ಸೋಂಕಿನ ಹೆಚ್ಚಳದ ಕುರಿತು ಜನರು ಹಾಗೂ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಕೊರೊನಾ ಎರಡನೇ ಅಲೆ ಹೊಡೆತ ಇನ್ನಷ್ಟು ಭೀಕರವಾಗಬಹುದು ಎಂದು ಹೇಳಿರುವ ಅವರು, ಪಂಜಾಬ್‌ನಲ್ಲಿ ಸಮುದಾಯ ಮಟ್ಟದಲ್ಲಿ ಯುಕೆ ರೂಪಾಂತರ ಕೊರೊನಾ ಸೋಂಕು ಹರಡುತ್ತಿದೆ. ಶೀಘ್ರವೇ ಬೇರೆ ರಾಜ್ಯಗಳಿಗೂ ಇದು ಹರಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರಿನಲ್ಲಿ ಹೊಸ ಕೊರೊನಾ ರೂಪಾಂತರ ಪತ್ತೆ

ಬೆಂಗಳೂರಿನಲ್ಲಿ ಹೊಸ ಕೊರೊನಾ ರೂಪಾಂತರ ಪತ್ತೆ

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಕುರಿತು ಮಾತನಾಡಿರುವ ಅವರು, "ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮತ್ತೊಂದು ಕೊರೊನಾ ರೂಪಾಂತರವನ್ನು ಪತ್ತೆಹಚ್ಚಲಾಗಿದೆ. ಇದನ್ನು B.1.36 ಎಂದು ಹೆಸರಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿಂದೆ ಶೇ 43.7ರಷ್ಟು ಪಾಲು ಈ ರೂಪಾಂತರದ್ದಾಗಿದೆ" ಎಂದು ಹೇಳಿದ್ದಾರೆ.

ಹಬ್ಬಗಳ ಸಾಲು; ಕೊರೊನಾ ಕುರಿತು ರಾಜ್ಯಗಳಿಗೆ ಗೃಹ ಸಚಿವಾಲಯ ಪತ್ರ

"ಲಾಕ್‌ಡೌನ್ ಈಗ ಅಪ್ರಸ್ತುತ"

ಸರ್ಕಾರವು ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲೇಬೇಕಿದೆ. ಸೂಪರ್‌ ಸ್ಪ್ರೆಡರ್‌ಗಳು ತಂದೊಡ್ಡುವ ಗಂಡಾಂತರದ ಬಗ್ಗೆ ನಿಗಾ ವಹಿಸಲೇಬೇಕಿದೆ. ಜನಜಂಗುಳಿ ಸೇರುವುದನ್ನು ತಡೆಯಬೇಕಿದೆ ಎಂದು ಹೇಳಿದ್ದಾರೆ. ಆದರೆ ಲಾಕ್‌ಡೌನ್ ಇದಕ್ಕೆ ಪರಿಹಾರ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ. 2020ರಲ್ಲಿ ರಾಜ್ಯ ಹಾಗೂ ದೇಶದ ಆರೋಗ್ಯ ಮೂಲಸೌಕರ್ಯಗಳಿಗೆ ಸಹಾಯ ಮಾಡಲು ಲಾಕ್‌ಡೌನ್ ಅಗತ್ಯವಿತ್ತು. ಆದರೆ ಈಗ ಲಾಕ್‌ಡೌನ್ ಅಪ್ರಸ್ತುತ ಎಂದು ಹೇಳಿದ್ದಾರೆ.

 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಶೀಘ್ರ ಲಸಿಕೆ ಅಗತ್ಯ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಶೀಘ್ರ ಲಸಿಕೆ ಅಗತ್ಯ

ಸದ್ಯಕ್ಕೆ ತುರ್ತು ಇರುವುದರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ಮಾಡಬೇಕಿದೆ. ಅಂತರರಾಷ್ಟ್ರೀಯವಾಗಿ ಲಭ್ಯವಿರುವ ಫೈಜರ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್, ನೋವಾವ್ಯಾಕ್ಸ್, ಸ್ಪುಟ್ನಿಕ್ ವಿಯಂಥ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡುವುದು ಅವಶ್ಯಕವಿದೆ ಎಂದಿದ್ದಾರೆ.

   DK ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ | Oneindia Kannada

   English summary
   An expeert from bengaluru warned that the second surge could be worse than the first,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X